New Railway Line: ಹೊಸ ಜೋಡಿ ರೈಲು ಯೋಜನೆ ಪೂರ್ಣ, ರಾಜ್ಯದ ಈ ಜಿಲ್ಲೆಗಳ ಜನರಿಗೆ ಗುಡ್‌ನ್ಯೂಸ್
ಬೆಂಗಳೂರು, ಡಿಸೆಂಬರ್ 01: ಮಹಾರಾಷ್ಟ್ರದ ಸೋಲಾಪುರವನ್ನು ಕರ್ನಾಟಕದ ಗದಗಕ್ಕೆ ಸಂಪರ್ಕಿಸುವ ಜೋಡಿ ರೈಲು ಮಾರ್ಗದ ಕಾಮಗಾರಿ ಬಹುತೇಕ (ಶೇ.99) ಪೂರ್ಣಗೊಂಡಿದೆ. ಕರ್ನಾಟಕ ಪ್ರಮುಖ ಜಿಲ್ಲೆಗಳಾದ, ವಿಜಯನಗರ, ಗದಗ ಮತ್ತು ಬಾಗಲಕೋಟೆಗೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಮಾರ್ಗವನ್ನು ಕಾರ್ಯಾರಂಭ ಮಾಡುವುದಾಗಿ ಕೇಂದ್ರ ರೈಲ್ವೆ ಸಚಿವಾಲಯ ಘೋಷಣೆ ಮಾಡಿದೆ. ಈ ಮಾರ್ಗದಿಂದ ಏನೆಲ್ಲ ಪ್ರಯೋಜನಗಳು? ಮಾರ್ಗ, ಯೋಜನೆ ಮಾಹಿತಿ ಇಲ್ಲಿದೆ.
ಹೌದು, ನೆರೆಯ ರಾಜ್ಯದ ಸೋಲಾಪುರವನ್ನು ಕರ್ನಾಟಕದ ಗದಗಕ್ಕೆ ಸಂಪರ್ಕಿಸುವ, ಸುಗಮ ಸರಕು ಮತ್ತು ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡುವ ಜೋಡಿ ರೈಲು ಮಾರ್ಗ ಇದಾಗಿದೆ. ವಿದ್ಯುತ್ ಪೂರೈಕೆ, ಸಿಗ್ನಲಿಂಗ್ ತಪಾಸಣೆ ಕಾರ್ಯ ಪೂರ್ಣಗೊಂಡು ರೈಲು ಸಂಚಾರಕ್ಕೆ ಸಿದ್ಧವಾಗಿದೆ. ಹೊಟಗಿ-ಕುಡಗಿ-ಗದಗ ಜೋಡಿ ರೈಲು ಮಾರ್ಗದ 284 ಕಿಲೋ ಮೀಟರ್ ಯೋಜನೆ ಇದಾಗಿದೆ. ಈ ಪೈಕಿ 275 ಕಿ.ಮೀ. ಕಾರ್ಯಾರಂಭ ಮಾಡುವುದಾಗಿ ಸಚಿವಾಲಯ ತಿಳಿಸಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರು ನೈಋತ್ಯ ರೈಲ್ವೆ ಇಲಾಖೆಯು ಬರೋಬ್ಬರಿ 2,459 ಕೋಟಿ ರೂಪಾಯಿ ಮೌಲ್ಯದ ಈ ಯೋಜನೆಯು 2020ರ ಗುರಿಗಳಿಂದ ಐತಿಹಾಸಿಕ ವಿಳಂಬಗಳನ್ನು ಪರಿಹರಿಸುತ್ತದೆ. ಪ್ರಮುಖ ಕೃಷ್ಣೆ ನದಿ ಮೇಲಿನ ರೈಲ್ವೆ ಮೇಲ್ಸೇತುವೆ ಪೂರ್ಣಗೊಂಡಿದೆ. ರೈಲು ಮೇಲ್ಸೇತುವೆ, ಹಳಿ ಕಾಮಗಾರಿ, ಸಿಗ್ನಲಿಂಗ್ ಪೂರ್ಣಗೊಂಡ ಫೋಟೋಗಳನ್ನು ನೈಋತ್ಯ ರೈಲ್ವೆ ಹಂಚಿಕೊಂಡಿದೆ. ಈ ಮೂಲಕ ಬಾಗಲಕೋಟೆ, ಸೋಲಾರಪುರ, ಗದಗ ಭಾಗದ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.
