Rain Alert: ಮಳೆ.. ಮಳೆ.. ಗುಡುಗು ಸಹಿತ ಭರ್ಜರಿ ಮಳೆ ಆರಂಭ!

ಅಂತೂ, ಇಂತೂ ಮಳೆರಾಯ ಕರ್ನಾಟಕದ ಮೇಲೆ ಕರುಣೆ ತೋರಿಸಿದ್ದಾನೆ. ಈ ಹಿನ್ನೆಲೆ, ಕನ್ನಡ ನಾಡಲ್ಲಿ ಮಳೆ ಶುರುವಾಗಿದೆ. ಕರ್ನಾಟಕದ ಮಲೆನಾಡು ಭಾಗದಲ್ಲಿ ಭರ್ಜರಿಯಾಗಿ ಮಳೆ ಬೀಳುತ್ತಿದೆ. ನಿನ್ನೆ ಕೊಡಗು ಜಿಲ್ಲೆಯಲ್ಲಿ ಶುರುವಾಗಿದ್ದ ಭರ್ಜರಿ ಗುಡುಗು ಸಹಿತವಾದ ಮಳೆ ಇದೀಗ ಅಕ್ಕಪಕ್ಕದ ಜಿಲ್ಲೆಗಳಿಗೂ ಹಬ್ಬಿದೆ. ಈ ಮೂಲಕ ಕನ್ನಡಿಗರ ನೀರಿನ ಕಷ್ಟವು ಬಗೆಹರಿಯುವ ಲಕ್ಷಣ ಗೋಚರಿಸಿದೆ. ಹಾಗಾದರೆ ಎಲ್ಲೆಲ್ಲಿ ಮಳೆ ಆರಂಭವಾಗಿದೆ? ಬನ್ನಿ ಆ ಬಗ್ಗೆ ಮಾಹಿತಿ ತಿಳಿಯೋಣ.

ಬಾರೋ ಬಾರೋ ಮಳೆರಾಯ.. ಹುಯ್ಯೋ ಹುಯ್ಯೋ ಮಳೆರಾಯ.. ಅಂತಾ ಕನ್ನಡಿಗರೆಲ್ಲ ಪದ ಹಾಡುತ್ತಿದ್ದರು. ಯಾಕಂದ್ರೆ ಮಳೆ ಇಲ್ಲದೆ ಕನ್ನಡಿಗರು ನರಳಿ ಹೋಗಿದ್ದಾರೆ. ಒಂದು ಕಡೆ ಕೆರೆ, ಕಟ್ಟೆ, ಡ್ಯಾಂ ಸೇರಿ ನೀರಿನ ಮೂಲಗಳಾದ ನದಿಗಳು ಬತ್ತಿವೆ. ಈ ಸಮಯದಲ್ಲೇ ಒಂದು ಭರ್ಜರಿ ಮಳೆ ಬೀಳಲೇಬೇಕಿದೆ. ಇಲ್ಲದೆ ಇದ್ದರೆ ಕನ್ನಡಿಗರ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ. ಹೀಗಾಗಿ ಹಲವು ಕಡೆ ಹೋಮ & ಹವನ ಮಾಡಲಾಗಿತ್ತು. ಮಳೆ ಬೀಳಲಿ ಅಂತಾ ವಿಶೇಷ ಪೂಜೆ ಕೂಡ ಮಾಡಿದ್ದರು ಜನರು. ಇದೀಗ ಕನ್ನಡಿಗರ ಕಷ್ಟಕ್ಕೆ ಮಳೆರಾಯ ಮರುಗಿದಂತೆ ಕಾಣುತ್ತಿದೆ. ಹೀಗಾಗಿ ಮೆಲ್ಲಗೆ ಮಳೆ ಆರಂಭವಾಗಿದೆ.

Heavy Rain Has Been Started In These Part Of The Karnataka

ಬೇಸಿಗೆಯಲ್ಲಿ ಮಳೆ ಅಬ್ಬರ ಶುರು!

