ಭಾರೀ ಮಳೆ, ಅತಿವೃಷ್ಟಿಗೆ ಸಂಪೂರ್ಣ ಬೆಳೆ ನಾಶ, ನಮಗೆ ವಿಷ ಕೊಡಿ: ರೈತರ ಆಕ್ರೋಶ
ಹುಬ್ಬಳ್ಳಿ, ಅಕ್ಟೋಬರ್ 28: ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಗುಂಡೇನಕಟ್ಟಿ ಗ್ರಾಮದ ರೈತರು ಬೆಳೆ ಹಾನಿಯಿಂದ ಸಾಕಷ್ಟು ತೊಂದರೆಗೆ ಈಡಾಗಿದ್ದಾರೆ. ಗ್ರಾಮದ ಬಸವರಾಜ ಯೋಗಪ್ಪನವರ,ಸೋಮರಾಯಪ್ಪ ಯೋಗಪ್ಪನವರ್ ಸೇರಿದಂತೆ ಇಡೀ ಜಿಲ್ಲೆಯ ರೈತಾಪಿ ವರ್ಗ ತೀವ್ರ ಸಂಕಷ್ಟದಲ್ಲಿದ್ದಾರೆ.
ಅತಿವೃಷ್ಟಿಯಿಂದ ಅವರು ತಮ್ಮ ಮೂರು ಎಕರೆ ಜಮೀನಲ್ಲಿ ಬೆಳೆದಿದ್ದ ಹತ್ತಿ ಮತ್ತು ಮೆಣಸಿನಕಾಯಿ ಬೆಳೆ ಸಂಪೂರ್ಣವಾಗಿ ನಾಶವಾಗಿವೆ. ಅವರ ಕುಟುಂಬಸ್ಥರು ಒಣಗಿ ಸುಕ್ಕುಗಟ್ಟಿದಂತಿರುವ ಮೆಣಸಿನಕಾಯಿ ಬೆಳೆ ಕಿತ್ತುಹಾಕುತ್ತಿರುವುದನ್ನು ನೋಡಬಹುದು.

ಅತಿವೃಷ್ಟಿಯ ಹೊಡೆತಕ್ಕೆ ತತ್ತರಿಸಿ, ಅನಾವೃಷ್ಟಿಯ ಭಯದಲ್ಲೇ ದಿನ ದೂಡುತ್ತಿರುವ ಜಿಲ್ಲೆಯ ರೈತರಿಗೆ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ್ದ ಅಲ್ಪ ಪರಿಹಾರವೂ ಮರೀಚಿಕೆಯಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಪರದಾಡುವಂತಾಗಿದೆ. ಆರಂಭದಲ್ಲೇ ನಿಖರ ಸರ್ವೇ ನಡೆಸಿ ಹಾನಿಯ ಅಂದಾಜು ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ. ಬಾರಿ ಸರ್ವೇ ನಡೆಸಿ ಹಂತ-ಹಂತವಾಗಿ ವರದಿ ನೀಡಿದ್ದೇ ಸಮಸ್ಯೆ ಉಲ್ಭಣಿಸಲು ಕಾರಣವಾಗಿದೆ.
ಧಾರವಾಡದ ರೈತರ ಪಹಣಿಯಲ್ಲಿ 'ವಕ್ಪ್ ' ಹೆಸರು ದಾಖಲು
ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ವಕ್ಸ್ ಕಾಯಿದೆಯ ಬಿಸಿ ಧಾರವಾಡ ತಾಲೂಕಿನ
ಉಪ್ಪಿನಬೆಟಗೇರಿ ಗ್ರಾಮದ ಕೆಲ ರೈತರಿಗೂ ತಟ್ಟಿದ್ದು, ರೈತರ ಜಮೀನಿನ ಪಹಣಿಯಲ್ಲಿ ಕೆಲ ವರ್ಷಗಳ ಹಿಂದೆಯೇ ವಕ್ಸ್ ಹೆಸರು ದಾಖಲಾಗಿದ್ದು ಬೆಳಕಿಗೆ ಬಂದಿದೆ.
ನೂರಾರು ವರ್ಷಗಳಿಂದ ಪಿತ್ರಾರ್ಜಿತವಾಗಿ ಬಂದಿದ್ದ ರೈತರ ಉಳುಮೆಯ ಹೊಲದ ಪಹಣಿಯ 11ನೇ ಇತರಹಕ್ಕುಗಳು ಮತ್ತು ಋಣಗಳು ಕಾಲಂನಲ್ಲಿ 'ಸದರ ಜಮೀನು ವಕ್ಸ್ ಆಸ್ತಿಗೆ ಒಳಪಟ್ಟಿರುತ್ತದೆ' ಅಂತಾ ದಾಖಲಾಗಿದೆ. ತಮ್ಮ ಪಿತ್ರಾರ್ಜಿತ ಆಸ್ತಿಯಾದ ಜಮೀನಿನ ಪಹಣಿಯಲ್ಲಿ 'ವಕ್ಸ್' ಹೆಸರು ದಾಖಲಾಗಿರುವುದು ಸಂಬಂಧಪಟ್ಟ ರೈತನಿಗೆ ದಿಗಿಲು ಹುಟ್ಟಿಸಿದೆ. ಮುಂದೇನು ಮಾಡಬೇಕು ಎಂದು ತೋಚದೇ ತೊಳಲಾಡುತ್ತಿದ್ದಾರೆ.
