Heavy Rain: ಭಾರಿ ಮಳೆ ಮುನ್ಸೂಚನೆ, ವಾರದ ಕೊನೆಯ ತನಕ ಗುಡುಗು & ಸಿಡಿಲು ಗ್ಯಾರಂಟಿ!
ಚಳಿಗಾಲ ಮುಗಿದು ಮೆಲ್ಲಗೆ ಬೇಸಿಗೆ ಎಂಟ್ರಿ ಆಗ್ತಾ ಇದೆ, ಎಲ್ಲೆಲ್ಲೂ ಬಿಸಿಲಿನ ಝಳ ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಈ ಬಾರಿ ಭೀಕರ ಬರ ಎದುರಾದ ಕಾರಣಕ್ಕೆ, ಘೋರ ಬರ ಪರಿಸ್ಥಿತಿ ಬಂದಿದೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಭಾಗ ಸೇರಿ ಮಲೆನಾಡು ಕರ್ನಾಟಕದಲ್ಲೂ ನೀರು ಇಲ್ಲದೆ ಜನ ಪರದಾಡುತ್ತಿದ್ದಾರೆ. ಹೀಗಿದ್ದಾಗಲೇ ಮಳೆಯ ಮುನ್ಸೂಚನೆ ಸಿಕ್ಕಿದೆ. ಹಾಗಾದರೆ ಎಲ್ಲೆಲ್ಲಿ ಭಾರಿ ಮಳೆ ಬೀಳಲಿದೆ ಗೊತ್ತಾ?
ಕರ್ನಾಟಕದ ಜನ ಮಾನ್ಸೂನ್ ಅಂದರೆ, ಮುಂಗಾರು ಮಳೆಯನ್ನೆ ಅವಲಂಬಿಸಿ ಜೀವನದ ಬಂಡಿ ಸಾಗಿಸುತ್ತಿದ್ದಾರೆ. ಉತ್ತರ ಕರ್ನಾಟಕವೇ ಇರಲಿ & ದಕ್ಷಿಣ ಕರ್ನಾಟಕವೇ ಇರಲಿ, ಈ ನಮ್ಮ ಕರ್ನಾಟಕಕ್ಕೆ ಮುಂಗಾರು ಮಳೆಯೇ ಆಧಾರ. ಅಕಸ್ಮಾತ್ ಮುಂಗಾರು ಮಳೆ ಕೈಕೊಟ್ಟು ಹೋದರೆ, ಪರಿಸ್ಥಿತಿ ಭೀಕರವಾಗುತ್ತದೆ. ಜನರು ಕೂಡ ಹನಿ ಹನಿ ನೀರಿಗೂ ಒದ್ದಾಡುತ್ತಾರೆ ಎನ್ನಬಹುದು. ಈಗ ಕೂಡ ಅಷ್ಟೇ ಅಂತಹದ್ದೇ ಪರಿಸ್ಥಿತಿ ಬಂದಿದೆ. ಯಾಕಂದ್ರೆ 2023 ರಲ್ಲಿ ಮಳೆರಾಯ ಅಂದ್ರೆ ವರುಣ ದೇವ ಮುಂಗಾರು ಮಳೆಯನ್ನೇ ಸರಿಯಾಗಿ ಸುರಿಸಲಿಲ್ಲ. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಭೀಕರ ಬರ ಎದುರಾಗಿರುವ ಸಮಯಕ್ಕೇ ಮಳೆಯ ಮುನ್ಸೂಚನೆ ಸಿಗುತ್ತಿದೆ.

ಕರ್ನಾಟಕದಲ್ಲಿ ಯಾವಾಗ ಮಳೆ?
ಅಷ್ಟಕ್ಕೂ ಈಗಿರುವ ಮಾಹಿತಿ ಪ್ರಕಾರ ಸದ್ಯಕ್ಕೆ ಉತ್ತರ ಭಾರತದ ಬಹುಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಜಮ್ಮ & ಕಾಶ್ಮೀರ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಭಾರಿ ಮಳೆ ಬೀಳುತ್ತಿದೆ. ಅಲ್ಲದೆ ಮಾರ್ಚ್ 1ರಿಂದ ಹಿಡಿದು ಇಡೀ ವಾರ ಅಂದ್ರೆ ಮಾರ್ಚ್ 5 & 6 ತನಕ ಭಾರಿ ಮಳೆ ಬೀಳಲಿದೆ ಇಲ್ಲಿ ಎನ್ನಲಾಗಿದೆ. ಹೀಗಾಗಿ ಕರ್ನಾಟಕದಲ್ಲೂ ಮಳೆ ಅಬ್ಬರಿಸುತ್ತದೆ ಎಂಬ ಮುನ್ಸೂಚನೆಯ ಈ ಮೊದಲೇ ನೀಡಲಾಗಿತ್ತು. ಹಾಗಾದರೆ, ಹವಾಮಾನ ಇಲಾಖೆ ಅಧಿಕಾರಿಗಳು ಕರ್ನಾಟಕದ ಮಳೆ ಬಗ್ಗೆ ಹೇಳಿದ್ದಾದರೂ ಏನು? ಮುಂದೆ ಓದಿ.
