Rain Alert: ಮಳೆ ಎಚ್ಚರಿಕೆ, ಮುಂದಿನ 24 ಗಂಟೆ ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ!

ಮಳೆರಾಯ ತನ್ನ ಆರ್ಭಟ ನಿಲ್ಲಿಸುವ ಯಾವುದೇ ಮುನ್ಸೂಚನೆ ಸಿಗುತ್ತಿಲ್ಲ. ಅದರ ಬದಲು ಮಳೆ ಆರ್ಭಟ ಮತ್ತಷ್ಟು ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿ ಇರುವಾಗಲೇ ಭಾರಿ ಮಳೆ ಬಗ್ಗೆ ಮತ್ತಷ್ಟು ಮುನ್ನೆಚ್ಚರಿಕೆ ನೀಡಲಾಗಿದೆ. ಮುಂದಿನ 24 ಗಂಟೆ ಬೆಂಗಳೂರು ಸೇರಿದಂತೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಯಾವೆಲ್ಲ ಜಿಲ್ಲೆ & ತಾಲೂಕುಗಳಲ್ಲಿ ಭಾರಿ ಮಳೆ ಬೀಳಲಿದೆ? ಬನ್ನಿ ತಿಳಿಯೋಣ.

ಕರ್ನಾಟಕಕ್ಕೆ ಮುಂಗಾರು ಮಳೆಯೇ ಮುಖ್ಯ, ಯಾಕಂದ್ರೆ ಕರ್ನಾಟಕ ರಾಜ್ಯದ ಮಲೆನಾಡು ಜಿಲ್ಲೆಗಳಿಗೆ ಮುಂಗಾರು ಮಳೆ ಮಾತ್ರ ಖಾಯಂ ಆಗಿ ಬೀಳುತ್ತದೆ. ಇದನ್ನು ಬಿಟ್ಟು ಹಿಂಗಾರು ಮಳೆಯ ನಂಬಿ ಬದುಕುವುದು ಕಷ್ಟ. ಹೀಗಾಗಿ ಈ ಬಾರಿ ಉತ್ತಮವಾಗಿ ಮಳೆ ಬಿದ್ದು ರೈತರ ಮೊಗದಲ್ಲಿ ನಗು ಮೂಡಲಿದೆ ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಮುಂಗಾರು ಮಳೆ ಭರ್ಜರಿಯಾಗಿ ಬೀಳುತ್ತಿರುವ ಕಾರಣ ಉತ್ತಮ ಲಾಭದ ನಿರೀಕ್ಷೆಯಲ್ಲಿ ನಮ್ಮ ರೈತರು ಇದ್ದರು. ಬೀಜ ಬಿತ್ತಿ, ಪೈರು ಸಂರಕ್ಷಣೆ ಮಾಡಲು ಗೊಬ್ಬರ & ಔಷಧ ಸಿಂಪಡಿಸಿದ್ದರು.

Heavy Rain Alert Given To Several Districts Of Karnataka Include Bengaluru For Next 24 Hours

ಮುಂದಿನ 24 ಗಂಟೆ ಭಾರಿ ಮಳೆ!

ಹೀಗಿದ್ದಾಗ ಮಳೆರಾಯ ನಗುವಿನ ಜತೆಗೆ ಅಳು ಕೂಡ ಉಡುಗೊರೆ ಆಗಿ ನೀಡಿದ್ದಾನೆ. ಯಾಕಂದ್ರೆ ಈ ರೀತಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬೆಳೆಗೆ ಹಾನಿ ಆಗುತ್ತಿದೆ. ಹೀಗಾಗಿ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ. ಪರಿಸ್ಥಿತಿ ಇಂತಹ ಸೂಕ್ಷ್ಮ ಸ್ಥಿತಿ ತಲುಪಿದ ಸಮಯದಲ್ಲೇ ಮತ್ತೆ ಮುಂದಿನ 24 ಗಂಟೆ ಭಾರಿ ಮಳೆ ಎಚ್ಚರಿಕೆಯನ್ನು ನೀಡಲಾಗಿದೆ. ಅದರಲ್ಲೂ ಮಲೆನಾಡು & ಕರಾವಳಿ ಪ್ರದೇಶ ಸೇರಿದಂತೆ ಬೆಂಗಳೂರಿನಲ್ಲೂ ಮಳೆ ಆರ್ಭಟ ಪಕ್ಕಾ ಆಗಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?

ಇಂದು ಮಧ್ಯಾಹ್ನದ ಬಳಿಕ ಮಳೆ ಅಬ್ಬರ ಜೋರಾಗಲಿದ್ದು, ಕನ್ನಡಿಗರ ರಾಜಧಾನಿಯಾದ ಬೆಂಗಳೂರಿನಲ್ಲಿ ಸಂಜೆ ಸಮಯದಲ್ಲಿ ಭಾರಿ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ. ಈ ಮಧ್ಯೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಕೂಡ ಅದೇ ರೀತಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಇನ್ನುಳಿದಂತೆ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು, ಹಾಸನ ಜಿಲ್ಲೆಗಳಲ್ಲಿ ಇಂದು ಕೂಡ ಮಳೆ ಆರ್ಭಟಿಸಲಿದೆ. ಬೆಳಗಾವಿಯ ಹಲವು ಕಡೆ ಮಳೆರಾಯನ ಅಬ್ಬರ ಇರಲಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸಂಜೆ ನಂತರ ಭಾರಿ ಮಳೆ ಎಚ್ಚರಿಕೆ ನೀಡಲಾಗಿದ್ದು, ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+