Bhadra Dam: ಭಾರೀ ಮಳೆಗೆ ಅಣೆಕಟ್ಟಿನ ಒಳ-ಹೊರ ಹರಿವು ಭಾರೀ ಹೆಚ್ಚಳ, ಇಂದಿನ ಮಟ್ಟ
ಬೆಂಗಳೂರು, ಜುಲೈ 21: ಕರ್ನಾಟಕದ ಮಲೆನಾಡಿನ ಭಾಗದಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಕಳೆದೊಂದು ತಿಂಗಳಿನಿಂದ ಚಿಕ್ಕಮಗಳೂರು, ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಬಿದ್ದ ಕಾರಣ ಭದ್ರಾ ಅಣೆಕಟ್ಟಿನಲ್ಲಿ (Bhadra Dam Level) ಒಳ ಮತ್ತು ಹೊರ ಹರಿವಿನ ಪ್ರಮಾಣ ಹೆಚ್ಚಾಗಿದೆ. ಇಂದು ಸಾವಿರಾರು ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಇರೊಂದಿಗೆ ಕೃಷ್ಣಾ ಮತ್ತು ಭೀಮಾ ನದಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾದ ಕಾರಣ ಶ್ರೀಶೈಲಂ ಅಣೆಕಟ್ಟಿಗೆ ಸಾಕಷ್ಟು ಒಳಹರಿವು ಮುಂದುವರೆದಿದೆ.
ಭದ್ರಾ ನದಿಗೆ ಅಡ್ಡಲಾಗಿ ಸುಮಾರು 60 ವರ್ಷಗಳ ಹಿಂದೆ (1947-1965) ಈ ಭದ್ರಾ ಅಣೆಕಟ್ಟು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಪಟ್ಟಣದ ಬಳಿ ನಿರ್ಮಿಸಲಾಗಿದೆ. ಇದನ್ನು ಭದ್ರಾ ನದಿ ಯೋಜನೆ ಅಥವಾ ಲಕ್ಕವಳ್ಳಿ ಅಣೆಕಟ್ಟು ಅಂತಲೂ ಕರೆಯಲಾಗುತ್ತದೆ. ನಿರಂತರ ಮುಂಗಾರಿನ ಆರ್ಭಟದಿಂದಾಗಿ ಜುಲೈ 21ರಂದು 9,198 ಕ್ಯೂಸೆಕ್ ಒಳಹರಿವು ದಾಖಲಾಗಿದೆ. 6,918 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಪ್ರತಿ ವರ್ಷ ಈ ಭದ್ರಾ ಜಲಾಶಯ ಭರ್ತಿ ಆಗಲು 71.54 TMC ನೀರು ಬೇಕಾಗುತ್ತದೆ. ಅದು ಡ್ಯಾಂನ ಒಟ್ಟು ನೀರು ಸಂಗ್ರಹಣಾ ಸಾಮರ್ಥ್ಯವಾಗಿದೆ. ಸದ್ಯ ಸೋಮವಾರಕ್ಕೆ ಭದ್ರಾ ಡ್ಯಾಂನಲ್ಲಿ 63.3 TMC ನೀರಿನ ಸಂಗ್ರಹವಾಗಿದೆ. ಒಟ್ಟು 186 ಅಡಿ ಎತ್ತರ ಇರುವ ಈ ಅಣೆಕಟ್ಟಿನಲ್ಲಿ ಜುಲೈ 21ರವರೆಗೆ 179.3 ಅಡಿ ನೀರು ಸಂಗ್ರಹವಾಗಿದೆ. ಭಾರೀ ಮಳೆ ಮುಂದುವರಿದ ಕಾರಣ, ಈ ವಾರ ಒಳಹರಿವು ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ.
ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಈ ನದಿ ನೀರು ಮುಂದೆ ಹೋಗಿ ಕೂಡಿಕೊಂಡು ತುಂಗಭದ್ರಾ ನದಿಯಾಗುತ್ತದೆ. ಭದ್ರಾ ಜಲಾಶಯ, ತುಂಗಭದ್ರ ಜಲಾಶಯಗಳಲ್ಲಿ ಮಳೆ ಮುಂದುವರಿಯಲಿದ್ದು, ಈ ವಾರ ನಿರೀಕ್ಷಿತ ಪ್ರಮಾಣದಲ್ಲಿ ಜಲಾಶಯದ ಒಳ ಹರಿವು ಮತ್ತು ಹೊರ ಹರಿವು ಏರಿಕೆ ಆಗಲಿದೆ. ಜಲಾನಯನ ಪ್ರದೇಶಗಳ ನಿವಾಸಿಗಳಿಗೆ ಅಗತ್ಯೆ ಎಚ್ಚರಿಕೆ ನೀಡಲಾಗಿದೆ.
Bhadra Dam outflow gradually increases accordingly as storage is close to full capacity.
— Naveen Reddy (@navin_ankampali) July 21, 2025
Inflow - 9,198 Cusecs
Outflow - 6,918 Cusecs
Storage- 63.3 TMC/71.54 TMC
Level - 179.3 ft/186 ft pic.twitter.com/LxAQICndqZ
ಒಳಹರಿವು 1,38,381 ಕ್ಯೂಸೆಕ್
ಕೃಷ್ಣಾ ಮತ್ತು ಭೀಮಾ ನದಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆ ಆಗಿದ್ದರಿಂದ ಶ್ರೀಶೈಲಂ ಅಣೆಕಟ್ಟಿನಲ್ಲಿ ಒಳಹರಿವು ಹೆಚ್ಚಾಗಿದೆ. ಒಳಹರಿವು 1,38,381 ಕ್ಯೂಸೆಕ್ ನಷ್ಟಿದೆ. ಸರಾಸರಿ ಒಳಹರಿವು 1,58,418 ಕ್ಯೂಸೆಕ್ ನಷ್ಟಿದೆ. ಡ್ಯಾಂ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 215.81 ಟಿಎಂಸಿ ಇದ್ದು, ಅದರಲ್ಲಿ ಇವತ್ತಿಗೆ 204.78 ಟಿಎಂಸಿ ನೀರು ಸಂಗ್ರಹಗೊಂಡಿದೆ. 885 ಅಡಿ ಈ ಅಣಕೆಟ್ಟಿನಲ್ಲಿ ಇಂದಿಗೆ 883 ಅಡಿ ನೀರು ಸಂಗ್ರಹವಾಗಿದೆ. ಈ ಜಲಾಶಯದಿಂದ ಅಪಾರ ಪ್ರಮಾಣದ ನೀರನ್ನು
ವಿದ್ಯುತ್ ಕೇಂದ್ರಗಳು ಮತ್ತು ಲಿಫ್ಟ್ ನೀರಾವರಿ ವ್ಯವಸ್ಥೆಗಳಿಗೆ ಬಿಡಲಾಗುತ್ತಿದೆ.
-
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications