ಯಡಿಯೂರಪ್ಪ, ನಳಿನ್‌ಗೆ ಹೈಕಮಾಂಡ್ ಒಂದು ಸಾಲಿನ ಸಂದೇಶ!

ಬೆಂಗಳೂರು, ಅಕ್ಟೋಬರ್ 03 : ಕರ್ನಾಟಕದ ಬಿಜೆಪಿ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯತೆ ಇಲ್ಲ?. ಅದರಲ್ಲೂ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷರಾದ ಬಳಿಕ ರಾಜ್ಯ ಘಟಕ ಎರಡು ಗುಂಪಾಗಿದೆ ಎಂಬ ಸುದ್ದಿ ಹಬ್ಬಿದೆ.

ಉಪಾಧ್ಯಕ್ಷರ ನೇಮಕ, ಬಿಬಿಎಂಪಿ ಮೇಯರ್ ಚುನಾವಣೆ, ಅನರ್ಹ ಶಾಸಕರಿಗೆ ಟಿಕೆಟ್ ವಿಚಾರ ಸೇರಿದಂತೆ ಹಲವು ವಿಚಾರಗಳಲ್ಲಿ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಆದ್ದರಿಂದ, ಸಮನ್ವಯತೆ ಸಾಧಿಸಲು ಹೈಕಮಾಂಡ್ ನಾಯಕರ ಆಗಮನವಾಗಿದೆ.

ಗುರುವಾರ ನಳಿನ್ ಕುಮಾರ್ ಕಟೀಲ್ ಯಡಿಯೂರಪ್ಪರ ಡಾಲರ್ಸ್ ಕಾಲೋನಿ 'ಧವಳಗಿರಿ' ನಿವಾಸಕ್ಕೆ ಭೇಟಿ ನೀಡಿದ್ದರು. ಯಡಿಯೂರಪ್ಪ ಇತ್ತೀಚಿನ ಬೆಳವಣಿಗೆ ಬಗ್ಗೆ ನಳಿನ್ ಕುಮಾರ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ನಳಿನ್ ಕುಮಾರ್ ಕಟೀಲ್ ಅಧ್ಯಕ್ಷರಾದ ಬಳಿಕ ಯಡಿಯೂರಪ್ಪರನ್ನು ಕಡೆಗಣಿಸಲಾಗುತ್ತಿದೆ ಎಂಬುದು ಯಡಿಯೂರಪ್ಪ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬಿ. ಎಲ್. ಸಂತೋಷ್ ಮಾತಿನಂತೆ ಕಟೀಲ್ ನಡೆಯುತ್ತಾರೆ ಎಂಬುದು ಅವರು ಮಾಡುತ್ತಿರುವ ಆರೋಪವಾಗಿದೆ.

15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಎದುರಿದೆ. ಪಕ್ಷದ ನಾಯಕರ ನಡುವೆ ಅಸಮಾಧಾನವಿದ್ದರೆ ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಆದ್ದರಿಂದ, ಹೈಕಮಾಂಡ್ ಈ ವಿಚಾರದಲ್ಲಿ ಪ್ರವೇಶ ಮಾಡಿ ಉಭಯ ನಾಯಕರಿಗೆ ಸಂದೇಶ ಕಳಿಸಿದೆ.

ಪಕ್ಷದ ಉಪಾಧ್ಯಕ್ಷರ ನೇಮಕ

ಪಕ್ಷದ ಉಪಾಧ್ಯಕ್ಷರ ನೇಮಕ

ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ನಿರ್ಮಲ್ ಕುಮಾರ್ ಸುರಾನ ಮತ್ತು ಎಂ. ಬಿ. ಭಾನುಪ್ರಕಾಶ್‌ರನ್ನು ಪಕ್ಷದ ಉಪಾಧ್ಯಕ್ಷರಾಗಿ ನೇಮಿಸಿದರು. ಈ ಇಬ್ಬರು ನಾಯಕರು ಯಡಿಯೂರಪ್ಪ ಪಕ್ಷದ ಅಧ್ಯಕ್ಷರಾಗಿದ್ದ ವೇಳೆ ಅವರ ವಿರುದ್ಧ ಧ್ವನಿ ಎತ್ತಿದ ನಾಯಕರು. ಆದ್ದರಿಂದ, ಇವರನ್ನು ನೇಮಿಸಿದ ನಳಿನ್ ವಿರುದ್ದ ಯಡಿಯೂರಪ್ಪ ಅಸಮಾಧಾನಗೊಂಡಿದ್ದಾರೆ.

