ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಬೆದರಿಕೆ: ತಮಿಳುನಾಡು ಮೂಲದ ವ್ಯಕ್ತಿ ಬಂಧನ
ಬೆಂಗಳೂರು, ಮಾ.22: ಹಿಜಾಬ್ ಕುರಿತು ತೀರ್ಪು ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ ತಮಿಳುನಾಡು ಮೂಲದ ವ್ಯಕ್ತಿಯನ್ನು ಕರ್ನಾಟಕ ಪೊಲೀಸರು ಬಂಧಿಸಿ ಕರೆತಂದಿದ್ದಾರೆ.
ಹಿಜಾಬ್ ತೀರ್ಪು ಬಳಿಕ ತೀರ್ಪು ನೀಡಿದಂತಹ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದಂತಹ ವ್ಯಕ್ತಿಯನ್ನು ಕರ್ನಾಟಕ ಪೊಲೀಸರು ಬಾಡಿ ವಾರಂಟ್ ಸಮೇತ ತಮಿಳುನಾಡಿಗೆ ಹೋಗಿ ಬಂಧಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ರಾತ್ರಿ ತಿಳಿಸಿದರು.
ಬಂಧಿತ ವ್ಯಕ್ತಿಯನ್ನು ರಹಮತುಲ್ಲಾ ಎಂದು ಗುರುತಿಸಲಾಗಿದೆ. ಮಧುರೈನಲ್ಲಿ ಈತ ಪತ್ತೆಯಾಗಿದ್ದಾನೆ. ಆರೋಪಿತನನ್ನು ಬಂಧಿಸುವಲ್ಲಿ ತಮಿಳುನಾಡಿನ ಪೊಲೀಸರು ಸಹ ರಾಜ್ಯದ ಪೊಲೀಸರಿಗೆ ಸಹಕಾರ ನೀಡಿದ್ದಾರೆ ಎಂದಿದ್ದಾರೆ.

ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ ವಿಷಯವನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ವ್ಯವಸ್ಥೆಗೆ ಹಾಕಿದಂತಹ ಸವಾಲು ಇದಾಗಿತ್ತು. ಇಂತಹ ಪ್ರವೃತ್ತಿಯನ್ನು ಬಗ್ಗುಬಡಿಯಬೇಕು. ಸಮಾಜದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನವಿದು ಎಂದು ಹೇಳಿದರು.
Koo AppUGC has now announced that all central universities with mandatory entrance test (CUET) in 13 languages across India. The move benefits students, avoids giving multiple entrance exams for UG courses. ಕನ್ನಡ ಸಹಿತ 13 ಭಾಷೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಹಿತರಕ್ಷಣೆಗೆ ಉತ್ತಮ ಕ್ರಮ! @bsbommai @pmoindiaofficial12 @dpradhanbjp - Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 22 Mar 2022
ಆರೋಪಿತನನ್ನು ರಾಜ್ಯದ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ. ಇಂತಹದ್ದು ಇಲ್ಲಿಗೆ ಕೊನೆಯಾಗಬೇಕು ಎಂದರು.












Click it and Unblock the Notifications