ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಜಾಬ್ ವಿವಾದ; ವಾದ ಮಂಡನೆ ಮುಕ್ತಾಯ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್

|
Google Oneindia Kannada News

ಬೆಂಗಳೂರು, ಫೆಬ್ರವರಿ 25: ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಕರ್ನಾಟಕ ಹೈಕೋರ್ಟ್‌ನಲ್ಲಿ ಶುಕ್ರವಾರವೂ ಮುಂದುವರೆದಿದೆ.

ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರನ್ನು ಒಳಗೊಂಡಿರುವ ಪೀಠ ಪ್ರತಿದಿನ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.

Hijab Ban: Karnataka High Court Hearing Day 12 February 25 Updates and Highlights

ಗುರುವಾರ ಕಾಲೇಜು ಆಡಳಿತ ಮಂಡಳಿ ಪರವಾಗಿ, ಕಾಲೇಜು ಪ್ರಾಂಶುಪಾಲರ ಪರವಾಗಿ ವಾದ ಮಂಡನೆ ನಡೆದಿತ್ತು. ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ತಿ ಅವರು ಇದೇ ವಾರ ವಾದ-ಪ್ರತಿವಾದ ಮಂಡನೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.

* ಶಿಕ್ಷಣ ಕಾಯ್ದೆಯ ಅಧಿಕಾರವನ್ನು ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ)ಗೆ ನೀಡಿರುವುದು ಸರಿಯಲ್ಲ ಎಂದು ನಿನ್ನೆ ದೇವದತ್ ವಾದ ಮಾಡಿದ್ದು, ಕಾಲೇಜಿನ ಸಮವಸ್ತ್ರ ನೀತಿಯಲ್ಲಿ ಹಿಜಾಬ್​ಗೆ ಅವಕಾಶ ನೀಡಿಲ್ಲ. ಈಗ ಹಿಜಾಬ್ ಮೂಲಭೂತ ಹಕ್ಕೆಂದು ನೀವು ಸಾಬೀತು ಮಾಡಬೇಕು ಎಂದು ಸಿಜೆ ಮರುಪ್ರಶ್ನೆ ಮಾಡಿದ್ದರು. ಇನ್ನು ವಿದ್ಯಾರ್ಥಿನಿಯರ ಪರವಾಗಿ ಎ.ಎಂ. ಧರ್ ಕೂಡ ವಾದ ಮಂಡಿಸಿದ್ದರು. ಇಂದು 4 ಗಂಟೆವರೆಗೆ ಮಾತ್ರ ವಿಚಾರಣೆ ನಡೆಯಲಿದ್ದು, ಇಂದು ವಾದಮಂಡನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

* ಸರ್ಕಾರ, ಪ್ರತಿವಾದಿಗಳ ವಾದ ಮಂಡನೆಯನ್ನು ವಿರೋಧಿಸುತ್ತೇನೆ. ನಮಗೆ ಆತ್ಮಸಾಕ್ಷಿಯ ಆಚರಣೆಯ ಸ್ವಾತಂತ್ರ್ಯ ಇದೆ. ತಲೆಯ ಮೇಲೆ ಮಾತ್ರ ಹಿಜಾಬ್ ಧರಿಸುತ್ತಾರೆ ಎಂದು ಅರ್ಜಿದಾರರ ಪರ ಯೂಸುಫ್ ಮುಕ್ಕಲಾ ವಾದ ಮಂಡಿಸಿದರು. ನೀವು ಈ ಹಿಂದೆ ಮಾಡಿರುವ ವಾದವನ್ನೇ ಪುನರಾವರ್ತಿಸಬೇಡಿ ಎಂದು ಸಿಜೆ ಸೂಚನೆ ನೀಡಿದರು.

* ಹದೀಸ್​ನಲ್ಲೂ ಕೂಡಾ ತಲೆ ಮುಚ್ಚುವ ಬಗ್ಗೆ ಹೇಳಲಾಗಿದೆ. ಮುಖವನ್ನು ಬಟ್ಟೆಯಿಂದ ಮುಚ್ಚುವ ಅಗತ್ಯವಿಲ್ಲ. ಹಿಜಾಬ್ ಅತ್ಯಗತ್ಯ ಆಚರಣೆಯಲ್ಲ ಎಂಬ ವಾದ ಸರಿಯಲ್ಲ. ಎರಡೂ ಕಡೆಯವರು ಹಲವಾರು ತೀರ್ಪುಗಳನ್ನು ಕೊಟ್ಟಿದ್ದಾರೆ. ನೀವು ನಿಮ್ಮ ವಾದಗಳ ಒಂದು ಸಣ್ಣ ಟಿಪ್ಪಣಿ ನೀಡಿ. ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿದ್ದು, ಯೂಸುಫ್ ಮುಕ್ಕಲಾ ವಾದ ಮಂಡನೆ ಮುಕ್ತಾಯಗೊಳಿಸಿದರು.

* ಅರ್ಜಿದಾರರ ಪರ ಪ್ರೊ. ರವಿವರ್ಮಕುಮಾರ್ ವಾದಮಂಡನೆ ಆರಂಭಿಸಿದ್ದು, ಕಾಲೇಜು ಅಭಿವೃದ್ದಿಗೆ ಶಾಸನಬದ್ಧ ಅಧಿಕಾರವಿಲ್ಲ. ಸರ್ಕಾರ ತನ್ನ ಅಧಿಕಾರವನ್ನು ಸಿಡಿಸಿಗೆ ಹಸ್ತಾಂತರಿಸಲು ಸಾಧ್ಯವಿಲ್ಲ. ಶಾಸಕರ ನೇತೃತ್ವದ ಅಭಿವೃದ್ಧಿ ಸಮಿತಿ ಸಮರ್ಥಿಸಿಕೊಂಡಿದ್ದಾರೆ. ಸಿಡಿಸಿಯ ಇತರೆ ಸದಸ್ಯರನ್ನು ಶಾಸಕರೇ ಆಯ್ಕೆ ಮಾಡುತ್ತಾರೆ. ಶಾಸಕರ ತೀರ್ಮಾನವನ್ನು ಜಾರಿ ಮಾಡುವುದಷ್ಟೇ ಇವರ ಕೆಲಸ. ಶಾಸಕರಿಗೆ ಕಾಲೇಜು ಆಡಳಿತ ನೀಡುವುದೇ ಕಾನೂನುಬಾಹಿರ ಎಂದು ವಾದ ಮಂಡಿಸಿದರು.

* ಕಾಲೇಜನ್ನು ಊಟದ ತಟ್ಟೆಯಲ್ಲಿಟ್ಟು ಶಾಸಕರಿಗೆ ನೀಡಿದಂತಾಗಿದೆ. ಶಾಸಕರ ಮೇಲೆ ಕಾಲೇಜಿಗೆ ಯಾವುದೇ ಅಧಿಕಾರವಿರುವುದಿಲ್ಲ. ಸಮಿತಿಯ ಮೂಲಕ ಅಧಿಕಾರವನ್ನು ಸಮಿತಿ ಹೈಜಾಕ್ ಮಾಡಿದೆ ಎಂದು ಮಾಜಿ ಎಜಿ ಪ್ರೊ. ರವಿವರ್ಮಕುಮಾರ್ ವಾದ ಮಂಡನೆ ಮುಕ್ತಾಯಗೊಳಿಸಿದರು.

* ಪಿಐಎಲ್ ಅರ್ಜಿದಾರ ಡಾ. ವಿನೋದ್ ಕುಲಕರ್ಣಿ ವಾದ ಮಂಡನೆ ಆರಂಭಿಸಿದ್ದು, 1400 ವರ್ಷಗಳಿಂದ ಹಿಜಾಬ್ ಆಚರಣೆ ಮಾಡಲಾಗುತ್ತಿದೆ. ಹಿಜಾಬ್ ಧರಿಸುವುದನ್ನು ತಡೆಯದಂತೆ ಮನವಿ ಮಾಡಿದ್ದು, ಲಿಖಿತ ವಾದಮಂಡನೆ ಸಲ್ಲಿಸಲು ಅರ್ಜಿದಾರರಿಗೆ ಹೈಕೋರ್ಟ್ ಪೀಠ ಸೂಚಿಸಿದೆ.

* ಹೊಸ ಅರ್ಜಿದಾರರ ಪರ ಸುಭಾಶ್ ಝಾ ವಾದ ಮಂಡನೆ ಆರಂಭಿಸಿದ್ದು, 1973ರಿಂದಲೂ ಹಿಜಾಬ್, ಬುರ್ಖಾ, ಗಡ್ಡಗಳ ಬಗ್ಗೆ ತೀರ್ಮಾನವಾಗಿದೆ. ಇನ್ನೆಷ್ಟು ವರ್ಷ ಕೋರ್ಟ್​ಗಳು ಈ ವಿಚಾರಗಳನ್ನು ತೀರ್ಮಾನಿಸಬೇಕು. ವಕೀಲರಿಗೆ ಸಮವಸ್ತ್ರವಾಗಿ ಧೋತಿ ಕುರ್ತಾ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಭಾರತದ ಸಂಸ್ಕೃತಿಯಂತೆ ಸಮವಸ್ತ್ರ ಕೋರಲಾಗಿತ್ತು. ಅಲಹಾಬಾದ್ ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿದೆ ಎಂದಿದ್ದಾರೆ.

* ವಕೀಲರೂ ಸಮವಸ್ತ್ರ ಧರಿಸುತ್ತಾರೆ, ನ್ಯಾಯಮೂರ್ತಿಗಳೂ ಕೂಡಾ ಸಮವಸ್ತ್ರ ಧರಿಸುತ್ತಾರೆ. ಹೀಗಿರುವಾಗ ವಿದ್ಯಾರ್ಥಿಗಳಿಗೆ ಸಮವಸ್ತ್ರ ಅತ್ಯಗತ್ಯ ಎಂದು ಸುಭಾಶ್ ಝಾ ವಾದ ಮಂಡಿಸಿದರು.

