ಎಚ್ಡಿಕೆ ಸಚಿವ ಸಂಪುಟ : ಜಿಲ್ಲಾ ಉಸ್ತುವಾರಿ ಗಳಿಸಲು ಲಾಬಿಯೋ ಲಾಬಿ

ಬೆಂಗಳೂರು, ಜುಲೈ 24: ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಆದರೆ, ಈ ನಡುವೆ ಸಚಿವ ಸಂಪುಟದ ಸದಸ್ಯರ ನಡುವೆ ಜಿಲ್ಲಾ ಉಸ್ತುವಾರಿ ಪಟ್ಟ ಗಳಿಸಲು ಲಾಬಿ ಜೋರಾಗಿ ನಡೆದಿರುವ ಸುದ್ದಿ ಬಂದಿದೆ.

ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟ ರಚನೆ ಮಾಡಿದರೂ ಅಪಸ್ವರ ಕೇಳಿ ಬರುತ್ತಲೇ ಇತ್ತು. ಈಗ ಎರಡನೇ ಬಾರಿ ಸಂಪುಟ ವಿಸ್ತರಣೆಗೆ ಕುಮಾರಸ್ವಾಮಿ ಅವರು ಸಜ್ಜಾಗಿದ್ದು, ಖಾಲಿ ಉಳಿದಿರುವ 6 ಸ್ಥಾನಗಳಿಗಾಗಿ ಲಾಬಿ ನಡೆದಿದೆ.

ಈ ನಡುವೆ ಆಷಾಢ ಮಾಸ ಮುಗಿದ ಮೇಲೆ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ ಮಾಡಲಾಗುತ್ತದೆ. ಇದಕ್ಕೆ ರಾಹುಲ್ ಗಾಂಧಿ ಅವರು ಒಪ್ಪಿಗೆಯನ್ನು ನೀಡಿದ್ದಾರೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರುಗಳ ಸಂಭಾವ್ಯ ಪಟ್ಟಿ ಹೊರ ಬಂದಿದ್ದು, ಜಿಟಿ ದೇವೇಗೌಡ ಹಾಗೂ ಡಿಕೆ ಶಿವಕುಮಾರ್ ಅವರಿಗೆ ತಮ್ಮ ಸ್ವಂತ ಜಿಲ್ಲೆಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಸಿಕ್ಕಿದೆ.

ಜಿಲ್ಲಾ ಉಸ್ತುವಾರಿ ನೇಮಕ ವಿಳಂಬವೇಕೆ?

ಜಿಲ್ಲಾ ಉಸ್ತುವಾರಿ ನೇಮಕ ವಿಳಂಬವೇಕೆ?

ಜುಲೈ 14ರಿಂದ ಆಗಸ್ಟ್ 11ರವರೆಗೆ ಆಷಾಢವಿದ್ದು, ಅಲ್ಲಿಯವರೆಗೂ ಸಂಪುಟ ಸಚಿವ ಸ್ಥಾನದ ಆಕಾಂಕ್ಷಿಗಳು, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬಯಸಿರುವವರು ಸಂಪುಟ ಸೇರುವ ಆಕಾಂಕ್ಷಿಗಳ ಆಸೆಯನ್ನು ಅದುಮಿಟ್ಟುಕೊಳ್ಳಬೇಕಾಗಿದೆ. ಕಾಂಗ್ರೆಸ್ ಕಾರ್ಯಕಾರಿ ನಡೆಯುವ ಸಭೆಯಲ್ಲಿ ಸಚಿವರು ಯಾರಾಗಬೇಕು? ನಿಗಮ ಮಂಡಳಿಗೆ ಯಾರು ಎಂಬುದು ನಿರ್ಧಾರವಾಗಲಿದೆ. ವಿಧಾನಪರಿಷತ್​ನ ಎರಡು ಸ್ಥಾನಕ್ಕೂ ಸಹ ಚರ್ಚೆ ನಡೆದಿದೆ.

ಕೆಪಿಸಿಸಿಯ ನೂತನ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಪರಮೇಶ್ವರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಒಂದು ಸುತ್ತಿನ ಮಾತುಕತೆ ನಡೆಸಿ, ಅಂತಿಮ ಪಟ್ಟಿಯನ್ನು ರಾಹುಲ್ ಗಾಂಧಿ ಮುಂದಿಟ್ಟು ಚರ್ಚಿಸಿದ್ದಾರೆ. ಇದರ ಜತೆಗೆ ಜಿಲ್ಲಾ ಉಸ್ತುವಾರಿ ನೇಮಕಾತಿ ಬಗ್ಗೆ ಕೂಡಾ ಚರ್ಚೆ ನಡೆದಿದೆ.

