Rain Alert: ಮಳೆ, ಗುಡುಗು, ಸಿಡಿಲು ಗ್ಯಾರಂಟಿ: ಕರ್ನಾಟಕಕ್ಕೆ ಸಿಕ್ಕಿದೆ ಸಿಹಿಸುದ್ದಿ!
ನೀರು.. ನೀರು.. ನೀರು.. ಹೀಗೆ ಜನ ಈಗ ರೋಡಲ್ಲಿ ಚಿನ್ನ ಸಿಕ್ಕಿದರೂ ತಲೆಕೆಡಿಸಿಕೊಂಡು ನಿಲ್ಲೋದಿಲ್ಲ ಅಂತಾ ಕಾಣುತ್ತೆ. ಅದೇ ನೀರು ಸಿಕ್ಕರೆ ಎಂತಹ ಗಲಾಟೆ ಆದ್ರೂ ಬಿಡೋದಿಲ್ಲ ಅಂತಾನು ಕಾಣುತ್ತೆ. ಯಾಕಂದ್ರೆ ನೀರಿಗಾಗಿ ಫೈಟಿಂಗ್ ಆ ರೇಂಜ್‌ಗೆ ಇದೆ. ಮಳೆ ಬರಲಿಲ್ಲ, ಸರಿಯಾಗಿ ಕೆರೆ & ಕುಂಟೆ, ನದಿ & ಡ್ಯಾಂ ತುಂಬಿಲ್ಲ ಎಂಬ ಕಾರಣಕ್ಕೆ ಕನ್ನಡಿಗರು ಸಂಕಷ್ಟ ಎದುರಿಸುವಂತಾಗಿದೆ. ಆದರೆ ಇದೇ ಸಮಯದಲ್ಲಿ ಮಳೆ ವಿಚಾರವಾಗಿ ಸಿಹಿಸುದ್ದಿ ಕನ್ನಡದ ಜನರಿಗೆ ಸಿಕ್ಕಿದೆ! ಏನದು ಅಂತಾ ತಿಳಿಯಲು ಮುಂದೆ ಓದಿ.
ಕರ್ನಾಟಕದಲ್ಲಿ ಮಳೆ ಇಲ್ಲದೆ ಭೀಕರ ಬರಗಾಲ ಎದುರಾದ ಕಾರಣಕ್ಕೆ ರಾಜ್ಯ ಸರ್ಕಾರಕ್ಕೂ ದೊಡ್ಡ ತಲೆನೋವು ಶುರುವಾಗಿದೆ. ಯಾಕಂದ್ರೆ ಪರಿಸ್ಥಿತಿ ಇದೇ ರೀತಿ ಮುಂದುವರಿದು, ಈ ಬರ ಇನ್ನೂ ಹಲವು ತಿಂಗಳು ಮುಂದುವರಿಯುತ್ತೆ ಎಂಬ ಭಯ ಆವರಿಸಿತ್ತು. ಈ ಕಾರಣಕ್ಕೆ ತಕ್ಷಣಕ್ಕೆ ಮಳೆ ಬರಬೇಕು ಅಂತಾ ಹೇಳಿದ್ದರು ತಜ್ಞರು. ಅದೇ ರೀತಿ ಈಗ ಮಳೆಯ ಆಗಮನ ಆಗಿದೆ. ಅದರಲ್ಲೂ ಕಾವೇರಿ ನದಿಯ ತವರು ಕೊಡಗು ಜಿಲ್ಲೆಯಲ್ಲಿ ಭರ್ಜರಿ ಮಳೆ ಬಂದು, ಭೂಮಿ ಕೆಸರಾಗಿದೆ. ಕಾವೇರಿ ತಾಯಿಯ ಒಡಲಿಗೂ ಭರ್ಜರಿ ನೀರು ಸೇರ್ಪಡೆಯಾಗಿದೆ. ಈ ರೀತಿ ಕರ್ನಾಟಕದ ವಿವಿಧ ಪ್ರದೇಶದಲ್ಲೂ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಹಾಗಾದ್ರೆ ಎಲ್ಲೆಲ್ಲಿ ಮಳೆಯಾಗುತ್ತೆ? ಮುಂದೆ ಓದಿ.

