BMS ಟ್ರಸ್ಟ್ ಅಕ್ರಮ ಆರೋಪ : ಬಿಜೆಪಿ ನಾಯಕರ ಫೋಟೋ ಹಂಚಿಕೊಂಡ ಜೆಡಿಎಸ್
ಅಕ್ರಮ ನಿರ್ಧಾರಗಳನ್ನು ಸಕ್ರಮಗೊಳಿಸಿದ್ದು ಯಾರ ಹಿತಾಸಕ್ತಿ ಕಾಪಾಡಲು, ಸಚಿವ ಅಶ್ವತ್ಥ ನಾರಾಯಣ ಅವರೇ? ಪ್ರಧಾನಿ ನರೇಂದ್ರ ಮೋದಿ ಯವರೆ, ಭ್ರಷ್ಟಾಚಾರ ನಿರ್ಮೂಲನೆ ಎಂದರೆ ಇದೆಯೆ? ಎಂದು ಜೆಡಿಎಸ್ ರಾಜ್ಯ ಘಟಕ ಪ್ರಶ್ನಿಸಿದೆ.
ಬೆಂಗಳೂರು,ಫೆಬ್ರವರಿ23: ಮುಂದಿನ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಆರೋಪ- ಪ್ರತ್ಯಾರೋಪ ಹೆಚ್ಚಾಗಿದ್ದು,ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಬಿಎಂಎಸ್ ಎಜುಕೇಷನ್ ಟ್ರಸ್ಟ್ ಅನ್ನು ಅಕ್ರಮವಾಗಿ ಖಾಸಗಿ ಟ್ರಸ್ಟ್ ಆಗಿ ಮಾರ್ಪಡಿಸಲು ಸಚಿವ ಅಶ್ವತ್ಥ ನಾರಾಯಣ ಸಹಕರಿಸಿದ್ದಾರೆ ಎಂದು ದಾಖಲೆಗಳ ಈ ಹಿಂದೆ ನಡೆದ ಸದನದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದರು.
ಇನ್ನೂ ಈ ಪ್ರಕರಣದಲ್ಲಿ ಸಚಿವರಾದ ಅಶ್ವತ್ಥ ನಾರಾಯಣ ಅವರು ನೇರವಾಗಿ ಭಾಗಿಯಾಗಿದ್ದಾರೆ ಎಂದು ಸದನದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಧರಣಿಗೆ ಮುಂದಾಗಿದ್ರು, ಆದರೆ, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಈ ಆರೋಪವನ್ನ ತಳ್ಳಿ ಹಾಕಿದ್ರು. ಇದಾದ ಬಳಿಕ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬಿಎಂಎಸ್ ಟ್ರಸ್ಟ್ ಮುಖ್ಯಸ್ಥ ರೊಂದಿಗೆ ಅಶ್ವಥ್ ನಾರಾಯಣ್ ಊಟ ಮಾಡುತ್ತಿರುವ ಫೋಟೋ ಪ್ರದರ್ಶನ ಮಡುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಇದೀಗ ಜೆಡಿಎಸ್ ಸರಣಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಎಂಎಸ್ ಟ್ರಸ್ಟ್ ಮುಖ್ಯಸ್ಥ ರೊಂದಿಗೆ ಮನೆ ಭೇಟಿ ನೀಡಿದ ಸಂದರ್ಭದ ಫೋಟೋಗಳನ್ನ ಹಂಚಿಕೊಂಡಿದ್ದು, ಬಿಜೆಪಿ ನಾಯಕರನ್ನ ಕುಟುಕಿದೆ.
