Rain: ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!

ಮಳೆ ಇಲ್ಲದೆ ಪರದಾಡಿದ್ದ ಕರ್ನಾಟಕದ ಜನರಿಗೆ ಇದೀಗ ಮಳೆರಾಯ ನೆಮ್ಮದಿ ನೀಡಿದ್ದಾನೆ. ಕರ್ನಾಟಕದಲ್ಲಿ ಮಳೆ ಆರ್ಭಟ ಶುರುವಾದ ಕಾರಣ, ರೈತರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಹೀಗಿದ್ದಾಗ, ಮತ್ತೊಮ್ಮೆ ಹವಾಮಾನ ಇಲಾಖೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಬೀಳಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ ಹವಾಮಾನ ಇಲಾಖೆ. ಹಾಗಾದ್ರೆ ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಬರಲಿದೆ? ಬನ್ನಿ ಮಳೆ ಬಗ್ಗೆ ಮಾಹಿತಿ ತಿಳಿಯೋಣ.

ಕರ್ನಾಟಕದ ಜನ ಒಂದೊಂದು ಹನಿ ನೀರಿಗೂ ಪರದಾಡಿದ್ದರು. ಅದ್ರಲ್ಲೂ 3 & 4 ತಿಂಗಳಿಂದ ಕರ್ನಾಟಕದಲ್ಲಿ ಒಂದೇ ಒಂದು ಹನಿ ಕೂಡ ಮಳೆ ಸುರಿದಿರಲಿಲ್ಲ. ಇದು ಭಾರಿ ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು. ಏನು ಮಾಡುವುದು ಅಂತಾ ಕನ್ನಡಿಗರು ಪರದಾಡಿದ್ದು ಮತ್ತು ಒದ್ದಾಡಿದ್ದು ಕೂಡ ಇದೆ. ಹೀಗಿದ್ದಾಗ ಭರ್ಜರಿ ಮಳೆ ಬರಲಿದೆ ಅಂತಾ ಕಾಯುತ್ತಿದ್ದ ಕನ್ನಡಿಗರಿಗೆ ಕೆಲವು ದಿನಗಳಿಂದ ಮಳೆ ಆರ್ಭಟ ನೆಮ್ಮದಿ ತಂದಿದೆ. ಅಲ್ಲದೆ ಮುಂದೆ ಕೂಡ ಇದೇ ರೀತಿ ಭರ್ಜರಿ ಮಳೆ ಬೀಳಿದೆ ಎಂಬ ಮಾಹಿತಿ ಸಿಗುತ್ತಿದೆ.

Heavy Rain Heavy Rain Alert Has Been Given In Karnataka For Next 24 Hours On 14th Of April 2024

ಒಣಗಿ ಹೋದ ತೋಟ & ಹೊಲಗಳಿಗೆ ಈಗ ನೀರು ಬಂದು ಭೂಮಿ ಒದ್ದೆಯಾಗಿದೆ. ರೈತರು ತಮ್ಮ ಬೆಳೆ ಉಳಿಸಿಕೊಂಡ ಖುಷಿಯಲ್ಲಿದ್ದಾರೆ. ಹೀಗಿದ್ದಾಗಲೇ ಮುಂದಿನ 24 ಗಂಟೆಗಳ ಕಾಲ ಮತ್ತೆ ಭಾರಿ ಮಳೆಯಾಗಿ, ಭರ್ಜರಿ ನೀರು ಸಿಗಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಹಾಗಾದರೆ ಎಲ್ಲಿಲ್ಲಿ ಮಳೆ ಬರಲಿದೆ? ಕರ್ನಾಟಕದಲ್ಲಿ ಯಾವ ಯಾವ ಜಿಲ್ಲೆಗೆ ಮಳೆ ಸಿಂಚನ ಸಿಗಲಿದೆ? ಮಳೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ಮುಂದೆ ಓದಿ.

ಮಳೆ.. ಮಳೆ.. ಈ ಜಿಲ್ಲೆಗಳಿಗೆ ಭರ್ಜರಿ ಮಳೆ!

ಇದೀಗ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಕರ್ನಾಟಕದ ಹಲವು ಜಿಲ್ಲೆಗಳ ಜನರಿಗೆ ಮಳೆಯ ಖುಷಿ ಸಿಗಲಿದೆ. ಮಲೆನಾಡು ಭಾಗ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಸೇರಿದಂತೆ, ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ, ಹಾವೇರಿಯಲ್ಲಿ ಭರ್ಜರಿಯಾಗಿ ಮಳೆ ಸುರಿಯಲಿದೆ ಎನ್ನಲಾಗಿದೆ. ಇನ್ನು ಉತ್ತರ ಕರ್ನಾಟಕದ ವಿಜಯಪುರ, ವಿಜಯನಗರ, ಗದಗ, ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ಬೆಳಗಾವಿ, ರಾಯಚೂರು, ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳಲಿದೆ ಎನ್ನಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಆಗಲಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಭರ್ಜರಿ ಮಳೆ!

