Heavy Rain: ಮಳೆ.. ಮಳೆ.. ಭರ್ಜರಿ ಮಳೆಯ ಅಬ್ಬರ ಶುರು ಗುರೂ!
ಮುಂಗಾರು ಮಳೆ ಅಬ್ಬರ ಬಲು ಜೋರಾಗಿದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇದೀಗ ಮಳೆ ಆರ್ಭಟ ಬಲು ಜೋರಾಗಿದೆ. ಅದರಲ್ಲೂ ಕರಾವಳಿ & ಮಲೆನಾಡು ಜಿಲ್ಲೆಗಳಲ್ಲಿ ವರುಣ ತನ್ನ ಅಬ್ಬರವನ್ನ ತೋರಿಸುತ್ತಿದ್ದಾನೆ. ಹಾಗೇ ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿಯಾಗಿ ಮಳೆರಾಯ ಅಬ್ಬರಿಸಲಿದ್ದು, ಯಾವೆಲ್ಲಾ ಜಿಲ್ಲೆಗೆ ಮಳೆಯ ಆರ್ಭಟ ಎಂಟ್ರಿ ಆಗಲಿದೆ? ಈ ಬಗ್ಗೆ ಮಾಹಿತಿಗೆ ಮುಂದೆ ಓದಿ.
ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಸೇರಿ ಮಲೆನಾಡು & ಕರಾವಳಿ ಭಾಗದಲ್ಲಿ ಭಾರಿ ಭರ್ಜರಿ ಮಳೆ ಆರಂಭ ಆಗಿದೆ. ಮತ್ತೊಂದು ಕಡೆ ಕರ್ನಾಟಕದ ಬಹುತೇಕ ಕೆರೆಗಳು & ಹಳ್ಳಕೊಳ್ಳ ತುಂಬಿ ಹರಿಯುತ್ತಿವೆ. ಹೀಗಿದ್ದಾಗ ಕರಾವಳಿ ಜಿಲ್ಲೆಗಳಾದ ಉಡುಪಿ & ದಕ್ಷಿಣ ಕನ್ನಡದಲ್ಲಿ ಭಾರಿ ಭರ್ಜರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗೇ ಉತ್ತರ ಕನ್ನಡದ ಹಲವು ಪ್ರದೇಶಗಳಲ್ಲಿ ಭರ್ಜರಿ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಕರ್ನಾಟಕದ ಯಾವೆಲ್ಲಾ ಜಿಲ್ಲೆಗೆ ಭಾರಿ ಮಳೆ ಭಾಗ್ಯ ಸಿಗಲಿದೆ? ಬನ್ನಿ ತಿಳಿಯೋಣ.

ಈ ಜಿಲ್ಲೆಗಳಿಗೆ ಭರ್ಜರಿ ಮಳೆ!
ಕಾವೇರಿ ನದಿಯ ತವರಾದ ಕೊಡಗು ಜಿಲ್ಲೆ ಸೇರಿ ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು & ಉಡುಪಿ, ಚಾಮರಾಜನಗರ, ಮಂಡ್ಯ, ಮಂಗಳೂರು, ಉತ್ತರ ಕನ್ನಡ, ತುಮಕೂರು & ಹಾಸನ ಜಿಲ್ಲೆಯ ಬಹುತೇಕ ಭಾಗದಲ್ಲಿ ಭರ್ಜರಿ ಮಳೆ ಆಗಲಿದೆ. ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಿಗೆ ಭರ್ಜರಿ ಮಳೆ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದು, ಇದೇ ರೀತಿ ಮುಂದಿನ ಕೆಲ ದಿನಗಳ ಕಾಲ ಭಾರಿ ಮಳೆ ಬೀಳಬಹುದು ಎನ್ನಲಾಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರು ಭರ್ಜರಿ ಮಳೆಯಲ್ಲಿ ಮತ್ತೊಮ್ಮೆ ನೆಂದು ಹೋಗಲಿದೆ.
2023ರಲ್ಲಿ ಕೈಕೊಟ್ಟಿದ್ದ ಮಳೆ!
ಅಂದಹಾಗೆ ಕರ್ನಾಟಕ ರಾಜ್ಯ 2023 ರಲ್ಲಿ ಮಳೆ ಇಲ್ಲದೆ ನರಳಿತ್ತು. ಆದರೆ ಈ ಬಾರಿ, ಮಳೆಗಾಲ ಸಖತ್ ಆಗಿದೆ. ಬಹುಬೇಗ ಮುಂಗಾರು ಮಳೆ ಕರ್ನಾಟಕ ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದು, ಹಾಗೂ ಭರ್ಜರಿ ಮಳೆ ಸುರಿಸುತ್ತಿವೆ. ರೈತರ ಮೊಗದಲ್ಲಿ ಕೂಡ ಮಂದಹಾಸ ಮೂಡಿದೆ. ಮತ್ತೊಂದ್ಕಡೆ ಕರ್ನಾಟಕದ ಡ್ಯಾಂಗಳು ಕೂಡ ಭರ್ಜರಿಯಾಗಿ ತುಂಬುತ್ತಿವೆ. ಈ ಸುದ್ದಿ ಕೂಡ ಸಖತ್ತಾಗಿಯೇ ಖುಷಿ ಕೊಡುತ್ತಿದೆ. ಅಲ್ಲದೆ ಮುಂದಿನ ಕೆಲವು ತಿಂಗಳ ಕಾಲ ಇದೇ ರೀತಿ ಮಳೆಯ ಸಿಂಚನ ಆಗಲಿದ್ದು, ಕರ್ನಾಟಕದಲ್ಲಿ ಈ ಬಾರಿ ಎಲ್ಲಾ ಜಲಾಶಯಗಳು ತುಂಬಿ ತುಳುಕುವುದು ಪಕ್ಕಾ ಅಂತಿದ್ದಾರೆ ಹವಾಮಾನ ಇಲಾಖೆ ತಜ್ಞರು.












Click it and Unblock the Notifications