Karnataka Rain: ಮಳೆ.. ಮಳೆ.. ಮುಂದಿನ 24 ಗಂಟೆ ಭರ್ಜರಿ ಮಳೆ!
ಕರ್ನಾಟಕದಲ್ಲಿ ಮಳೆ ಅಬ್ಬರ ಜೋರಾಗಿದ್ದು, ಒಣಗಿ ಹೋಗಿದ್ದ ನದಿಗಳಿಗೆ ಮತ್ತೊಮ್ಮೆ ಜೀವ ಬಂದಂತೆ ಆಗಿದೆ. ಅದರಲ್ಲೂ ಕರ್ನಾಟಕದ ಡ್ಯಾಂಗಳಿಗೆ ಭಾರಿ ಪ್ರಮಾಣದಲ್ಲೇ ನೀರು ಹರಿದು ಬರುತ್ತಿದೆ. ಹೀಗಿದ್ದಾಗಲೇ ಮುಂದಿನ 24 ಗಂಟೆ ಕರ್ನಾಟಕದ ಈ ಜಿಲ್ಲೆ & ತಾಲೂಕುಗಳಿಗೆ ಭರ್ಜರಿ ಮಳೆ ಎಚ್ಚರಿಕೆ ನೀಡಲಾಗಿದೆ. ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.
ಮಳೆ ಆರ್ಭಟ ಸ್ವಲ್ಪ ದಿನಗಳ ಕಾಲ ಸೈಲೆಂಟ್ ಆಗಿತ್ತು, ಆದರೆ ಇದೀಗ ಮತ್ತೆ ಮುಂಗಾರು ಮಳೆ ಮೋಡಗಳು ಅಲರ್ಟ್ ಆಗಿದ್ದು ಅಬ್ಬರಿಸುತ್ತಿವೆ. ಹೀಗಾಗಿ ಕರ್ನಾಟಕದ ಹಲವು ಜಿಲ್ಲೆ & ತಾಲೂಕುಗಳಿಗೆ ಭಾರಿ ಭರ್ಜರಿ ಮಳೆ ಬೀಳುವುದು ಗ್ಯಾರಂಟಿ ಆಗಿದೆ. ಕರ್ನಾಟಕ ರಾಜ್ಯಕ್ಕೆ ಮುಂಗಾರು ಮಳೆ ಆಸರೆ, ಯಾಕಂದ್ರೆ ಮುಂಗಾರು ಮಳೆ ಬೀಳದಿದ್ದರೆ ಕನ್ನಡಿಗರ ಪರಿಸ್ಥಿತಿ ಕೈಮೀರಿ ಹೋಗಲಿದೆ. ಹೀಗಾಗಿ ಮುಂಗಾರು ಮಳೆಯ ಆಶ್ರಯಿಸಿ, ಕನ್ನಡ ನಾಡಿನ ಜನರು ಜೀವನ ಮಾಡುತ್ತಾರೆ. ಹೀಗಿದ್ದಾಗ 2023 ರಲ್ಲಿ ಮುಂಗಾರು ಮಳೆ ಕೈಕೊಟ್ಟಿತ್ತು. ಆದರೂ 2024 ರಲ್ಲಿ ಮುಂಗಾರು ಮಳೆ ಭರ್ಜರಿಯಾಗಿ ಎಂಟ್ರಿ ಕೊಟ್ಟು, ಭಾರಿ ಮಳೆ ಸುರಿಸುತ್ತಿದೆ.

ಈ ಜಿಲ್ಲೆಗಳಿಗೆ ಭಾರಿ ಮಳೆ!
ಕನ್ನಡಿಗರ ನೆಲಕ್ಕೆ ಮಳೆ ಭರ್ಜರಿ ಎಂಟ್ರಿ ಕೊಟ್ಟು, ಕರ್ನಾಟಕದ ಕರಾವಳಿ ಜಿಲ್ಲೆ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೇ ಚಿಕ್ಕಮಗಳೂರು, ಕೊಡಗು & ಶಿವಮೊಗ್ಗದಲ್ಲಿ ಜಿಲ್ಲೆಗಳಲ್ಲಿ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ. ಈ 6 ಜಿಲ್ಲೆಗಳಿಗು ಇಂದು ಸೋಮವಾರ ಮತ್ತು ಮಂಗಳವಾರ 'ಹಳದಿ ಎಚ್ಚರಿಕೆ' ನೀಡಲಾಗಿದೆ. ಇದು ಸ್ಯಾಂಪಲ್ ಅಷ್ಟೇ ಈಗ ಕರ್ನಾಟಕದ ಇನ್ನೂ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಲಿದ್ದಾನೆ, ಆ ಕುರಿತು ಮಾಹಿತಿಗೆ ಮುಂದೆ ಓದಿ.
ಬೆಂಗಳೂರಿನಲ್ಲೂ ಮಳೆ ಗ್ಯಾರಂಟಿ!
ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು & ಶಿವಮೊಗ್ಗ ಜಿಲ್ಲೆಗಳನ್ನ ಹೊರತುಪಡಿಸಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು ಸೇರಿದಂತೆ ರಾಮನಗರ, ಚಾಮರಾಜನಗರ, ತುಮಕೂರು, ದಾವಣಗೆರೆ ಜಿಲ್ಲೆ, ಹಾಸನ, ಚಿಕ್ಕಮಗಳೂರಲ್ಲಿ ಹಗುರ ಮಳೆ ಬೀಳಲಿದೆ. ಹೀಗಾಗಿ ಅಲರ್ಟ್ ಘೋಷಿಸಲಾಗಿದೆ.
ಈ ನಡುವೆ ಕಾವೇರಿ ಕೊಳ್ಳದಲ್ಲಿ ಕೂಡ ಮತ್ತೆ ಮಂದಹಾಸ ಮೂಡಿದೆ. ಭಾರಿ ಪ್ರಮಾಣದ ನೀರು ಈಗ ಕಾವೇರಿ ಕೊಳ್ಳದ ನದಿಗಳಿಗೆ ಹರಿದು ಹರಿದು ಬರುತ್ತಿದೆ. ಅದರಲ್ಲೂ ಮಳೆ ಅಬ್ಬರ ಕಂಡು ರೈತರು ಖುಷ್ ಆಗಿದ್ದು, ಇನ್ನೂ ಕೆಲ ದಿನಗಳ ಕಾಲ ಇದೇ ರೀತಿ ಮಳೆ ಎಂಟ್ರಿ ಆಗಿದ್ದೇ ನಿಜವಾದರೆ ಜಲಾಶಯಗಳು ತುಂಬಿ ತುಳುಕಲಿವೆ. ಹೀಗಾಗಿ ಅನ್ನದಾತ ರೈತ ಕೂಡ ಮಳೆರಾಯನ ಬಳಿ ಪ್ರಾರ್ಥನೆ ಮಾಡುತ್ತಿದ್ದಾನೆ.












Click it and Unblock the Notifications