ಕುಮಾರಸ್ವಾಮಿಯವರದ್ದು ಹಿಟ್ ಅಂಡ್ ರನ್ ರಾಜಕೀಯ,ಅವರ ಜೊತೆಗೇ ಇದ್ದು ನೋಡಿದ್ದೇನೆ : ಎನ್. ಚಲುವರಾಯಸ್ವಾಮಿ
ಮಂಡ್ಯ, ಅಕ್ಟೋಬರ್ 02: ಕುಮಾರಸ್ವಾಮಿಯವರದ್ದು ಹಿಟ್ ಅಂಡ್ ರನ್ ರಾಜಕೀಯ. ಅವರ ಜೊತೆಗೇ ಇದ್ದು ನೋಡಿದ್ದೇನೆ. ನಾನು ತಪ್ಪು ಮಾಡಿಲ್ಲ, ಸಿದ್ದರಾಮಯ್ಯ ಅವರಿಗೆ ಕಪ್ಪು ಚುಕ್ಕಿ ಇರಲಿಲ್ಲ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಪತಿ ಅವರಿಗೆ ಮಾನಸಿಕ ಹಿಂಸೆ ಆಗಬಾರದು ಎಂಬ ಕಾರಣದಿಂದ ಈ ತೀರ್ಮಾನ ಕೈಗೊಂಡಿದ್ದೇನೆ ಎಂದು ಅವರೇ ಹೇಳಿದ್ದಾರೆ. ಇದು ಹಿಟ್ ಅಂಡ್ ರನ್ ಅಥವಾ ಯೂಟರ್ನಾ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಎಡಿಜಿಬಿ ಮೇಲೆ ಬಿದ್ದಿದ್ದಾರೆ ಈ ದೇಶದಲ್ಲಿ ಯಾರು ಏನು ಬೇಕಾದರೂ ಮಾತನಾಡಬಹುದು. ಕಾನೂನಿನಲ್ಲಿ ಅಧಿಕಾರಿಗಳಿಗೆ ಒಂದು ಲಿಮಿಟೇಷನ್ ಇರುತ್ತೆ. ಅವರೂ ಕೂಡ ಈ ದೇಶದ ಪ್ರಜೆ, ಕಾನೂನಾತ್ಮಕ ವಿಚಾರವನ್ನುಅಧಿಕಾರಿ ತಿಳಿಸಿದ್ದಾರೆ. ಕುಮಾರಸ್ವಾಮಿ ಅದನ್ನು ಮೊದಲು ಎದುರಿಸಲಿ, ಕುಮಾರಸ್ವಾಮಿ ಮಾತನಾಡಿದ್ದು ಸರಿ ಎಂದು ದೇವೇಗೌಡರೇ ಹೇಳಲಿ. ಅದನ್ನು ನಾನು ಒಪ್ಪುತ್ತೇನೆ. ಅರ್ಜುನನ ಹಿಂದೆ ಕೃಷ್ಣ ಇದ್ದಂತೆ ಕುಮಾರಸ್ವಾಮಿ ಹಿಂದೆ ದೇವೇಗೌಡರು ಇದ್ದಾರೆ. ಅದಕ್ಕೆ ಅವರು ಏನೆಲ್ಲಾ ಮಾತನಾಡಬಹುದೋ ಮಾತನಾಡುತ್ತಾರೆ ಎಂದು ಹೇಳಿದರು.
ಕುಮಾರಸ್ವಾಮಿ ಕೇಂದ್ರದ ಒಳ್ಳೆಯ ಸಚಿವರು. ಅವರು ಕೇಂದ್ರ ಸರ್ಕಾರದ ಕೆಲಸಗಳನ್ನು ಮಾಡಬೇಕು. ರಾಜ್ಯಕ್ಕೆ ಅಗತ್ಯವಾದ ಯೋಜನೆಗಳನ್ನು ತರಬೇಕು. ಅದು ಬಿಟ್ಟು ವಾರಕ್ಕ ಮೂರು ದಿನ ಬೆಂಗಳೂರಿಗೆ ಬರುತ್ತಾರೆ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಆ ಮಾತು ಬಳಕೆ ಮಾಡೋಕೆ ಬರಲ್ಲ. ದೇವೇಗೌಡರೇ ಹೇಳಲಿ ತಮ್ಮ ಮಗ ಮಾತನಾಡುತ್ತಿರುವುದು ಸರಿಯೋ ತಪ್ಪೋ ಎಂದು ಅದಕ್ಕೆ ನಾನು ಒಪ್ಪುತ್ತೇನೆ ಎಂದು ಹೇಳಿದರು.
ಕುಮಾರಸ್ವಾಮಿಯೇ ಜಾಮೀನಿನ ಮೇಲೆ ಇದ್ದಾರೆ. ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ ನೀಡುವಂತೆ ರಾಜ್ಯಪಾಲರ ಬಳಿ ಹೋಗಿದ್ದವರು ಯಾರು, ಅದಕ್ಕೆ ಮೊದಲು ಉತ್ತರ ಕೊಡಲಿ ಎಂದು ಸವಾಲು ಹಾಕಿದರು.
ಮಂಡ್ಯ ಮುಡಾ ಹಗರಣ ಅಂತರರಾಜ್ಯ ವ್ಯವಹಾರ ಇತ್ತು. ಹಾಗಾಗಿ ಅದನ್ನು ಸಿಬಿಐ ತನಿಖೆಗೆ ಕೊಟ್ಟಿದ್ದರು. ಬ್ಯಾಂಕ್‌ನಲ್ಲಿ ದುಡ್ಡು ಡ್ರಾ ಮಾಡಿದ್ದು ಇದೆ. ಈ ಕಾರಣದಿಂದಾಗಿ ಸಿಬಿಐ ತನಿಖೆಗೆ ಕೊಡಲಾಗಿತ್ತು ಎಂದು ಸಮರ್ಥಿಸಿಕೊಂಡರು.
ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ. ಹಾಗಾಗಿ ದಲಿತ ಸಿಎಂ ಅಥವಾ ಬೇರೆ ಎಂಬ ಬಗ್ಗೆ ಚರ್ಚೆಯ ಪ್ರಶ್ನೆಯೇ ಇಲ್ಲ. ದಲಿತ ಮಂತ್ರಿಗಳು ಶಾಸಕರು ಮುಡಾ ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆಯೇ ಹೊರತು ಮುಖ್ಯಮಂತ್ರಿ ಹುದ್ದೆಗೆ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಶಾಶ್ವತವಾಗಿ ಕಾವೇರಿ ಆರತಿ ಆಗಬೇಕು. ಈ ವಿಚಾರ ಸರ್ಕಾರದ ಮಟ್ಟದಲ್ಲಿ ಇದೆ. ಸ್ಪಷ್ಟ ನಿರ್ಧಾರ ಮಾಡುತ್ತೇವೆ. ಸಂಪೂರ್ಣ ತೀರ್ಮಾನ ಡಿಸಿಎಂ ಅವರದ್ದೇ ಆಗಿದೆ. ಸಧ್ಯಕ್ಕೆ ಸಾಂಕೇತಿಕವಾಗಿ ಕಾವೇರಿ ಆರತಿ ಕಾರ‌್ಯಕ್ರಮ ಮಾಡುತ್ತಿದ್ದೇವೆ ಎಂದರು.
ಶೀಘ್ರ ಜಾಗ ಗುರುತಿಸಿ ಅಂತಿಮ ತೀರ್ಮಾನ ಮಾಡುತ್ತೇನೆ. ಸಧ್ಯ ಶಾಸಕರ ನೇತೃತ್ವದಲ್ಲಿ ಸೀಮಿತವಾದ ಕಾರ‌್ಯಕ್ರಮ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾವೇರಿ ಆರತಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪ್ರಿಯತೆ ಸಹಿಸದೆ ಸರ್ಕಾರನ್ನು ಕಸರತ್ತು ನಡೆಸಿದ್ದರು. ಆಗಲಿಲ್ಲ. ಈಗ ಮೂಡ ವಿಚಾರವನ್ನು ಎತ್ತಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವಿಪಕ್ಷಗಳ ವಿರುದ್ಧ ಹರಿಹಾಯ್ದರು.
ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮ ಅವರು ಮುಡಾ ಸೈಟ್‌ಗಳನ್ನು ವಾಪಸ್ಸು ನೀಡಿದ್ದಾರೆ. ಪತಿ ಸಿದ್ದರಾಮಯ್ಯನವರ 40 ವರ್ಷದ ರಾಜಕೀಯ ಇತಿಹಾಸದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಸೈಟ್ ವಿಚಾರಕ್ಕೆ ಅವರಿಗೆ ಕಳಂಕ ಬರುವುದು ಬೇಡ ಎಂಬ ಕಾರಣದಿಂದ ವಾಪಸ್ಸು ನೀಡಿದ್ದಾರೆ. ಇದರಲ್ಲಿ ತಪ್ಪೇನಿದೆ, ಕಾಂಗ್ರೆಸ್ ಸರ್ಕಾರದಲ್ಲಿ, ಸಿದ್ದರಾಮಯ್ಯ ಅವರು ಸೈಟ್ ನೀಡಿರಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿವೇಶನ ನೀಡಿದ್ದರು. ಆದರೂ ವಾಪಸ್ಸು ಕೊಟ್ಟಿದ್ದಾರೆ ಎಂದು ಹೇಳಿದರು.
ಕಾನೂನು ಬದ್ಧವಾಗಿ ತಪ್ಪಾಗಿದ್ದರೆ ಕೊಟ್ಟವರ ತಪ್ಪಾಗುತ್ತೆ ವಿನಃ, ಪಡೆದವರ ತಪ್ಪಲ್ಲ, ಅರ್ಜಿ ಕೊಟ್ಟರೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕಾದದ್ದು ಅವತ್ತಿನ ಸರ್ಕಾರದ ಹೊಣೆ. ಅದು ಬಿಟ್ಟು ಈಗಿನ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮುಡಾ ಹಗರಣದ ಬಗ್ಗೆ ಜನರಿಗೆ ಈಗಾಗಲೇ ಅರ್ಥವಾಗಿದೆ. ಆದರೆ ಜೆಡಿಎಸ್-ಬಿಜೆಪಿಯವರಿಗೆ ಅರ್ಥವಾಗುತ್ತಿಲ್ಲ. 136 ಶಾಸಕರು ಆಯ್ಕೆಯಾಗಿರುವುದಕ್ಕೆ ವಿಪಕ್ಷಗಳಿಗೆ ಕಣ್ಣು ಕುಕ್ಕುತ್ತಿದೆ. ಏನೂ ಸಿಗದ ಕಾರಣ ಈ ವಿಚಾರವನ್ನು ಎತ್ತಿದ್ದಾರಷ್ಟೆ ಎಂದು ಸ್ಪಷ್ಟಪಡಿಸಿದರು.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ












Click it and Unblock the Notifications