Heavy Rain: ಮಳೆ.. ಮಳೆ.. ಮುಂದಿನ 3 ದಿನ ಭರ್ಜರಿ ಮಳೆ!

ಮಳೆಯ ಅಬ್ಬರ ಕಡಿಮೆ ಆಗಿದೆ, 2 ವಾರಗಳ ಹಿಂದೆ ಕರ್ನಾಟಕದ ಪ್ರತಿಯೊಂದು ಜಿಲ್ಲೆಗೂ ಅಬ್ಬರದಿಂದ ಸುರಿದಿದ್ದ ಮಳೆ ಈಗ ತಣ್ಣಗಾಗಿದೆ. ಹೀಗಾಗಿ ರೈತರು & ಜನರು ತಲೆ ಮೇಲೆ ಕೈಹೊತ್ತು ಕೂರುವಂತೆ ಆಗಿದೆ. ಇಂತಹ ಸ್ಥಿತಿಯಲ್ಲಿ ಹವಾಮಾನ ಇಲಾಖೆ ತಜ್ಞರಿಂದ ಮಳೆ ಬಗ್ಗೆ ಭರ್ಜರಿ ಸುದ್ದಿ ಸಿಕ್ಕಿದ್ದು, ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಮಳೆಯ ಬಗ್ಗೆ ಕನ್ನಡ ನಾಡಿನ ರೈತರಿಗೆ ಭಾರಿ ಸುದ್ದಿ ಸಿಕ್ಕಿದೆ. ಏನಂದರೆ ಕರ್ನಾಟಕದಲ್ಲಿ ಮಳೆ ಕಳೆದ 1 ವಾರದಿಂದ ಆರ್ಭಟ ನಿಲ್ಲಿಸಿದ್ದು, ಮುಂಗಾರು ಮಳೆ ಅಬ್ಬರಕ್ಕೆ ಮೊದಲೇ ಮಳೆಯ ಬಗ್ಗೆ ಚಿಂತೆ ಮಾಡುವಂತೆ ಆಗಿತ್ತು. ಹೀಗಿದ್ದಾಗಲೇ ಗುಡ್‌ನ್ಯೂಸ್ ಸಿಕ್ಕಿದೆ ಮುಂಗಾರು ಮಳೆಯ ಆಗಮನದ ವೇಳೆಗೆ, ಕರ್ನಾಟಕದಲ್ಲಿ ಭರ್ಜರಿ ಮಳೆಯಾಗುತ್ತದೆ ಅಂತಾ ಹವಾಮಾನ ಇಲಾಖೆ ತಿಳಿಸಿದೆ. ಅದರಲ್ಲೂ ಮುಂದಿನ 3 ದಿನಗಳ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸೂಚನೆ ನೀಡಲಾಗಿದೆ. ಹಾಗಾದ್ರೆ ಆ ಜಿಲ್ಲೆಗಳು ಯಾವುವು? ಮುಂದೆ ಓದಿ.

Heavy Rain Alert Has Been Given For Next 3 Days In These Places Of Karnataka

ಯಾವ ಜಿಲ್ಲೆಗಳಲ್ಲಿ ಮಳೆ?

ಮೇ 31 ಅಂದ್ರೆ ಇಂದಿನಿಂದಲೇ ಮಳೆ ಅಬ್ಬರ ಶುರುವಾಗುವ ನಿರೀಕ್ಷೆ ಇದ್ದು, ಇಂದು ಮಳೆ ಆರ್ಭಟದ ಮುನ್ಸೂಚನೆ ಸಿಕ್ಕಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸೇರಿದಂತೆ ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡದಲ್ಲಿ ಮಳೆಯ ಮುನ್ಸೂಚನೆ ಇದೀಗ ಸಿಕ್ಕಿದೆ. ಬೆಂಗಳೂರು ಸುತ್ತಮುತ್ತ ಕೂಡ ಮಳೆಯಾಗುವ ನಿರೀಕ್ಷೆ ಇದೆ. ಹಾಗೇ ಜೂನ್ 1, ಅಂದ್ರೆ ನಾಳೆ ಕೂಡ ದಕ್ಷಿಣ ಕರ್ನಾಟಕದಲ್ಲಿ ಮಳೆ ಅಬ್ಬರಿಸಲಿದೆ. ಜೂನ್ 3 ರಂದು ಮಳೆ ತನ್ನ ಅಸಲಿ ಮುಖ ತೋರಿಸಲಿದೆ.

ಉತ್ತರ ಕರ್ನಾಟಕದಲ್ಲೂ ಮಳೆ

ಜೂನ್ 3 ರಂದು ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ರಾಯಚೂರು ಸೇರಿದಂತೆ ಯಾದಗಿರಿ, ಬೀದರ್, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಕೊಪ್ಪಳ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಈ ಮೂಲಕ ಭಾರಿ, ಭರ್ಜರಿ ಮಳೆ ಆಗಮನಕ್ಕೆ ಇದೀಗ ಮುಹೂರ್ತ ಫಿಕ್ಸ್ ಆಗಿದೆ. ರೈತರು ಕೂಡ ಈ ಸುದ್ದಿಯ ಕೇಳಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ವಾತಾವರಣದಲ್ಲಿ ಯಾವುದೇ ಏರುಪೇರು ಆಗದೇ ಇದ್ದರೆ ಈ ಮುನ್ಸೂಚನೆ ನಿಜವಾಗಲಿದೆ. ಹಾಗೇ ಅಷ್ಟರಲ್ಲಿ ಮುಂಗಾರು ಮಾರುತಗಳ ಎಂಟ್ರಿ ಕೂಡ ಆಗಲಿದೆ.