ವಕ್ಪ್ ಅಂದರೆ ಏನು ಅದು ಹೇಗೆ ಇರುತ್ತದೆ ಎಲ್ಲಿ ಇರುವುದು ಅದುವಕ್ ನಮ್ಮ ಜಮೀನಿನ ಪಹಣಿಯಲ್ಲಿ ಅದರ ಹೆಸರೇಕಿದೆ ಎಂದು ಮುಗ್ಧ ರೈತರ ತಿಳಿದವರನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಏನಿದು ಪ್ರಕರಣ?
ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಸರ್ವೆ ನಂಬರ್ 20 ರಲ್ಲಿ ರೈತರಾದ ಮರಬಸಪ್ಪ ತಂದೆ ಮಲ್ಲಪ್ಪ ಮಸೂತಿ ಹಾಗೂ ಶ್ರೀಶೈಲ ತಂದೆ ಮಲ್ಲಪ್ಪ ಮಸೂತಿ ಇವರ ಜಮೀನಿನ 3 ಎಕರೆ 13 ಗುಂಟೆಯ ಜಂಟಿ ಪಹಣಿಯಲ್ಲಿ ಹಾಗೂ ಸರ್ವೆ ನಂಬರ್ 141 ರ ಹಿಸ್ಸಾ 2 ರಲ್ಲಿ ಜವಳಗಿ ಬಾಳಪ್ಪ ರುದ್ರಪ್ಪ ಇವರ ಹೆಸರಿನ 26 ಗುಂಟೆ, ಇದೇ ಸರ್ವೆ ನಂಬರಿನ ಹಿಸ್ಪಾ 3 ರಲ್ಲಿ ಜವಳಗಿ ಸರೋಜಾ ಕೋಂ. ಕರಬಸಪ್ಪ ಇವರ ಹೆಸರಿನ 2 ಎಕರೆ 12 ಗುಂಟೆ ಮತ್ತು ಹಿಸ್ಪಾ 4 ರಲ್ಲಿ ಜವಳಗಿ ಗಂಗಪ್ಪ ರುದ್ರಪ್ಪ ಇವರ ಹೆಸರಿನ 3 ಎಕರೆ 21 ಗುಂಟೆ ಜಮೀನಿನ ಪಹಣಿಯಲ್ಲಿ ವಕ್ಸ್ ಆಸ್ತಿಗೆ ಒಳಪಟ್ಟಿರುವುದು ದಾಖಲಾಗಿರುವುದು ರೈತರ ಗಮನಕ್ಕೆ ಬಂದಿದೆ.
ಈ ಅವಾಂತರವನ್ನು ಸರಿಪಡಿಸುವ ಕುರಿತು ನಾನು ಈಗಾಗಲೇ ತಹಶೀಲ್ದಾರ ಅವರಿಗೆ ಹಾಗೂ ಧಾರವಾಡ ಜಿಲ್ಲಾ ವಕ್ಸ್ ಅಧಿಕಾರಿಗಳಿಗೆ ಲಿಖಿತವಾಗಿ ದಾಖಲೆ ಸಮೇತ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ತಹಶೀಲ್ದಾರ ಕಚೇರಿ ಸಂಪರ್ಕಿಸಿದರೆ ವಕ್ಸ್ ಕಚೇರಿಯಲ್ಲಿ ಕೇಳಿರಿ ಅಂತಾರೆ. ಜಿಲ್ಲಾ ವಕ್ಸ್ ಕಚೇರಿ ಸಂಪರ್ಕಿಸಿದರೆ ತಹಶೀಲ್ದಾರ ಕಚೇರಿಯಲ್ಲಿ ವಿಚಾರಿಸಿರಿ ಅಂತಾ ನನ್ನನ್ನು ಅಲೆದಾಡಿಸುತ್ತಿದ್ದಾರೆ.
ತಲೆ ತಲಾಂತರದಿಂದ ಬಂದಿರುವ ನಮ್ಮ ಜಮೀನಿನ ಪಹಣಿಯಲ್ಲಿ ಈಗ ಏಕಾಏಕಿ ವಕ್ ಹೆಸರು ನಮೂದಾದರೆ ಮುಂದೆ ನಾವು ಏನು ಮಾಡಬೇಕೆಂದು ತಿಳಿಯದಾಗಿದೆ ಎಂದು ರೈತ ಮರಬಸಪ್ಪ (ಮನು) ಮಸೂತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications