ಸಿಎಂ ಇಬ್ರಾಹಿಂ ಕಾಂಗ್ರೆಸ್ ಹೋಗುವುದಾದರೆ ಹೋಗಲಿ. ಸಂತೋಷ: ಹೆಚ್ ​ಡಿ ರೇವಣ್ಣ

ಹಾಸನ, ಅಕ್ಟೋಬರ್‌ 18: ಜೆಡಿಎಸ್‌ ವಿರುದ್ದ ಅಸಮಾಧಾನಗೊಂಡಿರುವ ಸಿಎಂ ಇಬ್ರಾಹಿಂ, ನಮ್ಮದೇ ಒರಿಜನಲ್‌ ಜೆಡಿಎಸ್‌ ಪಾರ್ಟಿ ಎಂದಿದ್ದಾರೆ. ಈ ಬಗ್ಗೆ ದೇವೇಗೌಡರ ಅಂಗಳದಲ್ಲಿ ಚೆಂಡು ಇದೆ. ರಾಷ್ಟ್ರೀಯ ಅಧ್ಯಕ್ಷರಿದ್ದಾರೆ ತೀರ್ಮಾನ ಮಾಡುತ್ತಾರೆ. ಇಬ್ರಾಹಿಂ ಕಾಂಗ್ರೆಸ್ ಹೋಗುವುದಾದರೆ ಹೋಗಲಿ. ಸಂತೋಷ, ನಮ್ಮದೇನು ಅಭ್ಯಂತರವಿಲ್ಲ ಎಂದು ಮಾಜಿ ಸಚಿವ ಹೆಚ್​ಡಿ ರೇವಣ್ಣ ಹೇಳಿದರು.

ಈ ಕುರಿತು ಬುಧವಾರ ಹಾಸನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಇಬ್ರಾಹಿಂ ಮಾತನಾಡಿರುವುದರ ಹಿಂದೆ ಕಾಂಗ್ರೇಸ್ ಕುತಂತ್ರವಿದೆ. ಸಿಎಂ ಇಬ್ರಾಹಿಂ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನ ಉಚ್ಚಾಟನೆ ಮಾಡುವದಾಗಿ ಪಕ್ಷ ತೀರ್ಮಾನಿಸಿದೆ ಎಂಬ ಹೇಳಿಕೆಗೆ ತಿರುಗೇಟು ನೀಡಿದರು.

HD Revanna Says If CM Ibrahim wants to go to Congress, let him go

ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ, ಬೇಸರಗೊಂಡ ಜೆಡಿಎಸ್​ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತಮ್ಮ ಬೆಂಬಲಿಗರ ಮತ್ತು ಕಾರ್ಯಕರ್ತರ ಜೊತೆ ಸಭೆ ನಡೆಸಿ, ಸಭೆಯಲ್ಲಿ ನಮ್ಮದೆ ಓರಿಜಿನಲ್​ ಜೆಡಿಎಸ್​​ ಎಂದು ಹೇಳಿದ್ದಾರೆ. ಅದನ್ನ ಮಾಜಿ ಪ್ರಧಾನಿ ದೇವೇಗೌಡರೇ ಕೂತು ಬಗೆಹರಿಸುತ್ತಾರೆ. ಇಂತಹ ಮಾತಿಗೆಲ್ಲ ತಲೆ ಕೂಡಿಸಿ ಕೊಳ್ಳುವುದು ಬೇಡ. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಯಾರನ್ನು ಉಚ್ಛಾಟನೆ ಮಾಡ್ತಾರೆ, ಏನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದು ಗುಡುಗಿದರು.

ದೇವೇಗೌಡರ ಅಂಗಳದಲ್ಲಿ ಚೆಂಡು ಇದೆ. ಅವರು ರಾಷ್ಟ್ರೀಯ ಅಧ್ಯಕ್ಷರಿದ್ದಾರೆ ತೀರ್ಮಾನ ಮಾಡುತ್ತಾರೆ. ಇಬ್ರಾಹಿಂ ಕಾಂಗ್ರೆಸ್ ಹೋಗುವುದಾದರೆ ಸಂತೋಷ, ನಮ್ಮದೇನು ಅಭ್ಯಂತರವಿಲ್ಲ. ಜೆಡಿಎಸ್ ಇಬ್ಭಾಗ ಆಗಲ್ಲ, 19 ಜನ ಎಂಎಲ್‌ಎಗಳು ಇದ್ದಾರೆ. ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರು, ಕುಮಾರಸ್ವಾಮಿ ಈ ಪಾರ್ಟಿಗಾಗಿ ಏನೇನು ಮಾಡಿದ್ದಾರೆ ಅಂತ ಜನರಿಗೆ ಗೊತ್ತಿದೆ.ಅವರ ಮಾತಿಗೆಲ್ಲ ಯಾಕೆ ತಲೆ ಕೆಡಿಸಿಕೊಳ್ಳುತ್ತೀರಾ? ಆ ಸಭೆಯಲ್ಲಿ ಯಾರು ಕುಳಿತಿದ್ದಾರೆ ನೋಡಿದ್ರಾ? ಜೆ.ಹೆಚ್.ಪಟೇಲ್ ಮಗನನ್ನು ಕೂರಿಸಿಕೊಂಡು ಸಭೆ ಮಾಡಿದ್ದಾರೆ. ದೇವೇಗೌಡರನ್ನು 60 ವರ್ಷ ಕಾಂಗ್ರೆಸ್ ಹೇಗೆ ನೆಡೆಸಿಕೊಂಡಿದೆ ಎಂಬುವುದು ಗೊತ್ತಿದೆ. ಕುಮಾರಸ್ವಾಮಿ ಮಗನನ್ನು ಸೋಲಿಸಿದವರು ಯಾರು? ಎಂದು ಪ್ರಶ್ನಿಸಿದರು.

ಅಂತಹ ಕಾಂಗ್ರೆಸ್‌ಗೆ ಹೋಗಿ ಬೀಳುತ್ತೀರಾ? ಅಂದರೆ ನಮಗೇನು ಅಭ್ಯಂತರ ಇಲ್ಲ. ಕಾಂಗ್ರೆಸ್​ ಅನ್ನು ಇಬ್ರಾಹಿಂ ಮುಗಿಸಿ ಆಯ್ತು. ಈಗ ನಮ್ಮ ಹತ್ತಿರ ಬಂದಿದ್ದಾರೆ. ಇವತ್ತು ಒರಿಜಿನಲ್ ಕಾಂಗ್ರೆಸ್ ಇಲ್ಲ. ನೆಹರು, ಗಾಂಧಿ ಕಾಲದ ಕಾಂಗ್ರೆಸ್ ಈಗ ಇಲ್ಲ. ಇಂತಹ ಕಾಂಗ್ರೆಸ್‌ಗೆ ಹೆದರುವುದಾದರೆ ಮನೆ ಸೇರಿಕೊಳ್ಳಬೇಕಾಗುತ್ತದೆ. ಕಾಂಗ್ರೆಸ್‌ನ ಇಂತಹ ಕುತಂತ್ರಕ್ಕೆ ನಾವು ಹೆದರುವುದಿಲ್ಲ. ಸ್ವಲ್ಪ ದಿನ ತಡೆಯಿರಿ ಕಾಲವೇ ನಿರ್ಧರಿಸುತ್ತೆ ಎಂದು ವಾಗ್ದಾಳಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+