ಬಿಬಿಎಂಪಿ ಮೇಯರ್ ಚುನಾವಣೆ

ಬಿಬಿಎಂಪಿ ಮೇಯರ್ ಚುನಾವಣೆ

ಬಿಬಿಎಂಪಿ ಮೇಯರ್ ಆಯ್ಕೆಗೆ ಸಂಬಂಧಿಸಿದಂತೆ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್ ನಡುವೆ ಭಿನ್ನಮತ ಉಂಟಾಗಿತ್ತು. ಮೇಯರ್ ಆಯ್ಕೆಗೆ ಸಮಿತಿ ರಚಿಸಿದ್ದೇವೆ ಎಂದು ಯಡಿಯೂರಪ್ಪ ಹೇಳಿದ್ದರು. ಯಾವುದೇ ಸಮಿತಿ ಮಾಡಿಲ್ಲ ಎಂದು ರಾಜ್ಯಾಧ್ಯಕ್ಷರು ಹೇಳಿದ್ದರು. ಕೊನೆಗೆ ಮೇಯರ್ ಆಯ್ಕೆ ಸಭೆಗೆ ಬೆಂಗಳೂರು ಅಭಿವೃದ್ದಿ ಉಸ್ತುವಾರಿ ಸಚಿವರಾಗಿದ್ದ ಯಡಿಯೂರಪ್ಪ ಗೈರಾಗಿದ್ದರು.

ಯಡಿಯೂರಪ್ಪ ಮಾತಿನ ಅರ್ಥವೇನು?

ಯಡಿಯೂರಪ್ಪ ಮಾತಿನ ಅರ್ಥವೇನು?

ಬಿಬಿಎಂಪಿ ಅಧಿಕಾರ ಬಿಜೆಪಿಗೆ ಸಿಕ್ಕ ಬಳಿಕ ಪ್ರತಿಕ್ರಿಯೆ ನೀಡಿದ್ದ ಯಡಿಯೂರಪ್ಪ, "ನಳಿನ್ ಕುಮಾರ್ ಕಟೀಲ್ ಅಧ್ಯಕ್ಷರಾದ ಮೇಲೆ ಮೊದಲ ಗೆಲುವು ಸಿಕ್ಕಿದೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ನೀಡಿದ ಹೇಳಿಕೆ ಬಗ್ಗೆ ಭಾರಿ ಚರ್ಚೆ ನಡೆದಿತ್ತು.

ಆಗಿದ್ದು ಆಯಿತು ಮುಂದೆ ಸರಿಯಾಗಲಿ

ಆಗಿದ್ದು ಆಯಿತು ಮುಂದೆ ಸರಿಯಾಗಲಿ

ಇದುವರೆಗೆ ಆಗಿದ್ದು ಆಯಿತು ಮುಂದೆ ಸರಿಯಾಲಿ, ಒಟ್ಟಿಗೆ ನಡೆಯಿರಿ ಎಂದು ಹೈಕಮಾಂಡ್ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್‌ಗೆ ಸಂದೇಶ ಕಳಿಸಿದೆ. ಪಕ್ಷದ ಭವಿಷ್ಯದ ದೃಷ್ಟಿಯಿಂದ ಈ ವಿಚಾರದಲ್ಲಿ ಹೈಕಮಾಂಡ್ ಪ್ರವೇಶವಾಗಿದೆ.

ಉಪ ಚುನಾವಣೆ ಎದುರಿದೆ

ಉಪ ಚುನಾವಣೆ ಎದುರಿದೆ

15 ಕ್ಷೇತ್ರಗಳ ಉಪ ಚುನಾವಣೆ ಡಿಸೆಂಬರ್ 5ರಂದು ನಡೆಯಲಿದೆ. ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಡಿಯೂರಪ್ಪ, ಕಟೀಲ್ ನಡುವಿನ ಹಗ್ಗಜಗ್ಗಾಟದಿಂದ ಪಕ್ಷಕ್ಕೆ ಹಿನ್ನಡೆ ಆಗಬಾರದು ಎಂದು ಬಿಜೆಪಿ ಹೈಕಮಾಂಡ್ ಇಬ್ಬರೂ ನಾಯಕರಿಗೆ ಒಂದು ಸಾಲಿನ ಸಂದೇಶ ಕಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+