ಹವಾಮಾನ ತಜ್ಞರು ನೀಡಿದ್ದ ಮಾಹಿತಿ ಪ್ರಕಾರ ಶಿವಮೊಗ್ಗ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿ ಕೆಲ ಜಿಲ್ಲೆಗಳಲ್ಲಿ ಏಪ್ರಿಲ್​ 1ರ ನಂತರ ಮಳೆಯಾಗಲಿದೆ ಅಂತಾ ಹವಾಮಾನ ತಜ್ಞರಿಂದ ಮುನ್ಸೂಚನೆ ಸಿಕ್ಕಿತ್ತು. ಇದಕ್ಕೆ ಪೂರಕವಾಗಿ ಕೊಡಗು ಸೇರಿದಂತೆ ಚಿಕ್ಕಮಗಳೂರು, ಹುಬ್ಬಳ್ಳಿ & ಧಾರವಾಡ ಸೇರಿ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲೂ ಭಾರಿ ಮಳೆ ಬಿದ್ದಿತ್ತು. ಇಂದು ಕೂಡ, ಕರ್ನಾಟಕದ ಹಲವು ಕಡೆ ಮಳೆಯ ಸಿಂಚನ ಆಗಿದೆ. ಈ ಮೂಲಕ ಕನ್ನಡಿಗರ ನೀರಿನ ಕಷ್ಟ ಸರಿಯಾಗಿ ಹೋಗುತ್ತಾ? ಅನ್ನೋ ನಿರೀಕ್ಷೆ ಕೂಡ ಮೂಡಿದೆ.

ನೀರಿಗಾಗಿ ಎಲ್ಲೆಲ್ಲೂ ಹಾಹಾಕಾರ...

ಮಳೆಯೇ ಇಲ್ಲ, ಮಳೆ ಬಾರದೆ ಭೂಮಿ ಒಣಗಿ ಹೋಗಿದೆ. ಅದರಲ್ಲೂ ಬೆಂಗಳೂರು ಹನಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿಗೆ ತಲುಪಿದೆ. ಹೀಗಿದ್ದಾಗಲೇ ಮಳೆ ಬರಲೇಬೇಕಿದೆ ಇಲ್ಲವಾದರೆ ಪರಿಸ್ಥಿತಿ ಕೈಮೀರಿ ಹೋಗುವ ಎಲ್ಲಾ ಲಕ್ಷಣ ಕಾಣುತ್ತಿದೆ. ಇಂತಹ ಸಮಯದಲ್ಲೇ ಜನಕ್ಕೆ ಗುಡ್ ನ್ಯೂಸ್ ಕೊಟ್ಟಿದ್ದಾನೆ ವರುಣ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮೆಲ್ಲಗೆ ಮಳೆ ಆರಂಭವು ಆಗಿದ್ದು, ಇನ್ನು ಕೆಲವೇ ದಿನದಲ್ಲಿ ಭರ್ಜರಿ ಮಳೆಯಾಗುವ ನಿರೀಕ್ಷೆಯು ಇದೆ. ಇಷ್ಟೆಲ್ಲದರ ನಡುವೆ ಬಿಸಿಲಿನ ಬೇಗೆ ಕೂಡ ಮತ್ತಷ್ಟು ಹೆಚ್ಚಾಗುವ ಆತಂಕ ಆವರಿಸಿದೆ.

Heavy Rain Has Been Started In These Part Of The Karnataka

ಕಳೆದ ವರ್ಷ ಭೀಕರ ಬರ

ಕರ್ನಾಟಕದಲ್ಲಿ 2023ನೇ ವರ್ಷ ಬರಕ್ಕೆ ಸಾಕ್ಷಿಯಾಗಿತ್ತು ಹೀಗಾಗಿ ಕುಡಿವ ನೀರಿಗೂ ಬೇಸಿಗೆಯಲ್ಲಿ ಸಮಸ್ಯೆ ಕಾಡುತ್ತಿದೆ. ಕರ್ನಾಟಕದ ಬಹುತೇಕ ಜಲಾಶಯಗಳು ಈಗ ಬತ್ತಿ ಹೋಗಿವೆ. ಈ ಹಿನ್ನೆಲೆ ಈಗ ಸುರಿಯುವ ಮಳೆ ಕಾವೇರಿ ಕೊಳ್ಳದ ಡ್ಯಾಂ ಭರ್ತಿ ಮಾಡುತ್ತಾ ಎಂಬ ಆಸೆಯು ಮೂಡಿದೆ. ಕೊಡಗು ಜಿಲ್ಲೆಯಲ್ಲಿ ಈಗಾಗಲೇ 2-3 ಭರ್ಜರಿಯಾದ ಮಳೆ ಬಿದ್ದಿದೆ. ಆದರೆ ನದಿಯನ್ನೂ ತುಂಬಿಸುವಷ್ಟು ನೀರು ಬಂದಿಲ್ಲ. ಹೀಗಾಗಿ ಮಳೆಯ ಅಬ್ಬರ ಮತ್ತಷ್ಟು ಜೋರಾಗಬೇಕಿದೆ. ಆ ನಂತರವಷ್ಟೇ ನದಿ ತುಂಬಿ ಹರಿಯುವಷ್ಟು ನೀರು ಬರಲು ಸಾಧ್ಯ. ಹಾಗೇ ವಯನಾಡು ಅಂದ್ರೆ ಕೇರಳದ ವಯನಾಡು ಪ್ರದೇಶದಲ್ಲಿ ಉತ್ತಮವಾಗಿ ಮಳೆ ಬಂದರೆ ಮಾತ್ರ ಕಾವೇರಿಗೆ ನೀರು ಹರಿದು ಬರಲಿದೆ.

