'ಹೊಸಜೀವನ' ಚಟ ಬಿಡಿಸೋ ವಿಶಿಷ್ಟ ಸಂಸ್ಥೆ

ಮಾಗಡಿ,ಸೆ.23: ಅವರೆಲ್ಲರೂ ಕುಡಿತವನ್ನೇ ಬದುಕಾಗಿಸಿಕೊಂಡವರು, ಕುಡಿತವಿಲ್ಲದೇ ಬದುಕಿರಲು ಸಾಧ್ಯವೇ ಇಲ್ಲವೇನೋ ಎಂಬ ಹಂತಕ್ಕೆ ತಲುಪಿದವರು. ಇವರುಗಳ ಕುಡಿತವೇ ಮನೆಯವರಿಗೆ ದೊಡ್ಡ ತಲೆನೋವಾಗಿತ್ತು. ಕುಡಿತದಿಂದ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಗಿತ್ತು. ಕುಡಿತದಿಂದ ಹೆಂಡತಿ ಮಕ್ಕಳು ಬಂಧು ಬಳಗ ಎಲ್ಲವನ್ನೂ ದೂರ ಮಾಡಿಕೊಂಡಿದ್ದವರು.

ಇವರನ್ನ ನೋಡಿದ ಎಷ್ಟೋ ಮಂದಿ ಕುಡಿತದ ಚಟದಿಂದಲೇ ಚಟ್ಟವೇರುತ್ತಾರೆಂದು ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ಮೂರು ತಿಂಗಳು ಇಲ್ಲವಾಗಿದ್ದರು, ಮೂರು ತಿಂಗಳ ನಂತರ ಗ್ರಾಮಕ್ಕೆ ಬಂದಾಗ ಕುಡಿತವನ್ನೆಲ್ಲಾ ಬಿಟ್ಟು ಧ್ಯಾನ, ಯೋಗ, ಹೆಂಡತಿ ಮಕ್ಕಳು ಕುಟುಂಬ ಎನ್ನುವಷ್ಟರ ಮಟ್ಟಿಗೆ ಬದುಕಿಗೆ ಹತ್ತಿರವಾಗಿ ಸಂಬಂಧ ಬೆಳೆದುಕೊಂಡಿತ್ತು. ನೋಡಿದವರಿಗೆಲ್ಲಾ ಕುಡುಕ ಬದಲಾಗಿದ್ದಾನೆಂದು ಮಾತನಾಡಿಕೊಳ್ಳುತ್ತಿದ್ದರು, ಚಟವನ್ನ ದೂರ ಮಾಡಲು ಕಾರಣ ''ಹೊಸಜೀವನ''ವೆಂಬ ಚಟವನ್ನ ದೂರ ಮಾಡುವ ಸಂಸ್ಥೆ.

ನಗರಪ್ರದೇಶ, ಹಳ್ಳಿಗಾಡಿನ ಎಷ್ಟೋ ಮಂದಿ ಕುಡಿತಕ್ಕೆ ದಾಸರಾಗಿ ತಮ್ಮ ಬದುಕನ್ನೇ ಬರ್ಬಾದ್ ಮಾಡಿಕೊಂಡಿರುತ್ತಾರೆ. ಕುಡಿತವೊಂದಿದ್ದರೆ ಸಾಕು ಬೇರೇನೂ ಬೇಡವಾಗಿರುತ್ತದೆ ಇವರಿಗೆ. ಇಂತಹವರನ್ನ ಕಟ್ಟಿಕೊಂಡವರು ಜೊತೆಯಲ್ಲಿರುವವರು ನೆಮ್ಮದಿಯನ್ನೇ ಕಳೆದುಕೊಂಡಿರುತ್ತಾರೆ. ಯಾರು ಸತ್ರು ಬದುಕದ್ರೂ ಕುಡಿತವೇ ಇವರಿಗೆ ಜೀವಾಳವಾಗಿರುತ್ತದೆ.

ಇಂತಹವರು ಸತ್ತಾಗ್ಲೇ ಸರಿಹೋಗೋದು ಎಲ್ಲರ ಅಭಿಪ್ರಾಯವಾಗಿರುತ್ತದೆ. ಅಷ್ಟೊಂದು ಕುಡಿತಕ್ಕೆ ದಾಸರಾಗಿದ್ದವರು ಇದ್ದಕ್ಕಿದ್ದಂತೆ ಬದಲಾಗಿದ್ದಾರೆ ಈಗ. ಇದಕ್ಕೆಲ್ಲಾ ಕಾರಣವಾಗಿರೋದು ಮಾಗಡಿ ಪಟ್ಟಣದಲ್ಲೇ ಇರುವ ಹೊಸಜೀವನ ಸಂಸ್ಥೆ.

