ಸಿದ್ಧರಾಮಯ್ಯ ಹರಕೆಯ ಕುರಿ; ಅವರಿಗೆ ಕೋಲಾರ ಸೇಫ್ ಅಲ್ಲ: ಹೆಚ್.ಡಿ.ಕುಮಾರಸ್ವಾಮಿ
ಕಲಬುರಗಿ,ಜನವರಿ13: ಸಿದ‍್ಧರಾಮಯ್ಯಗೆ ಕೋಲಾರ ಸೇಫ್ ಅಲ್ಲ. ಸಿದ್ಧರಾಮಯ್ಯ ಹರಕೆಯ ಕುರಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಈ ಕುರಿತು ಶುಕ್ರವಾರ ಕಲಬುರಗಿ ಜಿಲ್ಲೆಯ ಕಡಣಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೋಲಾರದಲ್ಲಿ ಸುತ್ತಿ ಜನರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಕೋಲಾರ ಜಿಲ್ಲೆಯ ಕಾಂಗ್ರಸ್ ನಾಯಕರಿಗೆ ಮತಪಡೆಯುವ ಶಕ್ತಿಇಲ್ಲ ಅದಕ್ಕಾಗಿ ಬಲವಂತವಾಗಿ ಸಿದ್ಧರಾಮಯ್ಯರನ್ನ ನಿಲ್ಲಿಸಿದ್ದಾರೆ. ಯಾರು ಒತ್ತಡ ಹಾಕಿದ್ದಾರೆ ಗೊತ್ತಿಲ್ಲ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೇ ಹರಕೆಯ ಕುರಿಯಾಗಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಸಿದ್ದರಾಮಯ್ಯರನ್ನ ದೇವರೇ ಕಾಪಾಡಬೇಕು ಎಂದು ಲೇವಡಿ ಮಾಡಿದ್ದಾರೆ.
3rd ಮೀಸಲಾತಿ 2d ಗೆ ಸೇಪ೯ಡೆಗೆ ಹೈಕೋರ್ಟ್ ತಡೆ ವಿಚಾರವಾಗಿ ಮಾತನಾಡಿದ ಅವರು, 3ಬಿಯನ್ನು 2ಡಿ,ಗೆ ಘೋಷಣೆ ಮಾಡಿ ರಂಗ ಎನ್ನುಲ ಹೆಸರು ಮಂಗ ಮಾಡಿದ್ದಾರೆ. ಇವರು ಮೂಗಿಗೆ ತುಪ್ಪ ಸವರಿಲ್ಲ.ಬದಲಾಗಿ, ಹಣೆ ಮೇಲೆ ಸುರಿದ ವಾಸನೆ ಸಹ ಬಾರದಂತೆ ಮಾಡಿದ್ದಾರೆ ಎಂದ ಅವರು,ಮೀಸಲಾತಿ ವಿಚಾರದಲ್ಲಿ ರಾಜ್ಯ ಸಕಾ೯ರ ಮೋಸ ಮಾಡಿದೆ ಎಂದರು.

ರಾಜ್ಯಕ್ಕೆ ನರೇಂದ್ರ ಮೋದಿ ಬಂದಿರುವುದಕ್ಕೆ ಕಾಂಗ್ರೆಸ್, ಜೆಡಿಎಸ್, ಗೆ ಭಯ ಶುರುವಾಗಿದೆ ಎಂಬ ಸಿಪಿ ಯೋಗೇಶ್ವರ ಹೇಳಿಕೆ ಪ್ರತಿಕ್ರಿಯಿಸಿದ ಅವರು, ನರೇಂದ್ರ ಮೋದಿ ಬಂದರೆ,ನಮಗ್ಯಾವ ಭಯವು ಇಲ್ಲ.ರಾಜ್ಯ ಸಕಾ೯ರವಾಗಲಿ,ಕೇಂದ್ರ ಸರ್ಕಾರ ಆಗಲಿ ಯಾವ ಯೋಜನೆಗಳನ್ನು ಜನರಿಗೆ ಕೊಟ್ಟಿದ್ದಿರಾ ಎಂಬುದರ ಬಗ್ಗೆ ನಿಮಗೆ ಭಯವಾಗಬೇಕು ಎಂದು ತಿರುಗೇಟು ನೀಡಿದರು.












Click it and Unblock the Notifications