ಕರ್ನಾಟಕದಲ್ಲಿ ಮಳೆ ಅಬ್ಬರ ಶುರು?
ಹವಾಮಾನ ಇಲಾಖೆ ತಜ್ಞರ ಪ್ರಕಾರ ಕರ್ನಾಟಕದಲ್ಲಿ ವರುಣ ದೇವ ಕರುಣೆಯ ತೋರಿಸಲಿದ್ದು, ಮುಂದಿನ ಕೆಲ ದಿನದಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ. ಮುಖ್ಯವಾಗಿ ಗಮನಿಸಬೇಕಾದ ಅಂಶ ಏನೆಂದರೆ ಮಾರ್ಚ್ ಮೊದಲ ವಾರದಲ್ಲಿ ದಾವಣಗೆರೆ, ಬೆಂಗಳೂರು, ಮೈಸೂರು, ಕೊಡಗು & ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಬರಲಿದೆ ಅಂತಾ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದರ ಜೊತೆಗೆ ಕರ್ನಾಟಕದ ಇನ್ನೂ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬೀಳುವ ನಿರೀಕ್ಷೆ ದಟ್ಟವಾಗಿದೆ ಎನ್ನಲಾಗಿತ್ತು. ಆ ಪ್ರಕಾರ ಇಂದಿನಿಂದಲೇ ಮಾರ್ಚ್ ತಿಂಗಳು ಪ್ರಾರಂಭ ಆಗಿದ್ದು, ಇನ್ನು ಕೆಲವೇ ದಿನದಲ್ಲಿ ಮಳೆ ಬೀಳುವ ನಿರೀಕ್ಷೆ ದಟ್ಟವಾಗಿದೆ.

ಕರ್ನಾಟಕಕ್ಕೂ ಬಾರೋ ಮಳೆರಾಯ...
ಏನೇ ಹೇಳಿ ಮಳೆ ಬಂದರೆ ಮಾತ್ರ ನಮ್ಮ ಭೂಮಿಗೆ ಕಳೆ, ಇಲ್ಲವಾದ್ರೆ ಪರದಾಟ ಗ್ಯಾರಂಟಿ. ಈ ಕಾರಣ ಸರಿಯಾಗಿ ಮಳೆ ಬೀಳಲಿ ಅಂತಾ ರೈತರು ದೇವರಲ್ಲಿ ಬೇಡುತ್ತಾರೆ. ಹೀಗಿದ್ದಾಗಲೇ ಕಳೆದ ವರ್ಷ ಮಳೆ ಕೈಕೊಟ್ಟಿತ್ತು. ಆದ್ರೆ ಈಗ ಮತ್ತೆ ಮಳೆ ಶುರುವಾಗುತ್ತಿದೆ ದೇಶದ ಹಲವು ರಾಜ್ಯದಲ್ಲಿ ಮಳೆ ಹಾಗೂ ಆಲಿಕಲ್ಲು ಬೀಳಲಿದೆ ಎನ್ನಲಾಗಿದೆ. ಇದರ ಜೊತೆಗೆ ಕರ್ನಾಟಕದಲ್ಲಿ, ಕನ್ನಡಿಗರ ನೆಲವೂ ಮಳೆ ಕಾರಣ ಒದ್ದೆಯಾಗಲಿದೆ ಉತ್ತಮ ಮಳೆ ಬೀಳುತ್ತೆ ಅಂತ ರೈತರು ಕಾಯುತ್ತಿದ್ದಾರೆ.
ಹಾಗೇ ಗ್ರಾಮೀಣ ಭಾಗದಲ್ಲಿ ಇಂಥ ಸಮಯದಲ್ಲಿ ಮಳೆ ಬಿದ್ದರೆ ಕುಡಿಯುವ ನೀರಿಗೆ ಎದುರಾದ ಸಮಸ್ಯೆ ಕೂಡ ಸರಿಹೋಗಲಿದೆ. ಉತ್ತರ ಕರ್ನಾಟಕ ಹಾಗೂ ಮೈಸೂರು ಕರ್ನಾಟಕ ಭಾಗದ ಜನರು ಇದೀಗ ಭಾರಿ ಮಳೆಯ ಕೊರತೆ ಕಾರಣ ನಲುಗಿ ಹೋಗಿದ್ದಾರೆ. ಹಳ್ಳಿಗಳಲ್ಲಿ ಇದೀಗ ನೀರು ಪಡೆಯುವುದೇ ದೊಡ್ಡ ಸಾಹಸ ಆಗಿದೆ. ಹೀಗಾಗಿ ಪ್ರತಿಯೊಬ್ಬರು ಮಳೆ ಬರಲಿ ಅಂತ ಪ್ರಾರ್ಥನೆ ಮಾಡುತ್ತಿದ್ದಾರೆ.
