ಬಹಿರಂಗ ಚರ್ಚೆಗೆ ಬನ್ನಿ, ಸಿದ್ದುಗೆ ಎಚ್ಡಿಕೆ ಆಹ್ವಾನ
ಬೆಂಗಳೂರು, ಮೇ 14 : 'ನಮ್ಮದು ಜನಪರ ಸರ್ಕಾರ ಎಂದು ಹೇಳುವ ಸಿದ್ದರಾಮಯ್ಯ ಅವರು 2 ವರ್ಷದಲ್ಲಿ ಯಾವ ಸಾಧನೆಯನ್ನು ಮಾಡಿಲ್ಲ, ಪ್ರತಿಪಕ್ಷಗಳನ್ನು ಟೀಕಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ' ಎಂದು ಆರೋಪಿಸಿರುವ ಎಚ್.ಡಿ.ಕುಮಾರಸ್ವಾಮಿ, ಸರ್ಕಾರದ ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದರು.
ಗುರುವಾರ ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, 'ಸಿದ್ದರಾಮಯ್ಯ ಅವರೇ ನೀವು ಹತ್ತಿದ ಏಣಿಯನ್ನು ಒದೆಯಬೇಡಿ, ಜೆಡಿಎಸ್ ಎಂದೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಬೇಡಿ, ನಮ್ಮ ಪಕ್ಷಕ್ಕೆ ಒಂದು ಸರ್ಕಾರವನ್ನು ಕೆಡವಿಹಾಕುವ ಶಕ್ತಿ ಇದೆ' ಎಂದು ಹೇಳಿದರು. [ಉಳಿದಿರುವುದು ಮೂರು ವರ್ಷ, 10 ಸವಾಲು]

ಕುಮಾರಸ್ವಾಮಿ ಹೇಳಿದ್ದಿಷ್ಟು
* 'ನಮ್ಮದು ಸ್ವಚ್ಛ, ಪಾರದರ್ಶಕ ಸರ್ಕಾರ ಎನ್ನುವ ನೀವು ಒಂದಂಕಿ ಲಾಟರಿ, ಮಟ್ಕಾ ದಂಧೆಯ ವಿಚಾರವನ್ನು ಸಿಬಿಐ ತನಿಖೆಗೆ ವಹಿಸಿ. ಅವ್ಯಾಹತವಾಗಿ ನಡೆಯುತ್ತಿರುವ ಈ ದಂಧೆಗಳ ಕುರಿತು ನಾನು ಅಗತ್ಯ ದಾಖಲೆಗಳನ್ನು ನೀಡುತ್ತೇನೆ' ಎಂದು ಸರ್ಕಾರವನ್ನು ಒತ್ತಾಯಿಸಿದರು. [ಎರಡು ವರ್ಷದ ಆಡಳಿತ ತೃಪ್ತಿ ನೀಡಿದೆ : ಸಿದ್ದರಾಮಯ್ಯ]
* 'ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿಯೇ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಪೊಲೀಸರು ಲಾರಿಗಳನ್ನು ಹಿಡಿದರೆ, ಶಾಸಕರು ಫೋನ್ ಮಾಡಿ ಬಿಡಿಸುತ್ತಾರೆ. ಇದು ಯಾವ ಪರಿಯ ಸ್ವಚ್ಛ ಆಡಳಿತ?'. [ಸಿದ್ದು ಸರ್ಕಾರದ 10 ಜನಪ್ರಿಯ ಯೋಜನೆಗಳು]

* 'ನಾನು ಅಹಿಂದ ಪರ ಎಂದು ಹೋದಲೆಲ್ಲಾ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ವರ್ಗದ ಅಭಿವೃದ್ಧಿಗೆ ಎಷ್ಟು ಹಣ ನೀಡಿದ್ದೀರಿ ಎಂಬುದನ್ನು ಬಹಿರಂಗಪಡಿಸಿ, ಕೇವಲ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡಬೇಡಿ'.
* 'ಐದು ವರ್ಷ ಸರ್ಕಾರ ನಡೆಸಿದ ಬಿಜೆಪಿ ಸಾಕಷ್ಟು ಸಾಲ ಮಾಡಿದೆ ಎಂದು ಆರೋಪಿಸುವ ಮುಖ್ಯಮಂತ್ರಿಗಳು, ಕಾಂಗ್ರೆಸ್ ಆಡಳಿತಕ್ಕೆ ಬಂದ ಎರಡು ವರ್ಷಗಳಲ್ಲಿಯೇ ಅದಕ್ಕಿಂತ ಹೆಚ್ಚು ಸಾಲ ಮಾಡಿದೆ ಎಂಬುದನ್ನು ಮರೆಯಬಾರದು'.
*'ಸಿದ್ದರಾಮಯ್ಯ ಅವರೇ ಹತ್ತಿದ ಏಣಿಯನ್ನು ಒದೆಯಬೇಡಿ, ಜೆಡಿಎಸ್ ಎಂದೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಬೇಡಿ. ನಮ್ಮ ಪಕ್ಷಕ್ಕೆ ಒಂದು ಸರ್ಕಾರವನ್ನು ಕೆಡವಿ ಹಾಕುವ ಶಕ್ತಿ ಇದೆ'.












Click it and Unblock the Notifications