BMS ಟ್ರಸ್ಟ್ ನಲ್ಲಿ ನಡೆದಿರುವ ಗೋಲ್ ಮಾಲ್ ಬಗ್ಗೆ 2022ರ ಸೆಪ್ಟೆಂಬರ್ 22, 23ರಂದು ವಿಧಾನಸಭಾ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ @hd_kumaraswamy ಅವರು ಸವಿಸ್ತಾರವಾಗಿ ಮಾತನಾಡಿ, ತನಿಖೆಗೆ ಆಗ್ರಹಿಸಿದ್ದರು. ಈ ಸಂಬಂಧ ಪ್ರಧಾನಿ @narendramodi ಯವರಿಗೆ ಸುಧೀರ್ಘವಾದ ಪತ್ರ ಬರೆದಿದ್ದು, ನ್ಯಾಯಾಂಗ ತನಿಖೆಗೆ ವಿನಂತಿಸಿದ್ದಾರೆ.
— Janata Dal Secular (@JanataDal_S) February 23, 2023
1/6 pic.twitter.com/eQPe4p8lHn
BMS ಟ್ರಸ್ಟ್ ನಲ್ಲಿ ನಡೆದಿರುವ ಗೋಲ್ ಮಾಲ್ ಬಗ್ಗೆ 2022ರ ಸೆಪ್ಟೆಂಬರ್ 22, 23ರಂದು ವಿಧಾನಸಭಾ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಸವಿಸ್ತಾರವಾಗಿ ಮಾತನಾಡಿ, ತನಿಖೆಗೆ ಆಗ್ರಹಿಸಿದ್ದರು. ಬಿಎಂಎಸ್ ಶೈಕ್ಷಣಿಕ ಟ್ರಸ್ಟ್ ನಲ್ಲಿ 10 ಸಾವಿರ ಕೋಟಿ ರೂಪಾಯಿ ವಂಚನೆ ಹಾಗೂ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಸುಧೀರ್ಘವಾದ ಪತ್ರ ಬರೆದಿದ್ದು, ನ್ಯಾಯಾಂಗ ತನಿಖೆಗೆ ವಿನಂತಿಸಿದ್ದಾರೆ.

1957ರಲ್ಲಿ ರಚನೆಯಾಗಿ ನೋಂದಣಿಯಾದ BMS ಟ್ರಸ್ಟ್ ನ ಮೂಲ ಡೀಡನ್ನು ಬದಲಾಯಿಸುವ ತಿದ್ದುಪಡಿಗೆ ಅನುಮೋದನೆ ನೀಡಿದ್ದು ಏಕೆ ಎಂಬ ಪ್ರಶ್ನೆಗೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ಸಮರ್ಪಕ ಉತ್ತರವನ್ನೇ ಈವರೆಗೂ ನೀಡಿಲ್ಲ. 2018ರಲ್ಲಿ ಕುಮಾರಸ್ವಾಮಿ ಸಿಎಂ ಯಾಗಿದ್ದಾಗ ಈ ತಿದ್ದುಪಡಿಯನ್ನು ತಿರಸ್ಕರಿಸಲಾಗಿತ್ತು.
ದಾನಿ ಟ್ರಸ್ಟ್, ಆಜೀವ ಟ್ರಸ್ಟ್ ನೇಮಕಾತಿ ಬಗ್ಗೆ BMS ಟ್ರಸ್ಟ್ ನಲ್ಲಿ ಕೈಗೊಂಡಿದ್ದ ತಿದ್ದುಪಡಿಗಳನ್ನು ಅಕ್ರಮ ಎಂದಿತ್ತು ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ. ಅಕ್ರಮ ನಿರ್ಧಾರಗಳನ್ನು ಸಕ್ರಮಗೊಳಿಸಿದ್ದು ಯಾರ ಹಿತಾಸಕ್ತಿ ಕಾಪಾಡಲು, ಸಚಿವ ಅಶ್ವತ್ಥ ನಾರಾಯಣ ಅವರೇ? ಪ್ರಧಾನಿ ನರೇಂದ್ರ ಮೋದಿ ಯವರೆ, ಭ್ರಷ್ಟಾಚಾರ ನಿರ್ಮೂಲನೆ ಎಂದರೆ ಇದೆಯೆ? ಎಂದು ಜೆಡಿಎಸ್ ರಾಜ್ಯ ಘಟಕ ಪ್ರಶ್ನಿಸಿದೆ.

