ರಾಸಲೀಲೆ ವಿಡಿಯೋ: ಶಾಸಕರನ್ನು ಖೆಡ್ಡಾಕ್ಕೆ ಬೀಳಿಸಿದ್ದು ಹೀಗೆ
ಬೆಂಗಳೂರು, ನವೆಂಬರ್ 28: ಗದಗ ಜಿಲ್ಲೆ ವ್ಯಾಪ್ತಿಯ ಬಿಜೆಪಿ ಶಾಸಕರೊಬ್ಬರ ರಾಸಲೀಲೆ ವಿಡಿಯೋ ನಿನ್ನೆಯಷ್ಟೆ ವೈರಲ್ ಆಗಿದೆ. ಪ್ರಕರಣದ ತನಿಕೆಯನ್ನು ಸಿಸಿಬಿ ಪೊಲೀಸರು ಮಾಡುತ್ತಿದ್ದು, ಆಘಾತಕಾರಿ ಮಾಹಿತಿಗಳು ಹೊರಬೀಳುತ್ತಿವೆ.
ಹಲವು ಮಾಜಿ, ಹಾಲಿ ಶಾಸಕರು, ಕೋಟ್ಯಧಿಪತಿ ಉದ್ಯಮಿಗಳು ಸಹ ಈ ಬಲೆಯಲ್ಲಿ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ. ಪ್ರಕರಣದ ಮುಖ್ಯ ಆರೋಪಿ ರಾಘವೇಂದ್ರ ಬಳಿ ವಶಪಡಿಸಿಕೊಂಡಿರುವ ಹಾರ್ಡ್‌ಡಿಸ್ಕ್‌ನಲ್ಲಿ ಹಲವು ಗಣ್ಯಾತಿಗಣ್ಯರ ರಾಸಲೀಲೆಯ ವಿಡಿಯೋಗಳು ಇವೆ.
ಒಬ್ಬಿಬ್ಬರಲ್ಲ ಹಲವು ಶಾಸಕರು ಈ ಹನಿಟ್ರಾಪ್‌ಗೆ ಸಿಲುಕಿದ್ದಾರೆ. ಮತದಾರರ ಕೈಗೆ ಸುಲಭವಾಗಿ ಸಿಗದ ಶಾಸಕರು ಇವರ ಕೈಗೆ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆ ಉದ್ಭವಿಸಿದೆ. 'ಹಸಿದ ಮೀನೆ ಗಾಳಕ್ಕೆ ಸಿಕ್ಕುವುದು' ಹೀಗಾಗಿ ಹನಿಟ್ರಾಪ್‌ಗೆ ಸಿಕ್ಕ ಶಾಸಕರು, ಗಣ್ಯರು ಅಮಾಯಕರಂತೂ ಖಂಡಿತ ಅಲ್ಲ.
ಹನಿಟ್ರಾಪ್ ಹಿಂದಿನ ಮೆದುಳು, ಪ್ರಕರಣದ ಮುಖ್ಯ ಆರೋಪಿ ರಾಘವೇಂದ್ರ. ಈತ ರಾಜಕಾರಣಿಗಳ ಪರಿಚಯ ಮಾಡಿಕೊಂಡು ಅವರ ಮೊಬೈಲ್‌ಗೆ ಆ್ಯಪ್ ಒಂದನ್ನು ಇನ್ಸ್ಟಾಲ್ ಮಾಡಿ ಅವರಿಗೆ ಬರುವ ಸಂದೇಶಗಳನ್ನು ತನಗೆ ಬರುವಂತೆ ಮಾಡಿಕೊಂಡು ಅದರ ದುರುಪಯೋಗ ಮಾಡಿಕೊಳ್ಳುತ್ತಿದ್ದ. ರಾಘವೇಂದ್ರ, ಸೈಬರ್ ಕ್ರೈಂ ನಲ್ಲಿ ಚೆನ್ನಾಗಿ ಪಳಗಿದ್ದ, ಈ ಬಗ್ಗೆ ಹಲವು ದೂರುಗಳ ಈತನ ಮೇಲೆ ಇವೆ.

ಕಾಲೇಜು ವಿದ್ಯಾರ್ಥಿನಿಯರೆಂದು ಪರಿಚಯ ಮಾಡಿಸುತ್ತಿದ್ದ
ರಾಘವೇಂದ್ರ ತನ್ನ ಪ್ರೇಯಸಿಯನ್ನು ಹಾಗೂ ಕೆಲವು ಯುವತಿಯರ ತಂಡವನ್ನು ಕಾಲೇಜು ವಿದ್ಯಾರ್ಥಿನಿ ಎಂದು ಶಾಸಕರಿಗೆ ಪರಿಚಯ ಮಾಡಿಸಿ, ರಾಜಕೀಯದ ಬಗ್ಗೆ ಪ್ರಾಜೆಕ್ಟ್ ಮಾಡುತ್ತಿದ್ದಾರೆಂದು ಸುಳ್ಳು ಹೇಳಿ ಯುವತಿಯರು ಶಾಸಕರೊಂದಿಗೆ ಮಾತನಾಡಲು ಬಿಡುತ್ತಿದ್ದ.

