Karnataka Election: SSLCಗಿಂತ ಕಮ್ಮಿ ವಿದ್ಯಾರ್ಹತೆ ಹೊಂದಿರುವ ಶಾಸಕರ ಪಟ್ಟಿ ಇಲ್ಲಿದೆ..
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೆ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿವೆ. ಕಾಂಗ್ರೆಸ್ ತನ್ನ 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು ಜೆಡಿಎಸ್ ಕೂಡ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಈವರೆಗೂ ಒಂದೂ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.
ಈ ನಡುವೆ ಪ್ರಬಲ ಪಕ್ಷಗಳು ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿವೆ. ಕೆಲ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ನೀಡುವ ಅಭ್ಯರ್ಥಿಗಳ ಆಯ್ಕೆಗೆ ಪಕ್ಷಗಳು ನಿರ್ಧರಿಸಿವೆ. ಜೊತೆಗೆ ಕಳೆದ ಬಾರಿ ಟಿಕೆಟ್ ಪಡೆದ ಅಭ್ಯರ್ಥಿಗಳ ಬಗ್ಗೆ ಕೂಡ ಚರ್ಚೆ ಮಾಡಲಾಗುತ್ತಿದೆ. ಕಳೆದ ಬಾರಿ ಹಲವೆಡೆ ಕಡಿಮೆ ವಿದ್ಯಾರ್ಹತೆ ಹೊಂದಿದ ಜನನಾಯಕರು ಗೆಲುವು ಸಾಧಿಸಿದ್ದಾರೆ. ಅಂತವರ ಚರ್ಚೆ ಕೂಡ ನಡೆದಿದೆ. ಹಾಗಾದರೆ ಕಳೆದ ಬಾರಿ SSLCಗಿಂತ ಕಮ್ಮಿ ವಿದ್ಯಾರ್ಹತೆ ಹೊಂದಿರುವ ಶಾಸಕರು ಯಾರು? ಯಾವ ಕ್ಷೇತ್ರದವರು? ಸಂಪೂರ್ಣ ವಿವರ ಇಲ್ಲಿದೆ.

SSLCಗಿಂತ ಕಮ್ಮಿ ವಿದ್ಯಾರ್ಹತೆ ಹೊಂದಿರುವ ಶಾಸಕರ ಪಟ್ಟಿಯಲ್ಲಿ ರಾಮದುರ್ಗದ ಕ್ಷೇತ್ರದ ಬಿಜೆಪಿ ಶಾಸಕ ಎಂ.ಎಸ್.ಯದವಾಡ್ ಕೂಡ ಒಬ್ಬರು ಇವರು. 5ನೇ ತರಗತಿಯನ್ನು ಮಾತ್ರ ಪೂರ್ಣಗೊಳಿಸಿದ್ದಾರೆ. 2018 ರಲ್ಲಿ ಭಾರತೀಯ ಜನತಾ ಪಾರ್ಟಿ ಯ ಮಹಾದೇವಪ್ಪ ಎಸ್ ಯಾದವಾಡ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಪಿ ಎಂ ಅಶೋಕ್ 2875 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.
ಇನ್ನೂ ಲಿಂಗಸಗೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ.ಎಸ್.ಹೂಲಗೇರಿ ಕೂಡ ಕಡಿಮೆ ವಿದ್ಯಾರ್ಹತೆಯನ್ನು ಹೊಂದಿದ್ದಾರೆ. ಲಿಂಗಸುಗೂರು ಕ್ಷೇತ್ರದಲ್ಲಿಯೇ ಹಟ್ಟಿ ಚಿನ್ನದ ಗಣಿ ಇದ್ದು, ಸದ್ಯ ಭಾರತದಲ್ಲಿ ಚಿನ್ನ ಉತ್ಪಾದಿಸುವ ಏಕೈಕ ಸ್ಥಳವಾಗಿದೆ.
ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ್ ದಡೇಸೂಗೂರು 5ನೇ ತರಗತಿ ಪೂರ್ಣಗೊಳಿಸಿದ್ದಾರೆ. 2018 ರಲ್ಲಿ ಭಾರತೀಯ ಜನತಾ ಪಾರ್ಟಿ ಯ ಬಸವರಾಜ ದಡೇಸೂಗೂರು ಗೆಲುವು ಸಾಧಿಸಿದ್ದರು. ಕಾಂಗ್ರೆಸ್fನ ಶಿವರಾಜ್ ಸಂಗಪ್ಪ ತಂಗಡಗಿ 14225 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.

