• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವಾಸಮತಯಾಚನೆ : ಸದನದಲ್ಲಿ ಏನೆಲ್ಲ ಘಟನೆಗಳು ನಡೆಯಲಿವೆ?

|

ಬೆಂಗಳೂರು, ಜುಲೈ 17: ಶಾಸಕರ ಸರಣಿ ರಾಜೀನಾಮೆ, ಸಚಿವರ ರಾಜೀನಾಮೆ, ರೆಸಾರ್ಟ್ ರಾಜಕೀಯ, ಸಂಧಾನ ಸಭೆ, ರೆಬೆಲ್ ಶಾಸಕರ ಮುಂಬೈ ಪ್ರೀತಿ, ಸುಪ್ರೀಂಕೋರ್ಟಿನ ಮಧ್ಯಂತರ ತೀರ್ಪಿನ ಬಳಿಕ, ರಾಜ್ಯ ರಾಜಕೀಯ ಪ್ರಹಸನ ಕ್ಲೈಮ್ಯಾಕ್ಸ್ ಎಂಬಂತೆ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಸರ್ಕಾರ ವಿಶ್ವಾಸಮತ ಯಾಚನೆ ಮಾಡುವ ಘಟ್ಟಕ್ಕೆ ಬಂದಿದೆ.

'ನಾನ್ಯಾಕೆ ರಾಜೀನಾಮೆ ನೀಡಲಿ' ಎಂದಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜುಲೈ 18ರ ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ. ಆಪರೇಷನ್ ಕಮಲದ ಮೂಲಕ ಶಾಸಕರ ಖರೀದಿ ಒಂದಡೆಯಾದರೆ, ಮತ್ತೊಂದೆಡೆ ಪಕ್ಷಕ್ಕಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಹೆದರಿಸಿ, ಬೆದರಿಸಿ ಮೈತ್ರಿ ಪಕ್ಷದ ಸದಸ್ಯರನ್ನು ಕೂಡಿ ಹಾಕಿಕೊಂಡಿದ್ದಾರೆ.

ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆ?

"ಈಗಾಗಲೇ ಆರು ಬಾರಿ ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿ ಬಿಜೆಪಿ ವಿಫಲವಾಗಿದೆ. ಈ ಬಾರಿ ದೊಡ್ಡ ಪ್ರಮಾಣದಲ್ಲೇ ಮಾಡಿದ್ದಾರೆ. ರಾಜ್ಯದ ಹಿತದೃಷ್ಟಿಯಿಂದ ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ರಾಜೀನಾಮೆ ನೀಡಿರುವ ಶಾಸಕರು ಅನರ್ಹತೆಗೊಳ್ಳಲಿ ಇಲ್ಲವೇ ಶಾಸಕ ಸ್ಥಾನ ತೊರೆಯಲಿ. ನನಗೆ ಇವರ ಬೆಂಬಲ ಬೇಕಿಲ್ಲ. ನಾನು ಬಹುಮತ ಸಾಬೀತುಪಡಿಸಲು ಏನು ಬೇಕು ಅದನ್ನು ಮಾಡುತ್ತೇನೆ. ಇದೇ ರೀತಿ ಮುಂದುವರೆದರೆ, ಪ್ರಜಾತಂತ್ರ ಉಳಿಯುವುದಿಲ್ಲ. ವ್ಯವಸ್ಥೆ ಎಲ್ಲಿಗೆ ಹೋಗುತ್ತೆ ಎಂದು ತಿಳಿಯುವುದಿಲ್ಲ" ಎಂದು ವಿಧಾನಸೌಧದ ಮೊಗಸಾಲೆಯಲ್ಲಿ ಇತ್ತೀಚೆಗೆ ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಸ್ಪೀಕರ್ ಸ್ಥಾನಕ್ಕೆ ಬಲ ತುಂಬಿದ ಸುಪ್ರೀಂ: ಆದೇಶದಲ್ಲಿ ಏನಿದೆ?

ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮೇಲ್ಮನೆಯಲ್ಲಿ ಏನೆಲ್ಲ ಘಟನಾವಳಿಗಳು ನಡೆಯಲಿವೆ. ವಿಶ್ವಾಸಯತ ಯಾಚನೆ ಪ್ರಕ್ರಿಯೆ ಹೇಗೆ ನಡೆಯಲಿದೆ? ಸದ್ಯ ವಿಧಾನಸಭೆಯಲ್ಲಿ ಸಂಖ್ಯಾಬಲ ಎಷ್ಟಿದೆ?

ಮೊದಲಿಗೆ ವಿಧಾನಸಭೆಯಲ್ಲಿನ ಸಂಖ್ಯಾಬಲ

ಮೊದಲಿಗೆ ವಿಧಾನಸಭೆಯಲ್ಲಿನ ಸಂಖ್ಯಾಬಲ

ಜುಲೈ 06ರಿಂದ ಆರಂಭವಾದ ರಾಜೀನಾಮೆ ನೀಡುವ ನಾಟಕ ಇನ್ನೂ ಮುಂದುವರೆದಿದೆ. ಸುಪ್ರೀಂಕೋರ್ಟ್ ಆದೇಶದ ಬಳಿಕ ಅತೃಪ್ತ ಶಾಸಕರಿಗೆ ಹೆಚ್ಚಿನ ಬಲ ಬಂದಿದೆ ಎನ್ನಲಾಗಿದೆ. ಆದರೆ, ಎಲ್ಲವೂ ಸ್ಪೀಕರ್ ಕೈಲಿದ್ದು, ರಾಜೀನಾಮೆ ಅಂಗೀಕರಿಸಿದರೆ, ಸದನದಲ್ಲಿ ಸಂಖ್ಯಾಬಲ ಲೆಕ್ಕಾಚಾರದಲ್ಲಿ ಎಲ್ಲಾ ರಾಜಕೀಯ ತಂತ್ರಗಳು ಉಲ್ಟಾ ಹೊಡೆಯಲಿವೆ. ಕೊನೆಯದಾಗಿ ಲೆಕ್ಕಕ್ಕೆ ಬರುವುದು ಯಾವ ಪಕ್ಷಕ್ಕೆ ಎಷ್ಟು ಸದಸ್ಯರ ಬಲ ಇದೆ? ಎಂಬುದು ಮಾತ್ರ.

16 ಮಂದಿ ರಾಜೀನಾಮೆ ಬಳಿಕ ಜುಲೈ 17ರಂದು 16 ಮಂದಿ ರಾಜೀನಾಮೆ ಬಳಿಕ

ವಿಧಾನಸಭೆಯಲ್ಲಿ ಪಕ್ಷವಾರು ಬಲಾಬಲ:

ಒಟ್ಟು ಸದಸ್ಯ ಬಲ : 224 -16

ಕಾಂಗ್ರೆಸ್ + ಜೆಡಿಎಸ್ : 101

ಮ್ಯಾಜಿಕ್ ನಂಬರ್ : 105

ಬಿಜೆಪಿ : 107

ಬಿಎಸ್ ಪಿ: 1 (ಎನ್ ಮಹೇಶ್)

ಸ್ಪೀಕರ್ ಅವರು ಫಲಿತಾಂಶ ಘೋಷಿಸಲಿದ್ದಾರೆ

ಸ್ಪೀಕರ್ ಅವರು ಫಲಿತಾಂಶ ಘೋಷಿಸಲಿದ್ದಾರೆ

* ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಭಾಷಣ, ನಂತರ ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರ ಭಾಷಣ, ಚರ್ಚೆ(ಇದು ಅವರ ಇಚ್ಛೆಗೆ ಬಿಟ್ಟಿದ್ದು, ಚರ್ಚೆಗಿಳಿಯದೇ ವಿಶ್ವಾಸಮತಕ್ಕೆ ಆಗ್ರಹಿಸಬಹುದು).

