Get Updates
Get notified of breaking news, exclusive insights, and must-see stories!

ಉತ್ತರಾದಿ- ರಾಯರ ಮಠದವರು ನೀವೇ ನವವೃಂದಾವನ ಗೊಂದಲ ಬಗೆಹರಿಸಿಕೊಳ್ಳಿ

ಬೆಂಗಳೂರು, ನವೆಂಬರ್ 15 : ಆನೆಗೊಂದಿಯಲ್ಲಿರುವ ನವವೃಂದಾವನದಲ್ಲಿ ಆರಾಧನೆ ವಿಚಾರವಾಗಿ ರಾಘವೇಂದ್ರ ಸ್ವಾಮಿ ಮಠ ಹಾಗೂ ಉತ್ತರಾದಿ ಮಠದ ಮಧ್ಯೆ ಇರುವ ಸಂಘರ್ಷ ಮುಂದುವರಿದಿದೆ.

ಈ ಕುರಿತ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠವು, 'ಮೂರು ದಿನಗಳಲ್ಲಿ ಯಾರು ಎಷ್ಟು ದಿನ ಆರಾಧನೆ ಮಾಡಬೇಕು ಎಂಬ ಬಗ್ಗೆ ಪರಸ್ಪರ ಚರ್ಚಿಸಿ, ನೀವೇ ಒಂದು ತೀರ್ಮಾನಕ್ಕೆ ಬನ್ನಿ' ಎಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಹಾಗೂ ಉತ್ತರಾದಿ ಮಠಗಳ ಪೀಠಾಧಿಪತಿಗಳಿಗೆ ಸೂಚಿಸಿದೆ.

ಕೊಪ್ಪಳ ಜಿಲ್ಲೆಯ ಆನೆಗೊಂದಿ ಗ್ರಾಮದ ನವ ಬೃಂದಾವನದಲ್ಲಿ ನ.16ರಿಂದ ನಡೆಯಲಿರುವ ಆರಾಧನಾ ಮಹೋತ್ಸವದ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಲು ಹೈಕೋರ್ಟ್ ನಿರಾಕರಿಸಿದೆ. ಇದೇ ವೇಳೆ, 'ಆನೆಗೊಂದಿಯಲ್ಲಿರುವ 27.30 ಎಕರೆ ವಿವಾದಿತ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಆಧರಿಸಿ ಮರು ವಿಚಾರಣೆ ನಡೆಸಿ' ಎಂದೂ ಧಾರವಾಡ ಸಿವಿಲ್ ಕೋರ್ಟ್‌ಗೆ ನಿರ್ದೇಶಿಸಲಾಗಿದೆ.

ಅಂದಹಾಗೆ, ನವೆಂಬರ್ 16 ರಿಂದ 18ರವರೆಗೆ ಮಧ್ವಾಚಾರ್ಯರ ಶಿಷ್ಯರಾಗಿದ್ದ ಪದ್ಮನಾಭ ತೀರ್ಥ ಆರಾಧನೆ ನಡೆಯಬೇಕಿದೆ. ಈ ಹಿಂದೆ ಎರಡೂ ಮಠದವರು ತಲಾ ಒಂದೂವರೆ ದಿನದಂತೆ ಆರಾಧನೆ ಮಾಡುವಂತೆ ಕೋರ್ಟ್ ಆದೇಶ ನೀಡಿತ್ತು.

ಎರಡೆರಡು ಬಾರಿ ನೈವೇದ್ಯ, ಹಸ್ತೋದಕ

ಎರಡೆರಡು ಬಾರಿ ನೈವೇದ್ಯ, ಹಸ್ತೋದಕ

ಒಂದೂವರೆ ದಿನ ಒಂದು ಮಠದವರು ಅಲಂಕಾರ, ನೈವೇದ್ಯ, ಹಸ್ತೋದಕ ಎಲ್ಲ ಮಾಡಿದ ಮೇಲೆ, ಇನ್ನೊಂದು ಮಠದವರು ಆ ಎಲ್ಲವನ್ನೂ ತೆಗೆದು ತಾವು ಆರಾಧನೆ ಮಾಡುತ್ತಿದ್ದರು. ಹೀಗೆ ಯತಿಗಳ ಆರಾಧನೆಯಲ್ಲಿ ಎರಡೆರಡು ಬಾರಿ ನೈವೇದ್ಯ- ಹಸ್ತೋದಕ ಮಾಡುವುದು ಧರ್ಮಬಾಹಿರವಂತೆ.

ಒಟ್ಟಿಗೆ ಆರಾಧನೆ ಮಾಡುವುದು ಅಸಾಧ್ಯ

ಒಟ್ಟಿಗೆ ಆರಾಧನೆ ಮಾಡುವುದು ಅಸಾಧ್ಯ

ಈ ವಿವಾದ ದಶಕಗಳ ಕಾಲದಿಂದ ಇದ್ದು, ಎರಡೂ ಮಠದವರೂ ಒಂದೆಡೆ ಕೂತು, ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂಬುದು ಕೋರ್ಟ್ ಸೂಚನೆ. ಆದರೆ ಒಂದೇ ಉಪ ಪಂಗಡವಾದರೂ ಎರಡೂ ಮಾಧ್ವ ಮಠಗಳೇ ಆದರೂ ಆಚರಣೆಯಲ್ಲಿ ಭಿನ್ನತೆ ಇರುವುದರಿಂದ ಒಟ್ಟಿಗೆ ಆರಾಧನೆ ಮಾಡುವುದು ಅಸಾಧ್ಯ ಎಂಬುದು ವಿದ್ವಾಂಸರ ಅಭಿಪ್ರಾಯ.

ಭಾಗವಹಿಸುವ ಬಗ್ಗೆ ತೀರ್ಮಾನವಾಗಿಲ್ಲ

ಭಾಗವಹಿಸುವ ಬಗ್ಗೆ ತೀರ್ಮಾನವಾಗಿಲ್ಲ

ಮೂಲಗಳ ಪ್ರಕಾರ, ಬುಧವಾರ ಮಧ್ಯಾಹ್ನದವರೆಗೂ ಈ ಬಾರಿ ಆನೆಗೊಂದಿಯಲ್ಲಿ ನಡೆಯುವ ಆರಾಧನೆಯಲ್ಲಿ ಉತ್ತರಾದಿ ಮಠದವರು ಪಾಲ್ಗೊಳ್ಳುವುದು ಬೇಡ ಎಂದೇ ತೀರ್ಮಾನವಾಗಿದೆ. ಏಕೆಂದರೆ, ಎರಡೂ ಮಠದವರೂ ಅಲ್ಲಿದ್ದು, ಗಲಾಟೆಗಳಾಗುವುದು ಬೇಡ ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಯಾರಿಗೂ ತಡೆ ವಿಧಿಸಿಲ್ಲ

ಯಾರಿಗೂ ತಡೆ ವಿಧಿಸಿಲ್ಲ

ಆದರೆ, ಉತ್ತರಾದಿ ಮಠದವರೋ ಅಥವಾ ರಾಯರ ಮಠದವರೋ ಆನೆಗೊಂದಿಗೆ ಹೋಗುವುದಕ್ಕೆ ಯಾವುದೇ ತಡೆ ಇಲ್ಲ. ಆದ್ದರಿಂದ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಾಗಲೂ ಬಹುದು ಎಂಬ ಮಾತು ಕೇಳಿಬರುತ್ತಿದೆ. ಅಂದಹಾಗೆ ಪದ್ಮನಾಭ ತೀರ್ಥರು ಉತ್ತರಾದಿ ಮಠದ ಪರಂಪರೆಯಲ್ಲಿ ಬರುವ ಯತಿಗಳು. ಅವರ ಆರಾಧನೆ ಮಾಡುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ಎಂಬುದು ಉತ್ತರಾದಿ ಮಠದವರ ವಾದ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+