ಡ್ಯಾಂಗಳ ಪರಿಸ್ಥಿತಿ ಏನಾಗಿದೆ ಗೊತ್ತಾ?

ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟ ಕಾರಣ ಭಾರಿ ಆತಂಕ ಎದುರಾಗಿತ್ತು. ಹೀಗಾಗಿಯೇ ಡ್ಯಾಂಗಳ ನೀರಿನ ಮಟ್ಟ ಕುಸಿದು ಬಿದ್ದು ರೈತರು ಆತಂಕದಲ್ಲೇ ದಿನದೂಡುವ ಸ್ಥಿತಿ ಇತ್ತು. ಬೇಸಿಗೆ ಬೇಗೆ ಮಧ್ಯೆ ಇದೀಗ ಮಳೆಯ ಅಬ್ಬರ ಮೆಲ್ಲಗೆ ಶುರುವಾಗಿದೆ. ಹವಾಮಾನ ತಜ್ಞರ ಮುನ್ಸೂಚನೆಯ ಪ್ರಕಾರ ಮಳೆ ಬೀಳುವ ನಿರೀಕ್ಷೆ ಇದೆ. ಈಗ ಅಲ್ಲಲ್ಲಿ ಮೋಡಗಳು ಕವಿದು, ಮಳೆಯ ಸೂಚನೆಯೂ ಶುರುವಾಗಿದೆ. ಹೀಗಾಗಿ ಉತ್ತಮವಾಗಿ ಮಳೆ ಬೀಳುತ್ತಿದೆ. ಆದರೆ ಸಾಕಷ್ಟು ಪ್ರಮಾಣದಲ್ಲಿ ಮಳೆ ಬೀಳದ ಕಾರಣ, ಕರ್ನಾಟಕದ ಜಲಾಶಯಗಳ ಪರಿಸ್ಥಿತಿ ಕೈಮೀರಿ ಹೋಗಿದೆ. ಹಾಗೇ ಇನ್ನು ಕೆಲವೇ ದಿನಗಳಲ್ಲಿ ಉತ್ತಮ ಮಳೆ ಬೀಳದೆ ಇದ್ದರೆ ಕರ್ನಾಟಕದ ಬಹುತೇಕ ಡ್ಯಾಂಗಳು ಒಣಗಿ ಹೋಗಲಿವೆ.

ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ!

ಹವಾಮಾನ ಮುನ್ಸೂಚನೆ ಮಾಹಿತಿ ನೀಡುವಂತೆ ಶಿವಮೊಗ್ಗ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 2ನೇ ವಾರದಿಂದಲೇ ಮಳೆಯಾಗಲಿದೆ ಅಂತಾ ಹೇಳಲಾಗಿದೆ. ಇದು ಒಂದು ಕಡೆಯಾದರೆ ಈಗಾಗಲೇ, ಕಾವೇರಿ ನದಿ ತವರು ಕೊಡಗು ಸೇರಿದಂತೆ ಚಿಕ್ಕಮಗಳೂರು, ಹುಬ್ಬಳ್ಳಿ & ಧಾರವಾಡ ಸೇರಿ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲೂ ಮಳೆ ಬಿದ್ದಿದೆ. ನಿನ್ನೆ ಕೂಡ ಕೊಡಗು ಜಿಲ್ಲೆಯಲ್ಲಿ ಭರ್ಜರಿ ಮಳೆ ಬಿದ್ದಿದ್ದು ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೊಂದು ಕಡೆ ಮುಂದಿನ ಕೆಲವೇ ದಿನದಲ್ಲಿ ಭರ್ಜರಿ ಮಳೆ ಶುರುವಾಗುವ ಮುನ್ಸೂಚನೆ ಕೂಡ ಸಿಗುತ್ತಿದೆ.

ಕರ್ನಾಟಕದಲ್ಲಿ ಮಳೆ ಯಾವಾಗ?

