HD Revanna: ಮಹಿಳೆ ಕಿಡ್ನಾಪ್ ಕೇಸ್: ರೇವಣ್ಣ ವಶಕ್ಕೆ: ಪ್ರಕರಣದ 10 ಪ್ರಮುಖ ಅಂಶಗಳು ಇಲ್ಲಿವೆ
ಬೆಂಗಳೂರು, ಮೇ 05: ಅಶ್ಲೀಲ ವಿಡಿಯೋಗಳು ಇರುವ ಪೆನ್‌ಡ್ರೈವ್ ಪ್ರಕರಣ ಸಂಬಂಧ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಬಗ್ಗೆ ತನಿಖೆ ನಡೆಯುತ್ತಿದೆ. ಇತ್ತ ಮಹಿಳೆಯೊಬ್ಬರ ಅಪಹರಣ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ಜೆಡಿಎಸ್‌ನ ಎಚ್‌ಡಿ ರೇವಣ್ಣ ಅವರನ್ನು ವಶಕ್ಕೆ ಪಡೆದುಕೊಂಡಿದೆ.
ಪ್ರಜ್ವಲ್ ರೇವಣ್ಣ ತಂದೆ ಎಚ್‌ಡಿ ರೇವಣ್ಣಗೆ ಸಂಬಂಧಿಸಿದ ತನಿಖೆಯ ಹತ್ತು ಪ್ರಮುಖ ಅಂಶಗಳು ನಿಮ್ಮ ಮುಂದಿವೆ.

ಎಸ್‌ಐಟಿ ತನಿಖೆಯ 10 ಮುಖ್ಯಾಂಶಗಳು
* ಬಂಧಿತ ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ಮತ್ತು ಆತನ ಸಹಾಯಕ ಸತೀಶ್ ವಿರುದ್ಧ ಮಹಿಳೆಯ ಅಪಹರಣ ಪ್ರಕರಣ ದಾಖಲಾಗಿದೆ. ಅಪಹರಣಕ್ಕೆ ಒಳಗಾದ ಮಹಿಳೆಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಮಹಿಳೆಯು ವಿಶೇಷ ತನಿಖಾ ತಂಡದೊಂದಿಗೆ ಮಾತನಾಡಿದ್ದಾರೆ. ಹೀಗಾಗಿ ಎಚ್‌ಡಿ ರೇವಣ್ಣ ಅವರನ್ನು ವಶಕ್ಕೆ ಪಡೆಯಲಾಗಿದೆ. ಅವರ ಪುತ್ರ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ.
* ಈ ಮಹಿಳೆ ಎಚ್‌ಡಿ ರೇವಣ್ಣ ಅವರ ನಿವಾಸದಲ್ಲಿ ಸುಮಾರು 05 ವರ್ಷಗಳ ಕಾಲ ಕೆಲಸ ಮಾಡಿದ್ದವು. ಆದರೆ ಅವರು ಕಳೆದ ಮೂರು ವರ್ಷಗಳ ಹಿಂದೆ ಎಚ್‌ಡಿ ರೇವಣ್ಣ ಮನೆಯ ಕೆಲಸ ಬಿಟ್ಟಿದ್ದರು. ಏಪ್ರಿಲ್ 26 ರಂದು ಎಚ್.ಡಿ.ರೇವಣ್ಣನವರ ಆಪ್ತ ಸಹಾಯಕ ಸತೀಶ್ ಅವರು ಬಂದು ತಾಯಿಯನ್ನು ಕರೆದುಕೊಂಡು ಹೋಗಿದ್ದರು ಎಂದು ಆಕೆಯ ಮಗ ಆರೋಪಿಸಿದ್ದರು. ಅದೇ ಮನೆಗೆ ಕರೆತಂದು ಬಿಟ್ಟರು ಸಹಿತ, ಮತ್ತೆ ಏಪ್ರಿಲ್ 29 ರಂದು ಎಚ್.ಡಿ.ರೇವಣ್ಣ ಆಪ್ತ ಅದೇ ವ್ಯಕ್ತಿ ಮಹಿಳೆಯನ್ನು ಮತ್ತೆ ಕರೆದೊಯ್ದರು, ನಂತರ ಅವರು ಮನೆಗೆ ಬರಲೇ ಇಲ್ಲ ಎಂದು ಮಗ ಹೇಳಿದ್ದರು.
* ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆಯುವ ಮೂದಲೇ ಈ ಅಪಹರಣ ಪ್ರಕರಣದಲ್ಲಿ ಬಂಧನ ಆಗದಂತೆ ಮಧ್ಯಂತರ ತಡೆ ಕೋರಿ ಎಚ್‌ಡಿ ರೇವಣ್ಣ ಸ್ಥಳೀಯ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅವರ ಅರ್ಜಿ ತಿರಸ್ಕರಿಸಿತು. ಈ ವ್ಯಕ್ತಿ ಮಹಿಳೆಯನ್ನು ಏಕೆ ಅಪಹರಿಸಿದ್ದ? ಇದರಲ್ಲಿ ಪ್ರಜ್ವಲ್ (ರೇವಣ್ಣ) ಭಾಗಿಯಾಗಿರುವುದು ಬಗ್ಗೆ ಇನ್ನೂ ತಿಳಿಯಬೇಕಿದೆ.
ದೂರಿನಲ್ಲಿ ನೀಡಿದ ಮಾಹಿತಿ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ತಮ್ಮ ವಿರುದ್ಧ ದೂರು ದಾಖಲಿಸದಂತೆ ತಡೆಯುತ್ತಿದ್ದಾರೆಯೇ?. ಈ ಅಪಹರಣ ಬಗ್ಗೆ ದಾಖಲಾದ ಎಫ್‌ಐಆರ್ ಅನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಹೇಳಿದರು.
* ಬಂಧನ ಭೀತಿಯಿಂದ ಮಧ್ಯಂತರ ತಡೆ ಕೋರಿದ್ದ ಅರ್ಜಿದಾರ ಎಚ್‌ಡಿ ರೇವಣ್ಣ ಪ್ರಭಾವಿತರಾಗಿದ್ದಾರೆ. ಇವರು ಜನರಿಗೆ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಈ ಸಂತ್ರಸ್ತೆಯ ಮೇಲೆ ಮಾತ್ರ ಮಾಡಲಾಗಿದೆಯೇ ಅಥವಾ ಇನ್ನೂ ಹೆಚ್ಚಿನವರು ಇದ್ದಾರೆಯೇ ಎಂದು ಗೊತ್ತಾಗಬೇಕು. ಸಂತ್ರಸ್ತರನ್ನು ರಕ್ಷಿಸಬೇಕಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಿಚಾರಣೆ ವೇಳೆ ಆಗ್ರಹಿಸಿದರು.

* ಶಾಸಕರ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದೆ. ಶನಿವಾರ ಎಚ್‌ಡಿ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆ ಎನ್ನಲಾದ ಅಶ್ಲೀಲ ವಿಡಿಯೋಗಳು ಕರ್ನಾಟಕದ ಹಾಸನದಲ್ಲಿ ಭಾರೀ ಸದ್ದು ಮಾಡಿವೆ. ಈ ಪ್ರಜ್ವಲ್ ಹಾಸನದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
* ಕರ್ನಾಟಕ ಲೋಕಸಭೆ ಚುನಾವಣೆಗೆ ಇದೇ ಕಳೆದ ಏಪ್ರಿಲ್ 26ರಂದು ಮೊದಲ ಹಂತದ ಮತದಾನ ನಡೆದಿತ್ತು. ಮಾರನೇ ದಿನವೇ ಎಸ್‌ಐಟಿ ರಚನೆ ಆಗುತ್ತಿದ್ದಂತೆ ಏಪ್ರಿಲ್ 27 ರಂದು ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದರು. ಎಸ್‌ಐಟಿ ಮುಂದೆ ಹಾಜರಾಗಲು ಏಳು ದಿನಗಳ ಕಾಲವಕಾಶ ಬೇಕು ಎಂದು ಅವರು ತಮ್ಮ ವಕೀಲರ ಮೂಲಕ ಮನವಿ ಮಾಡಿಕೊಂಡಿದ್ದಾರೆ.
