ಎಚ್ಡಿಕೆ ಸಿಎಂ ಆಗಿ ಪ್ರಮಾಣ ವಚನ ಸಮಾರಂಭಕ್ಕೆ ಬಿಜೆಪಿ ನಾಯಕರ ಗೈರು
Recommended Video

ಮೇ 23ರಂದು ಎಚ್ ಡಿ ಕೆ ಪ್ರಮಾಣವಚನ ಸೀಕರ ಸಮಾರಂಭಕ್ಕೆ ಬಿಜೆಪಿ ಆಬ್ಸೆಂಟ್ | Oneindia Kannada
ಬೆಳಗಾವಿ, ಮೇ 21: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಉದಯವಾಗುತ್ತಿದೆ. ಎಚ್ ಡಿ ಕುಮಾರಸ್ವಾಮಿ ಅವರು ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಮೇ 23ರಂದು ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿದ್ದಾರೆ.
ಈ ಸಮಾರಂಭಕ್ಕೆ ದೇಶದ ವಿವಿಧೆಡೆಯಿಂದ ಗಣ್ಯಾತಿಗಣ್ಯರು ಆಗಮಿಸುತ್ತಿದ್ದಾರೆ. ಆದರೆ, ಬಿಜೆಪಿ ಕರ್ನಾಟಕದ ಯಾವುದೇ ನಾಯಕರು ಸಮಾರಂಭಕ್ಕೆ ಹಾಜರಾಗುವುದು ಅನುಮಾನವೆನಿಸಿದೆ.
ಈ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರೆ, ಹೈಕಮಾಂಡ್ ಆದೇಶದಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ರಾಜ್ಯದ ಯಾವ ನಾಯಕರು ನಾಳಿನ ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದಿದ್ದಾರೆ.

ನಾಳೆ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ದತೆಗಳು ನಡೆದಿದ್ದು, ಪ್ರಮಾಣವಚನದಲ್ಲಿ ಭಾಗಿಯಾಗುವಂತೆ ಖುದ್ದು ಕುಮಾರಸ್ವಾಮಿಯವರೇ ಅನೇಕ ನಾಯಕರನ್ನು ಆಹ್ವಾನಿಸಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಗೆ ನಾಂದಿ ಹಾಡಿರುವ ಈ ಮೈತ್ರಿ, ತೃತೀಯ ರಂಗಕ್ಕೆ ನಾಂದಿ ಹಾಡಲಿದೆ ಎನ್ನಲಾಗಿದೆ.












Click it and Unblock the Notifications