ಕೊಡಗು ಜಿಲ್ಲೆಯಲ್ಲಿ ಭರ್ಜರಿ ಮಳೆ!
ಕರ್ನಾಟಕದಲ್ಲಿ ಅದ್ರಲ್ಲೂ ಬೆಂಗಳೂರಿನಲ್ಲಿ ಸದ್ಯಕ್ಕೆ ಯಾವುದೇ ರೀತಿಯ ಮಳೆಯ ಮನ್ಸೂಚನೆ ಇಲ್ಲ ಎನ್ನಲಾಗಿತ್ತು. ಹೀಗಾಗಿ ಒಣ ಹವೆ ಕಾಟ ಮುಂದುವರಿಯಲಿದೆ ಎನ್ನಲಾಗಿತ್ತು. ಹಾಗೆಯೇ ಮುಂದಿನ 2 ಅಥವಾ 3 ವಾರ ಇದೇ ವಾತಾರಣ ಇರಲಿದೆ ಎನ್ನಲಾಗುತ್ತಿತ್ತು. ದಕ್ಷಿಣ ಒಳನಾಡಿನ ಕೆಲವು ಕಡೆ ಉಷ್ಣಾಂಶ ಸಾಮಾನ್ಯಕ್ಕಿಂತ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ಕರ್ನಾಟಕದ ನೆಲದಲ್ಲಿ ಗರಿಷ್ಠ ಉಷ್ಣಾಂಶ ಹೆಚ್ಚಾಗುವ ಭಯ ಆವರಿಸಿತ್ತು. ಹೀಗಿದ್ದಾಗ ಮಳೆ ಮುನ್ಸೂಚನೆ ಸಿಕ್ಕಿದೆ. ಇನ್ನೇನು ಕೆಲವೇ ದಿನದಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಶುರುವಾಗುವ ನಿರೀಕ್ಷೆ ಇದೆ. ಈಗಾಗಲೇ ಕೊಡಗು, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳ ಜನರಿಗೆ ಮಳೆ ಬಿದ್ದು ರಿಲೀಫ್ ಸಿಕ್ಕಂತಾಗಿದೆ.
ಕರ್ನಾಟಕ ಈ ಜಿಲ್ಲೆಗಳಿಗೂ ಮಳೆ!
ಹವಾಮಾನ ತಜ್ಞರು ನೀಡಿರುವ ಮಾಹಿತಿ ಪ್ರಕಾರ ಶಿವಮೊಗ್ಗ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿ ಹಲವು ಜಿಲ್ಲೆಗಳಲ್ಲಿ ಮಾರ್ಚ್ 31ರಿಂದ 2 ದಿನ ಕಾಲ ಮಳೆಯಾಗಲಿದೆ ಅಂತಾ ಹವಾಮಾನ ತಜ್ಞರಿಂದಲೇ ಮುನ್ಸೂಚನೆ ಸಿಕ್ಕಿದೆ. ಇದಕ್ಕೆ ಪೂರಕವಾಗಿ ಈಗಾಗ್ಲೇ, ಕಾವೇರಿ ನದಿ ತವರು ಕೊಡಗು ಸೇರಿದಂತೆ ಚಿಕ್ಕಮಗಳೂರು, ಹುಬ್ಬಳ್ಳಿ & ಧಾರವಾಡ, ಗಡಿನಾಡು ಬೆಳಗಾವಿಯಲ್ಲೂ ಭಾರಿ ಮಳೆ ಬಿದ್ದಿದೆ. ಇನ್ನು ಕೆಲವೇ ಕೆಲ ದಿನದಲ್ಲಿ ಈ ಜಿಲ್ಲೆಗಳಲ್ಲಿ ಮತ್ತೆ ಮಳೆ ಆರ್ಭಟ ಶುರುವಾಗುವ ನಿರೀಕ್ಷೆ ಇದೆ.

ಎಲ್ಲೆಲ್ಲೂ ಹಬ್ಬುತ್ತಿದೆ ಬಿಸಿಲಿ ಝಳ!
ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿದಂತೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ & ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ ಜಿಲ್ಲೆ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಬಹುತೇಕ ಭಾರಿ ಬಿಸಿಲು ಇದೀಗ ಬೀಳುತ್ತಿದ್ದು, ಜನರು ಸಂಕಷ್ಟ ಎದುರಿಸುತ್ತಿದ್ದಾರೆ.
ಮಳೆ ನೀರು ಸಂಗ್ರಹ ಮಾಡಿ!
ಮನುಷ್ಯನ ಬದುಕಿಗೆ ಮೂಲ ಆಧಾರವೇ ನೀರು, ನೀರು ಇಲ್ಲದೆ ಮನುಷ್ಯನ ಜೀವನ ಊಹೆಗೂ ನಿಲುಕುವುದಿಲ್ಲ. ಹೀಗಾಗಿ ಜೀವಜಲ ಅಂತಾ ಕರೆಯುವ ನೀರನ್ನು ಮನುಷ್ಯ ಸೂಕ್ತ ರೀತಿಯಲ್ಲಿ ಸಂಗ್ರಹ ಮಾಡಿಕೊಳ್ಳಬೇಕು. ಹೀಗಿದ್ದರೂ ಮನುಷ್ಯರು ಮಾತ್ರ ನೀರಿನ ಸದ್ಬಳಕೆ ಮಾಡಿಕೊಳ್ತಿಲ್ಲ. ಇದೇ ಕಾರಣಕ್ಕೆ ಮನುಷ್ಯ ಈಗ ಹನಿ ಹನಿ ನೀರಿಗೂ ಪರದಾಡುತ್ತಿದ್ದಾನೆ. ಹೀಗಿದ್ದಾಗ ತಕ್ಷಣಕ್ಕೇ ಎಚ್ಚೆತ್ತುಕೊಂಡು, ಮಳೆ ನೀರು ಸಂಗ್ರಹ ಮಾಡಿಕೊಂಡರೆ ಮುಂದಕ್ಕೆ ಇಂತಹ ಸಮಸ್ಯೆ ಬರಲ್ಲ ಎಂಬ ಮಾತು ಕೇಳಿಬರುತ್ತಿದೆ. ಯಾಕಂದ್ರೆ ಮಳೆಗಾಲ ಆರಂಭಕ್ಕೆ ಇನ್ನು ಕೇವಲ 2 ತಿಂಗಳು ಬಾಕಿ ಇದೆ. ಹಾಗಾದರೆ ಮಳೆ ನೀರು ಸಂಗ್ರಹ ಹೇಗೆ ಮಾಡುವುದು? ಬನ್ನಿ ತಿಳಿಯೋಣ.












Click it and Unblock the Notifications