Heavy Rain: ಮಳೆ.. ಮಳೆ.. ಮುಂದಿನ 48 ಗಂಟೆ ಭರ್ಜರಿ ಮುಂಗಾರು ಮಳೆ!
ಮುಂಗಾರು ಮಳೆ ಅಬ್ಬರ ಮತ್ತಷ್ಟು ಜೋರಾಗುತ್ತಿದೆ, ಪರಿಣಾಮ ಭಾರಿ ಮಳೆಗೆ ಕರ್ನಾಟಕ ತತ್ತರಿಸಿ ಹೋಗುತ್ತಿದೆ. ಅದರಲ್ಲೂ ಕರ್ನಾಟಕದ ಕರಾವಳಿ ಜಿಲ್ಲೆಗಳು & ಮಲೆನಾಡು ಭಾಗ ಇದೀಗ ಮುಂಗಾರು ಮಳೆಗೆ ಅಕ್ಷರಶಃ ತತ್ತರಿಸಿ ಹೋಗಿವೆ ಎನ್ನಬಹುದು. ಹೀಗಿದ್ದಾಗಲೇ 48 ಗಂಟೆ ಅವಧಿಯಲ್ಲಿ ಕರ್ನಾಟಕದ ಈ ಪ್ರದೇಶಗಳಿಗೆ ಭಾರಿ ಮಳೆ ಬಗ್ಗೆ ಮತ್ತೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವ ಯಾವ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರಿಸಲಿದೆ? ಆ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ.
ಕರ್ನಾಟಕಕ್ಕೆ ಮುಂಗಾರು ಮಳೆ ಮುತ್ತಿಗೆ ಹಾಕಿ ಕರಾವಳಿ & ಮಲೆನಾಡು ಭಾಗ ಇದೀಗ ತೊಯ್ದು ಹೋಗಿದೆ. ಕಳೆದ ಹಲವು ದಿನಗಳಿಂದಲು ನಿರಂತರವಾಗಿ ಮಳೆ ಬೀಳುತ್ತಿರುವಾಗ ಜನರು ಕೂಡ ಕಂಗಾಲಾಗಿದ್ದಾರೆ. ಜನ ಜೀವನ ಮಳೆಗೆ ಅಸ್ತವ್ಯಸ್ತವಾಗಿ ಹೊಗಿದ್ದು, ಪರಿಸ್ಥಿತಿ ಹೀಗಿದ್ದಾಗಲೇ ಮತ್ತಷ್ಟು ಹೆಚ್ಚಿನ ಮಳೆ ಬೀಳುವ ಬಗ್ಗೆ ಎಚ್ಚರಿಕೆ ಸಂದೇಶ ರವಾನೆ ಆಗಿದೆ. ಹಾಗಾದ್ರೆ ಈಗ ಮತ್ತೆ ಮಳೆ ಹೆಚ್ಚಾಗಲಿರುವ ಜಿಲ್ಲೆಗಳು ಯಾವುವು? ಇನ್ನೂ ಎಷ್ಟು ದಿನಗಳ ಕಾಲ ಹೀಗೆಯೆ ಮುಂಗಾರು ಮಳೆ ಬೀಳಲಿದೆ? ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?
ಹವಾಮಾನ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಈಗ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ & ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭರ್ಜರಿ ಮಳೆಯ ಆಗಮನ ಆಗಲಿದೆ. ಹಾಗೇ ಇದರ ಜೊತೆಗೆ ಮಲೆನಾಡು ಜಿಲ್ಲೆ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಕೂಡ ಮುಂಗಾರು ಮಳೆ ಅಬ್ಬರಿಸಲಿದೆ. ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮತ್ತಷ್ಟು ಬಿರುಸು ಪಡೆದಿದ್ದು, ಬಯಲು ಸೀಮೆ ಭಾಗದಲ್ಲೂ ಭರ್ಜರಿ ಮಳೆಯಾಗುವ ಮುನ್ಸೂಚನೆ ಸಿಗುತ್ತಿದೆ. ಹಾಗಾದ್ರೆ ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕದ ಜಿಲ್ಲೆಗಳ ಪಾಡು ಏನು? ಬನ್ನಿ ಇದರ ಬಗ್ಗೆ ಇಂಚಿಂಚು ಮಾಹಿತಿ ತಿಳಿಯೋಣ.
ಬೆಂಗಳೂರಲ್ಲೂ ಭರ್ಜರಿ ಮಳೆ!
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು ಸೇರಿದಂತೆ ರಾಮನಗರ ಹಾಗೂ ಚಾಮರಾಜನಗರ, ತುಮಕೂರು, ದಾವಣಗೆರೆ ಜಿಲ್ಲೆ, ಹಾಸನ, ಚಿಕ್ಕಮಗಳೂರಿನಲ್ಲಿ ಭರ್ಜರಿ ಮಳೆ ಬೀಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ ಹಾಗೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲೂ ಮಳೆರಾಯ ಅಬ್ಬರಿಸುವುದು ಗ್ಯಾರಂಟಿ. ಕಲಬುರಗಿ, ಕೊಪ್ಪಳ, ಯಾದಗಿರಿ, ಬೀದರ್ ಸೇರಿ ಬಾಗಲಕೋಟೆ, ರಾಯಚೂರಲ್ಲಿ ಕೂಡ ಮುಂಗಾರು ಮಳೆ ಅಲರ್ಟ್ ಆಗುವ ಸೂಚನೆಯು ಸಿಗುತ್ತಿದೆ. ಹೀಗಾಗಿ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಿಗೂ ಮುಂಗಾರು ಮಳೆ ಮುತ್ತಿಗೆ ಹಾಕಲಿದೆ ಎನ್ನಬಹುದು.












Click it and Unblock the Notifications