ಮಳೆ.. ಮಳೆ.. ಭಾರಿ ಮಳೆ.. ಬೇಸಿಗೆ ಸಮಯದಲ್ಲಿ ಹಿಂಗೆ ಮಳೆ ಬಂದ್ರೆ ಮುಗೀತು ಕಥೆ!

ಮನುಷ್ಯನ ಅತಿಯಾದ ದುರಾಸೆ & ಪ್ರಕೃತಿ ಮೇಲೆ ಅತಿಯಾದ ಒತ್ತಡ ಹಾಕುತ್ತಿರುವ ಪರಿಣಾಮ ವಾತಾವರಣದಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಆಗಿದೆ. ಅದ್ರಲ್ಲೂ ಮಳೆ ವಿಚಾರ ಗೊಂದಲ ಸೃಷ್ಟಿ ಮಾಡುತ್ತಿದ್ದು ಮಳೆ ಬರಬೇಕಾದ ವೇಳೆ ಸರಿಯಾಗಿ ಮಳೆಯೇ ಬರ್ತಿಲ್ಲ. ಮಳೆಗಾಲದ ಹೊರತು ಬೇರೆ ಸಮಯದಲ್ಲಿ ಹೆಚ್ಚು ಮಳೆ ಬೀಳುತ್ತಿದೆ. ಈಗಲೂ ಅಷ್ಟೇ ಬೇಸಿಗೆ ಸಮಯದಲ್ಲಿ ಭಾರಿ ಮಳೆಯ ಮುನ್ಸೂಚನೆ ಸಿಕ್ಕಿದ್ದು, ಜನರು ನಲುಗಿ ಹೋಗಿದ್ದಾರೆ.

ಈಗಿನ ಪರಿಸ್ಥಿತಿ ನೋಡಿದರೆ ಕೆಲವು ದಿನಗಳಲ್ಲಿ ಉತ್ತಮವಾಗಿ ಮಳೆ ಆಗದೇ ಇದರೆ, ರಾಜ್ಯದಲ್ಲಿ ಕುಡಿಯುವ ನೀರಿಗೂ ಜನ ಪರದಾಡಬೇಕು ಅಂಥ ಪರಿಸ್ಥಿತಿ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಅದ್ರಲ್ಲೂ ರಾಜಧಾನಿ ಬೆಂಗಳೂರಲ್ಲಿ ಈ ಬಾರಿ ಕುಡಿಯುವ ನೀರಿಗೆ ಭಾರಿ ಸಂಕಷ್ಟ ಎದುರಾಗಿದೆ. ಈ ಕಾರಣಕ್ಕೆ ಮಂಡ್ಯ-ಮೈಸೂರು ಭಾಗದ ರೈತರು ಚಿಂತೆ ಮಾಡ್ತಿದ್ದಾರೆ. ಮತ್ತೊಮ್ಮೆ ಕಾವೇರಿ ನೀರಿಗೆ ಕಿತ್ತಾಟ ಶುರುವಾಗುವ ಆತಂಕ ಕೂಡ ಆವರಿಸಿದೆ. ಇದು ಕೆಆರ್‌ಎಸ್ ಪರಿಸ್ಥಿತಿ ಮಾತ್ರವಲ್ಲ ರಾಜ್ಯದ ಬಹುತೇಕ ಡ್ಯಾಂಗಳಲ್ಲಿ ಸ್ಥಿತಿಯೂ ಇದೇ ರೀತಿ ಇದೆ. ಹೀಗಿದ್ದಾಗಲೇ ಇಲ್ಲೊಂದು ಭಾಗದಲ್ಲಿ ಭಾರಿ ಮಳೆಯ ಮುನ್ಸೂಚನೆ ಸಿಕ್ಕಿದೆ!