ಶಿಕ್ಷಣ ಸಂಸ್ಥೆಯ ಟ್ರಸ್ಟ್ ನಲ್ಲಿ ಸರ್ಕಾರಿ ಟ್ರಸ್ಟಿಯಾಗಿದ್ದ ಐಎಎಸ್ ಅಧಿಕಾರಿಗಳಾದ ಡಾ. ಮಂಜುಳಾ, ಮದನ್ ಗೋಪಾಲ್ ಅವರು BMS ಟ್ರಸ್ಟ್ ನಲ್ಲಿ ನಡೆಯುತ್ತಿರುವ ಕಾನೂನುಬಾಹಿರ ನಿರ್ಧಾರಗಳ ಬಗ್ಗೆ ಸರ್ಕಾರಕ್ಕೆ ಬರೆದ ಪತ್ರಗಳು ಕಸದ ಬುಟ್ಟಿ ಕಂಡಿದ್ದು ಏಕೆ? ಪ್ರಧಾನಿಗೆ ಬರೆದ ಪತ್ರದಲ್ಲಿ ಇಂಚಿಂಚೂ ದಾಖಲೆಗಳನ್ನು ವಿವರಿಸಲಾಗಿದೆ.
ಸರ್ಕಾರಿ ಸ್ವತ್ತಾದ BMS ಟ್ರಸ್ಟ್ ನ್ನು ಹೀಗೆ ಖಾಸಗಿ ವ್ಯಕ್ತಿಗಳಿಗೆ ಧಾರೆ ಎರೆದು ಕೊಡುತ್ತಿರುವುದು ಏಕೆ? ಸಾರ್ವಜನಿಕರಿಗೆ ಸೇರಬೇಕಿದ್ದ ಶಿಕ್ಷಣ ಸಂಸ್ಥೆ, ಮತ್ತದರ ಸಾವಿರಾರು ಕೋಟಿ ಆಸ್ತಿಯನ್ನು ಲಪಟಾಯಿಸುವ ಉದ್ದೇಶವಲ್ಲದೆ ಮತ್ತೇನು? ಸರ್ಕಾರದ ಜತೆ ಹಲವರು ಕೊಟ್ಟ ಕಾಣಿಕೆಯಿಂದ ಬೆಳೆದ ಸಂಸ್ಥೆಯನ್ನು ಖಾಸಗಿ ಟ್ರಸ್ಟ್ಆಗಿ ಬದಲಿಸಿದ್ದೇಕೆ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಟ್ರಸ್ಟ್ ಗೆ ದಯಾನಂದ ಪೈ ಅವರನ್ನು ಆಜೀವ ಸದಸ್ಯರಾಗಿ ಹೇಗೆ ಕೂರಿಸಿದ್ರಿ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು ನ್ಯಾಯಾಂಗ ತನಿಖೆಯಾಗಲೇಬೇಕು. ಖಾಸಗಿ ರಿಯಲ್ ಎಸ್ಟೇಟ್ ಕುಳಗಳ ಪಟ್ಟಭದ್ರ ಹಿತಾಸಕ್ತಿಗೆ ನೆರವಾಗಲು ಈ ಷಡ್ಯಂತ್ರ ನಡೆದಿದೆ. ಇದಕ್ಕೆ ಸಚಿವ ಅಶ್ವತ್ಥ ನಾರಾಯಣ ಮತ್ತು ರಾಜ್ಯ ಬಿಜೆಪಿ ಸರ್ಕಾರ ಸಹಕಾರ ನೀಡಿದ್ದು ನಾಚಿಕೆಗೇಡಿನ ವಿಷಯ ಎಂದು ಜೆಡಿಎಸ್ ರಾಜ್ಯ ಘಟಕ ವಾಗ್ದಾಳಿ ನಡೆಸಿದೆ.












Click it and Unblock the Notifications