Rain Alert: ಮಳೆ ನಿಲ್ಲುವ ಬದಲು ಮತ್ತಷ್ಟು ಜೋರಾಗುವುದು ಗ್ಯಾರಂಟಿ!
ಮುಂಗಾರು ಮಳೆಗೆ ಇದೀಗ ಕರ್ನಾಟಕದ ಜನರ ಮೇಲೆ ಕೋಪ ಬಂದಿದೆ ಅಂತಾ ಕಾಣ್ತಿದೆ. ಯಾಕಂದ್ರೆ ಮುಂಗಾರು ಮಳೆ ಶುರುವಾಗಿ 3 ತಿಂಗಳು ಕಳೆದು ಇದೀಗ 4ನೇ ತಿಂಗಳಿಗೆ ಬಿದ್ದಿದೆ. ಹೀಗಿದ್ದರೂ ಮುಂಗಾರು ಮಳೆಯ ಮಾರುತಗಳು ಮಾತ್ರ ಸೈಲೆಂಟ್ ಆಗುತ್ತಿಲ್ಲ. ಇದು ಬಿಡಿ ಕರಾವಳಿ & ಮಲೆನಾಡು ಪ್ರದೇಶದಲ್ಲಿ ಇಷ್ಟು ದಿನ ಕಾಟ ಕೊಟ್ಟಿದ್ದ ಮಳೆರಾಯ ಈಗ ಅಂದ್ರೆ ಕಳೆದ 1 ವಾರದಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೂ ಕಾಟ ಕೊಡುತ್ತಿದ್ದಾನೆ! ಇದು ಇಷ್ಟಕ್ಕೇ ನಿಲ್ಲಲಿದೆ ಅಂತಾ ಅಂದುಕೊಳ್ಳಬೇಡಿ, ಯಾಕೆ ಅಂದ್ರೆ ಮುಂಗಾರು ಮಳೆ ಆರ್ಭಟ ಮತ್ತಷ್ಟು ಹೆಚ್ಚಾಗಲಿದೆಯಂತೆ!
ಕನ್ನಡಿಗರು ಮಳೆ ಈವತ್ತು ನಿಲ್ಲುತ್ತೆ, ಮಳೆ ನಾಳೆ ಕಡಿಮೆ ಆಗುತ್ತೆ ಅಂತಾ ಕಳೆದ 3 ತಿಂಗಳಿಂದ ಕಾಯ್ತಾನೇ ಇದ್ದಾರೆ. ಆದರೆ ಮಳೆರಾಯ ಮಾತ್ರ ಆರ್ಭಟ ಕಡಿಮೆ ಮಾಡುತ್ತಿಲ್ಲ. ಈ ಕಾರಣಕ್ಕೆ ಕರ್ನಾಟಕದ ಜನ ಭಾರಿ ಮಳೆಯನ್ನ ಕಂಡು ಹೆದರಿ ಕೂರುವ ಪರಿಸ್ಥಿತಿಯೂ ನಿರ್ಮಾಣ ಆಗಿದೆ. ಅದರಲ್ಲೂ ಕರ್ನಾಟಕದ ಮಲೆನಾಡು ಶಿವಮೊಗ್ಗ, ಚಿಕ್ಕಮಗಳೂರು & ಕೊಡಗು, ಹಾಸನದ ಕೆಲವು ಭಾಗ ಸೇರಿ ಕರಾವಳಿ ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದ್ದ ಮಳೆಯ ಆರ್ಭಟ ಈಗ ಕರ್ನಾಟಕದ ಒಳ ಭಾಗಗಳಿಗೂ ಆವರಿಸಲು ಸಜ್ಜಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಹಾಗಾದ್ರೆ ಮುಂದಿನ 48 ಗಂಟೆ ಕಾಲ ಭಾರಿ ಮಳೆ ಸುರಿಯುವ ಜಿಲ್ಲೆಗಳು ಯಾವುವು?

ಮಳೆ ಆರ್ಭಟ ಯಾವ ಜಿಲ್ಲೆಗಳಿಗೆ?
ಎಲ್ಲವೂ ಅಂದುಕೊಂಡ ರೀತಿ ನಡೆದಿದ್ದರೆ ಇಷ್ಟೊತ್ತಿಗೆ ಮುಂಗಾರು ಮಳೆ ನಿಲ್ಲಬೇಕಿತ್ತು. ಈ ಸಮಯದಲ್ಲೇ ಒಂದು ಕಡೆ ಬಂಗಾಳ ಕೊಲ್ಲಿ ಅಂದ್ರೆ ಭಾರತದ ಎಡ ಭಾಗದ ಸಮುದ್ರದಲ್ಲಿ, ಹಾಗೇ ಮತ್ತೊಂದು ಕಡೆ ಅರಬ್ಬಿ ಸಮುದ್ರ ಅಂದ್ರೆ ಭಾರತದ ಬಲ ಭಾಗದ ಸಮುದ್ರದಲ್ಲೂ ವಾಯುಭಾರ ಭೀಕರವಾಗಿ ಕುಸಿತ ಕಂಡಿದೆ. ಹೀಗಾಗಿ ಪರಿಸ್ಥಿತಿ ಭೀಕರವಾಗಿದ್ದು, ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲೂ ಮಳೆರಾಯ ಅಬ್ಬರಿಸಲು ಶುರು ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಯಾವ ಯಾವ ಜಿಲ್ಲೆಗಳಿಗೆ ಭಾರಿ ಮಳೆ ಬೀಳಲಿದೆ ಗೊತ್ತೆ?
ಬೆಳಗಾವಿ, ಬಿಜಾಪುರ, ಬಾಗಲಕೋಟೆ...
ಈಗಿನ ಮಾಹಿತಿ ಪ್ರಕಾರ ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಬೀದರ್, ಬಳ್ಳಾರಿ, ವಿಜಯನಗರ, ಕಲಬುರಗಿ, ಯಾದಗಿರಿ, ರಾಯಚೂರು, ಧಾರವಾಡ ಸೇರಿ ಗದಗ, ಹಾವೇರಿ & ಕೊಪ್ಪಳ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಮತ್ತೊಂದು ಕಡೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಮಳೆ ಅಬ್ಬರವು ಇದೀಗ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಾ ಸಾಗಿದ್ದು, ದೊಡ್ಡ ದೊಡ್ಡ ನಗರಗಳೇ ಇದೀಗ ಮುಳುಗಿ ಹೋಗಿವೆ. ಹೀಗಾಗಿ ಜನರು ಕೂಡ ನೆರೆ ಹಾವಳಿಯಿಂದ ರಕ್ಷಣೆ ಪಡೆಯಲು ಪರದಾಡುತ್ತಿದ್ದಾರೆ.












Click it and Unblock the Notifications