ಶಾಸಕರುಗಳೊಂದಿಗೆ ಸಂದರ್ಶನ ಏರ್ಪಡಿಸುತ್ತಿದ್ದ ರಾಘವೇಂದ್ರ
ಯುವತಿಯರೊಂದಿಗೆ ಶಾಸಕರುಗಳ ಸಂದರ್ಶನಗಳನ್ನು ಆಯೋಜಿಸಲಾಗುತ್ತಿತ್ತು. ಬಹುತೇಕ ಸಂದರ್ಶನಗಳು ರಾತ್ರಿ ಸಮಯವೇ ನಡೆಯುತ್ತಿದ್ದವು. ಶಾಸಕರೊಂದಿಗೆ ಯುವತಿಯರು ಮೊಬೈಲ್ ಸಂಖ್ಯೆ ಬದಲಾಯಿಸಿಕೊಂಡು ಆಗಾಗ್ಗೆ ಕರೆ ಮಾಡಿ ಸಲುಗೆ ಸಂಪಾದಿಸಿಕೊಳ್ಳುತ್ತಿದ್ದರು. ಈ ಸಂಭಾಷಣೆಯ ಆಡಿಯೋ ಸಹ ರಾಘವೇಂದ್ರಗೆ ಸಿಗುತ್ತಿತ್ತು.

ಶಾಸಕರ ಹೆಸರಲ್ಲಿ ಹೊಟೆಲ್ ರೂಂ ಬುಕ್
ಆ ನಂತರದ ಕಾರ್ಯವನ್ನು ರಾಘವೇಂದ್ರ ಮಾಡುತ್ತಿದ್ದ. ಆತನೇ ಶಾಸಕರ ಹೆಸರಲ್ಲಿ ಐಶಾರಾಮಿ ಹೊಟೆಲ್‌ನಲ್ಲಿ ರೂಂ ಬುಕ್ ಮಾಡಿ ರೂಂ ನಲ್ಲಿ ಸ್ಪೈ ಕೆಮೆರಾ ಇಟ್ಟು ಶಾಸಕರ ರಾಸಲೀಲೆ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ನಂತರ ಆತನೇ ಶಾಸಕರನ್ನು ಬ್ಲಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ.

ಶಾಸಕರ ಬಗ್ಗೆ ಪೂರ್ವಾಪರ ತಿಳಿದುಕೊಳ್ಳುತ್ತಿದ್ದ ರಾಘವೇಂದ್ರ
ಶಾಸಕರ ಬಳಿಗೆ ಯುವತಿಯರನ್ನು ಕರೆದುಕೊಂಡು ಹೋಗುವ ಮೊದಲು ರಾಘವೇಂದ್ರ ಚೆನ್ನಾಗಿ ಹೋಂವರ್ಕ್ ಮಾಡಿಕೊಳ್ಳುತ್ತಿದ್ದ. ಮಾಜಿ ಶಾಸಕರ ಸೋದರಳಿಯ ಎಂದು ಹೇಳಿಕೊಂಡು ಶಾಸಕರ ಪರಿಚಯ ಮಾಡಿಕೊಳ್ಳುತ್ತಿದ್ದ. ಶಾಸಕರ ವ್ಯಕ್ತಿತ್ವದ ಬಗ್ಗೆ ಮುಂಚೆಯೇ ಮಾಹಿತಿ ಕಲೆಹಾಕಿ ಶಾಸಕರು ತಮ್ಮ ಬಲೆಗೆ ಬೀಳುತ್ತಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುತ್ತಿದ್ದ. ಆ ನಂತರವೇ ಯುವತಿಯರನ್ನು ಶಾಸಕರ ಬಳಿಗೆ ಕರೆದುಕೊಂಡು ಹೋಗುತ್ತಿದ್ದ.

ಪ್ರೇಯಸಿಯನ್ನೇ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದ
ರಾಘವೇಂದ್ರ ತನ್ನ ಪ್ರೇಯಸಿಯನ್ನೇ ಈ ಕೃತ್ಯಕ್ಕೆ ಬಳಸಿಕೊಂಡಿದ್ದ. ಆಕೆಯ ಮೂಲಕವೇ ಹಲವು ಶಾಸಕರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದ. ರಾಘವೇಂದ್ರ ಪ್ರೇಯಸಿ ಜೊತೆಗೆ ಇನ್ನೂ ಕೆಲವು ಯುವತಿಯರನ್ನು ರಾಘವೇಂದ್ರ ಬಳಸಿದ್ದ.

ಕೋಟ್ಯಂತರ ಹಣ ಗಳಿಸಿದ್ದ ರಾಘವೇಂದ್ರ
ಹೀಗೆ ಮಾಡಿ ಕೋಟ್ಯಂತರ ಹಣವನ್ನು ರಾಘವೇಂದ್ರ ಸಂಪಾದನೆ ಮಾಡಿದ್ದ ಎನ್ನಲಾಗುತ್ತಿದೆ. ಹಲವು ಶಾಸಕರು, ಮಾಜಿ ಶಾಸಕರು, ಉದ್ಯಮಪತಿಗಳು ರಾಘವೇಂದ್ರನ ಬಲೆಯಲ್ಲಿ ಬಿದ್ದು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications