ದೇವೇಗೌಡರು ಬದುಕಿರುವಾಗಲೇ ಕುಮಾರಸ್ವಾಮಿ ಸಿಎಂ ಆಗಬೇಕು: ಹೆಚ್.ಡಿ ರೇವಣ್ಣ

ಹಾಸನ,ಜನವರಿ 21: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಬದುಕಿರುವಾಗಲೇ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದರು.

ಈ ಕುರಿತು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ರಾಜ್ಯದಲ್ಲಿ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ಹಾಸನದಲ್ಲಿ ಏಳಕ್ಕೆ ಏಳೂ ಕ್ಷೇತ್ರ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಹೇಳಿದ್ದೇನೆ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ. ಅಧಿಕಾರಕ್ಕೆ ಬಂದರೆ ಶ್ರೀ ಶಕ್ತಿ ಸಾಲಮನ್ನಾ ಮಾಡುತ್ತೇವೆ. ದೇವೇಗೌಡರು ಬದುಕಿರುವಾಗಲೇ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು, ಮುಖ್ಯಮಂತ್ರಿ ಮಾಡಲು ಕಾರ್ಯಕರ್ತರು ದುಡಿಯಬೇಕು ಎಂದರು.

ಕಾಂಗ್ರೆಸ್ ‌ನವರು ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳಿದ್ದಾರೆ. ಇಂಧನ ಇಲಾಖೆ ಈಗಾಗಲೇ 48 ಸಾವಿರ ಕೋಟಿ ಸಾಲದಲ್ಲಿದೆ. 200 ಯೂನಿಟ್ ಉಚಿತ ವಿದ್ಯುತ್ ಕೊಡೋದಕ್ಕೆ 9 ಸಾವಿರ ಕೋಟಿ ಬೇಕು. ರಾಜ್ಯದ ಜನತೆಗೆ ಈಗಾಗಲೇ ಬಿಜೆಪಿ, ಕಾಂಗ್ರೆಸ್ ಟೋಪಿ ಹಾಕಿವೆ. ಕುಮಾರಸ್ವಾಮಿ ಸರ್ಕಾರ ರೈತರ ಸಾಲಮನ್ನಾ ಮಾಡಿದ್ದಾರೆ. ಇನ್ನೂ ಕುಮಾರಸ್ವಾಮಿ ಅವಧಿಯಲ್ಲಿ ಹಾಸನ ಜಿಲ್ಲೆಗೆ ನೀಡಿದ್ದ ಯೋಜನೆಗಳನ್ನ ತಡೆ ಹಿಡಿದಿದ್ದಾರೆ. ವಿಮಾನ ನಿಲ್ದಾಣ, ಐಐಟಿ, ತೋಟಗಾರಿಕೆ ಕಾಲೇಜು ತಡೆ ಹಿಡಿದಿದ್ದಾರೆ. ತಾಂತ್ರಿಕ ವಿಶ್ವವಿದ್ಯಾಲಯವನ್ನೂ ತಡೆ ಹಿಡಿದಿದ್ದಾರೆ. ಐಐಟಿ, ಟೆಕ್ನಿಕಲ್ ಯೂನಿವರ್ಸಿಟಿ ಗೆ ಜಾಗ ಮೀಸಲಿಟ್ಟಿದ್ದೆವು, ದುರುದ್ದೇಶದಿಂದ ನಮ್ಮ ಯೋಜನೆಗಳನ್ನ ನಿಲ್ಲಿಸಿದ್ದಾರೆ ಎಂದರು.

HD Kumaraswamy Should Become CM While HD Deve Gowda Is Still Alive Said HD Revanna

ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ ಅವರಿಗೂ ಸೌಲಭ್ಯ ದ್ವಿಗುಣ ಮಾಡುತ್ತೇವೆ. ಓಪಿಎಸ್ ಯೋಜನೆಯನ್ನು ವಿಧಾನಸಭೆಯಲ್ಲಿ ಚರ್ಚಿಸುತ್ತೇವೆ. ಓಪಿಎಸ್ ಬಗ್ಗೆ ದೇವೇಗೌಡರು ಒಲವು ತೋರಿದ್ದಾರೆ, ಈ ಕುರಿತು ನಾವು ದೇವೇಗೌಡರ ಜೊತೆ ನಿಲ್ಲುತ್ತೇವೆ ಎಂದರು.

ಕಾಂಗ್ರೆಸ್ ನಾಯಕರ ಪ್ರಜಾಧ್ವನಿ ಯಾತ್ರೆ ಕುರಿತು ಮಾತನಾಡಿ ಆ ಧ್ವನಿ ಯಾರಿಗೂ ಮುಟ್ಟುತ್ತಿಲ್ಲ. ದೆಹಲಿಗೇ ಮುಟ್ಟಿಲ್ಲ, ಇನ್ನು ಕರ್ನಾಟಕಕ್ಕೆ ಮುಟ್ಟುತ್ತಾ ಎಂದು ಪ್ರಜಾ ಧ್ವನಿ ಬಗ್ಗೆ ಮಾಜಿ ಸಚಿವ ರೇವಣ್ಣ ವ್ಯಂಗ್ಯವಾಡಿದ್ದಾರೆ.

HD Kumaraswamy Should Become CM While HD Deve Gowda Is Still Alive Said HD Revanna

ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮ ಜಿಲ್ಲೆಗೆ ಏನು ಮಾಡಿವೆ. ರಾಜ್ಯದಲ್ಲಿ ಇಂಧನ‌ ಇಲಾಖೆಯಲ್ಲಿ 10 ಬಾರಿ ದರ ಹೆಚ್ಚಿಸಿದ್ದಾರೆ. ನಾನು ಅಧಿಕಾರದಲ್ಲಿದ್ದಾಗ ಒಂದು ರೂ ದರ ಹೆಚ್ಚಿಸಲಿಲ್ಲ. ಇನ್ನೂ ಕೆ.ಆರ್ ಪೇಟೆ ಬಂಡಾಯ ಸಮಸ್ಯೆಯನ್ನ ಕುಮಾರಸ್ವಾಮಿ ಸರಿ ಮಾಡುತ್ತಾರೆ ಎಂದರು.

ಜಿಲ್ಲೆಯಲ್ಲಿ ಜೆಡಿಎಸ್ ಕಿತ್ತುಕೊಂಡು ಹೋಗುತ್ತೆ ಎಂಬ ಪ್ರೀತಂ ಹೇಳಿಕೆ ಕುರಿತು ಮಾತನಾಡಿ, ಜಿಲ್ಲೆಯಲ್ಲಿ ಕಿತ್ಕೊಂಡು ಹೋಗದನ್ನ ಮೇ ಚುನಾವಣೆ ನಂತರ ಹೇಳುತ್ತೇನೆ ಎಂದ ರೇವಣ್ಣ ತಿರುಗೇಟು
ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+