ಜೊತೆಗೆ ಬ್ಯಾಡಗಿ ಕ್ಷೇತ್ರದ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಆರ್ ಬಳ್ಳಾರಿ ಕೂಡ 5ನೇ ತರಗತಿ ಪೂರ್ಣಗೊಳಿಸಿದ್ದಾರೆ. ಬ್ಯಾಡಗಿ ಮೆಣಿಸಿನಿಂದಲೇ ಬ್ಯಾಡಗಿ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಲ್ಪಟ್ಟಿದೆ. ಸದ್ಯ ಬಿಜೆಪಿ ಭದ್ರಕೋಟೆಯಾಗಿರುವ ಬ್ಯಾಡಗಿಯಲ್ಲಿ ಬಿಜೆಪಿಯ ವಿರೂಪಾಕ್ಷಪ್ಪ ಬಳ್ಳಾರಿ ಶಾಸಕರಾಗಿದ್ದಾರೆ.
ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೀಮಾನಾಯಕ್ ಕೂಡ 8ನೇ ತರಗತಿ ಪೂರ್ಣಗೊಳಿಸಿದ್ದಾರೆ. ಇನ್ನೂ ಮಾಲೂರಿನ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ 8ನೇ ತರಗತಿ ಪೂರ್ಣಗೊಳಿಸಿದ್ದಾರೆ.
ಚಾಮರಾಜಪೇಟೆಯ ಶಾಸಕ ಜಮೀರ್ ಅಹಮದ್ ಖಾನ್ 8ನೇ ತರಗತಿ, ಹೊಸಕೋಟೆಯ ಕಾಂಗ್ರೆಸ್ ಶಾಸಕ ಎಂ.ಟಿ.ಬಿ ನಾಗರಾಜು 8ನೇ ತರಗತಿ, ದೇವನಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ನಾರಾಯಣಸ್ವಾಮಿ 8ನೇ ತರಗತಿ, ಸುಳ್ಯ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಅಂಗಾರ ಕೂಡ 8ನೇ ತರಗತಿ ಪೂರ್ಣಗೊಳಿಸಿದ್ದಾರೆ.
ಪಿರಿಯಾಪಟ್ಟಣದ ಜೆಡಿಎಸ್ ಶಾಸಕ ಕೆ.ಮಹದೇವ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹಾಗೂ ಚಾಮರಾಜ ಬಿಜೆಪಿ ಶಾಸಕ ಎಲ್.ನಾಗೇಂದ್ರ ಕಡಿಮೆ (8ನೇ ತರಗತಿ) ವಿದ್ಯಾರ್ಹತೆಯನ್ನು ಹೊಂದಿದ್ದಾರೆ.
SSLCಗಿಂತ ಕಮ್ಮಿ ವಿದ್ಯಾರ್ಹತೆ ಹೊಂದಿರುವ ಶಾಸಕರ ಪಟ್ಟಿ:
| ಕ್ರಮ ಸಂಖ್ಯೆ | ಹೆಸರು | ಪ್ರತಿನಿಧಿಸುವ ಕ್ಷೇತ್ರ | ಶಿಕ್ಷಣ | ಪಕ್ಷ |
| 1 | ಎಂ.ಎಸ್.ಯದವಾಡ್ | ರಾಮದುರ್ಗ | 5ನೇ ತರಗತಿ | ಬಿಜೆಪಿ |
| 2 | ಡಿ.ಎಸ್.ಹೂಲಗೇರಿ | ಲಿಂಗಸಗೂರು | 5ನೇ ತರಗತಿ | ಕಾಂಗ್ರೆಸ್ |
| 3 | ಬಸವರಾಜ್ ಧಡೇಸ್ಗೂರ್ | ಕನಕಗಿರಿ | 5ನೇ ತರಗತಿ | ಬಿಜೆಪಿ |
| 4 | ವಿರೂಪಾಕ್ಷಪ್ಪ ಆರ್ ಬಳ್ಳಾರಿ | ಬ್ಯಾಡಗಿ | 5ನೇ ತರಗತಿ | ಬಿಜೆಪಿ |
| 5 | ಭೀಮಾನಾಯಕ್ | ಹಗರಿಬೊಮ್ಮನಹಳ್ಳಿ | 8ನೇ ತರಗತಿ | ಕಾಂಗ್ರೆಸ್ |
| 6 | ಕೆ.ವೈ.ನಂಜೇಗೌಡ | ಮಾಲೂರು | 8ನೇ ತರಗತಿ | ಕಾಂಗ್ರೆಸ್ |
| 7 | ಜಮೀರ್ ಅಹಮದ್ ಖಾನ್ | ಚಾಮರಾಜಪೇಟೆ | 8ನೇ ತರಗತಿ | ಕಾಂಗ್ರೆಸ್ |
| 8 | ಎಂ.ಟಿ.ಬಿ ನಾಗರಾಜು | ಹೊಸಕೋಟೆ | 8ನೇ ತರಗತಿ | ಕಾಂಗ್ರೆಸ್ |
| 9 | ನಾರಾಯಣಸ್ವಾಮಿ | ದೇವನಹಳ್ಳಿ | 8ನೇ ತರಗತಿ | ಜೆಡಿಎಸ್ |
| 10 | ಎಸ್.ಅಂಗಾರ | ಸುಳ್ಯ | 8ನೇ ತರಗತಿ | ಬಿಜೆಪಿ |
| 11 | ಕೆ.ಮಹದೇವ | ಪಿರಿಯಾಪಟ್ಟಣ | 8ನೇ ತರಗತಿ | ಜೆಡಿಎಸ್ |
| 12 | ಜಿ.ಟಿ.ದೇವೇಗೌಡ | ಚಾಮುಂಡೇಶ್ವರಿ | 8ನೇ ತರಗತಿ | ಜೆಡಿಎಸ್ |
| 13 | ಎಲ್.ನಾಗೇಂದ್ರ | ಚಾಮರಾಜ | 8ನೇ ತರಗತಿ | ಬಿಜೆಪಿ |












Click it and Unblock the Notifications