HK Patil Profile: ನಿಷ್ಠಾವಂತ ಕಾಂಗ್ರೆಸಿಗ ಹೆಚ್ ಕೆ ಪಾಟೀಲ್ ಗೆ ಮತ್ತೊಮ್ಮೆ ಒಲಿದು ಬಂದಿದೆ ಸಚಿವ ಪಟ್ಟ!
ಕರ್ನಾಟಕದ ನೂತನ ಸಚಿವರಾಗಿ ಗದಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್ ಕೆ ಪಾಟೀಲ ಅವರಿಗೆ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿ ಭಾಗ್ಯ ಒಲಿದು ಬಂದಿದೆ. ಕರ್ನಾಟಕದ ಲಿಂಗಾಯತ ನಾಯಕರಲ್ಲಿ ಗದಗ ಕ್ಷೇತ್ರ ಶಾಸಕರಾಗಿರು ಎಚ್ ಕೆ ಪಾಟೀಲ ಅವರು ಗದಗದಲ್ಲಿ ಜನಿಸಿದ್ದು, ಇಡೀ ಕರ್ನಾಟಕದಾದ್ಯಂತ ತಮ್ಮದೇ ಬೆಂಬಲಿಗರ ಪಡೆಯನ್ನ ಹೊಂದಿದ್ದಾರೆ.
ಗದಗ ಭಾಗದ ಒಬ್ಬ ಪ್ರಭಾವಿ ರಾಜಕಾರಣಿ. ಕಳೆದ 50 ವರ್ಷಗಳಿಂದ ಈ ಗದಗ ಕ್ಷೇತ್ರದ ಮೇಲೆ ಹುಲಕೋಟಿಯ ಪಾಟೀಲ್ ಮನೆತನದ ಬಿಗಿಹಿಡಿತವಿದೆ. ತಾಯಿ ಪದ್ಮಾವತಿ ಹಾಗೂ ತಂದೆ ಕೆ ಹೆಚ್ ಪಾಟೀಲ್ ಅವರ ಮಗನಾಗಿ ಆಗಸ್ಟ್ 15 1953 ರಲ್ಲಿ ಗದಗದಲ್ಲಿ ಜನಿಸಿದರು. ಬ್ಯಾಚುಲರ್ ಆಫ್ ಸೈನ್ಸ್ ಹಾಗೂ ಬ್ಯಾಚುಲರ್ ಆರ್ ಲಾ ಪದವಿಯನ್ನ ಪಡೆದುಕೊಂಡಿದ್ದು. ಪರ್ತಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಗದಗ ಭಾಗದ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಇನ್ನೂ ಅವರ ಧರ್ಮಪತ್ನಿ ಹೇಮಾ ಪಾಟೀಲ್. ಕೃಷ್ಣಗೌಡ, ಲಕ್ಷ್ಮೀ ಹಾಗೂ ರಾಜೇಶ್ವರಿ ಎಂಬ ಮೂವರು ಮಕ್ಕಳಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 2023 ರ ಕರ್ನಾಟಕ ವಿಧಾನಸಭೆಯಲ್ಲಿ ಗದಗ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಕರ್ನಾಟಕದ ಜಲಸಂಪನ್ಮೂಲ ಸಚಿವರಾಗಿದ್ದಾಗ ರಾಜ್ಯಾದ್ಯಂತ ನೀರಾವರಿ ವಿಸ್ತರಣೆ ಮತ್ತು ಮೋಡ ಬಿತ್ತನೆಯ ಪ್ರಯತ್ನದ ಮುಂದಾಳತ್ವದಲ್ಲಿ ಉತ್ಸಾಹದಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಜವಳಿ ಪ್ರಮುಖ ನೀರಾವರಿ, ಕೃಷಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು , ಕರ್ನಾಟಕ ಸರ್ಕಾರ ಮತ್ತು ವಿರೋಧ ಪಕ್ಷದ ನಾಯಕ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಅವಧಿಯಲ್ಲಿ 2015-16 ನೇ ಸಾಲಿನಲ್ಲಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗಾಗಿ ಕೇಂದ್ರದಿಂದ ಸ್ಥಾಪಿಸಲಾದ ಇ-ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರವು ಪಡೆದುಕೊಂಡಿದೆ.

ಎಚ್.ಕೆ. ಪಾಟೀಲ್‌ಗೆ ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಜತೆಗೆ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ ಅನುಭವವೂ ಇದೆ. ರಾಜಕೀಯ ಕುಟುಂಬದ ಹಿನ್ನೆಲೆಯುಳ್ಳ ಚಾಣಾಕ್ಷ ರಾಜಕಾರಣಿ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. 1984 ರಿಂದ 2008 ರವರೆಗೂ ಪಶ್ಚಿಮ ಪಧವೀಧರ ಕ್ಷೇತ್ರದಿಂದ 4 ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದರು.
008ರಲ್ಲಿ ಮಾತ್ರ ಬಿಜೆಪಿಯ ಶ್ರಿಶೈಲಪ್ಪ ಬಿದರೂರ ಅವರು ಆಯ್ಕೆಯಾಗಿದ್ದರು. ಕಳೆದ ಎಂಟು ವಿಧಾನಸಭಾ ಚುನಾವಣೆಗಳಲ್ಲಿ ಸರಾಸರಿ 18 ರಿಂದ 30 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ. ಆದರೆ, 2018ರಲ್ಲಿ ಕೇವಲ 1,868 ಮತಗಳ ಅಂತರದಿಂದ ಎಚ್‌ಕೆ ಪಾಟೀಲ್ ಜಯಗಳಿಸಿದ್ದರು. 2008ರಲ್ಲಿ ಬಿಜೆಪಿ, 1978ರಲ್ಲಿ ಜನತಾ ಪಕ್ಷ, 1967ರಲ್ಲಿ ಸ್ವತಂತ್ರ(ಕೆ.ಎಚ್. ಪಾಟೀಲ) ಅಭ್ಯರ್ಥಿ ಗೆಲವು ಹೊರತುಪಡಿಸಿ 1957ರಿಂದ 11 ಬಾರಿ ಕಾಂಗ್ರೆಸ್ ಜಯಗಳಿಸಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧೆ ನಡೆಸಿ 15 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.












Click it and Unblock the Notifications