ಮಳೆಗಾಗಿ ಕಾದು ಕುಳಿತಿದ್ದ ಕನ್ನಡಿಗರಿಗೆ ಮಳೆರಾಯ ಸಿಹಿ ಸುದ್ದಿ ನೀಡಿದ್ದಾನೆ. ಇಂದು ಕೂಡ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯು ಬಿದ್ದಿದೆ. ಮಲೆನಾಡು ಭಾಗ ಚಿಕ್ಕಮಗಳೂರು ಸೇರಿದಂತೆ ಕೊಡಗು ಮತ್ತು ಶಿವಮೊಗ್ಗದಲ್ಲಿ ಭರ್ಜರಿ ಮಳೆ ಬಂದಿದೆ. ಮತ್ತೊಂದು ಕಡೆ ಉತ್ತರ ಕರ್ನಾಟಕದ ಗದಗ, ಬೆಳಗಾವಿ, ಬಾಗಲಕೋಟೆ, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳ ಜನ ಭರ್ಜರಿ ಮಳೆಯಿಂದ ಖುಷಿಯಾಗಿದ್ದಾರೆ. ಅದರಲ್ಲೂ ನಿನ್ನೆ ಶಿವಮೊಗ್ಗದಲ್ಲಿ ಭಾರಿ ಮಳೆಯ ಸಿಂಚನ ಆಗಿದೆ.

ಎಲ್ಲಾ ಕಡೆ ಒಣ ಭೂಮಿ ಕಾಣುತ್ತಿದ್ದು, ಮಳೆ ಇಲ್ಲದೆ ಭೂಮಿ ಸಂಪೂರ್ಣ ಒಣಗಿ ಹೋಗಿ ಜನ ಪರದಾಡುತ್ತಿದ್ದರು. ಇದೆಲ್ಲವೂ ಮನುಷ್ಯ ಮಾಡುತ್ತಿರುವ ಎಡವಟ್ಟು & ಅಹಂಕಾರ ಫಲಿತಾಂಶ ಎನ್ನಬಹುದು. ಹೀಗಾಗಿ ಬೇಸಿಗೆ ಆರಂಭದ ಸಮಯದಲ್ಲೇ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ನೀರೇ ಇಲ್ಲದೆ ಜನರು ಪರದಾಡಿದರು. ಆದರೂ ಕಳೆದ ಕೆಲವು ದಿನಗಳಿಂದ ಮಳೆಯ ಆರ್ಭಟವು ಶುರು ಆಗಿದ್ದು, ಭರ್ಜರಿ ಮಳೆ ಬೀಳುತ್ತಿದೆ. ಹೀಗಾಗಿ ನೀರಿನ ಸಮಸ್ಯೆ ಒಂದಷ್ಟು ಕಡಿಮೆಯು ಆಗುತ್ತಿದೆ.

ಗುಡುಗು ಸಹಿತ ಭರ್ಜರಿ ಮಳೆ

ಈಗ ಹವಾಮಾನ ಇಲಾಖೆ ತಿಳಿಸಿರುವ ಪ್ರಕಾರ ಮುಂದಿನ 24 ಗಂಟೆ ಅವಧಿ ಒಳಗಾಗಿ ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಭಾರಿ ಮಳೆ ಬೀಳಲಿದೆ ಎನ್ನಲಾಗಿದೆ. ಹಾಗೂ ಮುಂದಿನ 24 ಗಂಟೆ ಅವಧಿಯಲ್ಲಿ, ಭರ್ಜರಿ ಮಳೆಯಾಗುತ್ತದೆ ಅಂತಾ ಹೇಳಲಾಗುತ್ತಿದೆ. ಆ ಪ್ರಕಾರ ಗುಡುಗು ಸಹಿತ ಭರ್ಜರಿ ಮಳೆ ಬೀಳುವ ಬಗ್ಗೆ ಇದೀಗ ಮುನ್ಸೂಚನೆ ಸಿಗುತ್ತಿದ್ದು, ಜನರು ಕೂಡ ಬಿಸಿಲಿನ ಬೇಗೆಯಿಂದ ಒಂದಷ್ಟು ರಿಲೀಫ್ ಅನ್ನ ಪಡೆಯುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಜನರು ಬಿಸಿಲಿನ ಬೇಗೆಯಲ್ಲಿ ಬೆಂದು ಹೋಗಿದ್ದರು. ಮಳೆ ಇಲ್ಲದೆ ಪರದಾಡುವ ಪರಿಸ್ಥಿತಿಯಲ್ಲಿ ಭಾರಿ ಮಳೆ ಬಂದು ಒಂದಷ್ಟು ನೆಮ್ಮದಿ ನೀಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+