* ವಿಶ್ವಾಸಮತಯಾಚನೆ ಮಾಡದೆ ಭಾಷಣ ನಂತರ ರಾಜೀನಾಮೆಯನ್ನು ಸಲ್ಲಿಸುವುದಾಗಿ ಕೂಡಾ ಎಚ್ಡಿಕೆ ಹೇಳಬಹುದು.

* ಇದಲ್ಲದೆ, ಉಭಯ ಪಕ್ಷಗಳ ಹಿರಿಯ ನಾಯಕರಿಗೂ ಭಾಷಣದ ಅವಕಾಶವಿರುತ್ತದೆ.

* ವಿಶ್ವಾಸಮತ ಹೇಗೆ ನಡೆಸಬೇಕು ಎಂಬುದನ್ನು ಸ್ಪೀಕರ್ ನಿರ್ಧರಿಸಲಿದ್ದಾರೆ. ಹಾಜರಿರುವ ಸದಸ್ಯರು ಕೈ ಎತ್ತಿ ಧ್ವನಿಮತ ಕೂಗಬಹುದು.

* ಮತದಾನ ಪ್ರಕ್ರಿಯೆ ಬಳಿಕ, ಸ್ಪೀಕರ್ ಅವರು ಫಲಿತಾಂಶ ಘೋಷಿಸಲಿದ್ದಾರೆ.

ಕರ್ನಾಟಕ ರಾಜಕೀಯ ಬಿಕ್ಕಟ್ಟು, ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು?

ಎಲ್ಲಾ ಬೆಂಬಲಿಗರ ಶಾಸಕರ ಪೆರೇಡ್ ನಡೆಸಬಹುದು

ಎಲ್ಲಾ ಬೆಂಬಲಿಗರ ಶಾಸಕರ ಪೆರೇಡ್ ನಡೆಸಬಹುದು

* ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ - ಜೆಡಿಎಸ್ ಸರ್ಕಾರವು ಒಂದು ವೇಳೆ ವಿಶ್ವಾಸಮತ ಗಳಿಸಿದರೆ, ಸರ್ಕಾರ ಉಳಿಯಲಿದೆ. ಇಲ್ಲದಿದ್ದರೆ, ಬಿಎಸ್ ಯಡಿಯೂರಪ್ಪ ನೇತೃತ್ವದ ಭಾರತೀಯ ಜನತಾ ಪಕ್ಷವು ಮತ್ತೊಮ್ಮೆ ರಾಜ್ಯಪಾಲ ವಜುಭಾಯಿ ವಾಲ ಅವರ ಮೊರೆ ಹೊಕ್ಕು, ಸರ್ಕಾರ ರಚನೆ, ವಿಶ್ವಾಸಮತ ಯಾಚನೆಗೆ ಅವಕಾಶ ಕೋರಬಹುದು. ಅಗತ್ಯ ಸದಸ್ಯರ ಬಲ ಇರುವ ಸಹಿ ಪತ್ರವನ್ನು ತೋರಿಸಬಹುದು, ಅಥವಾ ಎಲ್ಲಾ ಬೆಂಬಲಿಗರ ಶಾಸಕರ ಪೆರೇಡ್ ನಡೆಸಬಹುದು.

* ಬಿಜೆಪಿ ನೀಡಿದ ಮನವಿಯನ್ನು ಸ್ವೀಕಾರ ಯೋಗ್ಯ ಎಂದೆನಿಸಿದರೆ, ಮನವಿಯನ್ನು ಪುರಸ್ಕರಿಸಿದ ರಾಜ್ಯಪಾಲರು ಸೂಚಿಸಿದ ದಿನದಂದು ವಿಶ್ವಾಸಮತ ಯಾಚನೆ ಮತ್ತೊಮ್ಮೆ ನಡೆಯಲಿದೆ.

ವಿಶ್ವಾಸಮತ ಯಾಚನೆ ದಿನದಂದು

ವಿಶ್ವಾಸಮತ ಯಾಚನೆ ದಿನದಂದು

* ವಿಶ್ವಾಸಮತ ಯಾಚನೆ ದಿನಗಳಂದು ವಿಧಾನಸಭಾಂಗಣದಲ್ಲಿ ಸುಮಾರು 150ಕ್ಕೂ ಅಧಿಕ ಮಾರ್ಷಲ್ಲುಗಳಿರುತ್ತಾರೆ. ಗನ್ ಮ್ಯಾನ್, ಸಚಿವರ ಆಪ್ತ ಕಾರ್ಯದರ್ಶಿಗಳಿಗೆ ಪ್ರವೇಶವಿರುವುದಿಲ್ಲ

* ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶವಿರುತ್ತದೆ. ಆದರೆ, ಒಬ್ಬ ವರದಿಗಾರ ಒಬ್ಬ ಕ್ಯಾಮರಾ ಮನ್ ಗೆ ಸೀಮಿತವಾಗಿರುತ್ತದೆ.

* ವಿಶ್ವಾಸಮತ ಯಾಚನೆ ದಿನದಂದು ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡದ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು, ನೌಕರರು ಹಾಗೂ ಇತರೆ ಸಿಬ್ಬಂದಿ ವರ್ಗದವರಿಗೆ ಅರ್ಧ ದಿನ ರಜೆ ನೀಡಲಾಗುತ್ತದೆ.

ಶಾಸಕರನ್ನು ತಕ್ಷಣವೇ ಅಮಾನತುಗೊಳಿಸಬಹುದು

ಶಾಸಕರನ್ನು ತಕ್ಷಣವೇ ಅಮಾನತುಗೊಳಿಸಬಹುದು

ತಮಿಳುನಾಡು ಮಾದರಿಯಲ್ಲಿ ಎಲ್ಲಾ ಶಾಸಕರನ್ನು ತಕ್ಷಣವೇ ಅಮಾನತುಗೊಳಿಸಿ, ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು. - 10ನೇ ಶೆಡ್ಯೂಲ್ ಪ್ರಕಾರ ದೂರು ದಾಖಲಾಗಿ,ವಿಪ್ ಉಲ್ಲಂಘನೆ ಎಲ್ಲವನ್ನು ಪರಿಗಣಿಸಿ ಶಾಸಕರನ್ನು ಉಚ್ಚಾಟಿಸಬಹುದು. ಶಾಸಕರ ವಿರುದ್ಧ ಕ್ರಮ ಜರುಗಿಸಲು ತಮಿಳುನಾಡು ಮಾದರಿಯಲ್ಲಿ ದೂರು ಬಂದರೆ, ಒಟ್ಟಿಗೆ ಪ್ರಯಾಣಿಸಿದ ಚಿತ್ರ, ವಿಡಿಯೋ ಸಾಕ್ಷಿ ಪರಿಗಣಿಸಬಹುದು. - ಉಚ್ಚಾಟನೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದರೂ ಈ ಶಾಸಕರಿಗೆ ಸಚಿವರಾಗುವ ಯೋಗ ತಕ್ಷಣಕ್ಕೆ ಸಿಗುವುದಿಲ್ಲ. ಉಪ ಚುನಾವಣೆ ಎದುರಿಸಿ ಮತ್ತೆ ಆಯ್ಕೆಯಾದರೂ, ಕೇಸಿನಲ್ಲಿ ಖುಲಾಸೆಗೊಂಡರೆ ಸಚಿವರಾಗಬಹುದು.

English summary
The crucial trust vote will be taken by HD Kumaraswamy on Thursday(July 18) at 11 AM . Floor test will be held at the Vidhan Soudha in Bengaluru, here is how the events would unfold.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X