* ಹಾಸನ ಸಂಸದ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಶ್ಲೀಲ ವೀಡಿಯೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂಬ ಆರೋಪದ ತನಿಖೆ ನಡೆಯುತ್ತಿದೆ. ಹೀಗಿರುವಾಗ ಇತರ ರಾಷ್ಟ್ರಗಳ ಸಹಾಯ ಕೋರುವಂತೆ ಕರ್ನಾಟಕ ಸರ್ಕಾರ ಕೇಂದ್ರ ತನಿಖಾ ದಳವನ್ನು (ಸಿಬಿಐ) ಕೇಳಿದೆ.
* ಪ್ರಜ್ವಲ್ ರೇವಣ್ಣ ವಿರುದ್ಧ ಜನತಾ ದಳ (ಜಾತ್ಯತೀತ) ಕಾರ್ಯಕರ್ತರೊಬ್ಬರು ಬಂದೂಕು ತೋರಿಸಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಬಳಿಕ ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಿಮಿನಲ್ ತನಿಖಾ ಇಲಾಖೆ (ಸಿಐಡಿ) ಬುಧವಾರ ಪ್ರಥಮ ಮಾಹಿತಿ ವರದಿ ಸಲ್ಲಿಸಿದೆ.
* ಅಪಹರಿಸಿದ್ದಾರೆ ಎನ್ನಲಾದ ಮಹಿಳೆಯನ್ನು ಮೈಸೂರು ಜಿಲ್ಲೆಯ ಕಾಳೇನಹಳ್ಳಿ ಗ್ರಾಮದ ಫಾರ್ಮ್‌ಹೌಸ್‌ನಿಂದ ರಕ್ಷಿಸಲಾಗಿದೆ. ಈ ಫಾರ್ಮ್‌ಹೌಸ್ ಎಚ್‌ಡಿ ರೇವಣ್ಣ ಅವರ ಆಪ್ತ ಸಹಾಯಕ ರಾಜಶೇಖರ್ ಅವದ್ದಾಗಿದೆ ಎಂದು ಸುದ್ದಿಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ. ಏಪ್ರಿಲ್ 29 ರಂದು ನಾಪತ್ತೆಯಾಗಿದ್ದ ಮಹಿಳೆ ಈ ಫಾರ್ಮ್‌ಹೌಸ್‌ನಲ್ಲಿ ಪತ್ತೆ ಆಗಿರುವುದು ಪ್ರಕರಣಕ್ಕೆ ರೋಚಕ ತಿರುವು ನೀಡಿದೆ.
* ತಾನು ಬಚ್ಚಿಟ್ಟಿದ್ದ ಮಹಿಳೆಯನ್ನು ಎಸ್‌ಐಟಿ ಅಧಿಕಾರಿಗಳು ತನ್ನ ಫಾರ್ಮ್‌ಹೌಸ್‌ನಲ್ಲಿ ಪತ್ತೆ ಹಚ್ಚಿದಾರೆ ಎಂಬ ಸುದ್ದಿ ತಿಳಿದ ಎಚ್‌ಡಿ ರೇವಣ್ಣ ಆಪ್ತ ರಾಜಶೇಖರ್ ತಲೆಮರೆಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪತ್ತೆ ಮಾಡಿ ಮಹಿಳೆಯನ್ನು ಬೆಂಗಳೂರಿಗೆ ಕರೆತಂದು ಎಸ್‌ಐಟಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ.












Click it and Unblock the Notifications