ಜಿಲ್ಲಾ ಉಸ್ತುವಾರಿ ಪಟ್ಟಿ ಯಾರಿಗೆ ಲಾಭ?

ಜಿಲ್ಲಾ ಉಸ್ತುವಾರಿ ಪಟ್ಟಿ ಯಾರಿಗೆ ಲಾಭ?

ಜಿಲ್ಲೆಗಳ‌ ಉಸ್ತುವಾರಿಗೆ ಲಾಬಿ ನಡೆದಿದ್ದು, ಸದ್ಯ ಲಭ್ಯವಿರುವ ಸಂಭಾವ್ಯ ಪಟ್ಟಿಯಂತೆ ಮೈಸೂರು ಜಿಲ್ಲಾ ಉಸ್ತುವಾರಿ ಗಿಟ್ಟಿಸಿಕೊಳ್ಳುವಲ್ಲಿ ಜಿ. ಟಿ. ದೇವೇಗೌಡ ಹಾಗೂ ರಾಮನಗರ ಉಸ್ತುವಾರಿ ಗಳಿಸುವಲ್ಲಿ ಸಚಿವ ಡಿ.ಕೆ ಶಿವಕುಮಾರ್​ ಯಶಸ್ವಿಯಾಗಿದ್ದಾರೆ. ಜತೆಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿಯನ್ನು ಕೂಡಾ ಡಿಕೆಶಿಗೆ ವಹಿಸಿಕೊಡಲಾಗಿದೆ.

ಬೆಂಗಳೂರು ನಗರ ಉಸ್ತುವಾರಿ ಡಿಸಿಎಂ

ಬೆಂಗಳೂರು ನಗರ ಉಸ್ತುವಾರಿ ಡಿಸಿಎಂ

ಬೆಂಗಳೂರು ನಗರ ಉಸ್ತುವಾರಿಯನ್ನು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್​ ಅವರಿಗೆ ನೀಡಲಾಗಿದೆ. ಇದು ನಿರೀಕ್ಷಿತವಾಗಿತ್ತು. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವುದರಿಂದ ರಾಜಧಾನಿ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ : ಜಮೀರ್​ ಅಹಮ್ಮದ್​

ಹಾಸನ : ನಿರೀಕ್ಷೆಯಂತೆ ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳಿಗೆ ಜೆಡಿಎಸ್ ಸಚಿವರುಗಳೇ ಉಸ್ತುವಾರಿಯಾಗಲಿದ್ದಾರೆ. ಹಾಸನಕ್ಕೆ ಎಚ್.ಡಿ.ರೇವಣ್ಣ ಉಸ್ತುವಾರಿ.

ರಾಮನಗರ, ಬಳ್ಳಾರಿ : ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಎರಡು ಜಿಲ್ಲೆಗಳ ಹೆಚ್ಚಿನ ಜವಾಬ್ದಾರಿ ಸಿಕ್ಕಿದೆ.

ಮೈಸೂರು: ಸಿದ್ದರಾಮಯ್ಯ ಅವರ ವಿರುದ್ಧ ಗೆದ್ದರೂ ಕೇಳಿದ ಸಚಿವ ಸ್ಥಾನ ಸಿಗಲಿಲ್ಲ ಎಂದು ಮುನಿಸುಕೊಂಡಿದ್ದ ಜಿ.ಟಿ.ದೇವೇಗೌಡ ಅವರಿಗೆ ತಮ್ಮ ಜಿಲ್ಲೆಯನ್ನು ನೋಡಿಕೊಳ್ಳುವ ಹೊಣೆ ಹೊರೆಸಲಾಗಿದೆ.

ಮಂಡ್ಯ:ಸಿ.ಎಸ್​.ಪುಟ್ಟರಾಜು

ಚಾಮರಾಜನಗರ: ಪುಟ್ಟರಂಗಶೆಟ್ಟಿ

ಕೊಡಗು ಉಸ್ತುವಾರಿಯಾಗಿ ಜಾರ್ಜ್

ಕೊಡಗು ಉಸ್ತುವಾರಿಯಾಗಿ ಜಾರ್ಜ್

ಕೊಡಗು : ಗಣಪತಿ ಪ್ರಕರಣದ ನಂತರ ತಮ್ಮ ಇಮೇಜ್ ಬದಲಾಯಿಸಿಕೊಳ್ಳಲು ಕೆ.ಜೆ.ಜಾರ್ಜ್​ ಅವರಿಗೆ ಕೊಡಗಿನ ಉಸ್ತುವಾರಿ ನೀಡಲಾಗಿದೆ.

