Karnataka Rain: ಮಳೆ.. ಮಳೆ.. 36 ಗಂಟೆಗಳಲ್ಲಿ ಭಾರಿ ಭರ್ಜರಿ ಮಳೆ! ಯಾವ ಯಾವ ಜಿಲ್ಲೆಗೆ ಕಂಟಕ?
ಮಳೆ.. ಮಳೆ.. ಚಳಿಗಾಲದಲ್ಲಿ ಮತ್ತೆ ಮಳೆ ಶುರುವಾಗಲಿದೆ. ಶನಿವಾರ ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಮೋಡ ಕವಿದ ವಾತಾವರಣ ನಿರ್ಮಾಣ ಆಗಿ ಭಯ ಸೃಷ್ಟಿಯಾಗಿದೆ. ಬಂಗಾಳ ಕೊಲ್ಲಿ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗಿ ಘೋರವಾಗಿ ಮಳೆ ಶುರುವಾಗಿದ್ದು, ಮಳೆ.. ಮಳೆ.. 36 ಗಂಟೆಗಳಲ್ಲಿ ಭಾರಿ ಭರ್ಜರಿ ಮಳೆ! ಯಾವ ಯಾವ ಜಿಲ್ಲೆಗೆ ಕಂಟಕ?
ಡಿಸೆಂಬರ್ ಮುಗಿದಿದ್ದು ಜನವರಿ ತಿಂಗಳು ಶುರುವಾಗಿ ಇದೀಗ ಹತ್ತಿರ, ಹತ್ತಿರ ಅರ್ಧ ತಿಂಗಳು ಮುಗಿಯುತ್ತಾ ಬಂದಿದೆ. ಹೀಗಿದ್ದರೂ ಮಳೆಯ ಆರ್ಭಟ ಮಾತ್ರ ಕಡಿಮೆ ಆಗುತ್ತಿಲ್ಲ, ಆತಂಕ ಕೂಡ ಕಡಿಮೆ ಆಗುತ್ತಿಲ್ಲ. ಈ ಬಾರಿ ಚಳಿಗಾಲ ಶುರುವಾದರೂ ಮಳೆ ಆರ್ಭಟಕ್ಕೆ ಮಾತ್ರ ಬ್ರೇಕ್ ಬಿದ್ದಿಲ್ಲ. ಮಳೆ ಆರ್ಭಟಿಸುತ್ತಿರುವ ರೀತಿ ಕಂಡು ಜನ ಕೂಡ ಬೆಚ್ಚಿ ಬಿದ್ದಿದ್ದಾರೆ ಜೊತೆಗೆ ಈ ರೀತಿ ಅಕಾಲಿಕ ಮಳೆ ಕಾರಣಕ್ಕೆ ನೂರಾರು ಸಮಸ್ಯೆ ಎದುರಾಗಿವೆ. ಇಂತಹ ಸಮಯದಲ್ಲೇ ಮತ್ತೆ 36 ಗಂಟೆಗಳಲ್ಲಿ ಭಾರಿ ಭರ್ಜರಿ ಮಳೆ ಸುರಿಯುವ ಎಚ್ಚರಿಕೆ ನೀಡಲಾಗಿದೆ!

ಮಳೆ.. ಮಳೆ.. ಯಾವ ಜಿಲ್ಲೆಗಳಿಗೆ?
ಅಂದಹಾಗೆ ಚಳಿಗಾಲ ಮುಗಿದು ಇನ್ನೇನು ಬೇಸಿಗೆ ಕಾಲ ಆರಂಭ ಆಗಬೇಕಿದೆ. ಹೀಗಿದ್ದರೂ ಮಳೆ ಕಾಟ ಮಾತ್ರ ಕಡಿಮೆ ಆಗಿಲ್ಲ. ಮಳೆರಾಯ ತನ್ನ ಆರ್ಭಟ ಮುಂದುವರಿಸಿ ದೊಡ್ಡ ಭಯವನ್ನು ಸೃಷ್ಟಿ ಮಾಡಿದ್ದಾನೆ. ಹಾಗಾದರೆ, ಮತ್ತೆ ಮಳೆ ಯಾವಾಗ ಶುರುವಾಗುತ್ತೆ? ಬೆಂಗಳೂರು ಜಿಲ್ಲೆ ಸೇರಿ ಕರ್ನಾಟಕದ ಯಾವ ಯಾವ ಜಿಲ್ಲೆಗೆ ಮಳೆಯ ಆರ್ಭಟ ಶುರುವಾಗಲಿದೆ? ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಯಾವ ಯಾವ ಜಿಲ್ಲೆಗಳಿಗೆ ಮಳೆ?
ಬೆಂಗಳೂರಲ್ಲಿ ಈಗಾಗಲೇ ಮೋಡ ಮುಸುಕಿದ ವಾತಾವರಣ ಇದ್ದು, ಶನಿವಾರ ಪೂರ್ತಿ ದಿನ ಸೂರ್ಯ ಕಂಡುಬಂದಿಲ್ಲ. ಭಾನುವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿ ಸುತ್ತಮುತ್ತಲ ಭಾಗದಲ್ಲಿ ಮಳೆ ಅಬ್ಬರ ಶುರುವಾಗುವ ಸಾಧ್ಯತೆ ಇದೆ. ಇದರ ಜೊತೆ ಇದೀಗ ಕೊಡಗು, ರಾಮನಗರ, ಶಿವಮೊಗ್ಗ, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿ ಕೋಲಾರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ತುಂತುರು ಮಳೆ ಮುನ್ಸೂಚನೆ ಸಿಕ್ಕಿದೆ. ಹಾಗೇ ಜನವರಿ 15 & 16 ಕ್ಕೆ ಕೂಡ ಮಳೆಯ ಅಬ್ಬರದ ಆತಂಕ ಆವರಿಸಿದೆ.
ಒಟ್ನಲ್ಲಿ ಈಗ ಮಳೆ ಆರ್ಭಟ ಇಷ್ಟಕ್ಕೇ ಸೈಲೆಂಟ್ ಆಗುವ ಯಾವುದೇ ಲಕ್ಷಣ ಕೂಡ ಕಾಣುತ್ತಿಲ್ಲ. ಬಂಗಾಳ ಕೊಲ್ಲಿ ಭಾಗದಲ್ಲಿ ಪದೇ ಪದೇ ವಾಯುಭಾರ ಕುಸಿತವು ಉಂಟಾಗುತ್ತಿದೆ. ವಾಯುಭಾರ ಕುಸಿತ & ಚಂಡಮಾರುತ ಅಪ್ಪಳಿಸುತ್ತಿರುವ ಹಿನ್ನೆಲೆ ದೊಡ್ಡ ಅವಾಂತರ ಸೃಷ್ಟಿಯಾಗ್ತಿದೆ. ಹೀಗೆ ಪದೇ, ಪದೇ ಮಳೆ ಬರುತ್ತಿರುವ ಕಾರಣಕ್ಕೆ ಆರೋಗ್ಯ ಸಮಸ್ಯೆ ಕೂಡ ಎದುರಾಗುತ್ತಿದೆ. ಸದ್ಯ ಕನ್ನಡಿಗರು ಅಕಾಲಿಕ ಮಳೆ ಪರಿಣಾಮ ಬೆಚ್ಚಿ ಬಿದ್ದಿದ್ದಾರೆ ಎನ್ನಬಹುದು.












Click it and Unblock the Notifications