Heavy Rain Possible In This Area On 05 03 2024

ಮಳೆಗೆ ಕೊಚ್ಚಿಹೋದ ಬದುಕು

ವರುಣ ದೇವ ಹಿಂಗೆ ಮಾಡುತ್ತಾನೆ, ಮಳೆಯ ಅಗತ್ಯತೆ ಇರುವ ಕಡೆ ಮಳೆ ಬೀಳುವುದೇ ಇಲ್ಲ. ಇನ್ನು ಮಳೆ ಬೇಡ ಅನ್ನುವ ಕಡೆ ಭಾರಿ ಮಳೆ ಸುರಿಯುತ್ತದೆ. ಈಗ ನೋಡಿದರೆ ನಮ್ಮಲ್ಲಿ ಅಂದ್ರೆ ಕರ್ನಾಟಕದಲ್ಲಿ ಮಳೆ ಬೇಕಿದೆ, ಆದರೆ ಮಳೆ ಬೀಳುತ್ತಿಲ್ಲ. ಆದರೆ ಭಾರತದ ಶತ್ರು ದೇಶ ಪಾಪಿ ಪಾಕಿಸ್ತಾನದಲ್ಲಿ ಮನಸ್ಸಿಗೆ ಬಂದಂತೆ ಮಳೆ ಸುರಿಸುತ್ತಿದ್ದಾನೆ ವರುಣ ದೇವ. ಈ ಕಾರಣಕ್ಕೆ ನಲುಗಿ ಹೋಗಿದೆ ಪಾಕಿಸ್ತಾನ. ಅದರಲ್ಲೂ ಮಳೆ ಹಾವಳಿಗೆ ಈಗಾಗಲೇ ಸುಮಾರು 40 ಮಂದಿ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪಾಕಿಸ್ತಾನ ಮಾತ್ರವಲ್ಲ ಈಗ ಇಡೀ ಉತ್ತರ ಭಾರತ ಕೂಡ ಮಳೆ ಅಬ್ಬರಕ್ಕೆ ಥರ ಥರ ನಲುಗಿ ಹೋಗಿದೆ. ಹಾಗಾದ್ರೆ ನಮ್ಮ ಕರ್ನಾಟಕದ ಕಥೆ ಏನು?

ಕಳೆದ 4-5 ವರ್ಷದಿಂದ ಬೆಂಗಳೂರು ಮತ್ತು ಕರ್ನಾಟಕದ ಜನ ಭಾರಿ ಮಳೆಗೆ ಬೆಚ್ಚಿ ಬಿದ್ದಿದ್ದರು. ಅದರಲ್ಲೂ ತಗ್ಗು ಪ್ರದೇಶದ ಜನಗಳಿಗೆ ಮಳೆ ನೀರು ಸಾಕಷ್ಟು ಸಮಸ್ಯೆ ಕೊಟ್ಟಿತ್ತು. ಆದರೆ ಕಳೆದ ವರ್ಷ ಮಳೆಯೇ ನಾಪತ್ತೆ. ಬೇಸಿಗೆ ಸಮಯದಲ್ಲಿ ಬಿದ್ದ ಒಂದೆರಡು ಮಳೆ ಮಾತ್ರ, ಬೆಂಗಳೂರಿಗೆ ತಂಪೆರದಿತ್ತು. ಅದನ್ನ ಬಿಟ್ಟು ಮುಂಗಾರು ಸಮಯ ಜೂನ್ ತಿಂಗಳಲ್ಲೇ ಬೆಂಗಳೂರಿನಲ್ಲಿ ಮಳೆ ಕೊರತೆ ಆತಂಕ ಹುಟ್ಟಿಸಿತ್ತು. ಮುಂದೆ ಅಲ್ಪಸ್ವಲ್ಪ ಮಳೆ ಬಿದ್ದರೂ ಈ ಬಾರಿ ಬರ ಬಂದಿದೆ. ಹೀಗಿದ್ದಾಗ ಕನ್ನಡಿಗರು ಕರ್ನಾಟಕದಲ್ಲಿ ಮಳೆ ಬೀಳಲಿ ಅಂತಾ ದೇವರಲ್ಲಿ ಬೇಡುವಾಗಲೇ, ಉತ್ತರ ಭಾರತದಲ್ಲಿ ಭಾರಿ ಮಳೆ ಶುರುವಾಗಿದೆ. ಹಾಗಾದರೆ ಕನ್ನಡಿಗರ ಕಥೆ ಏನು?

Heavy Rain Possible In This Area On 05 03 2024

ಕರ್ನಾಟಕದಲ್ಲಿ ಯಾವಾಗ ಮಳೆ?

ಈಗಿನ ಸ್ಥಿತಿ ನೋಡಿದರೆ ಕರ್ನಾಟಕದಲ್ಲಿ ಸದ್ಯಕ್ಕೆ ಮಳೆ ಬರುವ ಯಾವುದೇ ಮುನ್ಸೂಚನೆ, ಕಣ್ಣಿಗೆ ಕಾಣುತ್ತಲೇ ಇಲ್ಲ. ಅದರಲ್ಲೂ ಕನ್ನಡಿಗರ ರಾಜಧಾನಿ ಬೆಂಗಳೂರಿನ ಪರಿಸ್ಥಿತಿಯು ಕೈಮೀರಿ ಹೋಗಿದ್ದು, ವಿಧಾನಸೌಧಕ್ಕೆ ನೀರು ಪೂರೈಕೆ ಮಾಡಿದರೆ ಅದೇ ದೊಡ್ಡ ಸಂಗತಿ ಎನ್ನುವಂತಾಗಿದೆ. ಪರಿಸ್ಥಿತಿ ಹೀಗೆ ಹೀನಾಯ ಆಗಿರುವಾಗಲೇ ಮಾರ್ಚ್ ಮೊದಲ ವಾರವೇ ಮಳೆ ಬರಬಹುದು ಎಂದು ಹವಾಮಾನ ಇಲಾಖೆ ಅಂದಾಜು ಮಾಡಿತ್ತು. ಆದರೆ ಮಳೆಯ ಸುಳಿವು ಸಿಗುತ್ತಿಲ್ಲ, ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ.