ಈ ಸಂಸ್ಥೆ ಆರಂಭಿಸಿರುವ ಕುಮಾರ್ ಎಂಬುವವರು ಮೊದಲಿಗೆ ಹುಟ್ಟು ಕುಡುಕರಾಗಿದ್ದರು. ಅವರು ಕೂಡ ಸಂಸ್ಥೆಯೊಂದಕ್ಕೆ ಸೇರಿಕೊಂಡು ಕುಡಿತವನ್ನ ಬಿಟ್ಟಿದ್ದಾರೆ. ಕುಡಿತದ ಚಟಕ್ಕೆ ದಾಸರಾಗಿದ್ದಾಗ ಹೆಂಡತಿ ಮಕ್ಕಳನ್ನೆಲ್ಲಾ ದೂರ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದರು. ಕುಡಿದು ಎಲ್ಲೆಂದರಲ್ಲಿ ಬಿದ್ದು ತಮ್ಮ ಮರ್ಯಾದೆಯನ್ನ ತಾವೇ ಕಳೆದುಕೊಂಡಿದ್ದರು.

ಕುಡಿತದದಿಂದಾದ ಯಾತನೆಯನ್ನ ಅನುಭವಿಸಿರುವ ಕುಮಾರ್ ನನ್ನಂತೆ ಕುಡುಕರಾಗಿದ್ದವರನ್ನ ಹೊಸಮಾರ್ಗದಲ್ಲಿ ಕೊಂಡೊಯ್ಯಬೇಕೆಂಬ ಕಾರಣಕ್ಕೆ ಮಾಗಡಿಯಲ್ಲಿ ಹೊಸಜೀವನ ಸಂಸ್ಥೆ ಹುಟ್ಟುಹಾಕಿ ಕುಡಿತದ ಚಟ ಹತ್ತಿಸಿಕೊಂಡವರನ್ನ ಚಟದಿಂದ ಮುಕ್ತಗೊಳಿಸುವ ಕಾರ್ಯವನ್ನ ಯಶಸ್ವಿಯಾಗಿರ ಮಾಡುತ್ತಿದ್ದಾರೆ.

200 ಮಂದಿಗೆ ಹೊಸ ಆಶಾಕಿರಣ

200 ಮಂದಿಗೆ ಹೊಸ ಆಶಾಕಿರಣ

ಈಗಾಗಲೇ ಈ ಸಂಸ್ಥೆಯಿಂದ ಸುಮಾರು 200ಕ್ಕೂ ಹೆಚ್ಚು ಮಂದಿ ಕುಡಿತದಿಂದ ಮುಕ್ತರಾಗಿ ಹೊಸಜೀವನ ಆರಂಭಿಸಿದ್ದಾರೆ. ದುಶ್ಚಟಕ್ಕೆ ದಾಸರಾಗಿರುವ ಮಂದಿಯನ್ನ ಸರಿದಾರಿಗೆ ತರುವ ಮೂಲಕ ಕುಮಾರ್ ತಮ್ಮ ಕಾರ್ಯದಲ್ಲಿ ಯಶಕಂಡಿದ್ದಾರೆ.

ಕುಡಿತದ ಚಟಕ್ಕೆ ದಾಸರಾಗಿದ್ದವರನ್ನ ಕುಟುಂಬದವರೇ ಈ ಹೊಸಜೀವನ ಸಂಸ್ಥೆಗೆ ತಂದು ಸೇರಿಸುತ್ತಾರೆ. 3 ತಿಂಗಳುಗಳ ಕಾಲ ಇದೇ ಸಂಸ್ಥೆಯಲ್ಲಿರಬೇಕು. ದಿನಬೆಳಗಾಗುತ್ತಿದ್ದಂತೆ ಹೊಸಜೀವನದಲ್ಲಿ ಚಟುವಟಿಕೆ ಆರಂಭಿಸುತ್ತಾರೆ. ಯೋಗ ಧ್ಯಾನ ದೇವರ ನಾಮಗಳನ್ನ ಹಾಡುತ್ತಾ ದಿನಕಳೆಯುತ್ತಾರೆ. ಮೊದಮೊದಲಿಗೆ ಚಟದಾಸರು ಹೊಂದಿಕೊಳ್ಳಲು ಕಷ್ಟ ಪಡುತ್ತಾರೆ.

 ಸಂಸ್ಥೆ ಮುಖ್ಯಸ್ಥ ಕುಮಾರ್

ಸಂಸ್ಥೆ ಮುಖ್ಯಸ್ಥ ಕುಮಾರ್

ಹೊಸಜೀವನ ಸಂಸ್ಥೆ ಮುಖ್ಯಸ್ಥ ಕುಮಾರ್

ಕೌನ್ಸಲಿಂಗ್

ಕೌನ್ಸಲಿಂಗ್

ನಂತರ ದಿನಕಳೆದಂತೆ ವಾತಾವರಣಕ್ಕೆ ಹೊಂದಿಕೊಂಡು ಕುಡಿತ ಕ್ಷಣಿಕ ಸುಖ, ಬದುಕು ಅನ್ನೋದು ವಿಶಾಲ. ಅಮೂಲ್ಯವಾದ ಬದುಕನ್ನ ಕಳೆದುಕೊಳ್ಳಬಾರದೆಂಬ ಭಾವನೆ ಬರುವಷ್ಟರ ಮಟ್ಟಿಗೆ ಈ ಸಂಸ್ಥೆಯಲ್ಲಿ ಬದಲಾಗುತ್ತಾರೆ.

ಕುಡಿತದಿಂದ ಮುಕ್ತರಾಗಿರುವ ಎಷ್ಟೋ ಮಂದಿ ಈ ಸಂಸ್ಥೆಯಲ್ಲಿ ಬೇರೆಯವರಿಗೆ ಕೌನ್ಸೆಲಿಂಗ್ ನಡೆಸುತ್ತಾರೆ. ತಮ್ಮ ಕುಡಿತದ ಬದುಕಿನ ಅನುಭವವನ್ನ ಕೂಡ ಅಲ್ಲಿರುವ ಮಂದಿಯೊಂದಿಗೆ ಹಂಚಿಕೊಳ್ಳುತ್ತಾರೆ.

ವಿದೇಶೀ ವೈದ್ಯರೊಬ್ಬರು ಕುಡಿತಕ್ಕೆ ದಾಸರಾಗಿ ಬದುಕನ್ನ ಬರ್ಬಾದ್ ಮಾಡಿಕೊಂಡು ನನ್ನಂತೆ ಬೇರೆಯವರು ಆಗಬಾರದೆಂಬ ಕಾರಣಕ್ಕೆ ಕುಡುಕರ ಮನಃಪರಿವರ್ತನೆ ಮಾಡುವ ಸಂಸ್ಥೆಯನ್ನ ಹುಟ್ಟುಹಾಕಿದ್ದರು.

ಹೆಚ್ಚಿನ ವಿವರಗಳಿಗಾಗಿ

ಹೆಚ್ಚಿನ ವಿವರಗಳಿಗಾಗಿ

ಕುಡಿತವನ್ನೇ ಬದುಕಾಗಸಿಕೊಂಡ ಎಷ್ಟೋ ಮಂದಿ ಈಗ ಕುಡಿತದಿಂದ ಮುಕ್ತರಾಗಿ ಹೊಸಬದುಕಿಗೆ ಕಾಲಿಟ್ಟಿದ್ದಾರೆ. ಮನಸ್ಸಿದ್ದರೆ ಮಾರ್ಗ ಎಂಬಂತೆ ಕುಡಿತವನ್ನ ಬಿಡಲಾರದಷ್ಟು ದಾಸರಾಗಿರುವವರು ಕೂಡ ಈಗ ಪರಿವರ್ತನೆಯ ಹಾದಿಯಲ್ಲಿ ಸಾಗಿ ಸಂತಸದ ಬದುಕನ್ನ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಾರೆ ''ಹೊಸಜೀವನ'' ಎಷ್ಟೋ ಮಂದಿಗೆ ಹೊಸಜೀವನ ಕಲ್ಪಿಸಿಕೊಟ್ಟು ಬದುಕಿಗೆ ಮಾದರಿಯಾಗಿದೆ.

ಹೆಚ್ಚಿನ ವಿವರಗಳಿಗಾಗಿ
* ಕುಮಾರ್-99727 83412
* ಪುಟ್ಟಯ್ಯ-98447 43947

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+