Bengaluru Rain: ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಎಚ್ಚರಿಕೆ... ಯಾವ ಯಾವ ಜಿಲ್ಲೆಗಳಿಗೆ?
ಮಳೆ... ಮಳೆ... ಮಳೆ... ಬರೀ ಮಳೆಯದ್ದೇ ಕಾಟ ಶುರುವಾಗಿದೆ. ಇದೇನು ಮಳೆನಾ? ಅಥವಾ ಮನುಷ್ಯರ ಕಥೆ ಮುಗಿಸಲು ಬಂದಿರುವ ಪ್ರಾಕೃತಿಕ ವಿಕೋಪ ಇರಬಹುದಾ? ಅನ್ನೋ ಚರ್ಚೆ ಕೂಡ ಈಗ ಶುರುವಾಗಿದೆ. ಪ್ರಕೃತಿ ಮೇಲೆ ಹೆಚ್ಚಾದ ದೌರ್ಜನ್ಯದ ಪರಿಣಾಮ ಮಳೆ & ಹವಾಮಾನ ವಿಚಾರ ಕೂಡ ಸಾಕಷ್ಟು ಗಮನ ಸೆಳೆದಿದೆ. ಅಲ್ಲದೆ ಮಳೆಯಲ್ಲಿ ಕೂಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈ ವರ್ಷ ಕರ್ನಾಟಕ ರಾಜ್ಯಕ್ಕೆ ಬೇಡ ಸಾಕು ಸಾಕು ಎನ್ನುವಷ್ಟು ಮಳೆ ಸುರಿದುಬಿಟ್ಟಿದೆ. ಹೀಗಿದ್ದಾಗ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಎಚ್ಚರಿಕೆ... ಯಾವ ಯಾವ ಜಿಲ್ಲೆಗಳಿಗೆ?
ಹೌದು, ಯಾಕಪ್ಪಾ ಈ ರೀತಿಯಾಗಿ ಮಳೆ ಸುರಿಯುತ್ತಿದೆ? ಅಂತಾನೇ ಕನ್ನಡಿಗರು ಬೇಸರ ಹೊರಹಾಕುವ ಪರಿಸ್ಥಿತಿ ನಿರ್ಮಾಣ ಆಗಿದೆ. ಮುಂಗಾರು ಮಳೆ ಟೈಮ್ ಮುಗಿದು ಹೋಗುವಾಗಲೂ ಮಳೆಯ ಅಬ್ಬರ ಹೆಚ್ಚಾಗುತ್ತಿದೆ. ಅದರಲ್ಲೂ ಮಳೆರಾಯ ಈ ರೀತಿ ಸುರಿಯುತ್ತಿರುವ ರೀತಿ ನೋಡಿದರೆ ಸಿಕ್ಕಾಪಟ್ಟೆ ಟೆನ್ಷನ್ ಆಗಿದ್ದಾರೆ ಕನ್ನಡ ನಾಡಿನ ಜನ. ಯಾಕಂದ್ರೆ ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿ ಕನ್ನಡ ನಾಡಿನ ಮಲೆನಾಡು, ಬಯಲು ಸೀಮೆ, ಕರಾವಳಿ ಭಾಗದಲ್ಲೂ ಬೇಡ ಬೇಡ ಅನ್ನುವಷ್ಟು ಮಳೆ ಇದೀಗ ಸುರಿದು ಹೋಗಿದೆ. ಹೀಗಿದ್ದರೂ ಮತ್ತೆ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ...

ಮಳೆ ಆರ್ಭಟ ಮತ್ತಷ್ಟು ಜೋರು
ಮಳೆ.. ಮಳೆ.. ಭಾರಿ ಮಳೆ ಮತ್ತೆ ಶುರುವಾಗುತ್ತಿದೆ. ಅಂದಹಾಗೆ, ಕರ್ನಾಟಕ ಕರಾವಳಿ ಭಾಗದಲ್ಲಿ ಮಳೆ ಪ್ರಮಾಣ ಇದೀಗ ಕಡಿಮೆ ಆಗಿದ್ದರೂ, ಕರ್ನಾಟಕದ ದಕ್ಷಿಣ ಒಳನಾಡು & ಉತ್ತರ ಒಳನಾಡು ಜಿಲ್ಲೆಗಳು ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಕೂಡ ಭಾರಿ ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಹಾಗಾದರೆ ಇದೀಗ ಭಾರಿ ಮಳೆ ಸುರಿಯಲಿರುವ ಕರ್ನಾಟಕದ ಜಿಲ್ಲೆಗಳು ಯಾವುವು? ಮಳೆ ಆರ್ಭಟ ಯಾವ ದಿನದಿಂದ ಮತ್ತಷ್ಟು ಜೋರಾಗಲಿದೆ? ರಾಜಧಾನಿ ಬೆಂಗಳೂರಿನ ವಾತಾವರಣ ಹೇಗೆ ಇರಲಿದೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಯಾವ ಯಾವ ಜಿಲ್ಲೆಗಳಲ್ಲಿ ಮಳೆ?
ಮಳೆ.. ಮಳೆ.. ಮಳೆ... ಹೀಗೆ ಈ ವರ್ಷ ಬರೀ ಮಳೆಯ ರಗಳೆ ಕುರಿತು ಕೇಳುವುದೇ ಆಗಿ ಹೋಗುತ್ತಿದೆ. ಯಾಕಂದ್ರೆ 2025 ವರ್ಷ ಪೂರ್ತಿ ಬರೀ ಮಳೆಯ ಆರ್ಭಟ ನೋಡಿ ನೋಡಿ ಜನರು ಕೂಡ ಸುಸ್ತಾಗಿದ್ದಾರೆ. ಇಷ್ಟಾದರೂ ಮತ್ತೆ ಮಳೆ ಸುರಿಯುವುದು ಗ್ಯಾರಂಟಿ ಆಗಿದೆ. ಬೆಳಗಾವಿ, ಹುಬ್ಬಳ್ಳಿ, ಹಾವೇರಿ ಜಿಲ್ಲೆ & ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ ಸೇರಿದಂತೆ ಹಳೇ ಮೈಸೂರು ಭಾಗ, ಬೆಂಗಳೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲೂ ಇದೀಗ ಭಾರಿ ಮಳೆ ಮುನ್ಸೂಚನೆಯನ್ನು ನೀಡಲಾಗಿದೆ. ಅಕ್ಟೋಬರ್ 09 ಗುರುವಾರ ನಂತರ ಮಳೆ ಆರ್ಭಟ ಮತ್ತಷ್ಟು ಹೆಚ್ಚಾಗಲಿದ್ದು, ಹೀಗಾಗಿ ಇದೀಗ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.












Click it and Unblock the Notifications