*ಹಿಜಾಬ್ ವಿಚಾರದಲ್ಲಿ ಪಿಎಫ್‌ಐ, ಸಿಎಫ್‌ಐ, ಜಮಾತ್ ಇ ಇಸ್ಲಾಮಿಗಳ ಪಾತ್ರವಿದೆ. ಈ ಸಂಘಟನೆಗಳಿಗೆ ಸೌದಿ ಅರೇಬಿಯಾದಿಂದ ಹಣಕಾಸಿನ ನೆರವು ಸಿಗುತ್ತಿದೆ. ಹೀಗಾಗಿ ಸಿಬಿಐ ತನಿಖೆ ನಡೆದರೆ ಸತ್ಯ ತಿಳಿಯಲಿದೆ. ಹರ್ಷ ಎಂಬ ಯುವಕನ ಹತ್ಯೆಯಲ್ಲಿ ಕೆಲ ಸಂಘಟನೆಗಳ ಕೈವಾಡವಿದೆ ಎಂದು ಅರ್ಜಿದಾರರ ಪರ ಸುಭಾಶ್ ಝಾ ವಾದ ಮಂಡಿಸಿದರು.

* ನೀವು ಸಿಬಿಐ ತನಿಖೆ ಕೋರಿ ಅರ್ಜಿ ಸಲ್ಲಿಸಿದ್ದೀರಾ, ಸಂಘಟನೆಗಳ ಪಾತ್ರವಿದೆ ಎಂದು ಆರೋಪಿಸಿದ್ದೀರಾ, ಇದಕ್ಕೆ ನೀವು ಯಾವ ದಾಖಲೆಗಳನ್ನು ಸಲ್ಲಿಸಿದ್ದೀರಾ ಎಂದು ಸಿಜೆ ಅವಸ್ತಿ ಪ್ರಶ್ನೆ ಮಾಡಿದರು.

* ಹಿಜಾಬ್​ಗಾಗಿ ರಾತ್ರೋರಾತ್ರಿ ಇಂತಹ ಗಲಭೆಗಳು ನಡೆಯಲು ಸಾಧ್ಯವಿಲ್ಲ. ಇದೇ ವಿದ್ಯಾರ್ಥಿನಿಯರು ಹಿಂದೆ ಹಿಜಾಬ್ ಧರಿಸುತ್ತಿರಲಿಲ್ಲ. ಈ ಬಗ್ಗೆ ಫೋಟೋಗ್ರಾಫ್​ಗಳು ಲಭ್ಯವಿದೆ. ಹಿಜಾಬ್​ಗಾಗಿ ದೇಶಾದ್ಯಂತ ಹಿರಿಯ ವಕೀಲರನ್ನು ನೇಮಿಸಲಾಗಿದೆ. ಭಾರತವನ್ನು ಇಸ್ಲಾಮೀಕರಣ ಮಾಡಬೇಕೆಂದು ಹಣಕಾಸಿನ ನೆರವು ನೀಡಲಾಗಿದೆ. ಹೀಗಾಗಿ ಸಿಬಿಐ ತನಿಖೆಯಾಗಬೇಕೆಂದು ಕೋರುತ್ತಿದ್ದೇವೆ ಎಂದು ಅರ್ಜಿದಾರರ ಪರ ಸುಭಾಶ್ ಝಾ ವಾದ ಮಂಡಿಸಿದರು.

* ಹೈಕೋರ್ಟ್ ವಿಸ್ತೃತ ಪೀಠವು ಫೆಬ್ರವರಿ 10 ರಂದು ಕೈಗೆತ್ತಿಕೊಂಡ ಹಿಜಾಬ್ ವಿಚಾರಣೆ ಇಂದು ಮುಕ್ತಾಯಗೊಂಡಿದ್ದು, ಅಂತಿಮ ತೀರ್ಪನ್ನು ಕಾಯ್ದಿರಿಸಿದೆ.* ಹಿಜಾಬ್‌ಗೆ ನಿರ್ಬಂಧ ವಿಧಿಸಿರುವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತು ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಪೂರ್ಣಪೀಠ ಶುಕ್ರವಾರ ವಿಚಾರಣೆಯನ್ನು ನಡೆಸಿತು.

* ಅದರಂತೆ ಎಲ್ಲ ವಕೀಲರ ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ನ್ಯಾಯಪೀಠ ವಿಚಾರಣೆ ಪೂರ್ಣಗೊಂಡಿದೆ, ತೀರ್ಪು ಕಾಯ್ದಿರಿಸಿದೆ. ಯಾವ ವಕೀಲರು ಬೇಕಾದರೂ ಲಿಖಿತ ವಾದಾಂಶ ಸಲ್ಲಿಸಬಹುದು ಎಂದು ಆದೇಶಿಸಿತು.

English summary
Hijab Ban: Karnataka High Court is hearing Muslim students' case challenging Hijab Ban in colleges. HC hearing the petitions for February 25. Check updates and highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X