ಭೂಮಿ ಕೊತ ಕೊತ ಕುದಿಯುತ್ತಿದೆ!

ಒಟ್ನಲ್ಲಿ ಮನುಷ್ಯ ಪ್ರಕೃತಿ ಮೇಲೆ ಮಾಡುತ್ತಿರುವ ದೌರ್ಜನ್ಯಕ್ಕೆ ಪ್ರಕೃತಿ ಕೂಡ ದೊಡ್ಡ ಮಟ್ಟದ ರಿವೇಂಜ್ ತೆಗೆದುಕೊಳ್ಳುತ್ತಿದೆ. ಒಂದ್ಕಡೆ ಕರ್ನಾಟಕ ರಾಜ್ಯವೂ ಸೇರಿದಂತೆ ದಕ್ಷಿಣ ಭಾರತ ಬಿರು ಬಿಸಿಲಿನಲ್ಲಿ ನರಳಿ ಹೋಗುತ್ತಿದೆ. ಆದ್ರೆ ಇನ್ನೊಂದು ಕಡೆ ಉತ್ತರ ಭಾರತ & ಭಾರತದ ಶತ್ರು ಪಾಪಿ ಪಾಕಿಸ್ತಾನ ಮಳೆ ಏಟಿಗೆ ಥರ ಥರ ನಡುಗಿ ಹೋಗಿದೆ. ಹಾಗೇ ಭೀಕರ ಮಳೆ ಪರಿಣಾಮ ಹತ್ತಾರು ಜನರು ಜೀವ ಬಿಟ್ಟಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಮಳೆ ಬರುತ್ತಲೇ ಇಲ್ಲ. ಹೀಗಾಗಿ ಜನರು ಪರದಾಡುತ್ತಿದ್ದಾರೆ. ಬೇಸಿಗೆ ಸಮಯದಲ್ಲಿ ಭೂಮಿ ಕೂಡ ಕೊತ ಕೊತ ಕುದಿಯುತ್ತಿದೆ, ಪರಿಸ್ಥಿತಿ ಹೀಗಿದ್ದಾಗ ಕಳೆದ ವರ್ಷ ಮಳೆ ಬೀಳದೆ ಭೀಕರ ಬರ ಎದುರಾಗಿದೆ. ಎಲ್ಲವೂ, ಕೈಮೀರಿ ಹೋಗಿರುವಾಗಲೇ ಮಳೆರಾಯ ಒಂದಷ್ಟು ಕರುಣೆ ತೋರಿಸ್ತಾನಾ? ಕಾದು ನೋಡಬೇಕಿದೆ.

ಭೀಕರ ಮಳೆಗೆ 40ಕ್ಕೂ ಹೆಚ್ಚು ಜನ ಬಲಿ?
ಪಾಕಿಸ್ತಾನದಲ್ಲಿ ಮಳೆ ಹೇಗೆ ಬೀಳುತ್ತಿದೆ ಎಂದರೆ, ನಿಂತ ನೆಲವೇ ಕೊಚ್ಚಿಕೊಂಡು ಹೋಗಿ ಜನರು ಪದಾಡುತ್ತಿದ್ದಾರೆ. ಜಮ್ಮು & ಕಾಶ್ಮೀರ ರೀತಿಯೇ ಪಾಕಿಸ್ತಾನದಲ್ಲಿ ಕೂಡ ಮಳೆಯ ಅಬ್ಬರ ಜೋರಾಗಿದೆ. ಹೀಗಾಗಿ ಭಾರಿ ಮಳೆಯಿಂದ ಈವರೆಗೂ ಪಾಕಿಸ್ತಾನದಲ್ಲಿ ಸುಮಾರು 40ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ ಎನ್ನಲಾಗಿದೆ. ಇವರ ಜೊತೆ 50ಕ್ಕೂ ಹೆಚ್ಚು ಜನ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ, ಕರ್ನಾಟಕದಲ್ಲಿ ಮಳೆಯ ಸದ್ದು ಇಲ್ಲದಾಗಿದೆ. ಹೀಗಾಗಿ ಜನರು ನಿತ್ಯ ಪರದಾಡುತ್ತಿದ್ದಾರೆ. ಎಲ್ಲೆಲ್ಲೂ ಹನಿ ಹನಿ ನೀರಿಗೂ ಪರದಾಟ ಶುರುವಾಗಿದೆ. ಏನು ಮಾಡುವುದು ಅಂತಾ ಕನ್ನಡ ನಾಡಿನ ಜನರು ಈಗ ಯೋಚಿಸುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+