ಎಚ್.ಡಿ. ಕುಮಾರಸ್ವಾಮಿ ವಿರುದ್ಧ "ಸ್ಟಿಂಗ್ ಆಪರೇಷನ್" ಷಡ್ಯಂತ್ರ; ಜೆಡಿಎಸ್ ಆರೋಪವೇನು

ಕರ್ನಾಟಕ ರಾಜಕೀಯದಲ್ಲಿ ಕಳೆದ ಒಂದು ತಿಂಗಳಿನಿಂದ ಸ್ಟಿಂಗ್ ಆಪರೇಷನ್ ವಿಚಾರದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಕರ್ನಾಟಕದ ಪ್ರಭಾವಿ ರಾಜಕಾರಣಿಗಳ ವಿಚಾರದಲ್ಲಿ ಈ ವಿಷಯ ಚರ್ಚೆ ಆಗುತ್ತಿದೆ. ಇದೀಗ ಎಚ್.ಡಿ. ಕುಮಾರಸ್ವಾಮಿ ವಿರುದ್ಧ "ಸ್ಟಿಂಗ್ ಆಪರೇಷನ್" ಷಡ್ಯಂತ್ರ ನಡೆಯುತ್ತಿದೆ ಎಂದು ಜೆಡಿಎಸ್ ಪಕ್ಷವು ಹೊಸ ಬಾಂಬ್ ಸಿಡಿಸಿದೆ.

ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್ ಪಕ್ಷವು, ಕಾಂಗ್ರೆಸ್‌ನ ಪ್ರಭಾವಿ ನಾಯಕರೊಂದಿಗೆ ಇರುವ ಕೆಲವರ ಫೋಟೋವನ್ನು ಹಂಚಿಕೊಂಡಿದೆ.

HD Kumaraswamy JDS Alleges Conspiracy to Target Kumaraswamy Through Sting Operation

ಕಾಂಗ್ರೆಸ್‌ನ 'ಡರ್ಟಿ ಸ್ಟಿಂಗ್‌ ಪಾಲಿಟಿಕ್ಸ್' !

ಕಾಂಗ್ರೆಸ್‌ನ 'ಡರ್ಟಿ ಸ್ಟಿಂಗ್‌ ಪಾಲಿಟಿಕ್ಸ್' ಎನ್ನುವ ಸಾಲುಗಳೊಂದಿಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಜೆಡಿಎಸ್ ಪಕ್ಷವು ಮಾಡಿರುವ ಟ್ವೀಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ "ಸ್ಟಿಂಗ್ ಆಪರೇಷನ್" ಷಡ್ಯಂತ್ರ ರೂಪಿಸಲು ಕರ್ನಾಟಕ ಕಾಂಗ್ರೆಸ್ ನಾಯಕರು ಯಾರನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ರಾಜ್ಯದ ಜನತೆ ನೋಡಲಿ.

ಡಿ.ಕೆ ಶಿವಕುಮಾರ್ ಆತ್ಯಾಪ್ತರಾಗಿರುವ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ವಸೂಲಿವಾಲಾ ಸುರ್ಜೇವಾಲಾ, ಸ್ಟಿಂಗ್‌ ಮಾಸ್ಟರ್‌ ಜೊತೆ ಆಪ್ತವಾಗಿ ಫೋಸ್ ಕೊಡುತ್ತಿರುವ ಈ ವ್ಯಕ್ತಿಯೇ ಬಾಗೇಪಲ್ಲಿ ಪ್ರಶಾಂತ್! ಸ್ಟಿಂಗ್ ಆಪರೇಷನ್‌ಗಳಿಗೆ ಕ್ಯಾಮೆರಾ ಫಿಟ್ ಮಾಡುವ ಈ "ಸ್ಟಿಂಗ್ ಅಸಿಸ್ಟೆಂಟ್" ಹಾಗೂ ಕಾಂಗ್ರೆಸ್ ನಾಯಕರನ್ನು ನಡುವಿನ ಬಾಂಧವ್ಯವೇ ಈ ಸ್ಟಿಂಗ್‌ ರಹಸ್ಯದ ಆಳ ಆಗಲಕ್ಕೆ ಸಾಕ್ಷಿ. ಹೇಡಿಗಳಂತೆ ಹಿಂಬಾಗಿಲಿನಿಂದ ಬಂದು, ಇಂತಹ ವ್ಯಕ್ತಿಗಳನ್ನು ಛೂ ಬಿಟ್ಟು, ಸುಳ್ಳು ಕೇಸುಗಳ ಮೂಲಕ ವಿರೋಧ ಪಕ್ಷದ ನಾಯಕರನ್ನು ಹೆದರಿಸಬಹುದು ಎಂಬುದು ಕಾಂಗ್ರೆಸ್‌ನ ಭ್ರಮೆ. ಮುಖ್ಯಮಂತ್ರಿಗಳೇ ನಿಮ್ಮ ಯಾವ ಷಡ್ಯಂತ್ರಗಳೂ ಇಲ್ಲಿ ನಡೆಯುವುದಿಲ್ಲ.

ಈ ಕ್ರಿಮಿನಲ್ʼಗಳು ಹಾಗೂ ಕಾಂಗ್ರೆಸ್ ನಾಯಕರ ನಡುವಿನ ಒಳಒಪ್ಪಂದವೇನು ಎಂಬುದನ್ನು ಡಿಕೆ ಶಿವಕುಮಾರ್‌ ಸರ್ಕಾರ ನಾಡಿನ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಜೆಡಿಎಸ್ ಪಕ್ಷವು ಆಗ್ರಹಿಸಿದೆ.

ಸಚಿವರ ಹೇಳಿಕೆಗೆ ಆಕ್ರೋಶ

ಗೃಹ ಸಚಿವ ಪ್ರಿಯಾಂಕ್ ಖರ್ಗೆ, "ನಾನು ಬಾಯಿ ಬಿಟ್ಟರೆ ಕುಮಾರಸ್ವಾಮಿಯವರಿಗೆ ಓಪನ್ ಹಾರ್ಟ್ ಸರ್ಜರಿ ಆಗುತ್ತೆ' ಎಂಬ ನಿಮ್ಮ ಹೇಳಿಕೆ ನಿಮ್ಮ ಅಹಂಕಾರ ಹಾಗೂ ವಿಕೃತ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದರೆ, ಅದನ್ನು ರಾಜಕೀಯವಾಗಿ ಎದುರಿಸಲಾಗದೆ ಒಬ್ಬ ನಾಯಕನ ಆರೋಗ್ಯದ ಬಗ್ಗೆ ಈ ರೀತಿ ಕೀಳಾಗಿ, ಅಮಾನವೀಯವಾಗಿ ಮಾತನಾಡುವುದು ನಿಮ್ಮ ಸಂಸ್ಕೃತಿಯೇ ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+