ಕರ್ನಾಟಕ ಹವಾಮಾನ ವರದಿ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ
ಬೆಂಗಳೂರು, ಜುಲೈ 16: ನೈಋತ್ಯ ಮುಂಗಾರು ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಕ್ರಿಯವಾಗಿದ್ದು, ಉತ್ತರ ಒಳನಾಡಿನಲ್ಲಿ ಸಹಜ ಸ್ಥಿತಿಯಲ್ಲಿದೆ.
ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಬಹುತೇಕ ಕಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಹೆಚ್ಚು ಮಳೆಯಾಗಲಿದೆ. ಉಳಿದಂತೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗಲಿದೆ.
ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ ಇದ್ದು, ಜುಲೈ 18ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಜುಲೈ 16 ಮತ್ತು 17ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬುಧವಾರ ಉತ್ತರ ಕನ್ನಡದ ಕದ್ರಾದಲ್ಲಿ 13 ಸೆಂ.ಮೀ ಮಳೆ, ಸುಬ್ರಮಣ್ಯ 10 ಸೆಂ.ಮೀ. ಸುಳ್ಯ, ದ.ಕ. ತಲಾ 9 ಸೆ.ಮೀ. ಮಳೆ ದಾಖಲು ಆಗಿದೆ.

ಎಲ್ಲೆಲ್ಲಿ ಅತಿ ಹೆಚ್ಚು ಮಳೆಯಾಗಿದೆ?
ಆಗುಂಬೆಯಲ್ಲಿ 16 ಸೆಂ.ಮೀ ಮಳೆಯಾಗಿದೆ, ಮಡಿಕೇರಿ, ತಾಳಗುಪ್ಪದಲ್ಲಿ ತಲಾ 15 ಸೆಂ.ಮೀ ಮಳೆಯಾಗಿದೆ. ಕಾರವಾರ, ಶೃಂಗೇರಿಯಲ್ಲಿ ತಲಾ 13 ಸೆಂ.ಮೀ ಮಳೆಯಾಗಿದೆ. ಹೊನ್ನಾವರ, ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು, ಜಯಪುರ, ಸಕಲೇಶಪುರದಲ್ಲಿ ತಲಾ 12 ಸೆಂ.ಮೀ ಮಳೆ ಸುರಿದಿದೆ.

ಸಾಧಾರಣ ಮಳೆ ಎಲ್ಲಿ?
ಮಂಕಿ, ಕೋಟಾ, ಕದ್ರಾ, ಶಿರಾಲಿ, ಸಿದ್ದಾಪುರ, ಭಟ್ಕಳ, ಭಾಗಮಂಡಲ, ಗೋಕರ್ಣ, ಮಾದಾಪುರ, ತೀರ್ಥಹಳ್ಳಿ, ಕೊಟ್ಟಿಗೆಹಾರ, ಮೂಡುಬಿದಿರೆ, ಉಪ್ಪಿನಂಗಡಿ, ಕಾರ್ಕಳ, ಗೇರುಸೊಪ್ಪ, ಸೋಮವಾರಪೇಟೆ, ಕುಂದಾಪುರ, ಕೊಪ್ಪ, ಸಾಗರ, ನಾಪೊಕ್ಲು, ಹುಂಚದಕಟ್ಟೆ, ತ್ಯಾಗರ್ತಿ, ಆನವಟ್ಟಿ, ಸುಳ್ಯ, ಮಂಗಳೂರು, ಬಂಟ್ವಾಳ, ಅರಕಲಗೋಡು, ಕಂಪ್ಲಿ, ವಿರಾಜಪೇಟೆ, ಪುತ್ತೂರು, ಅಜ್ಜಂಪುರ, ಮಂಚಿಕೆರೆ, ಕಿರವತ್ತಿ, ಹಿರಿಯೂರು, ಹೊಳಲ್ಕೆರೆ, ಸೊರಬ, ಹೊಸಕೋಟೆ, ಹೊನ್ನಾಳಿ, ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಂಡೀಪುರದಲ್ಲಿ ಮಳೆಯಾಗಿದೆ.

ಉತ್ತರ ಒಳನಾಡಿನಲ್ಲೂ ಮಳೆ
ಬೆಳಗಾವಿ, ಮುದ್ಗಲ್, ಗಂಗಾವತಿ, ಕುಷ್ಟಗಿ, ಹಿರೇಕೆರೂರು, ಹುನಗುಂದ, ನಿಪ್ಪಾಣಿ, ಸಿಂಧನೂರು, ಮಸ್ಕಿ, ಸಿರಾ, ಶಿಡ್ಲಘಟ್ಟ, ಕುಡುತಣಿ, ಶಿರಾಳಕೊಪ್ಪ, ಹೊಸದುರ್ಗ, ರಾಂಪುರ, ಬಂಗಾರಪೇಟೆ, ದೇವನಹಳ್ಳಿ, ಗುಬ್ಬಿ, ಬರಗೂರು, ಚನ್ನಗಿರಿ, ಮಧುಗಿರಿ, ಹಳೇಬೀಡು, ಬೇಲೂರು, ಶ್ರವಣಬೆಳಗೊಳದಲ್ಲಿ ಮಳೆಯಾಗಿದೆ.
Recommended Video

ರಾಜ್ಯದ ವಾತಾವರಣ ಹೇಗಿರಲಿದೆ?
ಮುಂದಿ 24 ಗಂಟೆ ರಾಜ್ಯದ ಹೆಚ್ಚಿನ ಕಡೆಗಳಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿ ಪ್ರದೇಶದಲ್ಲಿ ಬಲವಾದ ಗಾಳಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸುತ್ತಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ.
ಬೆಂಗಳಳೂರಿನಲ್ಲಿ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿದ್ದು, ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಪ್ರದೇಶದ ಮೇಲ್ಮೈಯಲ್ಲಿ ರಭಸದಿಂದ ಕೂಡಿದ ಬಲವಾದ ಗಾಳಿ ಬೀಸುತ್ತಿದೆ. ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.












Click it and Unblock the Notifications