ಸಿಎಸ್ ಪುಟ್ಟರಾಜುಗೆ ಚಾಕೊಲೇಟ್ ಕೊಡ್ತೀನಿ ಕೊಡ್ತೀನಿ ಅಂದು ತಾನೇ ತಿಂದ ಎಚ್‌ಡಿ ಕುಮಾರಸ್ವಾಮಿ- ಡಿಕೆ ಶಿವಕುಮಾರ್
ಸಿಎಸ್ ಪುಟ್ಟರಾಜುಗೆ ಚಾಕೊಲೇಟ್ ಕೊಡ್ತೀನಿ ಕೊಡ್ತೀನಿ ಅಂತ ತಾವೇ ತಿಂನ್ಕೊಂಡು ಬಿಟ್ರು ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯವಾಗಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣೆ ಅಖಾಡ ರಂಗೇರುತ್ತಿದೆ. ಈ ನಡುವೆ ಆರೋಪ ಪ್ರತ್ಯಾರೋಪಗಳ ಕಿಚ್ಚು ಹೆಚ್ಚಾಗಿದೆ. ವಿಶೇಷವಾಗಿ ಪ್ರಚಾರದ ವೇಳೆ ಎಚ್‌ಡಿ ಕುಮಾರಸ್ವಾಮಿ 'ಕಾಂಗ್ರೆಸ್ ಗ್ಯಾರಂಟಿಯಿಂದ ಹಣ್ಮಕ್ಕಳು ದಾರಿ ತಪ್ಪಿದ್ದಾರೆ' ಎಂಬ ಹೇಳಿಕೆ ಕಾಂಗ್ರೆಸ್‌ಗೆ ಚುನಾವಣಾ ಅಸ್ತ್ರವಾಗಿದೆ.

ಕಳೆದ ದಿನ ಒಕ್ಕಲಿಗ ನಾಯಕರ ಸಭೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು ಮಂಡ್ಯ ಮೈತ್ರಿ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಅವರನ್ನು ಲೇವಡಿ ಮಾಡಿದ್ದಾರೆ. ಮಂಡ್ಯದಲ್ಲಿ ಸಿಎಸ್ ಪುಟ್ಟರಾಜು ಅವರಿಗೆ ಟಿಕೆಟ್ ಕೊಡುತ್ತೇನೆ ಅಂತ ಭರವಸೆ ನೀಡಿ ಕೊನೆಗೆ ಕುಮಾರಸ್ವಾಮಿ ತಾವೇ ನಿಂತುಕೊಂಡಿದ್ದಾರೆ. ಕೊನೆಯವರಗೆ ಆಸೆ ಹುಟ್ಟಿಸಿ ಕೊನೆಗೆ ತಾವೇ ನಿಂತು ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಸಿಎಸ್ ಪುಟ್ಟರಾಜುಗೆ ಅನ್ಯಾಯವಾಗಿದೆ. ಕುಮಾರಸ್ವಾಮಿ ಅವರ ಈ ನಡೆ ಸಿಎಸ್ ಪುಟ್ಟರಾಜು ಅವರಿಗೆ ಬೇಸರ ತಂದಿದೆ ಎಂದರು.
ಮಾತ್ರವಲ್ಲದೆ ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲೂ ಕುಮಾರಸ್ವಾಮಿ ವಿರುದ್ಧ ಡಿಕೆ ಶಿವಕುಮಾರ್ ಕಿಡಿ ಕಾರಿದರು. 'ಹೆದರಿಕೊಂಡು ಪಕ್ಕದ ಕ್ಷೇತ್ರಕ್ಕೆ ಹೋಗಿದ್ದೀಯಾ..? ಮುಂದಿನ ಜನರೇಷನ್ ನೀನು ಎಂಥಹ ಮೋಸಗಾರ ಎಂದು ನೋಡಲಿ. ನಿಂದೆಷ್ಟಿತ್ತು ನಿಮ್ಮ ಅಣ್ಣಂದು ಎಷ್ಟಿತ್ತು ಅನ್ನೋದು ಗೊತ್ತಾಗುತ್ತದೆ' ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ಮಾಡಿದರು.
'ಮಿಸ್ಟರ್.. ಮಿಸ್ಟರ್... ಕುಮಾರಸ್ವಾಮಿಗೆ ಹೇಳುತ್ತಿದ್ದೇನೆ. ನೀನು ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ಕಳೆದ ಬಾರಿನೇ ನಾನು ಚರ್ಚೆಗೆ ನಿನ್ನನ್ನು ಕರೆದಿದ್ದೆ. ನಾನು ಎಲ್ಲಾ ಮಹಿಳಾ ಸಂಘಟನೆಗಳನ್ನು ಚರ್ಚೆಗೆ ಕರೆದಿದ್ದೇನೆ. ಪ್ರತಿಯೊಂದು ತಾಲ್ಲೂಕಿನಲ್ಲೂ ಹೋರಾಟ ಮಾಡಬೇಕು. ಹೆಣ್ಮಕ್ಕಳು ದಾರಿ ತಪ್ಪಿದ್ದಾರೆ ಅಂದರೆ ಏನರ್ಥ?' ಎಂದು ಏಕವಚನದಲ್ಲಿ ಡಿಕೆ ಶಿವಕುಮಾರ್ ಕಿಡಿ ಕಾರಿದರು.

ಮಾತ್ರವಲ್ಲದೆ 'ಹಿಟ್ ಆಂಡ್ ರನ್‌ಗೆ ಕುಮಾರಸ್ವಾಮಿ ಬಹಳ ಫೇಮಸ್. ಅವರ ವಿಷಾದ ಬೇಡ ನಮ್ಗೆ. ಮರ್ಡರ್ ಮಾಡಿ ಸಾರಿ ಅಂದರೆ ಆಗುತ್ತಾ? ಕೆನ್ನೆಗೆ ಹೊಡೆದು ಸಾರಿ ಅಂತ ಹೇಳೋಕಾಗುತ್ತಾ? ಅದನ್ನು ನಾವು ಬಿಟ್ಟುಬಿಡೋಕೆ ಆಗುತ್ತಾ' ಎಂದು ಡಿಕೆ ಶಿವಕುಮಾರ್ ಗುಡುಗಿದ್ದಾರೆ.
'ಹೆಣ್ಮಕ್ಕಳು ದಾರಿ ತಪ್ಪಿದ್ದಾರೆ' ಹೇಳಿಕೆಗೆ ಎಚ್‌ಡಿಕೆ ವಿಷಾದ
ಇನ್ನೂ ಕಾಂಗ್ರೆಸ್ ಗ್ಯಾರಂಟಿಯಿಂದಾಗಿ 'ಹೆಣ್ಮಕ್ಕಳು ದಾರಿ ತಪ್ಪಿದ್ದಾರೆ' ಹೇಳಿಕೆಗೆ ಎಚ್‌ಡಿಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಗ್ಯಾರಂಟಿ ಪಿಕ್‌ಪಾಕೇಟ್ ಗ್ಯಾರಂಟಿ ಎಂದು ಕಿಡಿ ಕಾರಿದ್ದರು. ಇದೇ ಮಾತಿಗೆ ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ಮಾಡಿದ್ದಾರೆ.












Click it and Unblock the Notifications