ಮುಂಗಾರಿನ ಅಬ್ಬರ ಕಾಣುವ ಇಚ್ಛೆಯಿದರೆ ಪಶ್ಚಿಮ ಘಟ್ಟ, ಕರಾವಳಿ ಪ್ರದೇಶಕ್ಕೆ ಹೊರಡಿ

ಕೇರಳಕ್ಕೆ ನೈರುತ್ಯ ಮುಂಗಾರಿನ ಪ್ರವೇಶವಾಗಿದೆ. ಮುಂಗಾರು ಮಳೆಯನ್ನು ನೋಡಿ ಆನಂದಿಸಲು ಬಯಸುವವರಿಗಾಗಿ ಈ ಲೇಖನ. ಮಾನ್ಸೂನ್ ಫೋಟೋಗ್ರಫಿ ಎಂಬುದು ಕೂಡ ತುಂಬ ಜನಪ್ರಿಯವಾಗಿದೆ. ಇಂಥ ಸಂದರ್ಭದಲ್ಲಿ ಕರಾವಳಿಯಲ್ಲಿ ಮಳೆಯ ಅಬ್ಬರವನ್ನು ಹೇಗೆ ಬಣ್ಣಿಸುವುದು?

ಮಂಗಳೂರಿನಿಂದ ಗೋವಾಕ್ಕೆ ರಸ್ತೆ ಮೂಲಕ ತೆರಳುವುದು ತುಂಬ ಸೊಗಸಾದ ಅನುಭವ ಎಂದು ಹೇಳುವವರಿದ್ದಾರೆ. ಅದೇ ರೀತಿ ಆಗುಂಬೆಯಲ್ಲಿ ಬಿಡುವಿಲ್ಲದೆ ಬರುವ ಮಳೆಯಲ್ಲಿ ಮಲೆನಾಡಿನ ಖಾದ್ಯ ಸವಿಯುವುದರ ಮಜಾ ಬೇರೆ. ಇನ್ನು ಬೆಳಗಾವಿಗೆ ಹತ್ತಿರದ ಮಹಾರಾಷ್ಟ್ರಕ್ಕೆ ಸೇರಿದ ಅಂಬೋಲಿಗೆ ಹೋಗಿಬಂದರೆ ಅದು ಮತ್ತೊಂದು ಅನುಭೂತಿ.[ಜಲಕ್ರೀಡೆಯ ತಾಣವಾಗಲಿದೆ ಮಂಗಳೂರು ಸಸಿ ಹಿತ್ಲು ಬೀಚ್]

Here is the tips for Monsoon tourism 2017

ಹ್ಞಾಂ, ಕುದುರೆಮುಖದ ಬಳಿ ಭಗವತಿ ನೇಚರ್ ಕ್ಯಾಂಪ್ ಎಂಬುದೊಂದಿದೆ. ಅಲ್ಲಿ ತುಂಬ ಕನಿಷ್ಠ ಸೌಲಭ್ಯಗಳಿದ್ದು, ಸರಕಾರಕ್ಕೆ ಸೇರಿದ್ದಾಗಿದೆ. ಆದರೆ ಇಲ್ಲಿನ ಹಸಿರು, ಚಿತ್ರ ಬರೆದಿಟ್ಟಂತೆ ಕಾಣುವ ಪರಿಸರ, ನದಿ...ವಾಹ್ ಎನ್ನುವ ಉದ್ಗಾರ ನೀವು ಮಾಡದಿದ್ದರೆ ಹೇಳಿ. ಇನ್ನು ಮರವಂತೆ ಮರೆಯಲಾದೀತೆ? ಸಮುದ್ರ-ನದಿ ಚುಂಬಿಸುವ ಈ ಸ್ಥಳದಲ್ಲಿ ಮಳೆಯ ಅಬ್ಬರ ನೋಡುವುದೇ ಚಂದ.[ನಂದಿ ಬೆಟ್ಟದ ಮಂಜು, ಸೊಗಸು ಕಾಣುವ ರೋಮಾಂಚಕ ಅನುಭವ]

ಕೇರಳದ ಕಡಲ ತೀರ ಪ್ರದೇಶದಲ್ಲಿ ಈಗ ಮಳೆಯ ಅಬ್ಬರ ಬಲು ಜೋರಾಗಿರುತ್ತದೆ. ವರ್ಕಳ, ಕೋವಲಂ ಸೇರಿದ ಹಾಗೆ ತೇಕ್ಕಡಿ, ಮುನ್ನಾರ್, ಅಲೆಪ್ಪಿ ವಿವಿಧೆಡೆ ಮಳೆಗಾಲದ ಅನುಭವ ಪಡೆಯಲು ಭೇಟಿ ನೀಡುತ್ತಾರೆ. ತಮಿಳುನಾಡಿನ ಕನ್ಯಾಕುಮಾರಿ, ರಾಮೇಶ್ವರಂ ಆಂಧ್ರದ ಅರಕ್ಕು ವ್ಯಾಲಿ, ವಿಶಾಖಪಟ್ಟಣಂ ಕೂಡ ಅಂಥವೇ ಸ್ಥಳಗಳು.[ಮಲೆನಾಡಿನ ಆತಿಥ್ಯ, ಮನ ಮೆಚ್ಚುವ ಪರಿಸರಕ್ಕೆ 'ಅಮ್ತಿ ಹೋಂ ಸ್ಟೇ']

ಪಶ್ಚಿಮ ಘಟ್ಟ ಹಾಗೂ ಕೊಂಕಣದ ಸಾಲಿನಲ್ಲಿ ಬರುವ ಕರ್ನಾಟಕ, ಆಂಧ್ರ, ಕೇರಳ, ಗೋವಾ, ಮಹಾರಾಷ್ಟ್ರದ ಮಳೆ ಪ್ರದೇಶಗಳಲ್ಲಿ ತಿರುಗಾಡುವ ಉತ್ಸಾಹ ಹಾಗೂ ಚೈತನ್ಯ ಇದ್ದರೆ ಈ ಬಾರಿಯ ಮುಂಗಾರು ನೆನಪಿನಲ್ಲಿ ಉಳಿಯುವಂತೆ ಮಾಡಿಕೊಳ್ಳಬಹುದು. ನಿಮಗೆ ಗೊತ್ತಿರುವ ಮುಂಗಾರು ಮಳೆ ವೇಳೆ ತೆರಳಬಹುದಾದ ಸ್ಥಳಗಳಿದ್ದರೆ ಹಂಚಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+