ಮಳೆ.. ಮಳೆ.. ಗುಡುಗು ಸಹಿತ ಭರ್ಜರಿ ಮಳೆಗೆ ತತ್ತರಿಸಿದ ಕರ್ನಾಟಕ!
ಕಳೆದ 4-5 ವರ್ಷದಿಂದ ಬೆಂಗಳೂರು & ಕರ್ನಾಟಕದ ಜನರು, ಭಾರಿ ಮಳೆಗೆ ಬೆಚ್ಚಿ ಬಿದ್ದಿದ್ದರು. ತಗ್ಗು ಪ್ರದೇಶದ ಜನಗಳಿಗೆ ಮಳೆ ನೀರು ಸಾಕಷ್ಟು ಸಮಸ್ಯೆಯನ್ನ ಕೊಟ್ಟಿತ್ತು. ಆದ್ರೆ ಕಳೆದ ವರ್ಷ ಮಳೆ ನಾಪತ್ತೆ ಆಗಿತ್ತು. ಬೇಸಿಗೆ ಸಮಯದಲ್ಲಿ ಬಿದ್ದ ಒಂದೆರಡು ಮಳೆ ಮಾತ್ರ, ಕರ್ನಾಟಕಕ್ಕೆ ತಂಪೆರದಿತ್ತು. ಅದನ್ನ ಬಿಟ್ಟು ಮುಂಗಾರು ಸಮಯ ಜೂನ್ ತಿಂಗಳಲ್ಲೇ ಕರ್ನಾಟಕದಲ್ಲಿ ಮಳೆ ಕೊರತೆ ಆತಂಕ ಹುಟ್ಟಿಸಿತ್ತು. ಆದರೆ ಇದೀಗ ಮತ್ತೊಮ್ಮೆ ಮಳೆಯ ಅಬ್ಬರ ಶುರುವಾಗಿದ್ದು, ಯಾವ ಯಾವ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆ ಬಿದ್ದಿದೆ ಗೊತ್ತಾ?
ಮುಂಗಾರು ಮಳೆ ಕೈಕೊಟ್ಟ ಕಾರಣ 2023 ರಲ್ಲಿ ಬರದ ಬೇಗೆಯಲ್ಲಿ ಕರ್ನಾಟಕ ಬೆಂದು ಹೋಗಿ ಜನ ಪರದಾಡಿದ್ದಾರೆ. ಇದೇ ಕಾರಣಕ್ಕೆ, ಈ ಬಾರಿಯ ಬೇಸಿಗೆಯಲ್ಲಿ ಪರದಾಟ ಶುರುವಾಗಿ ಹನಿ ಹನಿ ನೀರು ಬಂಗಾರವಾಗಿದೆ. 2024 ಬೇಸಿಗೆ ಆರಂಭಕ್ಕೆ ಮೊದಲೇ, ತಲೆನೋವು ಶುರುವಾಗಿತ್ತು. ಕುಡಿವ ನೀರು ಒದಗಿಸಲು ಸರ್ಕಾರ ಪರದಾಡುತ್ತಿದೆ. ಈ ಸಮಯದಲ್ಲೇ ನಮ್ಮ ರಾಜ್ಯದ ಹಲವು ಪ್ರದೇಶದಲ್ಲಿ ಟ್ಯಾಂಕರ್ ಮಾಫಿಯಾ ಕೂಡ ಶುರುವಾಗಿದೆ. ಹೀಗಿದ್ದಾಗ ಮಳೆರಾಯ ಕನ್ನಡಗರ ಮೇಲೆ ಕರುಣೆ ತೋರಿಸಿ ಮಳೆ ಬರಿಸಿದ್ದಾನೆ. ಹಾಗಾದ್ರೆ ಎಲ್ಲೆಲ್ಲಿ ಮಳೆ ಶುರುವಾಗಿದೆ? ಬನ್ನಿ ಕರ್ನಾಟಕದ ಯಾವ ಯಾವ ಜಿಲ್ಲೆಯಲ್ಲಿ ಮಳೆ ಬಂದಿದೆ ಅಂತಾ ತಿಳಿಯೋಣ.

ಮಳೆ.. ಮಳೆ.. ಕರ್ನಾಟಕದಲ್ಲಿ ಮಳೆ!
ಕರ್ನಾಟಕದ ಕರಾವಳಿ ಜಿಲ್ಲೆಯು ಸೇರಿದಂತೆ ಬೆಂಗಳೂರು ನಗರ & ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಕರ್ನಾಟಕದ ವಿದ್ಯಾಕಾಶಿ ಧಾರವಾಡ & ಹುಬ್ಬಳ್ಳಿಯಲ್ಲಿ ಭಾರಿ ಮಳೆ ತಂಪೆರದಿದ್ದು, ಗದಗ ಜಿಲ್ಲೆಯ ಜನರು ಕೂಡ ಭಾರಿ ಮಳೆಯಿಂದ ಖುಷಿಯಾಗಿ ಕುಣಿದಾಡಿದ್ದಾರೆ.

