Rain Alert: ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಭರ್ಜರಿ ಮಳೆ!

ಮಳೆ ಬಾರದೆ ಭೂಮಿ ಬಾಯಿ ಬಿಟ್ಟಿದೆ, ದೇಶದ ಬಹುತೇಕ ರಾಜ್ಯಗಳಲ್ಲಿ ಈ ಬಾರಿ ಮಳೆಯ ಕೊರತೆ ದೊಡ್ಡ ಸಮಸ್ಯೆ ತಂದೊಡ್ಡಿದೆ. ಹೀಗಿದ್ದಾಗ ದಿಢೀರ್ ವರುಣ ದೇವ ಕರ್ನಾಟಕವು ಸೇರಿದಂತೆ, ಭಾರತದ ಹಲವು ರಾಜ್ಯದಲ್ಲಿ ಮಳೆ ಸುರಿಸುವ ಮುನ್ಸೂಚನೆ ನೀಡಿದ್ದಾರೆ. ಈ ಮೂಲಕ ಬೇಸಿಗೆ ಆರಂಭಕ್ಕೆ ಮೊದಲೇ ಮಳೆಯ ಮುನ್ಸೂಚನೆ ಸಿಕ್ಕಂತಾಗಿದೆ. ಹಾಗಾದರೆ, ಇದೀಗ ಮಳೆಯ ಮುನ್ಸೂಚನೆ ಸಿಕ್ಕಿರುವ ಪ್ರದೇಶಗಳು ಯಾವುವು? ಬನ್ನಿ ತಿಳಿಯೋಣ.

'ಮುಂಗಾರು ಮಳೆ' ಅತ್ಯಗತ್ಯ, ಭಾರತಕ್ಕೆ ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಿಗೆ ಈ ಮಳೆ ಅಮೃತಕ್ಕೆ ಸಮಾನ. ಬಿರು ಬೇಸಿಗೆಯಿಂದ ನರಳಿದ ಜಾಗಕ್ಕೆ ಈ ಮಳೆ ಮತ್ತೆ ಜೀವಕಳೆ ನೀಡುತ್ತೆ, ದಕ್ಷಿಣ ಭಾರತದಲ್ಲಿ ನಿತ್ಯ ಹರಿದ್ವರ್ಣ ಕಾಡುಗಳಿಗು ಈ ಮಳೆ ಆಧಾರ. ಆದರೆ ಈ ಬಾರಿ ಅಂದ್ರೆ 2023 ರ ಮಳೆಗಾಲದಲ್ಲಿ ಮುಂಗಾರು ಮಳೆ ಕೈಕೊಟ್ಟಿತ್ತು, ಕೊನೆಗೆ ಹಿಂಗಾರು ಮಳೆಯಾದ್ರೂ ಕೈಹಿಡಿಯುತ್ತೆ ಅಂತಾ ಜನರು & ರೈತರು ಕಾಯುತ್ತಿದ್ದರು. ಆದರೆ ಎಲ್ಲರಿಗೂ ಕೈಕೊಟ್ಟಿದ್ದ ಮುಂಗಾರು & ಹಿಂಗಾರು ಮಳೆ ಜನರನ್ನ ಸಂಕಷ್ಟಕ್ಕೆ ದೂಡಿವೆ. ಇದೇ ಸಮಯದಲ್ಲಿ ಈಗ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದ್ದು, ಈ ಸಮಯದಲ್ಲೇ ಮಳೆ ಬೀಳುವ ಸೂಚನೆ ಸಿಕ್ಕಿದೆ!

Heavy Rain Alert Has Been Issued For 24 02 2024 In These Areas

ಮುಂದಿನ 24 ಗಂಟೆಯಲ್ಲಿ ಮಳೆ!

ಈಗ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಇಂದು ಉತ್ತರ ಭಾರತದ ಹಲವು ಕಡೆ ಭಾರಿ ಮಳೆ ಬಿದ್ದಿದೆ. ಹಾಗೇ ನಾಳೆಗೆ ಅಂದ್ರೆ ಫೆಬ್ರವರಿ 28ರಂದು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶ, ಪೂರ್ವ ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯಗಳಲ್ಲಿ ಕೂಡ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ಅದರಲ್ಲೂ ಈ ಪ್ರದೇಶದಲ್ಲಿ ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಇನ್ನುಳಿದಂತೆ ಅರುಣಾಚಲ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಲಡಾಖ್, ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶವು ಸೇರಿ ದಕ್ಷಿಣ ಮಧ್ಯಪ್ರದೇಶ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಸಾದಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹಾಗಾದ್ರೆ ಕರ್ನಾಟಕದಲ್ಲೂ ಮಳೆ ಬೀಳುತ್ತಾ? ಹೌದು ಕರ್ನಾಟಕದಲ್ಲೂ ಮಳೆ ಬೀಳುತ್ತೆ, ಮಾಹಿತಿ ಮುಂದೆ ಇದೆ ಓದಿ.

ಕರ್ನಾಟಕದಲ್ಲಿ ಯಾವಾಗ ಮಳೆ?