ವಾರ್ಷಿಕವಾಗಿ 20ಕ್ಕೂ ಅಧಿಕ ರೈಲುಗಳ ಸಂಚಾರಕ್ಕೆ ಮೊದಲಿದ್ದ ಮಾರ್ಗವು ಅಡಚಣೆ ಉಂಟು ಮಾಡುತ್ತಿತ್ತು. ಸದ್ಯ ಈ ಜೋಡಿ ಮಾರ್ಗದಿಂದಾಗಿ ಯಾವುದೇ ಕ್ರಾಸಿಂಗ್ ಇಲ್ಲದೇ, ಸಂಚಾರ ವಿಳಂಬವಿಲ್ಲದೇ ರೈಲುಗಳ ಕಾರ್ಯಾಚರಣೆ ಮಾಡಬಹುದಾಗಿದೆ. ಇದರಿಂದಾಗಿ ಗಂಟೆಗಟ್ಟಲೇ ನಿಲ್ದಾಣಗಳಲ್ಲಿ, ರೈಲಿನ ಒಳಗೆ ಕಾಯುವ ಸಮಯ ಉಳಿತಾಯವಾಗಲಿದೆ. ಹೊಸಪೇಟೆ-ಸೋಲಾಪುರ ಮಾರ್ಗದಲ್ಲಿ ಶೇಕಡಾ 30ರಷ್ಟು ಸಮಯ ಕ್ರಾಸಿಂಗ್, ವಿಳಂಬ ಇತರ ಕಾರಣಗಳಿಗೆ ಕಾಯಬೇಕಾಗಿತ್ತು. ಇನ್ನು ಮುಂದೆ ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ ಎಂದು ರೈಲ್ವೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೋಡಿ ರೈಲು ಮಾರ್ಗದ ಪ್ರಯೋಜನಗಳು
ಹೊಟಗಿ-ಕುಡಗಿ-ಗದಗ ಜೋಡಿ ರೈಲು ಮಾರ್ಗದಿಂದ ಹೊಸಪೇಟೆ-ಸೋಲಾಪುರ ಮಾರ್ಗದಾದ್ಯಂತ ತಡೆರಹಿತ ಸಂಪರ್ಕ ಸಾಧ್ಯವಾಗುತ್ತದೆ. ಹೆಚ್ಚುವರಿ ರೈಲುಗಳ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸಬಹುದಾಗಿದೆ. ಅಡೆತಡೆಗಳು ಇಲ್ಲದೇ ಸಮಯಕ್ಕೆ ಸಮರಿಯಾಗಿ ಪ್ರಯಾಣಿಕರು ಗಮ್ಯಸ್ಥಾನ ತಲುಪಲು ನೆರವಾಗುತ್ತದೆ. ಈ ಭಾಗದ ರೈಲು ಸಾರಿಗೆ ಮತ್ತಷ್ಟು ಸುಧಾರಣೆ ಕಂಡಂತಾಗಿದೆ. ಅಲ್ಲದೇ ಈ ಭಾಗದ ಪ್ರವಾಸೋದ್ಯಕ್ಕೂ ಉತ್ತೇಜನ ಸಿಕ್ಕಂತಾಗುತ್ತದೆ. ಸಾರಿಗೆ, ಪ್ರವಾಸೋದ್ಯಮ ಮಾತ್ರವಲ್ಲದೇ ಕೈಗಾರಿಕೆ, ಶೈಕ್ಷಣಿಕ ಉದ್ದೇಶಗಳಿಗೂ ಅನುಕೂಲವಾಗಲಿದೆ. ಇತ್ತ ಭೂಮಿಗೆ, ಮನೆ, ಆಸ್ತಿಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿ ಆಗುವ ವಿಶ್ವಾಸವಿದೆ.
ಸಂಚಾರ ಶುರು ಮಾಡಿದ ರೈಲುಗಳ ವಿವರ
ಇದೇ ಮಾರ್ಗವಾಗಿ ತಡವಾಗಿ ಬರುತ್ತಿದ್ದ ಗೋಲಗುಂಬಜ್ ಮತ್ತು ಮುಂಬೈ ಸಂಚರಿಸುವ ರೈಲುಗಳು ನಿಗದಿತ ಸಮಯಕ್ಕಿಂತ ಐದು ನಿಮಿಷ ಮೊದಲೇ ಆಗಮಿಸಿದೆ. ಈ ಮಾರ್ಗದುದ್ದಕ್ಕೂ ಡಿಸೇಲ್ ರೈಲುಗಳ ಬದಲಾಗಿ ಎಲೆಕ್ಟ್ರಿಕ್ ರೈಲುಗಳ ಸಂಚರಿಸಲಿವೆ. ಪರಿಸರ ಸ್ನೇಹಿ ರೈಲು ಸಂಚಾರದಿಂದ ಮಾಲಿನ್ಯ ಕಲುಷಿತ ತಪ್ಪಲಿದೆ. ವೇಗದ ರೈಲು ಸೇವೆ ಪ್ರಯಾಣಿಕರಿಗೆ ಸಿಗುತ್ತಿದೆ. ಇತರ ರೈಲುಗಳು ಸಂಚಾರ ಜೊತೆಗೆ ಹೆಚ್ಚುವರಿ ರೈಲು ಈ ಮಾರ್ಗದಲ್ಲಿ ಓಡಾಡುವ ನಿರೀಕ್ಷೆ ಇದೆ.
ಈ ಭಾಗದ ಜನರು ವಂದೇ ಭಾರತ್ ರೈಲನ್ನು ಈ ಹೊಸ ಜೋಡಿ ಮಾರ್ಗದಲ್ಲಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಹೊಸಪೇಟೆ, ಬಾಗಲಕೋಟೆ, ಗದಗ, ಸೋಲಾಪುರವರೆಗಿನ ಮಾರ್ಗವಾಗಿ ಸಾಗುವ ರೈಲುಗಳು ಬಹುದೂರಕ್ಕೆ ಪ್ರಯಾಣ ಮಾಡಬೇಕಿದೆ. ಸುದೀರ್ಘ ಪ್ರಯಾಣದಲ್ಲಿ ಆರಾಮದಾಯಕ ಅನುಭವ ಒದಗಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ವಂದೇ ಭಾರತ್ ರೈಲು ಈ ಮಾರ್ಗದಲ್ಲಿ ನಿಯೋಜನೆಗೊಂಡರು ಅಚ್ಚರಿ ಇಲ್ಲ.












Click it and Unblock the Notifications