ಕರ್ನಾಟಕದ ಹಾಸನ, ಕೊಡಗು ಸೇರಿ ಮಲೆನಾಡು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆಯು ಭಾರಿ ಮಳೆ ಬೀಳುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೂಡ ಮಳೆಯಾಗುತ್ತಿದ್ದು, ಈ ಮೂಲಕ ನೆಮ್ಮದಿ ಮೂಡಿದೆ. ಕರಾವಳಿಯ ಪ್ರದೇಶಗಳು ಸೇರಿ ಈಗ ಉತ್ತರ ಕನ್ನಡ, ದಕ್ಷಿಣ ಕನ್ನಡ & ಉಡುಪಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಶಿವಮೊಗ್ಗದ ಹಲವು ತಾಲೂಕುಗಳು ಮತ್ತು ಮೈಸೂರು ಜಿಲ್ಲೆಗಳ ಹಲವೆಡೆ ಮಳೆ ಆರ್ಭಟಿಸಿದೆ.
ಮುಂದಿನ 24 ಗಂಟೆಯಲ್ಲಿ ಮಳೆ!
ಹವಾಮಾನ ಇಲಾಖೆ ಮಾಹಿತಿ ನೀಡಿರುವ ಪ್ರಕಾರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗ ಮಳೆಯಾಗುತ್ತಿದೆ. ಆದರೆ, ಬೆಂಗಳೂರಿನಲ್ಲಿ ಮಾತ್ರ ಮಳೆಯ ಕೊರತೆ ಕಾಡುತ್ತಿದೆ. ಹೀಗಾಗಿ ಬೆಂಗಳೂರಿನ ನಿವಾಸಿಗಳು ನರಳಾಡಿ ಹೋಗಿದ್ದಾರೆ. ಬೋರ್‌ವೆಲ್ ಬತ್ತಿ ಹೋಗಿವೆ, ಕೆರೆಗಳ ತಳ ಕಾಣಿಸುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಹನಿ ಹನಿ ನೀರಿಗೂ ಸಂಕಷ್ಟ ಶುರುವಾಗಿದೆ. ಹೀಗಿದ್ದಾಗ ಬೆಂಗಳೂರಿನಲ್ಲಿ ಭರ್ಜರಿ ಮಳೆ ಬೀಳಲೇಬೇಕು. ಇಲ್ಲವಾದ್ರೆ ಬೆಂಗಳೂರಿನ ಸ್ಥಿತಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಇಂತಹ ಸಮಯದಲ್ಲೇ ಭರ್ಜರಿ ಗುಡ್ ನ್ಯೂಸ್ ಒಂದು ಸಿಕ್ಕಿದ್ದು, ಮುಂದಿನ 24 ಗಂಟೆಯಲ್ಲಿ ಬೆಂಗಳೂರಿನಲ್ಲೂ ಭಾರಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ.
ಕುಡಿಯುವ ನೀರಿಗೂ ತೀವ್ರ ಪರದಾಟ
ರಾಜ್ಯದಲ್ಲಿ ಮಳೆಯ ಕೊರತೆ ಎಂತಹ ಪರಿಸ್ಥಿತಿ ನಿರ್ಮಾಣ ಮಾಡಿತ್ತು ಎಂದರೆ, ರಾಜ್ಯದಲ್ಲಿರುವ ಬಹುತೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿತ್ತು. ಅತಿಹೆಚ್ಚು ಮಳೆಯಾಗುವ ಮಲೆನಾಡು ಪ್ರದೇಶದಿಂದ ಹಿಡಿದು, ಕರಾವಳಿ ಜಿಲ್ಲೆಗಳ ತನಕ ಇದೇ ಪರಿಸ್ಥಿತಿ ಇತ್ತು. ಹಾಗೂ ಬಯಲು ಸೀಮೆ ಪ್ರದೇಶದಲ್ಲಿ ಇನ್ನೂ ಭಯಾನಕ ಪರಿಸ್ಥಿತಿ ಇತ್ತು. ಹೀಗೆ ಕುಡಿಯುವ ನೀರಿಗಾಗಿ ಜನರು ಪರದಾಡಿದ್ದರು. ರಾಜ್ಯದಲ್ಲಿನ ಬಹುತೇಕ ಕೆರೆಗಳು & ಡ್ಯಾಂಗಳು ಒಣಗಿ ಹೋಗಿರುವಾಗ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಮುಂದಿನ ಕೆಲ ದಿನಗಳ ಕಾಲ ಇದೇ ರೀತಿ ಮಳೆ ಬೀಳುವ ನಿರೀಕ್ಷೆ ಇದೆ.












Click it and Unblock the Notifications