ಯೂಟರ್ನ್ ಮೇಲೆ ಯೂಟರ್ನ್ ತೆಗೆದುಕೊಂಡ ಮಾಜಿ ಸಿಎಂ ಕುಮಾರಸ್ವಾಮಿ!
ಬೆಂಗಳೂರು,
ಡಿ. 09: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಯೂಟರ್ನ್ ಮೇಲೆ ಯೂಟರ್ನ್ ತೆಗೆದುಕೊಂಡಿದ್ದಾರೆ. ಭೂ ಸುಧಾರಣೆ ತಿದ್ದುಪಡಿ ವಿರೋಧಿಸಿ ಇಡೀ ದೇಶಾದ್ಯಂತ ರೈತರು ಹೋರಾಟ ನಡೆಸುತ್ತಿದ್ದಾರೆ. ಜೆಡಿಎಸ್ ಕೂಡ ರಾಜ್ಯದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಕೊಟ್ಟಿತ್ತು. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 2020 ವಿಧಾನಸಭೆಯಲ್ಲಿ ಅಂಗೀಕಾರಗೊಂಡು ವಿಧಾನ ಪರಿಷತ್‌ಗೆ ಬಂದಿತ್ತು. ನಿನ್ನೆ ಏಕಾಏಕಿ ಕಾಯ್ದೆಯನ್ನು ಒಪ್ಪಿಕೊಳ್ಳುವ ಮೂಲಕ ಜೆಡಿಎಸ್ ನಾಯಕರು ಯೂಟರ್ನ್ ಹೊಡೆದಿದ್ದರು. id="toptextpromo"> id='are-slot-1' class='oiad oi-axt oiadv'>ಇದೇ
ವಿಚಾರ ಕುರಿತು ರೈತರ ಸಂಘಟನೆಗಳು ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ರೈತ ಸಂಘಟನೆಗಳ ನಾಯಕರು ಹಾಗೂ ಕಾಂಗ್ರೆಸ್ ನಾಯಕರ ಹೇಳಿಕೆಗಳಿಂದ ವಿಚಲಿತರಾದಂತೆ ಕಂಡುಬಂದ ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ಕೊಟ್ಟಿರುವ ಹೇಳಿಕೆ ಕುತೂಹಲ ಮೂಡಿಸಿದೆ. id='are-slot-2' class='oiad oi-axt oiadv'>
ಕೋಲಾರದಲ್ಲಿ ರೈತಪರ ಕಾಯ್ದೆ!
ಜೆಡಿಎಸ್ ಪಕ್ಷ ರೈತರ ವಿರೋಧಿ ಪಕ್ಷವಲ್ಲ ಎಂದು ಕೋಲಾರದಲ್ಲಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಆ ಮೂಲಕ ನಿನ್ನೆ ಭೂ ಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ವಿಧೇಯಕಕ್ಕೆ ಬೆಂಬಲ ಕೊಟ್ಟಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ತಿದ್ದುಪಡಿ ವಿಧೇಯಕದಲ್ಲಿ ವಿಧೇಯಮವನ್ನು ಮಂಡಿಸಿದಾಗ ಇದ್ದಿದ್ದ ಹಲವು ಸೆಕ್ಷನ್‌ಗಳನ್ನು ಕೈಬಿಟ್ಟಿದ್ದಾರೆ. ಪ್ರಮುಖವಾಗಿ 79 ಎ ಹಾಗೂ ಬಿ ಸೆಕ್ಷನ್‌ಗಳನ್ನು ವಿಧೇಯಕದಿಂದ ಕೈಬಿಟ್ಟಿದ್ದಾರೆ. ಹೀಗಾಗಿ ನಮ್ಮ ಪಕ್ಷ ಭೂ ಸುಧಾರಣಾ ತಿದ್ದುಪಡಿ ವಿಧೇಯಕವನ್ನು ಬೆಂಬಲಿಸಿದೆ ಎಂದಿದ್ದರು.