ಈಗಿನ ಮಾಹಿತಿ ಪ್ರಕಾರ ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ಅದ್ರಲ್ಲೂ ಬೆಂಗಳೂರಿನಲ್ಲಿ 31 ಡಿಗ್ರಿ ಸೆಲ್ಸಿಯಸ್ ಮೀರಿ, ತಾಪಮಾನ ಹೆಚ್ಚಾಗುತ್ತಿದೆ. ಇಷ್ಟು ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಹೀಗಾಗಿ ಭಯವೂ ಶುರುವಾಗಿದೆ. ಬೆಂಗಳೂರು ಸೇರಿ ರಾಜ್ಯದಲ್ಲಿ ತಾಪಮಾನ ಹೆಚ್ಚಾಗುತ್ತಲೇ ಇದ್ದು, ಕರ್ನಾಟಕದಲ್ಲಿ ತಾಪಮಾನ ಈ ಬಾರಿ ವಾಡಿಕೆಗಿಂತಲೂ 2 ರಿಂದ 3 ಡಿಗ್ರಿ ಸೆಲ್ಸಿಯಸ್‍ ಹೆಚ್ಚಾಗಿದೆ ಅಂತಿವೆ ಅಂಕಿ & ಅಂಶಗಳು.

Heavy Rain Alert Has Been Issued For 24 02 2024 In These Areas

ಇನ್ನು ಇಂತಹ ಆತಂಕದ ಸ್ಥಿತಿಯಲ್ಲಿ ಮಾರ್ಚ್ ಮೊದಲ ವಾರದಲ್ಲಿ ಮಳೆ ಬರುತ್ತದೆ ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ. ಈ ಮೂಲಕ ಕನ್ನಡ ನಾಡಿನ ಜನರಿಗೆ ಗುಡ್ ನ್ಯೂಸ್ ಸಿಗುವ ನಿರೀಕ್ಷೆ ಇದೆ. ಹಾಗಾದ್ರೆ ಎಲ್ಲೆಲ್ಲಿ ಮಳೆಯಾಗುತ್ತೆ? ಕರ್ನಾಟಕದ ಯಾವ ಯಾವ ಜಿಲ್ಲೆಗೆ ಗುಡ್ ನ್ಯೂಸ್ ಸಿಗಲಿದೆ? ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.

ಮಳೆ ಬೀಳುವ ಜಿಲ್ಲೆಗಳು ಇವು

ಇದೀಗ ಹವಾಮಾನ ಇಲಾಖೆ ತಜ್ಞರ ಪ್ರಕಾರ ಕರ್ನಾಟಕದಲ್ಲಿ ವರುಣ ದೇವ ಕರುಣೆಯನ್ನ ತೋರಿಸಲಿದ್ದು, ಮುಂದಿನ ಕೆಲವೇ ದಿನದಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ. ಅದರಲ್ಲೂ, ಮಾರ್ಚ್‍ ಮೊದಲನೇ ವಾರದಲ್ಲಿ ದಾವಣಗೆರೆ, ಬೆಂಗಳೂರು, ಮೈಸೂರು, ಕೊಡಗು ಮತ್ತು ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಬರಲಿದೆ ಅಂತ ಈಗ ಹವಾಮಾನ ಇಲಾಖೆ ಮಾಹಿತಿಯನ್ನ ನೀಡಿದೆ. ಈ ಮೂಲಕ ಬೇಸಿಗೆ ಸಮಯದಲ್ಲಿ ರೈತರು & ಜನರಿಗೆ ಒಂದಷ್ಟು ರಿಲೀಫ್ ಸಿಗುವ ನಿರೀಕ್ಷೆ ಇದೆ.

ಬೇಸಿಗೆ ಕೊತ ಕೊತ ಕುದಿಯುತ್ತಿದೆ, ಅದರಲ್ಲೂ ಕಳೆದ ವರ್ಷ ಮಳೆಯ ಕೊರತೆ ಎದುರಾದ ಕಾರಣ, ಈಗ ಕುಡಿಯುವ ನೀರಿಗೆ ಕೂಡ ಬರ ಬಂದಿದೆ. ಗ್ರಾಮೀಣ ಭಾಗದಲ್ಲಿ ಅಂದರೆ, ಹಳ್ಳಿ ಜನರಿಗೆ ನೀರು ತುಂಬಿಸುವುದೇ ಸಾಹಸ. ಪರಿಸ್ಥಿತಿ ಹೀಗಿದ್ದಾಗ ಹವಾಮಾನ ಇಲಾಖೆಯ ಕಡೆಯಿಂದ ಭರ್ಜರಿ ಸುದ್ದಿ ಸಿಕ್ಕಿದೆ. ಮುಂದಿನ ಕೆಲವು ದಿನಗಳ ಕಾಲ ಭರ್ಜರಿ ಮಳೆ ಬಿದ್ದು, ಭೂಮಿ ತಂಪಾಗುವ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಜನರು ಹಾಗೂ ಅನ್ನದಾತ ರೈತರು ಈ ಸುದ್ದಿಯಿಂದ ನಿಟ್ಟುಸಿರನ್ನ ಈಗ ಬಿಡುತ್ತಿದ್ದಾರೆ. ಅಲ್ಲದೆ ಒಣಗುತ್ತಿರುವ ಬೆಳೆ ಉಳಿಸಿಕೊಳ್ಳುವ ಆತ್ಮವಿಶ್ವಾಸ ಹೊಂದಿದ್ದಾರೆ ನಮ್ಮ ರಾಜ್ಯದ ರೈತರು, ಹೀಗಾಗಿ ವರುಣ ಈಗಲಾದರೂ ಸ್ವಲ್ಪ ಕರುಣೆ ತೋರಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+