ಚಿಕ್ಕಮಗಳೂರು : ಮೈಸೂರು ಭಾಗದ ಸಾ.ರಾ.ಮಹೇಶ್​ ಅವರಿಗೆ ಮಲೆನಾಡು, ಅರೆ ಮಲೆನಾಡು ಪ್ರಾಂತ್ಯ ಚಿಕ್ಕಮಗಳೂರು ಎಷ್ಟರಮಟ್ಟಿಗೆ ಒಗ್ಗುವುದೋ ಕಾದು ನೋಡಬೇಕಿದೆ.

ಕೋಲಾರ, ಗದಗ : ಕೃಷ್ಣ ಭೈರೇಗೌಡ

ದಕ್ಷಿಣ ಕನ್ನಡ : ಕರಾವಳಿ ಭಾಗದ ಏಕೈಕ ಪ್ರತಿನಿಧಿಯಾಗಿರುವ ಯು.ಟಿ.ಖಾದರ್ ಅವರಿಗೆ ನಿರೀಕ್ಷೆಯಂತೆ ಸ್ಥಾನ ಸಿಕ್ಕಿದೆ.

ಹಾವೇರಿ : ಆರ್​.ಶಂಕರ್

ದಾವಣಗೆರೆ : ಎನ್​.ಮಹೇಶ್

ಬಾಗಲಕೋಟೆ : ಎಂ.ಸಿ.ಮನಗೂಳಿ

ಶಿವಮೊಗ್ಗಕ್ಕೆ ಡಿಸಿ ತಮ್ಮಣ್ಣ

ಶಿವಮೊಗ್ಗಕ್ಕೆ ಡಿಸಿ ತಮ್ಮಣ್ಣ

ರಾಯಚೂರು - ವೆಂಕಟರಾವ್​​ ನಾಡಗೌಡ,

ವಿಜಯಪುರ - ಶಿವಾನಂದ ಪಾಟೀಲ್

ಬೀದರ್ ​- ರಾಜಶೇಖರ್​ ಪಾಟೀಲ್​

ಯಾದಗಿರಿ, ಕಲಬುರ್ಗಿ -ಪ್ರಿಯಾಂಕ್​ ಖರ್ಗೆ

ಶಿವಮೊಗ್ಗ : ಮಂಡ್ಯದ ಡಿ.ಸಿ.ತಮ್ಮಣ್ಣ ಅವರು ಶಿವಮೊಗ್ಗದ ಉಸ್ತುವಾರಿ ವಹಿಸಿಕೊಂಡು ಏನು ಸಾಧಿಸಲಿದ್ದಾರೆ ಎಂಬುದು ಕುತೂಹಲಕಾರಿ

ಉಡುಪಿ - ಡಾ.ಜಯಮಾಲಾ

ಬೆಳಗಾವಿಗೆ ಯಾರು?

ಬೆಳಗಾವಿಗೆ ಯಾರು?

ಬೆಳಗಾವಿ ಉಸ್ತುವಾರಿಗಾಗಿ ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಅಲ್ಲದೆ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಕೇಳಿ ಬಂದಿತ್ತು. ರಮೇಶ್ ಅವರಿಗೆ ಬೆಳಗಾವಿ ಅಲ್ಲದೆ, ಹುಬ್ಬಳ್ಳಿ-ಧಾರವಾಡ ಜವಾಬ್ದಾರಿಯನ್ನು ನೀಡಲಾಗಿದೆ. ಸತೀಶ್ ಹಾಗೂ ಲಕ್ಷ್ಮೀ ಪೈಕಿ ಒಬ್ಬರು ಮುಂದಿನ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಪಡೆಯಲಿದ್ದಾರೆ.

ಹುಬ್ಬಳ್ಳಿ-ಧಾರವಾಡ,​ ಬೆಳಗಾವಿ - ರಮೇಶ್​ ಜಾರಕಿಹೊಳಿ

ಉತ್ತರ ಕನ್ನಡ - ಆರ್​.ವಿ.ದೇಶಪಾಂಡೆ

ಕೊಪ್ಪಳ - ಬಂಡೆಪ್ಪ ಖಾಶಂಪುರ

ಚಿತ್ರದುರ್ಗ - ವೆಂಕಟರಮಣಪ್ಪ

ಚಿಕ್ಕಬಳ್ಳಾಪುರ - ಎನ್. ಎಚ್. ಶಿವಶಂಕರರೆಡ್ಡಿ

ತುಮಕೂರು - ಶ್ರೀನಿವಾಸ್ ( ಗುಬ್ಬಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+