ಭಾರಿ ಮಳೆ ನಿರೀಕ್ಷೆಯಲ್ಲಿ ಕರ್ನಾಟಕದ ಜನ: ಹವಾಮಾನ ಪರಿಸ್ಥಿತಿ ಹೇಗಿದೆ?
ಮಳೆ ಇಲ್ಲದೆ ಪರಿಸ್ಥಿತಿ ಭೀಕರವಾಗಿದೆ, ಜನರು ಕೂಡ ಉಸಿರು ಬಿಗಿಹಿಡಿದು ಮಳೆ ಬೀಳಲಿ ಅಂತಾ ಕಾಯುತ್ತಿದ್ದಾರೆ. ಹೀಗಿದ್ದಾಗ ಸಿಹಿಸುದ್ದಿ ಸಿಗಲಿ ದೇವರೇ ಅಂತಾನೂ ಮಳೆರಾಯನ ಮೊರೆ ಹೋಗಿದ್ದಾರೆ ಕನ್ನಡಿಗರು. ಆದರೂ ಮಳೆ ಬೀಳುವ ಲಕ್ಷಣಗಳೇ ಕಾಣುತ್ತಿಲ್ಲ. ಇಡೀ ಕರ್ನಾಟಕ ಬೇಸಿಗೆ ಆರಂಭಕ್ಕೂ ಮೊದಲೇ ಭೀಕರ ಬರಕ್ಕೆ ತುತ್ತಾಗಿದೆ. ಇಂತಹ ಪರಿಸ್ಥಿತಿಯ ಸಮಯದಲ್ಲೇ ಹವಾಮಾನ ಇಲಾಖೆ ಬೆಂಗಳೂರು & ಕರ್ನಾಟಕದ ಹವಾಮಾನ ವರದಿಯನ್ನು ತಿಳಿಸಿದೆ.
ಮುಂಗಾರು ಮಳೆ ಕೈಕೊಟ್ಟ ಕಾರಣಕ್ಕೆ ಕರ್ನಾಟಕ 2023ರಲ್ಲಿ ಭಾರಿ ಸಮಸ್ಯೆಗೆ ಸಿಲುಕಿತ್ತು. ಹೀಗಾಗಿಯೇ 2024ರ ಬೇಸಿಗೆ ಆರಂಭಕ್ಕೂ ಮೊದಲೇ ದೊಡ್ಡ ತಲೆನೋವು ಶುರುವಾಗಿದ್ದು, ಕುಡಿಯುವ ನೀರು ಒದಗಿಸಲು ಸರ್ಕಾರ ಕೂಡ ಪರದಾಡುತ್ತಿದೆ. ಈ ಸಮಯದಲ್ಲೇ ನಮ್ಮ ರಾಜ್ಯದ ಹಲವು ಪ್ರದೇಶದಲ್ಲಿ ಟ್ಯಾಂಕರ್ ಮಾಫಿಯಾ ಶುರುವಾಗಿದೆ, ಎಂಬ ಆರೋಪವೂ ಕೇಳಿಬರುತ್ತಿದೆ. ಇಷ್ಟೆಲ್ಲಾ ಸಮಸ್ಯೆ ನಡುವೆ ಒಂದೇ ಒಂದು ದೊಡ್ಡ ಮಳೆ ಬಿದ್ದರೆ ಸಾಕು, ಎಲ್ಲಾ ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ ಎಂಬ ನಿರೀಕ್ಷೆ ಇದೆ. ಹಾಗಾದರೆ ಕರ್ನಾಟಕ & ಬೆಂಗಳೂರಿನ ಹವಾಮಾನ ಪರಿಸ್ಥಿತಿ ಹೇಗಿದೆ? ಮುಂದೆ ಓದಿ.

ಕರ್ನಾಟಕದಲ್ಲಿ ಮಳೆಯ ಬಗ್ಗೆ...
ಈಗಿನ ಮಾಹಿತಿಗಳ ಪ್ರಕಾರ ಇಂದು ಅಂದ್ರೆ ಮಾರ್ಚ್ 11ರಂದು, ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಬಿಸಿಲು ಭಾರಿ ಏರಿಕೆ ಕಾಣುವ ಸಾಧ್ಯತೆ ಇದೆ. ಹೀಗೆ ಇಂದು ಕೂಡ ಕೆಲ ಕಡೆ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಮೀರಿ ಹೋಗಲಿದ ಎನ್ನಲಾಗುತ್ತಿದೆ. ಕರಾವಳಿ & ಉತ್ತರ ಒಳನಾಡಿಗಿಂತ ದಕ್ಷಿಣ ಒಳನಾಡಲ್ಲಿ ತಾಪಮಾಪ ಜಾಸ್ತಿ ಇರಲಿದೆ ಎನ್ನುತ್ತಿವೆ ಹವಾಮಾನ ಇಲಾಖೆ ಅಂಕಿ & ಅಂಶಗಳು. ಜನ ಬಿಸಿಯ ಝಳಕ್ಕೆ ಬಸವಳಿದಿದ್ದು, ಬೆಳಗ್ಗೆ 10 ಗಂಟೆ ನಂತರ ಸುಡು ಬಿಸಿಲು ಕಾಡುತ್ತಿದೆ. ಈ ಪರಿಸ್ಥಿತಿ ಇಂದು ಕೂಡ ಮುಂದವರಿಯಲಿದೆ.
ರಾಜ್ಯದಲ್ಲಿ ಅದ್ರಲ್ಲೂ ಬೆಂಗಳೂರಿನಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಮಳೆಯ ಮನ್ಸೂಚನೆ ಇಲ್ಲ ಎನ್ನಲಾಗಿದೆ. ಹೀಗಾಗಿ, ಒಣ ಹವೆಯ ಕಾಟ ಮುಂದುವರಿಯಲಿದೆ ಎನ್ನಲಾಗುತ್ತಿದೆ. ಹಾಗೆಯೇ ಮುಂದಿನ 2 ಅಥವಾ 3 ದಿನ ಇದೇ ವಾತಾರಣ ಇರಲಿದೆ ಎನ್ನಲಾಗುತ್ತಿದೆ. ದಕ್ಷಿಣ ಒಳನಾಡಿನ ಕೆಲವು ಕಡೆ ಉಷ್ಣಾಂಶ ಸಾಮಾನ್ಯಕ್ಕಿಂತ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. 2.1 ಡಿಗ್ರಿ ಸೆಲ್ಸಿಯಸ್‌ನಿಂದ 4.0 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಳ ಕಂಡಿದೆ ಎನ್ನಲಾಗಿದೆ. ಹೀಗೆ ಕರ್ನಾಟಕ ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶವು ಇದೀಗ 38.6 ಡಿಗ್ರಿ ಸೆಲ್ಸಿಯಸ್ ಕಲಬುರಗಿಯಲ್ಲಿ ದಾಖಲಾಗಿದ್ದರೆ. ಅತಿ ಕಡಿಮೆ ಉಷ್ಣಾಂಶವು ದಾವಣಗೆರೆಯಲ್ಲಿ ಅಂದ್ರೆ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಎಲ್ಲೆಲ್ಲೂ ಹಬ್ಬುತ್ತಿದೆ ಬಿಸಿಲಿ ಝಳ!
ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿದಂತೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರವು ಸೇರಿ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಬಹುತೇಕ ಭಾರಿ ಬಿಸಿಲು ಮುಂದುವರಿಯುವ ಸಾಧ್ಯತೆ ಇದೆ.
ಕರ್ನಾಟಕಕ್ಕೂ ಬಾರೋ ಮಳೆರಾಯ...
