Breaking: ಕೊರೊನಾವೈರಸ್ ಸೋಂಕಿನಿಂದ ಆರೋಗ್ಯ ಸಚಿವ ಸುಧಾಕರ್ ಗುಣಮುಖ

ಬೆಂಗಳೂರು, ಜೂನ್ 7: "ನನ್ನ ಕೋವಿಡ್ RT-PCR ವರದಿ ನೆಗೆಟಿವ್ ಬಂದಿದ್ದು, ನಾನು ಇಂದಿನಿಂದ ಮೊದಲಿನಂತೆ ಸಕ್ರಿಯವಾಗಿ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದೇನೆ. ನಿಮ್ಮ ಪ್ರೀತಿ, ಹಾರೈಕೆಗಳಿಗೆ ನಾನು ಚಿರಋಣಿ," ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಕಳೆದ ಐದು ದಿನಗಳ ಹಿಂದೆಯಷ್ಟೇ ಅವರಲ್ಲಿ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಾತ್ರಿಯಾಗಿತ್ತು. ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದ ಅವರು, ಇಂದು ನೆಗೆಟಿವ್ ವರದಿ ಬಂದಿರುವ ಬಗ್ಗೆಯೂ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ಇಳಿಮುಖವಾಯಿತು ಎನ್ನುವಷ್ಟರಲ್ಲೇ ಕ್ರಮೇಣ ಏರಿಕೆಯಾಗುತ್ತಿದೆ. ಕರ್ನಾಟಕದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ದಿನನಿತ್ಯ 200 ಗಡಿ ದಾಟುತ್ತಿದೆ. ಇದು ಕೋವಿಡ್-19 ಸೋಂಕಿನ ಅಪಾಯ ಇನ್ನೂ ಕಡಿಮೆಯೇನಿಲ್ಲ ಎಂಬ ಎಚ್ಚರಿಕೆಯನ್ನು ನೀಡುತ್ತಿದೆ.

Health Minister Dr K Sudhakar Tested Coronavirus Negative

ಕರ್ನಾಟಕದಲ್ಲಿ ಹೇಗಿದೆ ಕೊರೊನಾವೈರಸ್ ಲೆಕ್ಕ:

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲೇ 230 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿದೆ. ಇದೇ ಅವಧಿಯಲ್ಲಿ 203 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.1.92ರಷ್ಟಾಗಿದೆ. ಇದರ ಮಧ್ಯೆ ರಾಜ್ಯದ ಒಟ್ಟಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 2441 ಆಗಿದೆ.

ಬೆಂಗಳೂರಿನಲ್ಲೇ ಅತಿಹೆಚ್ಚು ಕೋವಿಡ್-19 ಅಪಾಯ:

ರಾಜ್ಯದಲ್ಲಿ ಒಟ್ಟು 230 ಹೊಸ ಕೋವಿಡ್-19 ಪ್ರಕರಣಗಳು ವರದಿಯಾದರೆ ಅದರಲ್ಲಿ ಬೆಂಗಳೂರು ನಗರವೊಂದರಲ್ಲೇ ಅತಿಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳ ಅಂಕಿ-ಅಂಶಗಳೂ ಅದನ್ನೇ ಸೂಚಿಸುತ್ತಿವೆ. ಒಂದು ದಿನದಲ್ಲಿ ಪತ್ತೆಯಾದ ಒಟ್ಟು 230 ಪ್ರಕರಣಗಳಲ್ಲಿ 222 ಹೊಸ ಪ್ರಕರಣಗಳು ಸಿಲಿಕಾನ್ ಸಿಟಿಯಲ್ಲೇ ವರದಿಯಾಗಿದೆ. ಅದೇ ರೀತಿ ಒಟ್ಟು 203 ಮಂದಿ ಸೋಂಕಿತರು ಗುಣಮುಖರಾದರೆ, ಅದರಲ್ಲಿ 188 ಮಂದಿ ಬೆಂಗಳೂರಿನವರೇ ಆಗಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+