ವಿಧಾನಸೌಧದಲ್ಲಿ ಯೂಟರ್ನ್!
ಆ ಮೂಲಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ವಿರೋಧಿಸಿದ್ದ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಯೂಟರ್ನ್ ತೆಗೆದುಕೊಂಡಿದ್ದರು. ಅದಾದ ಬಳಿಕ ಕಾಂಗ್ರೆಸ್ ನಾಯಕರು ಹಾಗೂ ರೈತ ಸಂಘಟನೆಗಳು ಕುಮಾರಸ್ವಾಮಿ ಅವರ ಮೇಲೆ ಮುಗಿಬಿದ್ದಿದ್ದವು. ಹೀಗಾಗಿ ಕೋಲಾರದಿಂದ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಲು ವಿಧಾನಸೌಧದಕ್ಕೆ ಆಗಮಿಸಿದ ಎಚ್.ಡಿ. ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟರು. ಆದರೆ ಕೋಲಾರದಲ್ಲಿ ಕೊಟ್ಟಿದ್ದ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ಕೊಡುವ ಮೂಲಕ ಮತ್ತೊಮ್ಮೆ ಯೂಟರ್ನ್ ತೆಗೆದುಕೊಂಡರು.

ಪರಿಷತ್ ವಿಚಾರ ನಂಗೆ ಗೊತ್ತಿಲ್ಲ
ವಿಧಾನಸೌಧದಲ್ಲಿ ಇದೇ ವಿಚಾರ ಕುರಿತು ಮತ್ತೊಮ್ಮೆ ಮಾತನಾಡಿದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ಯೂಟರ್ನ್ ಹೊಡೆದರು. ಈ ವಿಚಾರದಲ್ಲಿ ಧ್ವಂಧ್ವ ನಿಲುವಿದೆ ಎಂಬುದನ್ನು ನಾನೂ ಒಪ್ಪುತ್ತೇನೆ. ನಾನು ವಿಧಾನ ಪರಿಷತ್ ಸದಸ್ಯನಲ್ಲ. ಅಲ್ಲಿ ಏನಾಯ್ತು ಎಂಬುದು ನನ್ನ ಗಮನಕ್ಕೆ ಬರಲಿಲ್ಲ. ವಿಧೇಯಕಕ್ಕೆ ಬೆಂಬಲ ಕೊಡುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿಲ್ಲ. ಆದರೂ ನಮ್ಮ ಸದಸ್ಯರು ಆತ್ಮಸಾಕ್ಷಿಯಾಗಿ ಮತ ಹಾಕಿದ್ದಾರೆ ಎಂದು ಹೇಳಿದರು. ಕೋಲಾರದಲ್ಲಿ ಕಾನೂನು ಅರಿತೆ ಬೆಂಬಲಿಸಿದ್ದೇವೆ ಎಂದಿದ್ದ ಕುಮಾರಸ್ವಾಮಿ, ವಿಧಾನಸೌಧದಲ್ಲಿ ವಿಧಾನ ಪರಿಷತ್ ವಿಚಾರ ಗೊತ್ತೇ ಆಗಿಲ್ಲ ಎಂದರು.
Recommended Video

ಚರ್ಚಿಸಿ ಮತ್ತೆ ಪ್ರತಿಕ್ರಿಯೆ ಕೊಡ್ತೇನೆ
ಮಾಜಿ ಸಿಎಂ ಕುಮಾರಸ್ವಾಮಿ ಅವರು ದೊಡ್ಡ ಡೀಲ್ ಮಾಸ್ಟರ್. ಹಣಕ್ಕೆ ಅವರು ಮಾರಿಕೊಳ್ಳುತ್ತಾರೆ ಎಂಬ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರ ಹೇಳಿಕೆಯನ್ನು ನಿರಾಕರಿಸಿದ ಕುಮಾರಸ್ವಾಮಿ ಅವರು, ಅಂತಹ ಆರೋಪವನ್ನು ನಾನು ಒಪ್ಪಲ್ಲ. ನಮ್ಮ ಶಾಸಕರು ವಿಧಾನ ಪರಿಷತ್‌ನಲ್ಲಿ ಆತ್ಮಸಾಕ್ಷಿಯಾಗಿ ಭೂ ಸುಧಾರಣಾ ಕಾಯ್ದೆಗೆ ಬೆಂಬಲ ಕೊಟ್ಟಿದ್ದಾರಾ? ಇಲ್ಲವಾ ಎಂಬುದು ನಮಗೆ ಗೊತ್ತಿಲ್ಲ. ಈ ಬಗ್ಗೆ ಚರ್ಚಿಸಿ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ಈ ವಿಚಾರದಲ್ಲಿ ಕುಮಾರಸ್ವಾಮಿ ಅವರು ನುಣುಚಿಕೊಂಡರು.












Click it and Unblock the Notifications