• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕರು 5 ಸಾವಿರ ಪ್ಯಾಕೇಜ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

|
Google Oneindia Kannada News

ಬೆಂಗಳೂರು, ಜೂನ್ 11; ಕರ್ನಾಟಕ ಸರ್ಕಾರ ಒಟ್ಟು ಎರಡು ಹಂತದಲ್ಲಿ ಲಾಕ್‌ಡೌನ್ ಪ್ಯಾಕೇಜ್ ಘೋಷಣೆ ಮಾಡಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗಾಗಿ 2ನೇ ಹಂತದಲ್ಲಿ 500 ಕೋಟಿ ರೂ. ನೆರವನ್ನು ಘೋಷಣೆ ಮಾಡಲಾಗಿದೆ.

ಲಾಕ್‌ಡೌನ್ ಪ್ಯಾಕೇಜ್ ಘೋಷಣೆ ಮಾಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ಸಹ ನೆರವು ನೀಡಿದ್ದಾರೆ. ಶಿಕ್ಷಕರಿಗೆ ತಲಾ 5 ಸಾವಿರ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ನೀಡಲು ಸಿಎಂ ಸಮ್ಮತಿ ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ನೀಡಲು ಸಿಎಂ ಸಮ್ಮತಿ

ಲಾಕ್‌ಡೌನ್ ಪರಿಹಾರ ಪಡೆಯಲು ಅರ್ಜಿ ಸಲ್ಲಿಸುವವರು ಅಗತ್ಯ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಬೇಕು. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯವಾಗಲಿದೆ.

ಕೋವಿಡ್ ಪ್ಯಾಕೇಜ್; ಆಟೋ ಚಾಲಕರು ಅರ್ಜಿ ಹಾಕುವುದು ಹೇಗೆ? ಕೋವಿಡ್ ಪ್ಯಾಕೇಜ್; ಆಟೋ ಚಾಲಕರು ಅರ್ಜಿ ಹಾಕುವುದು ಹೇಗೆ?

ಪ್ಯಾಕೇಜ್ ಪರಿಹಾರವನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಕೆ ಮಾಡುವಾಗ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ಈ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ವಿಶೇಷ ಪ್ಯಾಕೇಜ್ ಘೋಷಣೆ; ಯಡಿಯೂರಪ್ಪ ಪತ್ರಿಕಾಗೋಷ್ಠಿ ವಿವರ ವಿಶೇಷ ಪ್ಯಾಕೇಜ್ ಘೋಷಣೆ; ಯಡಿಯೂರಪ್ಪ ಪತ್ರಿಕಾಗೋಷ್ಠಿ ವಿವರ

* ಸಂಬಂಧಿಸಿದ ಶಿಕ್ಷಣ ಸಂಸ್ಥೆ ವಿತರಣೆ ಮಾಡಿದ ಗುರುತಿನ ಚೀಟಿ, ಸಂಸ್ಥೆಯ ನೇಮಕಾತಿ ಆದೇಶ
* ಸಂಬಂಧಿಸಿದ ಶಾಲೆಯಿಂದ ಸೇವಾ ಪ್ರಮಾಣ ಪತ್ರ
* ಪಾಸ್‌ಪೋರ್ಟ್ ಅಳತೆಯ 1 ಕಲರ್ ಫೋಟೋ
* ರಾಷ್ಟ್ರೀಕೃತ ಬ್ಯಾಂಕ ಪಾಸ್ ಬುಕ್
* ಆಧಾರ್ ಪ್ರತಿ
* ಎಸ್.ಎ.ಟಿ.ಎಸ್.ನಲ್ಲಿಯ ಶಿಕ್ಷಕರ ಗುರುತಿನ ಸಂಖ್ಯೆ
* ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರ

Recommended Video

   SSLC ಮಕ್ಕಳಿಗೆ ಸಂಪೂರ್ಣ ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವರು | Oneindia Kannada

   ಎಲ್ಲಾ ದಾಖಲೆಗಳ ಮೂಲಕ ತಮ್ಮ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮುಖ್ಯೋಪಾಧ್ಯಾಯರ ಮೂಲಕ ಲಿಖಿತ ಪ್ರಸ್ತಾವನೆ ಸಲ್ಲಿಸಬೇಕು.

   English summary
   Karnataka government announced Rs 5,000 to each teacher working at an unaided private school. In the time of lockdown teachers are in trouble. What document need to get package money.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X