Heavy Rain: ಮಳೆ.. ಮಳೆ.. ಕೆಲವೇ ಗಂಟೆಗಳಲ್ಲಿ ಬೆಂಗಳೂರು ಮುಳುಗುವಂತೆ ಸುರಿಯಲಿರು...
ಮಳೆ.. ಮಳೆ.. ಮಳೆ... ಎಲ್ಲಿ ನೋಡಿದರೂ ಹೊಳೆ.. ಬೆಂಗಳೂರಿನಲ್ಲಿ ಬರೀ ರಗಳೆ.. ರಗಳೆ.. ರಗಳೆ.. ಏನು ಗುರೂ ನ್ಯೂಸ್ ಓದೋಣ ಅಂತಾ ಬಂದ್ರೆ ಹಿಂಗೆ ಕವನ ಹೇಳುತ್ತಾ ಬ್ಲೇಡ್ ಹಾಕ್ತೀಯಾ? ಅಂತಾ ಪ್ರಶ್ನೆ ಕೇಳಬೇಡಿ ಪ್ರಜೆಗಳೇ, ಯಾಕಂದ್ರೆ ಬೆಂಗಳೂರಿನ ಮಳೆಗೆ ನಿಮ್ಮ ಮನಸ್ಸಿನಲ್ಲಿ ಕೂಡ ಇಂತಹ ಪ್ರಶ್ನೆ ಮೂಡಿಯೇ ಇರುತ್ತೆ. ಅಷ್ಟಕ್ಕೂ ಬೆಂಗಳೂರು & ಭಾಗಶಃ ಇಡೀ ನಮ್ಮ ಕರ್ನಾಟಕವೇ ಇದೀಗ ಹಿಂಗಾರು ಮಳೆ ಅಬ್ಬರಕ್ಕೆ ಅಲ್ಲಾಡಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲೇ ಮತ್ತೆ ನಿನ್ನೆ ರಾತ್ರಿಯಿಂದ ಜೋರಾಗಿ ಸುರಿಯುತ್ತಿರುವ ಮಳೆ ಇನ್ನು ಕೆಲವೇ ಗಂಟೆಗಳಲ್ಲಿ...
ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಇದೀಗ ಮಳೆರಾಯನ ಅಬ್ಬರ ಮಿತಿ ಮೀರಿ ಹೋಗಿದೆ. ಅದರಲ್ಲೂ ಕನ್ನಡಿಗರ ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆ ರಾತ್ರಿ ಇಡೀ ಮಳೆ ಸುರಿದು ಬೆಳ್ಳಂ ಬೆಳಗ್ಗೆ ಕೂಡ ಮಳೆ ಆರ್ಭಟ ತೋರಿಸುತ್ತಿದೆ. ಈ ಸಮಯದಲ್ಲೇ ಮತ್ತೊಂದು ಆಘಾತಕಾರಿ ಮಾಹಿತಿ ಇದೀಗ ಬಯಲಾಗಿದ್ದು, ಮಳೆಯ ಅಬ್ಬರ ಇನ್ನು ಕೆಲವೇ ಗಂಟೆಗಳಲ್ಲಿ...

ಯಾವ ಯಾವ ಜಿಲ್ಲೆಗಳಿಗೆ ಮಳೆ?
ಅಂದಹಾಗೆ ಕರ್ನಾಟಕ ರಾಜ್ಯದಲ್ಲಿ ಇರುವ ಡ್ಯಾಂಗಳು ಈ ವರ್ಷ 3 ಬಾರಿ ತುಂಬಿ ತುಂಬಿ ಹರಿದಿವೆ. ಮೊದಲಿಗೆ ಬೇಸಿಗೆ ಸಮಯದಲ್ಲಿ ಒಂದೊಂದು ಹನಿ ನೀರಿಗೆ ಕೂಡ ಕನ್ನಡಿಗರು ಪರದಾಡಿಬಿಟ್ಟರು. ಅಲ್ಲದೆ ಸರಿಯಾಗಿ ಮಳೆ ಬಾರದ ಕಾರಣ ಭಯ ಶುರುವಾಗಿತ್ತು. ಆದರೆ ಮುಂಗಾರು ಮಳೆ ಆರಂಭವಾದ ನಂತರ ಅಸಲಿ ಕಹಾನಿ ಶುರುವಾಗಿತ್ತು. ಮೇ ತಿಂಗಳಲ್ಲೇ ಮುಂಗಾರು ಮಳೆಯ ಅಬ್ಬರ ಶುರುವಾಗಿತ್ತು. ಹೀಗಿದ್ದಾಗ ಅಕ್ಟೋಬರ್ ತಿಂಗಳಲ್ಲಿ ಕೂಡ, ಮಳೆಯ ಆರ್ಭಟ ಒಂದು ಚೂರು ಕೂಡ ಕಡಿಮೆ ಆಗಿಲ್ಲ. ಮುಂದಿನ ಕೆಲವು ಗಂಟೆಗಳಲ್ಲಿ ಬೆಂಗಳೂರು ನಲುಗಿ ಹೋಗುವಂತೆ ಮಳೆ ಬರುವ ನಿರೀಕ್ಷೆ ಇದೆ.
ಮಳೆ.. ಮಳೆ.. ಮಳೆ.. ಎಲ್ಲಿ ನೋಡಿದರೂ ಬರೀ ಮಳೆಯದ್ದೇ ರಗಳೆ ಶುರುವಾಗಿ ಬಿಟ್ಟಿದೆ. ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನ್ ಅಂದ್ರೆ ಚಂಡಮಾರುತದ ವಾತಾವರಣ ನಿರ್ಮಾಣವಾಗಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಇದರ ಪರಿಣಾಮ ತೀವ್ರವಾಗಿ ಸುರಿಯುತ್ತಿದೆ ಮಳೆ ಎಂಬ ವಿವರಣೆ ಸಿಕ್ಕಿದೆ. ಕಳೆದ 10 ದಿನಗಳಿಂದ ಬೆಂಗಳೂರು ಭಾರಿ ಮಳೆಗೆ ತೊಯ್ದು ಹೋಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಭಾರಿ...
ಹೀಗಿದ್ದಾಗ ಬೆಂಗಳೂರು ಸೇರಿದಂತೆ, ಇಂದು ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಆಗುವಂತಹ ಎಚ್ಚರಿಕೆ ನೀಡಲಾಗಿದೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೋಲಾರ, ಶಿವಮೊಗ್ಗ & ಬಳ್ಳಾರಿ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲೂ ಮಳೆ ಗ್ಯಾರಂಟಿ. ಇನ್ನು ಬೆಂಗಳೂರಿನ ದಕ್ಷಿಣ ವಲಯ, ಬೊಮ್ಮನಹಳ್ಳಿ ವಲಯ, ಮಹದೇವಪುರ, ಆರ್ ಆರ್ ನಗರ, ದಾಸರಹಳ್ಳಿ, ಉತ್ತರ ವಲಯ ಭಾಗದಲ್ಲಿ ಭಾರಿ ಮಳೆ ಬೀಳಲಿದೆ.












Click it and Unblock the Notifications