ಚಿತ್ರಗಳು : ವಿಜಯಪುರದಲ್ಲಿ ಮಳೆ ಅವಾಂತರ, ಮನೆಗಳು ಜಲಾವೃತ
ವಿಜಯಪುರ, ಅಕ್ಟೋಬರ್ 16 : ವಿಜಯಪುರ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದೆ. ಮುದ್ದೇಬಿಹಾಳ ತಾಲೂಕಿನ ಯರಝರಿ ಗ್ರಾಮ ಸಂಪೂರ್ಣವಾಗಿ ಜಲಾವೃತವಾಗಿದೆ. 20ಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಮುಳುಗಿ ಹೋಗಿವೆ.
ಭಾನುವಾರ ರಾತ್ರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಮನೆಗಳು ನೀರಿನಲ್ಲಿ ಮುಳುಗಿರುವುದರಿಂದ ಮನೆಯಲ್ಲಿನ ವಸ್ತುಗಳು ಸಂಪೂರ್ಣ ಒದ್ದೆಯಾಗಿವೆ. ಆಹಾರ ಪದಾರ್ಥಗಳು ನೀರಿನಲ್ಲಿ ಒದ್ದೆಯಾಗಿದ್ದು, ದಿನದ ಊಟಕ್ಕೂ ಜನರು ಪರದಾಡುವಂತಾಗಿದೆ.
ಧುಮ್ಮಿಕ್ಕುತ್ತಿರುವ ಜಕ್ಕಲಮಡುಗು ಜಲಾಶಯದಲ್ಲಿ ಮಿಂದೇಳುತ್ತಿರುವ ಪ್ರವಾಸಿಗರು

ರಸ್ತೆಯಲ್ಲಿ ಮೂರು ಅಡಿಯಷ್ಟು ನೀರು ನಿಂತಿತ್ತು. ಇದರಿಂದಾಗಿ ಮನೆಯಿಂದ ಮಹಿಳೆಯರು ಮತ್ತು ಮಕ್ಕಳು ಹೊರಬರಲಾರದೆ ಪರದಾಡಿದರು. ಮಕ್ಕಳು, ಜನರು ಗೋಡೆ ಏರಿ ಕುಳಿತರೆ, ಕೆಲವರು ಟ್ರಾಕ್ಟರ್‌ನಲ್ಲಿ ಕುಳಿತು ರಾತ್ರಿ ಕಳೆದರು.

ಮಳೆಯ ನೀರಿನಲ್ಲಿ ಒಂದು ಟ್ರಾಕ್ಟರ್ ಮುಳುಗಿ ಹೋಗಿತ್ತು, ಮುದ್ದೇಬಿಹಾಳ ರಸ್ತೆಯಲ್ಲಿ ತೆಂಗಿನಕಾಯಿ ತುಂಬಿದ್ದ ಲಾರಿಯೊಂದು ಸಿಕ್ಕಿಕೊಂಡಿತ್ತು. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಮುದ್ದೇಬಿಹಾಳ ತಾಲೂಕಿನಲ್ಲಿ ಅಪಾರ ಹಾನಿಯಾಗಿದೆ. ಒಂದೇ ವಾರದಲ್ಲಿ ಭಾಗಶ ಹಾಗೂ ಸಂಪೂರ್ಣ ಸೇರಿ 145 ಮನೆಗಳಿಗೆ ಹಾನಿಯಾಗಿದೆ.

ಕೊಪ್ಪಳ : ಕೊಪ್ಪಳದಲ್ಲಿಯೂ ತಡರಾತ್ರಿ ಸುರಿದ ಮಳೆಯಿಂದಾಗಿ ಹಲವು ಮನೆಗಳು ಜಲಾವೃತವಾಗಿವೆ. ಗಣೇಶ ನಗರದಲ್ಲಿ ಮನೆಗಳು ಜಲಾವೃತವಾಗಿದ್ದು, ಸೂಕ್ತ ಚರಂಡಿಯಿಲ್ಲದ ಕಾರಣ ಅವಾಂತರ ನಡೆದಿದೆ ಎಂದು ಸ್ಥಳೀಯರು ಆರೋಪ.












Click it and Unblock the Notifications