Rain Alert: ವಾಯುಭಾರ ಕುಸಿತ, ಇಂದಿನಿಂದ ಕರ್ನಾಟಕದ ಈ ಜಿಲ್ಲೆಗಳಿಗೆ ಭರ್ಜರಿ ಮಳೆ!
ಮಳೆ ಆರ್ಭಟ ಮತ್ತೆ ಶುರುವಾಗಿದೆ, ಜನರಿಗೆ ಕೂಡ ಇದರಿಂದ ಭಾರಿ ಟೆನ್ಷನ್ ಎದುರಾಗಿದೆ. ಇನ್ನೇನು ಚಳಿಗಾಲದ ಆರಂಭದಲ್ಲಿ ಮಳೆರಾಯ ಈ ರೀತಿ ಕಾಟ ಕೊಡುತ್ತಿರುವ ಕಾರಣಕ್ಕೆ, ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಕೂಡ ಎದುರಾಗಿದೆ. ಮತ್ತೊಂದು ಕಡೆ ರೈತರಿಗೂ ತಾವು ಕಷ್ಟಪಟ್ಟು ಬೆಳೆದ ಬೆಳೆ ಉಳಿಸಿಕೊಳ್ಳುವ ಅನಿವಾರ್ಯತೆ ನಿರ್ಮಾಣ ಆಗಿದೆ. ಹಾಗಿದ್ರೆ ಇದೀಗ ನೀಡಿರುವ ಅಲರ್ಟ್ ಪ್ರಕಾರ ಕರ್ನಾಟಕದ ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಲಿದೆ? ಬನ್ನಿ ತಿಳಿಯೋಣ.
ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ... ಹೀಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುಂಗಾರು ಮಳೆ ಸಿನಿಮಾದ ಹಾಡಿನ ಬದಲು, ಇದೀಗ ಕನ್ನಡ ನಾಡಿನ ಪ್ರಜೆಗಳು ಹಿಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ... ಅಂತಾ ಹಾಡುವಂತೆ ಆಗಿದೆ. ಈಗ ಯಾಕಪ್ಪಾ ಈ ಮಾತು ಅಂದ್ರೆ, ಹಿಂಗಾರು ಮಳೆ ಕಾರಣಕ್ಕೆ ಇದೀಗ ಕನ್ನಡ ನಾಡಿನ ಜನರು ವಿಲವಿಲ ಒದ್ದಾಡಿ ಹೋಗಿದ್ದಾರೆ. ಹಾಗಾದ್ರೆ ಭಾರಿ ಮಳೆ ಬೀಳಲಿರುವ ಕರ್ನಾಟಕದ ಜಿಲ್ಲೆ & ಪ್ರದೇಶಗಳು ಯಾವುವು? ಮುಂದೆ ಓದಿ.

ಈ ಜಿಲ್ಲೆಗಳಲ್ಲಿ ಭಾರಿ ಭರ್ಜರಿ ಮಳೆ!
ಮಳೆ.. ಮಳೆ.. ಅಂದಹಾಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದು ಮಳೆಯ ಅಬ್ಬರವು ಶುರುವಾಗಲಿದೆ. ಈಗಾಗಲೇ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮಳೆ ಅಬ್ಬರಿಸುತ್ತಿದೆ. ಈ ಮಧ್ಯೆ ರಾಜಧಾನಿ ಬೆಂಗಳೂರು ಬಿಟ್ಟು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲೂ ಮಳೆರಾಯನ ಅಬ್ಬರ ಇರಲಿದೆ.
ಇದರ ಜೊತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ, ಚಿಕ್ಕಬಳ್ಳಾಪುರ, ಕೋಲಾರ ಭಾಗವು ಸೇರಿದಂತೆ ಚಿತ್ರದುರ್ಗ, ದಾವಣಗೆರೆ ಭಾಗದಲ್ಲಿ ಕೂಡ ಮಳೆ ಶುರುವಾಗಲಿದೆ. ಅದರಲ್ಲೂ ಮೈಸೂರು, ಮಂಡ್ಯ, ರಾಮನಗರ ಸುತ್ತಮುತ್ತ ಭಾರಿ ಮಳೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಹಾಗೇ ಮತ್ತೊಂದು ಕಡೆ ಚಾಮರಾಜನಗರ ಜಿಲ್ಲೆ ಸೇರಿ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಿಗೆ ಇದೀಗ ಹಳದಿ ಎಚ್ಚರಿಕೆ ಅಂದರೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಬೆಳಗ್ಗೆಯೇ ಮಳೆ ಅಬ್ಬರ!
ರಾಜಧಾನಿ ಬೆಂಗಳೂರು ನಗರದಲ್ಲಿ ಮಳೆರಾಯ ತನ್ನ ಅಬ್ಬರ ತೋರಿಸುತ್ತಿದ್ದು. ಬೆಳ್ಳಂಬೆಳಗ್ಗೆ ಮೋಡ ಕವಿದ ವಾತಾವರಣದ ಜೊತೆಗೆ ತುಂತುರು ಮಳೆ ಕೂಡ ಶುರುವಾಗಿದೆ. ಹೀಗಾಗಿಯೇ ಕೆಲಸಕ್ಕೆ ಹೋಗಬೇಕಾದ ಜನರು ಪರದಾಡುತ್ತಿದ್ದಾರೆ. ಹಾಗೇ ಇತರ ಜಿಲ್ಲೆಗಳಲ್ಲಿ ಕೂಡ ಹೀಗೆ ಮಳೆ ಅಬ್ಬರಿಸುವ ಮುನ್ನೆಚ್ಚರಿಕೆ ನೀಡಲಾಗಿದ್ದು, ಈಗಾಗಲೇ ಕಟಾವು ಮಾಡುವ ಹಂತಕ್ಕೆ ಬಂದಿರುವ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.












Click it and Unblock the Notifications