ಏಪ್ರಿಲ್ 6 ರಂದು ಅಂದರೆ ಇಂದು ಕೊಡಗು, ಚಿಕ್ಕಮಗಳೂರು, ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಲ್ಲಿ ಹಗುರ ಮಳೆ ಸಾಧ್ಯತೆ ಇದೆ ಎಂದು, ಹವಾಮಾನ ಇಲಾಖೆ ಇದೀಗ ಮಾಹಿತಿ ನೀಡಿದೆ. ಇದರ ಜೊತೆಯಲ್ಲಿ ಏಪ್ರಿಲ್​ 8ಕ್ಕೆ ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರಗಿ, ವಿಜಯಪುರ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಸೇರಿ ಮಂಡ್ಯ, ಶಿವಮೊಗ್ಗ & ಮೈಸೂರು ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಮತ್ತೊಂದ್ಕಡೆ, ರಾಜಧಾನಿ ಬೆಂಗಳೂರಲ್ಲಿ ಏಪ್ರಿಲ್ 9ರ ನಂತರ ಅಥವಾ ಏಪ್ರಿಲ್ 9ರಿಂದಲೇ ಮಳೆಯ ಅಬ್ಬರ ಶುರುವಾಗಲಿದೆ ಎನ್ನಲಾಗಿದೆ.

ಕನ್ನಡಿಗರ ಆಸೆಯನ್ನ ವರುಣ ದೇವ...

ಕರ್ನಾಟಕದಲ್ಲಿ ಮಳೆ ಇಲ್ಲದೆ ಭೀಕರ ಬರಗಾಲ ಎದುರಾದ ಕಾರಣಕ್ಕೆ ರಾಜ್ಯ ಸರ್ಕಾರಕ್ಕೂ ದೊಡ್ಡ ತಲೆನೋವು ಶುರುವಾಗಿದೆ. ಯಾಕಂದ್ರೆ ಪರಿಸ್ಥಿತಿ ಇದೇ ರೀತಿ ಮುಂದುವರಿದು, ಈ ಬರ ಇನ್ನೂ ಹಲವು ತಿಂಗಳು ಮುಂದುವರಿಯುತ್ತೆ ಎಂಬ ಭಯ ಆವರಿಸಿತ್ತು. ಈ ಕಾರಣಕ್ಕೆ ತಕ್ಷಣಕ್ಕೆ ಮಳೆ ಬರಬೇಕು ಅಂತಾ ಹೇಳಿದ್ದರು ತಜ್ಞರು. ಅದೇ ರೀತಿ ಈಗ ಮಳೆಯ ಆಗಮನ ಆಗಿದೆ. ಅದರಲ್ಲೂ ಕಾವೇರಿ ನದಿಯ ತವರು ಕೊಡಗು ಜಿಲ್ಲೆಯಲ್ಲಿ ಭರ್ಜರಿ ಮಳೆ ಬಂದು, ಭೂಮಿ ಕೆಸರಾಗಿದೆ. ಕಾವೇರಿ ತಾಯಿಯ ಒಡಲಿಗೂ ಭರ್ಜರಿ ನೀರು ಸೇರ್ಪಡೆಯಾಗಿದೆ. ಈ ರೀತಿ ಕರ್ನಾಟಕದ ವಿವಿಧ ಪ್ರದೇಶದಲ್ಲೂ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಮಳೆ ಬಂದ್ರೆ ಸಾಕಪ್ಪಾ ಅಂತಿದ್ದಾರೆ ಜನ. ಕನ್ನಡಿಗರ ಆಸೆಯನ್ನ ವರುಣ ದೇವ ಈಡೇರಿಸುತ್ತಾನಾ? ಅನ್ನೋದನ್ನ ಕಾದು ನೋಡಬೇಕಿದೆ.

ಕರ್ನಾಟಕದ ಪರಿಸ್ಥಿತಿ ಈಗ ಹೇಗಿದೆ?

ಮಳೆ ಬರಬೇಕಿದೆ, ಮಳೆ ಬರದೇ ಇದ್ದರೆ ಪರಿಸ್ಥಿತಿ ಕಷ್ಟವಾಗಲಿದೆ. ಅದರಲ್ಲೂ ಕರ್ನಾಟಕದ ಜನರಿಗೆ ಮಳೆ ಬರದೇ ಇದ್ದರೆ ಪರಿಸ್ಥಿತಿ ಕುತ್ತಿಗೆಗೆ ಬಂದು ಕೂರಲಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ದೊಡ್ಡ ದೊಡ್ಡ ನಗರಗಳಲ್ಲಿ ಕುಡಿವ ನೀರಿಗೆ ಸಮಸ್ಯೆ ಈಗ ಕಾಡತೊಡಗಿದೆ. ಮಳೆ ಬರದೇ ಇದ್ದರೆ ಕನ್ನಡಿಗರ ಪರಿಸ್ಥಿತಿ ವ್ಯತಿರಿಕ್ತ ಆಗಲಿದೆ. ಯಾಕಂದ್ರೆ ಇದೀಗ ಕರ್ನಾಟಕದ ಬಹುತೇಕ ನದಿ & ಕೆರೆ ಸೇರಿದಂತೆ ಜಲ ಮೂಲಗಳು ಬತ್ತಿ ಹೋಗಿವೆ. ಹೀಗಾಗಿ ಮಳೆ ಬರಲೇಬೇಕು ದೇವರೆ ಅಂತಾ ಕಾಯುತ್ತಿದ್ದಾರೆ ಕನ್ನಡಿಗರು. ಹೀಗಿದ್ದಾಗಲೇ, ಭರ್ಜರಿ ಸುದ್ದಿಯನ್ನ ಹವಾಮಾನ ಇಲಾಖೆ ಕೊಟ್ಟಿದೆ. ಕೊಡಗು, ಚಿಕ್ಕಮಗಳೂರು ಸೇರಿ ಶಿವಮೊಗ್ಗ, ದಾವಣಗೆರೆ, ಬೆಳಗಾವಿ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬಿದ್ದಿದೆ. ಈಗ ಇಡೀ ಕರ್ನಾಟಕದಲ್ಲಿ ಮಳೆ ಅಬ್ಬರಿಸುತ್ತೆ ಎನ್ನಲಾಗುತ್ತಿದೆ.

ನೀರು ಬೇಕೆಂದು ತಮಿಳುನಾಡು ಕಿರಿಕ್!

ಒಂದ್ಕಡೆ ಕಳೆದ ವರ್ಷ, ಅಂದ್ರೆ 2023ರಲ್ಲಿ ಕರ್ನಾಟಕದಲ್ಲಿ ಸರಿಯಾಗಿ ಮಳೆಯೇ ಬಂದಿಲ್ಲ ಎಂಬ ಕೊರಗು ಕಾಡುತ್ತಿತ್ತು. ಈ ನಡುವೆಯು ತಮಿಳುನಾಡು ಬೇರೆ ನೀರಿಗಾಗಿ ಭಾರಿ ಕಿರಿ, ಕಿರಿ ಮಾಡಿತ್ತು. ಹೀಗಾಗಿ ಕರ್ನಾಟಕ ಕೂಡ ಸಾಕಷ್ಟು ಪ್ರಮಾಣದ ನೀರನ್ನು ತಮಿಳುನಾಡು ರಾಜ್ಯಕ್ಕೆ ಹರಿಸಿತ್ತು. ಇಷ್ಟೆಲ್ಲದರ ಪರಿಣಾಮ ಇದೀಗ ಬೆಂಗಳೂರಿಗೂ ಮುಂದಿನ ದಿನಗಳಲ್ಲಿ, ಕುಡಿಯುವ ನೀರಿಗೆ ಸಂಕಷ್ಟ ಎದುರಾಗುತ್ತಾ? ಎಂಬ ಪ್ರಶ್ನೆ ಕಾಡುತ್ತಿದೆ. ಆದ್ರೆ ಕರ್ನಾಟಕದ ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ 3 ತಿಂಗಳಿಗೆ ಆಗುವಷ್ಟು ನೀರು ಇದೆ ಎಂದು ಸರ್ಕಾರದಿಂದ ಮಾಹಿತಿ ಸಿಗುತ್ತಿದೆ. ಹೀಗಾಗಿ ಬೆಂಗಳೂರಿಗರು ಸೇರಿದಂತೆ ಹಳೇ ಮೈಸೂರು ಭಾಗದ ಜನರು ಇದರಿಂದ ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟ!

ಕರ್ನಾಟಕದ ಕರಾವಳಿ ಜಿಲ್ಲೆ ಸೇರಿ ಬೆಂಗಳೂರು ನಗರ, ಬೆಂಗಳೂರು ಗ್ರಾಂ. ರಾಮನಗರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು & ಹಾಸನ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಸಿಂಚನ ಖುಷಿ ಕೊಟ್ಟಿದೆ. ಹಾಗೇ ಇಂದು ಕೂಡ ಭರ್ಜರಿ ಮಳೆ ಬಿದ್ದಿದ್ದು, ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಬೀಳುತ್ತೆ ಎಂಬ ಮುನ್ಸೂಚನೆ ನೀಡಲಾಗಿದೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಮಳೆ ಬೀಳಲಿದೆ ಎನ್ನಲಾಗಿದೆ. ಹೀಗಾಗಿ ಜನರು ಕೂಡ ಫುಲ್ ಖುಷ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+