ಕರ್ನಾಟಕದ ಡ್ಯಾಂಗಳ ಪರಿಸ್ಥಿತಿ?

ಒಟ್ನಲ್ಲಿ ಭರ್ಜರಿ ಮಳೆ ಬರುತ್ತಿರುವುದು ಕನ್ನಡಿಗರಿಗೆ ಈಗ ಒಂದು ಸಿಹಿಸುದ್ದಿ ನೀಡುತ್ತಿದೆ. ಮಳೆ ಇಲ್ಲದೆ ಸೊರಗಿದ್ದ ಕರ್ನಾಟಕದ ಜನರಿಗೆ, ಮಳೆರಾಯ ಕಳೆದ ಒಂದು ತಿಂಗಳಿಂದ ಭಾರಿ ದೊಡ್ಡ ಕೊಡುಗೆ ನೀಡಿದ್ದಾನೆ. ಅದರಲ್ಲೂ ಭರ್ಜರಿ ಮಳೆಗೆ, ಕರ್ನಾಟಕದ ಪ್ರತಿಯೊಂದು ಜಿಲ್ಲೆ ಕೂಡ ತಂಪಾಗಿದೆ. ಹೀಗಿದ್ದಾಗಲೇ ಮುಂಗಾರು ಮಳೆಯ ಮೋಡಗಳು ಕರ್ನಾಟಕದ ಕಡೆಗೆ, ಓಡೋಡಿ ಬರುತ್ತಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಕರ್ನಾಟಕ ಪ್ರವೇಶಿಸಲಿವೆ. ಕರ್ನಾಟಕದ ಡ್ಯಾಂಗಳು ನಿಧಾನವಾಗಿ ತುಂಬುತ್ತಿವೆ. ಅದ್ರಲ್ಲೂ ಈಗ ಕಾವೇರಿ ಕೊಳ್ಳಕ್ಕೆ ಭರ್ಜರಿ ನೀರು ಹರಿದು ಬರ್ತಿದೆ.

ಕರ್ನಾಟಕದಲ್ಲಿ ಬಹುಬೇಗ ಮುಂಗಾರು ಮಳೆಯ ಅಬ್ಬರ ಶುರುವಾಗಿದೆ. ಈ ಮೂಲಕವಾಗಿ ಕನ್ನಡಿಗರಿಗೆ ವರುಣ ದೇವ ಸಿಹಿಸುದ್ದಿ ನೀಡಿದ್ದಾನೆ. ಯಾಕಂದ್ರೆ ಮಳೆ ಇಲ್ಲದೆ ಬೆಳೆ ಒಣಗಿ, ಪರದಾಡುತ್ತಿದ್ದ ಸಮಯಕ್ಕೆ ಪೂರ್ವ ಮುಂಗಾರು ಮಳೆ ಕೈಹಿಡಿದು ನಿಲ್ಲಿಸಿತ್ತು. ಈಗ ಮತ್ತೆ ಮುಂಗಾರು ಮಳೆ ಕೂಡ ಕನ್ನಡಿಗರ ಬೆನ್ನಿಗೆ ನಿಂತಿದೆ. ಈ ಮೂಲಕ ಭರ್ಜರಿ ಮಳೆಯಲ್ಲಿ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ. ಅಲ್ಲದೆ ಮುಂದಿನ 10 ದಿನಗಳ ಕಾಲ ಭರ್ಜರಿ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ಮಳೆ ಬೀಳುವುದು ಯಾವ ಯಾವ ಜಿಲ್ಲೆಗಳಲ್ಲಿ ಗೊತ್ತಾ?

ತುಂಬುತ್ತಿವೆ ಕರ್ನಾಟಕದ ಡ್ಯಾಂಗಳು

ಮಳೆ ಇಲ್ಲದೆ ಬೆಳೆ ಕಳೆದುಕೊಳ್ಳುವ ಹಂತಕ್ಕೆ ಬಂದು ಚಿಂತೆಯಲ್ಲಿ ಮುಳುಗಿದ್ದ, ಕನ್ನಡ ನಾಡಿನ ರೈತರಿಗೆ ಭಾರಿ ಸುದ್ದಿ ಸಿಕ್ಕಿದೆ. ಏನಂದರೆ ಕರ್ನಾಟಕದಲ್ಲಿ ಮಳೆ ಭಾರಿ ಆರ್ಭಟ ತೋರಿಸುತ್ತಿದ್ದು ಇದರ ಜೊತೆಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ಮುಂಗಾರು ಮಳೆಯ ಆಗಮನಕ್ಕೆ ಮೊದಲೇ ಕರ್ನಾಟಕದಲ್ಲಿ ಭರ್ಜರಿ ಮಳೆಯಾಗುತ್ತೆ ಅಂತ, ಹವಾಮಾನ ಇಲಾಖೆ ತಿಳಿಸಿದೆ. ಈ ಬಾರಿ ಮಳೆ ಅಬ್ಬರದ ಪರಿಣಾಮ, ಈಗಾಗಲೇ ಕರ್ನಾಟಕದ ಡ್ಯಾಂಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಕೂಡ ಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+