Heavy Rain: ಮಳೆ.. ಮಳೆ.. ಮುಂದಿನ 1 ವಾರ ಭರ್ಜರಿ ಮಳೆ!

ಮಳೆ.. ಮಳೆ.. ಎಲ್ಲೆಲ್ಲೂ ಮುಂಗಾರು ಮಳೆ ಅಬ್ಬರ ಜೋರಾಗಿದೆ. ಅದ್ರಲ್ಲೂ ಕರ್ನಾಟಕ ರಾಜ್ಯದ ಪ್ರತಿಯೊಂದು ಜಿಲ್ಲೆ ಕೂಡ ಹೀಗೆ ಮುಂಗಾರು ಮಳೆಯಲ್ಲಿ ಮಿಂದು ಧನ್ಯವಾಗಿದೆ. ಹೀಗಿದ್ದಾಗ ಮುಂದಿನ 1 ವಾರ ಕಾಲ ಮತ್ತೆ ಭರ್ಜರಿ ಮಳೆಯ ಬಗ್ಗೆ ಮುನ್ನೆಚ್ಚರಿಕೆ ಕೂಡ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗೆ ಭರ್ಜರಿ ಮಳೆ ಬರಲಿದೆ? ಮುಂದೆ ಓದಿ.

ಮುಂಗಾರು ಮಳೆ 2024ರಲ್ಲಿ ಬಹು ಬೇಗ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದೆ ಈ ಹಿನ್ನೆಲೆ ಕನ್ನಡಿಗರ ನಾಡಲ್ಲಿ ಈಗ ಮುಂಗಾರು ಮಳೆ ಮೆರವಣಿಗೆ ಭರ್ಜರಿಯಾಗಿ ಸಾಗಿದೆ. ಹೀಗಿದ್ದಾಗ ಮುಂದಿನ 10 ದಿನ ಕಾಲ ಮತ್ತಷ್ಟು ಜೋರು ಮಳೆ ಬೀಳುವ ಬಗ್ಗೆ, ಮುನ್ನೆಚ್ಚರಿಕೆ ನೀಡಲಾಗಿದೆ. ಹವಾಮಾನ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ, ಉಡುಪಿ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ ಹಾಗೂ ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ ಜಿಲ್ಲೆಯಲ್ಲಿ ಮಳೆ ಮುನ್ನೆಚ್ಚರಿಕೆಯನ್ನ ನೀಡಲಾಗಿದೆ.

Heavy Rain Is Expected In Karnataka For Next 1 Week From June 9th Of 2024

ಕರುಣೆ ತೋರಿಸಿದ್ದ ಮಳೆರಾಯ!

ಕೇವಲ 1 ತಿಂಗಳ ಹಿಂದೆ ಅಂದ್ರೆ ಏಪ್ರಿಲ್ 2024ರಲ್ಲಿ ಒಂದೊಂದು ಹನಿ ನೀರಿಗೂ ಕಷ್ಟ ಆಗಿತ್ತು. ಕರ್ನಾಟಕದ ಯಾವುದೇ ಹಳ್ಳಿಗೆ ಹೋಗಿ, ಯಾವುದೇ ನಗರಕ್ಕೆ ಹೋಗಿ ಅಲ್ಲೆಲ್ಲಾ ನೀರಿಗೆ ದೊಡ್ಡ ಹೋರಾಟ ಶುರುವಾಗಿತ್ತು. ಜನಗಳು ಪ್ರತಿದಿನ ತಮ್ಮ ಕೆಲಸವನ್ನು ಬಿಟ್ಟು ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿತ್ತು ಹೀಗಿದ್ದಾಗ ಮಳೆರಾಯ ಕರ್ನಾಟಕ ರಾಜ್ಯದಲ್ಲಿ ಒಂದಷ್ಟು ಕರುಣೆ ತೋರಿಸಿ ಮಳೆ ಸುರಿಸಲು ಆರಂಭಿಸಿದ್ದ. ಇದೀಗ ಮುಂದಿನ 1 ವಾರ ಇನ್ನೂ ಭರ್ಜರಿ ಮಳೆಯ ಆಗಮನ ಆಗಲಿದೆ ಎಂದು ಮಾಹಿತಿ ನೀಡಲಾಗಿದೆ.

ಹೊರಗೆ ಹೋಗುವಾಗ ಎಚ್ಚರ!

ಮಳೆ.. ಮಳೆ.. ಹೀಗೆ ಕರ್ನಾಟಕದ ಪ್ರತಿ ಜಿಲ್ಲೆಗೂ ಭರ್ಜರಿ ಮಳೆ ಸಿಂಚನ ಆಗಿದೆ. ಮಳೆರಾಯ ಅಸಲಿ ಮುಖ ತೋರಿಸುತ್ತಿದ್ದು ಎಲ್ಲೆಲ್ಲೂ ಮಳೆ ಅಬ್ಬರ ಶುರುವಾಗಿದೆ. ಅದ್ರಲ್ಲೂ ಬೆಂಗಳೂರು ಸೇರಿ ಕರ್ನಾಟಕದ ಪ್ರತಿ ಜಿಲ್ಲೆಯಲ್ಲೂ ಭಾರಿ ಮಳೆ ಬೀಳುತ್ತಿದೆ. ಸ್ಥಿತಿ ಹೀಗಿದ್ದಾಗಲೇ, ಮುಂದಿನ 1 ವಾರ ಕಾಲ ಮತ್ತಷ್ಟು ಮಳೆ ಬೀಳುವ ವಾರ್ನಿಂಗ್ ಕೊಡಲಾಗಿದ್ದು, ಹೊರಗೆ ಹೋಗುವಾಗ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಒಳ್ಳೆಯದು. ಇಲ್ಲವಾದರೆ ಮಳೆಯಲ್ಲಿ ಸಿಲುಕಿ ಪರದಾಟವು ಗ್ಯಾರಂಟಿ ಹಾಗೂ ರಸ್ತೆಗಳಲ್ಲಿ ನೀರು ತುಂಬಿದರೆ ಇನ್ನಷ್ಟು ಸಮಸ್ಯೆ ಎದುರಾಗುವುದು ಪಕ್ಕಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+