ಏನೇ ಹೇಳಿ ಮಳೆ ಬಂದರೆ ಮಾತ್ರ ನಮ್ಮ ಭೂಮಿಗೆ ಕಳೆ, ಇಲ್ಲವಾದ್ರೆ ಪರದಾಟ ಗ್ಯಾರಂಟಿ. ಈ ಕಾರಣ ಸರಿಯಾಗಿ ಮಳೆ ಬೀಳಲಿ ಅಂತ ರೈತರು ದೇವರಲ್ಲಿ ಬೇಡುತ್ತಾರೆ. ಹೀಗಿದ್ದಾಗಲೇ, ಕಳೆದ ವರ್ಷ ಮಳೆ ಕೈಕೊಟ್ಟಿತ್ತು. ಆದ್ರೆ ಈಗ ಮತ್ತೆ ಮಳೆ ಶುರುವಾಗುತ್ತಿದೆ ದೇಶದ ಹಲವು ರಾಜ್ಯದಲ್ಲಿ ಮಳೆ ಹಾಗೂ ಆಲಿಕಲ್ಲು ಬೀಳಲಿದೆ ಎನ್ನಲಾಗಿದೆ. ಇದರ ಜೊತೆಗೆ ಕರ್ನಾಟಕದಲ್ಲಿ, ಕನ್ನಡಿಗರ ನೆಲವೂ ಮಳೆ ಕಾರಣ ಒದ್ದೆಯಾಗಲಿದೆ ಉತ್ತಮ ಮಳೆ ಬೀಳುತ್ತೆ ಅಂತ ರೈತರು ಕಾಯುತ್ತಿದ್ದಾರೆ.
ಹಾಗೇ ಗ್ರಾಮೀಣ ಭಾಗದಲ್ಲಿ ಇಂತಹ ಸಮಯದಲ್ಲಿ ಮಳೆ ಬಿದ್ರೆ ಕುಡಿಯುವ ನೀರಿಗೆ ಎದುರಾದ ಸಮಸ್ಯೆ ಸರಿಹೋಗಲಿದೆ. ಉತ್ತರ ಕರ್ನಾಟಕ & ಮೈಸೂರು ಕರ್ನಾಟಕ ಭಾಗದ ಜನರು ಇದೀಗ, ಭಾರಿ ಮಳೆ ಕೊರತೆ ಕಾರಣ ನಲುಗಿ ಹೋಗಿದ್ದಾರೆ. ಹಳ್ಳಿಗಳಲ್ಲಿ ಇದೀಗ, ನೀರು ಪಡೆಯುವುದೇ ದೊಡ್ಡ ಸಾಹಸ ಆಗಿದೆ. ಹೀಗಾಗಿ ಪ್ರತಿಯೊಬ್ಬರು ಮಳೆ ಬರಲಿ ಅಂತ ಪ್ರಾರ್ಥನೆ ಮಾಡುತ್ತಿದ್ದಾರೆ ಆದರೆ ವರುಣ ದೇವ ಯಾವಾಗ ಕರುಣೆ ತೋರಿಸುತ್ತಾನೋ ಗೊತ್ತಿಲ್ಲ.
ಡ್ಯಾಂಗಳಲ್ಲಿ ನೀರು ಖಾಲಿ ಖಾಲಿ!
ಕಾವೇರಿ, ಕೃಷ್ಣಾ, ಹೇಮಾವತಿ, ತುಂಗಾ, ಭದ್ರಾ ಹೀಗೆ ಕನ್ನಡಿಗರ ನಾಡಲ್ಲಿ ದೊಡ್ಡ ದೊಡ್ಡ ನದಿಗಳೇ ಬತ್ತುತ್ತಿವೆ. ನದಿ ಹರಿಯುವ ಹಳ್ಳಿಗಳಲ್ಲೇ ನೀರಿಗೆ ಬರ ಎದುರಾಗಿದೆ, ಹಾಗೇ ಬೋರ್ ಕೂಡ ಬತ್ತಿ ಹೋಗುತ್ತಿವೆ. ಇದೇ ಕಾರಣಕ್ಕೆ ಜನರು ಕೂಡ ಪರದಾಡುತ್ತಿದ್ದಾರೆ. ಹೀಗಾಗಿ ಮಳೆಗೆ ಮೊರೆ ಇಟ್ಟಿದ್ದರು ಜನರು & ರೈತರು. ಹೀಗಿದ್ದಾಗ, ಕರ್ನಾಟಕದಲ್ಲಿ ಇರುವ ಬಹುತೇಕ ಎಲ್ಲಾ ಡ್ಯಾಂಗಳು ಬತ್ತಿ ಹೋಗುತ್ತಿವೆ. ಮಳೆ ಬಂದರೆ ಮಾತ್ರ ಭೂಮಿಗೆ ಕಳೆ, ಇಲ್ಲವಾದರೆ ಪರದಾಟ ಗ್ಯಾರಂಟಿ. ಈ ಕಾರಣ ಸರಿಯಾಗಿ ಮಳೆ ಬೀಳಲಿ ಅಂತಾ ರೈತರು ಕೂಡ ದೇವರಲ್ಲಿ ಬೇಡುತ್ತಾರೆ. ಹೀಗಿದ್ದಾಗ ಕಳೆದ ವರ್ಷ ಅಂದ್ರೆ 2023 ರಲ್ಲಿ ಮಳೆ ಕೈಕೊಟ್ಟಿತ್ತು. ಹೀಗಾಗಿ ಸರಿಯಾಗಿ ಮಳೆಯೇ ಬೀಳಲಿಲ್ಲ. ಇದೇ ಕಾರಣಕ್ಕೆ ನಮ್ಮ ಕನ್ನಡ ನಾಡಿನ ಬಹುತೇಕ ಜಲಾಶಯಗಳು ಚಳಿಗಾಲದಲ್ಲೇ ಬತ್ತಿ ಹೋಗಿವೆ, ಇನ್ನು ಕೆಲವೇ ಕೆಲವು ಡ್ಯಾಂಗಳಲ್ಲಿ ಅಲ್ಪಸ್ವಲ್ಪ ನೀರು ಉಳಿದಿದೆ.
ಕನ್ನಡ ನಾಡಿನ ಪರಿಸ್ಥಿತಿ ಏನು?
ಕಳೆದ 4-5 ವರ್ಷದಿಂದ ಬೆಂಗಳೂರು & ಕರ್ನಾಟಕದ ಜನಗಳು ಭಾರಿ ಮಳೆಗೆ ಬೆಚ್ಚಿ ಬಿದ್ದಿದ್ದರು. ತಗ್ಗು ಪ್ರದೇಶದ ಜನರಿಗೆ ಮಳೆ ಸಾಕಷ್ಟು ಸಮಸ್ಯೆ ಕೊಟ್ಟಿತ್ತು. ಆದರೂ ಕಳೆದ ವರ್ಷ ಮಳೆಯೇ ನಾಪತ್ತೆ. ಬೇಸಿಗೆ ಸಮಯದಲ್ಲಿ ಬಿದ್ದಿದ್ದ ಒಂದೆರಡು ಮಳೆ ಮಾತ್ರ ಬೆಂಗಳೂರಿಗೆ ತಂಪೆರದಿತ್ತು. ಅದನ್ನ ಬಿಟ್ಟು ಮುಂಗಾರು ಸಮಯ ಜೂನ್ ತಿಂಗಳಲ್ಲೇ ಬೆಂಗಳೂರಿನಲ್ಲಿ ಮಳೆ ಕೊರತೆ ಆತಂಕ ಹುಟ್ಟಿಸಿತ್ತು. ಹೀಗಿದ್ದಾಗ ಕನ್ನಡಿಗರು ಕರ್ನಾಟಕದಲ್ಲಿ ಈಗ, ಮಳೆ ಬೀಳಲಿ ಅಂತಾ ದೇವರಲ್ಲಿ ಬೇಡುವಾಗಲೇ ಉತ್ತರ ಭಾರತದಲ್ಲಿ ಭಾರಿ ಮಳೆ ಶುರುವಾಗಿದೆ. ಆದರೆ ಕನ್ನಡ ನಾಡಿನಲ್ಲೀಗ ಮಳೆಯೇ ನಾಪತ್ತೆಯಾಗಿದೆ. ಹೀಗಾಗಿ ಜನರು ಕೂಡ ಪರದಾಡುತ್ತಿದ್ದಾರೆ. ಒಂದು ಬಿಂದಿಗೆ ನೀರಿಗೂ ಬಡಿದಾಡುವ ಪರಿಸ್ಥಿತಿ ಬಂದಿದೆ.












Click it and Unblock the Notifications