ಬೆಂಗಳೂರಿನ ಜನರಿಗೆ ನೀರೆ ಇಲ್ಲ!
ಕರ್ನಾಟಕ ರಾಜಧಾನಿ ಬೆಂಗಳೂರು ನಂಬಿ ಕೂತಿರುವುದು ಜೀವ ನದಿ ಕಾವೇರಿ ತಾಯಿ ನೀರನ್ನ. ಆದ್ರೆ ಈ ಬಾರಿ ಕಾವೇರಿ ಕೊಳ್ಳದಲ್ಲಿ ಭಾರಿ ಮಳೆಯ ಕೊರತೆ ಎದುರಾಗಿದೆ. ಸರಿಯಾಗಿ ಈ ಭಾಗದಲ್ಲಿ ಮಳೆ ಬೀಳದ ಕಾರಣ ನದಿಯಲ್ಲಿ ನೀರೇ ಇಲ್ಲ. ಇನ್ನು ಬೆಂಗಳೂರಿನ ನೀರನ್ನು ಒದಗಿಸುವ ಪ್ರಮುಖ ಜಲಾಶಯ, ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೆಆರ್‌ಎಸ್ ಡ್ಯಾಂ (KRS) ಇನ್ನೇನು ಸಂಪೂರ್ಣವಾಗಿ ಬತ್ತಿ ಹೋಗುವ ಹಂತಕ್ಕೆ ಬಂದಿದೆ. ಹೀಗಾಗಿಯೇ ಜನ ಕೂಡ ಮಳೆ ಬರಲಿ ಅಂತಾ ಕಾಯುತ್ತಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಮಳೆ ಸುರಿಸಲು ವರುಣ ದೇವ ಕೂಡ ಮನಸ್ಸು ಮಾಡಬೇಕಿದೆ ಅಷ್ಟೇ.
ಮಳೆಗಾಗಿ ಜನರಿಂದ ವಿಶೇಷ ಪೂಜೆ
ಮಳೆ ಬಾರದೆ ಭೂಮಿ ಬಾಯಿ ಬಿಟ್ಟಿದೆ ದೇಶದ ಬಹುತೇಕ ರಾಜ್ಯಗಳಲ್ಲಿ ಈ ಬಾರಿ ಮಳೆ ಕೊರತೆ ದೊಡ್ಡ ಸಮಸ್ಯೆ ತಂದೊಡ್ಡಿದೆ. ಹೀಗಿದ್ದಾಗ ದಿಢೀರ್ ವರುಣ ದೇವ ಕರ್ನಾಟಕವು ಸೇರಿದಂತೆ, ಭಾರತದ ಹಲವು ರಾಜ್ಯದಲ್ಲಿ ಮಳೆ ಸುರಿಸುವ ಮುನ್ಸೂಚನೆ ನೀಡಿದ್ದಾರೆ. ಈ ಮೂಲಕ ಬೇಸಿಗೆ ಆರಂಭಕ್ಕೆ ಮೊದಲೇ ಮಳೆಯ ಮುನ್ಸೂಚನೆ ಸಿಕ್ಕಂತಾಗಿದೆ. ಆದರೆ ಆದಷ್ಟು ಬೇಗ ಮಳೆಯ ಆಗಮನ ಆಗಬೇಕು ಅನ್ನೋದೆ ಜನರ ಆಗ್ರಹ. ಹೀಗಾಗಿ ಹಲವು ಕಡೆ ವಿಶೇಷ ಪೂಜೆಯನ್ನ ಕೂಡ ಜನ ನೆರವೇರಿಸಿದ್ದಾರೆ, ಈ ಮೂಲಕ ವರುಣ ದೇವನ ಬಳಿ ಜನರು ಬೇಡಿಕೆ ಇಟ್ಟಿದ್ದಾರೆ. ಪ್ರಾರ್ಥನೆಯನ್ನೂ ಮಾಡಿದ್ದಾರೆ, ಹೀಗಾಗಿ ವರುಣ ದೇವ ಜನರ ಪ್ರಾರ್ಥನೆಗೆ ಫಲ ನೀಡ್ತಾನಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications