ನಿತ್ಯಾನಂದ ರಾಸಲೀಲೆ ಪ್ರಕರಣ, ದಾಖಲೆ ನೀಡಲು ಆದೇಶ
ಬೆಂಗಳೂರು, ಜುಲೈ 21 : ಬಿಡದಿ ಧ್ಯಾನ ಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಮತ್ತು ರಾಸಲೀಲೆ ಪ್ರಕರಣದ ಸಾಕ್ಷಿಗಳನ್ನು ಹಾಜರುಪಡಿಸಲು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಸಾಕ್ಷಿಗಳನ್ನು ಹಾಜರುಪಡಿಸಲು ಸೂಚನೆ ನೀಡಬೇಕು ಎಂದು ನಿತ್ಯಾನಂದ ಸ್ವಾಮೀಜಿ ಕೋರ್ಟ್ ಮೆಟ್ಟಿಲೇರಿದ್ದರು.
ತಮ್ಮ ವಿರುದ್ಧದ ಅತ್ಯಾಚಾರ ಮತ್ತು ರಾಸಲೀಲೆ ಪ್ರಕರಣದಲ್ಲಿ ಸಂಗ್ರಹಿಸಿದ ಸಾಕ್ಷಿಗಳನ್ನು ಹಾಜರು ಪಡಿಸುವಂತೆ ಸಿಐಡಿಗೆ ನಿರ್ದೇಶನ ನೀಡಬೇಕು ಎಂದು ನಿತ್ಯಾನಂದ ಸ್ವಾಮೀಜಿ ರಾಮನಗರ ಕೋರ್ಟ್‌ಗೆ ಮನವಿ ಮಾಡಿದ್ದರು.[ಉಸ್ಸಪ್ಪ, ಅಂತೂ ಆಯ್ತು ನಿತ್ಯಾ ಪುರುಷತ್ವ ಪರೀಕ್ಷೆ!]

ಆದರೆ, ನ್ಯಾಯಾಲಯ ಈ ಅರ್ಜಿಯನ್ನು ತಳ್ಳಿ ಹಾಕಿತ್ತು. ಆದ್ದರಿಂದ, ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದರು. ಗುರುವಾರ ತೀರ್ಪು ಹೊರಬಂದಿದ್ದು, ಸಿಐಡಿ ಸಾಕ್ಷಿಗಳನ್ನು ಕೋರ್ಟ್‌ಗೆ ಹಾಜರುಪಡಿಸಬೇಕು. ಸಾಕ್ಷಿಗಳು ನೀಡಿರುವ ಹೇಳಿಕೆ ಪ್ರತಿಗಳನ್ನು ಸ್ವಾಮೀಜಿಗೂ ನೀಡಬೇಕು ಎಂದು ಸೂಚಿಸಿದೆ.[ನಿತ್ಯಾನಂದ ಸ್ವಾಮಿಯ ವರದಿಯಲ್ಲೇನಿದೆ?]
ಅತ್ಯಾಚಾರ ಮತ್ತು ರಾಸಲೀಲೆ ಪ್ರಕರಣದಲ್ಲಿ ನಟಿ ರಂಜಿತಾ, ಆರತಿ ರಾವ್ ಸೇರಿದಂತೆ 32 ಜನರಿಂದ ಸಿಐಡಿ ಹೇಳಿಕೆ ಮತ್ತು ಸಾಕ್ಷಿಗಳನ್ನು ಸಂಗ್ರಹಣೆ ಮಾಡಿದೆ. ಕರ್ನಾಟಕ ಹೈಕೋರ್ಟ್ ಆದೇಶದ ಅನ್ವಯ ಈ ಸಾಕ್ಷಿಗಳನ್ನು ಸಿಐಡಿ ಕೋರ್ಟ್‌ಗೆ ಹಾಜರುಪಡಿಸಬೇಕು.[ವಿವಾದದಲ್ಲೇ ಮುಳುಗೆದ್ದ ಟಾಪ್ 10 'ದೇವಮಾನವರು']
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸದಂತೆ ನಿತ್ಯಾನಂದ ಸ್ವಾಮೀಜಿ ಅವರ ಪುರುಷತ್ವ ಪರೀಕ್ಷೆಯನ್ನು ನಡೆಸಲಾಗಿದೆ. ಸಿಐಡಿ ಪೊಲೀಸರು ರಾಮನಗರ ಕೋರ್ಟ್‌ಗೆ ಸ್ವಾಮೀಜಿ ಪುರುಷತ್ವ, ಧ್ವನಿ ಪರೀಕ್ಷೆ ಸೇರಿ ಒಟ್ಟು 31 ಪುಟಗಳ ವರದಿಯನ್ನು ಸಲ್ಲಿಸಿದ್ದಾರೆ.












Click it and Unblock the Notifications