ಧರ್ಮದ ಬಗ್ಗೆ ಅರಿವು ಮೂಡಿಸುವ ಕ್ವಿಜ್ ಅಪ್ಲಿಕೇಷನ್

By: ಮಲೆನಾಡಿಗ
Subscribe to Oneindia Kannada

ಬೆಂಗಳೂರು, ಜೂನ್ 17: #DharmaQuiz ಎಂಬ ಟ್ವಿಟ್ಟರ್ ಹ್ಯಾಶ್ ಟ್ಯಾಗ್ ಮೂಲಕ ಹಿಂದೂ ಧರ್ಮದ ಬಗ್ಗೆ ಅರಿವು ಮೂಡಿಸುವ ಕ್ವಿಜ್ ನಡೆಸಿಕೊಂಡು ಬಂದಿದ್ದ ಸಾಫ್ಟ್ ವೇರ್ ತಂತ್ರಜ್ಞರೊಬ್ಬರು ಈಗ ಪ್ರತ್ಯೇಕ ಆಂಡ್ರಾಯ್ಡ್ ಅಪ್ಲಿಕೇಷನ್ ಹೊರ ತಂದಿದೆ.

ಧರ್ಮ ಎಂದರೆ ಬಾಳಿಗೆ ಬೇಕಾದ ಸತ್ಯ, ನೀತಿಯುಕ್ತ ಮಾರ್ಗ ಎಂಬುದನ್ನು ಸಾರಲು ಹೊರಟಿರುವ ಗುಂಪು, ದೇವರು ಇದ್ದಾರೆ, ಇಲ್ಲ, ಹಿಂದೂ ಧರ್ಮ ಸರಿಯೇ, ಇಲ್ಲವೇ ಎಂಬ ಯಾವುದೇ ಚರ್ಚೆಗೆ ಕೈ ಹಾಕದೆ, ಸರಳವಾಗಿ ಧರ್ಮದ ಬಗ್ಗೆ ಆಸಕ್ತಿ ಇರುವವರಿಗಾಗಿ ಈ ಅಪ್ಲಿಕೇಷನ್ ರೂಪಿಸಿದೆ. [ಡೌನ್ಲೋಡ್ ಮಾಡ್ಕೊಳಿ: ವಚನಗಳು ಆಗಲಿ ನಿಮ್ಮ ಕರಗತ]

ಒಂದು ಸೆಷನ್ ಗೆ 5 ರಿಂದ 10 ಪ್ರಶ್ನೆಗಳನ್ನು ನೀಡಲಾಗುತ್ತದೆ. ಜ್ಞಾನವನ್ನು ಹಂಚಿ ಬಾಳಬೇಕು, ಧರ್ಮ, ಆಧಾತ್ಮ, ರೂಢಿಗತ ಅರಿವನ್ನು ಎಲ್ಲರಿಗೂ ಹಂಚುವುದು ತಂತ್ರಜ್ಞ ಲೋಹಿತ್ ಅವರ ಉದ್ದೇಶ. [ಮೊಬೈಲಿನಲ್ಲೇ ಓದಿ ದಾಸ ವರೇಣ್ಯರ ಸಾಹಿತ್ಯ]

ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಲು ಗೂಗಲ್ ಪ್ಲೇ ಸ್ಟೋರ್ ಲಿಂಕ್ ಇಲ್ಲಿದೆ.

How to Download and use DharmaQuiz Application

ಅಪ್ಲಿಕೇಷನ್ ಇನ್ ಸ್ಟಾಲ್ ಮಾಡಲು ಮೇಲಿನ ಲಿಂಕ್ ಕ್ಲಿಕ್ ಮಾಡಿ install ಬಟನ್ ಒತ್ತಿ, ನಿಮ್ಮ ಆಂಡ್ರಾಯ್ಡ್ ಮೊಬೈಲಿನಲ್ಲಿ ಸ್ಥಾಪಿಸಿಕೊಳ್ಳಬಹುದು. [Exclusive : ಆಂಡ್ರಾಯ್ಡ್ ಮಾರುಕಟ್ಟೆಗೆ 'ಪದ' ಎಂಟ್ರಿ]

* ಪ್ರತಿ ಸೆಷನ್ಸ್ ನಲ್ಲೂ ನಿಮ್ಮ ಆಯ್ಕೆಯ ವಿಷಯಕ್ಕೆ ಸಂಬಂಧಿಸಿದ ಐದಾರು ಪ್ರಶ್ನೆಗಳನ್ನು ಉತ್ತರಿಸಿ
* ನಂತರ ಸರಿಯಾದ ಉತ್ತರವನ್ನು ನೋಡಿ ತಾಳೆ ಹಾಕಬಹುದು.
* ಒಟ್ಟಾರೆ 334 ಸೆಷನ್ಸ್ ಹಾಗೂ 1882 ಪ್ರಶ್ನೆಗಳನ್ನು ನೀಡಲಾಗಿದೆ.
* ಮಹಾಭಾರತ, ಭಗವದ್ಗೀತೆ, ರಾಮಾಯಣ, ಸಂಪ್ರದಾಯ, ದಶಾವತಾರ, ವೇದ, ಸ್ವಾಮಿ ವಿವೇಕಾನಂದ ಮುಂತಾದ ವಿಷಯಗಳನ್ನು ಪಟ್ಟಿಯಿಂದ ಆಯ್ಕೆ ಮಾಡಿಕೊಳ್ಳಬಹುದು.
* ಹಿಂದೂ ಧರ್ಮ, ಭಾರತದ ನದಿಗಳು, ಸಂತರು, ದೇಗುಲ, ತತ್ವಜ್ಞಾನಿಗಳು, ಆಚರಣೆ..ಇತ್ಯಾದಿ ಬಗ್ಗೆ ಪ್ರಶ್ನೆಗಳಿರುತ್ತವೆ.[ಲಿನಾಕ್ಸ್ ನಲ್ಲೂ 'ಪದ' ತಂತ್ರಾಂಶ ಲಭ್ಯ]

-
ಧರ್ಮದ ಬಗ್ಗೆ ಅರಿವು ಮೂಡಿಸುವ ಕ್ವಿಜ್ App

ಧರ್ಮದ ಬಗ್ಗೆ ಅರಿವು ಮೂಡಿಸುವ ಕ್ವಿಜ್ App

-
-

3.5ಎಂಬಿ ತೂಕದ ಅಪ್ಲಿಕೇಷನ್ ಬಳಕೆ ಆರಂಭದಲ್ಲಿ ಕೊಂಚ ಗೊಂದಲ ಎನಿಸಿದರೂ ನಂತರ ಸುಲಭವಾಗುತ್ತದೆ. ಪದ ತಂತ್ರಾಂಶ ವಿನ್ಯಾಸ ಮಾಡಿ, ಅಭಿವೃದ್ಧಿಪಡಿಸಿದ ತಂತ್ರಜ್ಞ ಲೋಹಿತ್ ಡಿಎಸ್ ಅವರು ಹೊರ ತಂದಿರುವ ಈ ಅಪ್ಲಿಕೇಷನ್ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ software.pada@gmail.com ಮೇಲ್ ಐಡಿಗೆ ನಿಮ್ಮ ಸಲಹೆ, ಸೂಚನೆ ಕಳಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
DharmaQuiz (Twitter Hashtag #DharmaQuiz) is a fun way of educating ourselves about Dharma, loosely translated as way of life or religion. It is a Hindu concept. Here are the steps : How to download, install and use DharmaQuiz Android application.
Please Wait while comments are loading...